ಶನಿ ಹಾಗೂ ಗುರು ಹತ್ತನೇ ಮನೆಯಲ್ಲಿ ಇರುವುದರಿಂದ ಮತ್ತು ಸೂರ್ಯ ಹಾಗೂ ಮಂಗಳನು 6ನೇ ಮನೆಯಲ್ಲಿ ಇರುವುದರಿಂದ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ಒಳ್ಳೆಯ ಫಲಿತಾಂಶಗಳನ್ನು ಕಾಣುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಸಿಗಬಹುದು ಅಥವಾ ನಿಮಗೆ ಹೊಸ ಉದ್ಯೋಗವಕಾಶ ಒದಗಿ ಬರಬಹುದು.
ಅದರಲ್ಲೂ ವಿಶೇಷವಾಗಿ ವರ್ಷದ ಆರಂಭದಲ್ಲಿ ಕಟಕ ರಾಶಿಯವರಿಗೆ ಉದ್ಯೋಗದ ವಿಚಾರವಾಗಿ ಸಾಕಷ್ಟು ಒಳ್ಳೆಯ ಸಮಯ. ನೀವು ಮಾಡುವ ಕೆಲಸದಿಂದ ನೀವು ಜನಪ್ರಿಯರಾಗುತ್ತೀರಿ, ಉದ್ಯೋಗದ ವಿಚಾರದಲ್ಲಿ ನಿಮ್ಮ ನಿರೀಕ್ಷೆಗಳನ್ನು ಮುಟ್ಟುವುದರಿಂದ ಎಲ್ಲೆಡೆ ಪ್ರಶಂಸೆಗಳು ಕೇಳಿಬರುತ್ತದೆ, ಎಲ್ಲರೂ ನಿಮ್ಮನ್ನು ಗುರುತಿಸುತ್ತಾರೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ.
ಇದೇ ಕಾರಣಕ್ಕಾಗಿ ಸಹೋದ್ಯೋಗಿಗಳಿಂದ ಕಿ’ರು’ಕು’ಳ ಆಗಬಹುದು ಎಚ್ಚರಿಕೆಯಿಂದ ಇರಿ ಏಪ್ರಿಲ್ 23 ರಿಂದ ಜೂನ್ 1ರ ಒಳಗೆ ಉದ್ಯೋಗದ ವಿಚಾರದಲ್ಲಿ ನೀವು ಕೆಲ ಬದಲಾವಣೆಗಳಾಗಲಿವೆ ಅಥವಾ ನೀವು ಉದ್ಯೋಗವನ್ನೇ ಬದಲಿಸುವ ಸಮಯ ಇರಬಹುದು ತಯಾರಾಗಿರಿ.
4ನೇ ಮನೆಯಲ್ಲಿ ಬುಧ ಹಾಗೂ 2ನೇ ಮನೆಯಲ್ಲಿ ಶುಕ್ರ ಇರುವುದರಿಂದ ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರುತ್ತಾರೆ, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆಗಳನ್ನು ಮಾಡುತ್ತಾರೆ. ಮೇ ನಿಂದ ಆಗಸ್ಟ್ ವರೆಗೆ ಹಾಗೂ ನವೆಂಬರ್ ನಿಂದ ಡಿಸೆಂಬರ್ ವರೆಗೆ ಈ ರಾಶಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯವಾಗಿದೆ. ಆದರೆ ಶನಿಗೆ 8ನೇ ಮನೆಯಲ್ಲಿ ಇರುವುದರಿಂದ ಉಳಿದ ಸಮಯಗಳೇ ಸ್ವಲ್ಪ ಅಡೆತಡೆಗಳನ್ನು ಎದುರಿಸಬೇಕಾಗಿ ಬರಬಹುದು.
ವರ್ಷದ ಉತ್ತರಾರ್ಧವು ಉನ್ನತ ವಿದ್ಯಾಭ್ಯಾಸದ ಅನುಕೂಲತೆಗಳನ್ನು ಮಾಡಿಕೊಡಲಿದೆ. ವಿದ್ಯಾರ್ಥಿಗಳು ಕೂಡ ಈ ಸದಾವಕಾಶವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು, ಓದಿನಲ್ಲಿ ಸಾಧನೆ ಮಾಡಲು ಪರಿಶ್ರಮವನ್ನು ಕೂಡ ಹಾಕಬೇಕು ಆಗಿದ್ದಲ್ಲಿ ಈ ಎಲ್ಲ ಶುಭಫಲಗಳು ಅವರಿಗೆ ಸಿಗಲಿದೆ.
ಹಣಕಾಸು ವಿಷಯದಲ್ಲಿ ಮಿಶ್ರಫಲಗಳನ್ನು ಹೊಂದಿರುವ ವರ್ಷವಾಗಿರುತ್ತದೆ. ಈ ವರ್ಷದ ಆರಂಭದಲ್ಲಿ ಎಷ್ಟೇ ಹಣ ಸಂಪಾದನೆ ಮಾಡಿದರು ಅಥವಾ ಯಾವುದೇ ಮೂಲದಿಂದ ಹಣ ಬಂದರೂ ನಿಮಗೆ ಅದಕ್ಕೆ ತಕ್ಕನಾದ ಖರ್ಚು ರೆಡಿ ಇರುತ್ತದೆ. ಆದರೆ ಖರ್ಚು ಕೂಡ ವಿಪರಿತವಾಗುವುದಿಲ್ಲ ಸಾಲ ಮಾಡಿಕೊಂಡು ಪರದಾಡುವ ಪರಿಸ್ಥಿತಿ ಬರುವುದಿಲ್ಲ, ಸಂಪಾದಿಸಿದ ಹಣವು ಖರ್ಚಾಗಿ ಹೋಗುತ್ತದೆ.
ಕೌಟುಂಬಿಕ ವಿಚಾರದಲ್ಲೂ ಕೂಡ ಕರ್ಕಾಟಕ ರಾಶಿಯವರು ಈ ವರ್ಷದ ಆರಂಭದಿಂದ ಸಂತೋಷದಿಂದ ಇರುತ್ತಾರೆ, ಅವರ ಎಲ್ಲ ಕೆಲಸ ಕಾರ್ಯಗಳಿಗೆ ಕುಟುಂಬದ ಸಂಪೂರ್ಣ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಹಿರಿಯರು ಒಳ್ಳೆಯ ಮಾರ್ಗದರ್ಶನ ಮಾಡುತ್ತಾರೆ, ನೀವು ಅವುಗಳನ್ನು ಪಾಲಿಸಿ ಅನುಸರಿಸಿದರೆ ನಿಮಗೆ ಇನ್ನು ಹೆಚ್ಚು ಉತ್ತಮ ಫಲಗಳು ಸಿಗುತ್ತದೆ.
ಏಪ್ರಿಲ್ 23ರಿಂದ ಜೂನ್ 1ರವರೆಗೆ ಮಂಗಳನು 9ನೇ ಮನೆಯಲ್ಲಿ ರಾಹು ಜೊತೆ ಇರುವುದರಿಂದ ಅಂಗಾರಕ ದೋಷ ಸಮಸ್ಯೆಯಿಂದಾಗಿ ತಂದೆಯ ಆರೋಗ್ಯ ಸ್ವಲ್ಪ ಹದಗೆಡಬಹುದು ಈ ವಿಚಾರದಲ್ಲಿ ಸ್ವಲ್ಪ ಹೆಚ್ಚು ಜಾಗರೂಕರಾಗಿರಿ. ವರ್ಷಪೂರ್ತಿ ಶನಿ 8ನೇ ಮನೆಯಲ್ಲಿರುವುದರಿಂದ ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಂಡಿರುವವರಿಗೆ ಸಹಜವಾಗಿ ತೋಡಕು ಇದ್ದೇ ಇರುತ್ತವೆ.
ಯಾವುದೇ ಹೊಸ ವ್ಯವಹಾರ ಆರಂಭಿಸುವ ಮೊದಲು ಅಥವಾ ಎಲ್ಲಾದರೂ ಹೂಡಿಕೆ ಮಾಡುವ ಮೊದಲು ನೀವು ಎರಡು ಮೂರು ಬಾರಿ ಯೋಚಿಸಬೇಕು. ಇಲ್ಲವಾದಲ್ಲಿ ನಿಮ್ಮ ವ್ಯಾಪಾರವು ಸ್ಥಗಿತಗೊಳ್ಳುವ ಅಥವಾ ಹಣ ಎಲ್ಲಾದರೂ ನ’ಷ್ಟವಾಗುವ ಪರಿಣಾಮ ಉಂಟಾಗಬಹುದು.
ಆದ್ದರಿಂದ ಈ ವರ್ಷ ಈ ವಿಚಾರದಲ್ಲಿ ಸ್ವಲ್ಪ ತಾಳ್ಮೆ ವಹಿಸಿ. ಆದರೆ ಮೇ 1ರ ನಂತರ ಗುರು 11ನೆ ಮನೆಗೆ ಹೋಗಿ 2ನೇ ಮನೆ ನೋಡುವುದರಿಂದ ಈ ಸಮಯವು ವ್ಯಾಪಾರ ವಹಿವಾಟಿಗೆ ಅನುಕೂಲಕರವಾಗಿದೆ ಮತ್ತು ನಿಮಗೆ ಈ ವಿಚಾರವಾಗಿ ಗಣ್ಯ ವ್ಯಕ್ತಿಗಳ ಬೆಂಬಲ ಕೂಡ ಸಿಗುತ್ತದೆ.