ಮಂತ್ರ, ಯಂತ್ರಗಳಂತೆ ತಂತ್ರಗಳು ಕೂಡ ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ. ನಾವು ಹಿಂದಿನ ಯುಗಗಳನ್ನು ನೋಡಿದರೆ ಮಂತ್ರ ಪಠನೆ, ಮಂತ್ರ ಪ್ರಯೋಗದಿಂದಲೇ ಅವರು ಮಳೆ ತರಸುತ್ತಿದ್ದರು. ಯುದ್ಧ ಮಾಡುತ್ತಿದ್ದರು ಹಾಗೂ ವರಗಳನ್ನು ಪಡೆದು ಮಂತ್ರ ಹೇಳಿ ಮಕ್ಕಳನ್ನು ಪಡೆಯುತ್ತಿದ್ದರು ಪುರಾಣಗಳಲ್ಲಿ ಇಂತಹ ಸಾಕಷ್ಟು ಕಥೆಗಳನ್ನು ನಾವು ಕೇಳುತ್ತೇವೆ.
ಆದರೆ ಈಗ ಜನರಲ್ಲಿ ಪ್ರಾಮಾಣಿಕತೆ, ನಿಷ್ಠೆ, ಒಳ್ಳೆಯತನ ಕಡಿಮೆ ಆಗಿರುವ ಕಾರಣಕ್ಕಾಗಿ ಮಂತ್ರಗಳ ಶಕ್ತಿಯು ಕೂಡ ಕುಂದು ಹೋಗಿವೆ. ಆಗಿನ ಕಾಲದಲ್ಲಿ ಲೋಕ ಕಲ್ಯಾಣಕ್ಕಾಗಿ ಮಾಡುತ್ತಿದ್ದ ಈ ಮಂತ್ರಗಳ ಪ್ರಯೋಗವನ್ನು ಈಗ ಮತ್ತೊಬ್ಬರನ್ನು ಹಾ’ಳು ಮಾಡಲು ಬಳಸುತ್ತಾರೆ ಎನ್ನುವುದು ಇದಕ್ಕೆ ಕಾರಣ ಇರಬಹುದು. ಅದೇನೇ ಇರಲಿ ಕಲಿಯುಗದ ವಿಚಾರವನ್ನು ನೋಡುವುದಾದರೆ ಈಗಿನ ಕಾಲದಲ್ಲಿ ಮಂತ್ರಗಳಿಗೆ ಶಕ್ತಿ ಕುಂದಿದೆ ನಿಜ, ಆದರೆ ಕಠಿಣ ನಿಷ್ಠೆ ಪ್ರಯತ್ನ ಮಾಡಿ ಅದನ್ನು ಏಕಾಗ್ರತೆಯಿಂದ ಪಡೆದು ಕೊಳ್ಳಬಹುದು.
ಆದರೆ ಎಲ್ಲರಿಗೂ ಅದು ಸಿದ್ಧಿಸುವುದಿಲ್ಲ ಕಲಿಯುಗದಲ್ಲಿ ನಾವು ಪ್ರತಿಯೊಂದು ವಿಚಾರಕ್ಕೂ ಯಂತ್ರಗಳ ಮೊರೆ ಹೋಗುತ್ತಿದ್ದೇವೆ. ಮನೆಯಲ್ಲಿ ಮನೆ ಕೆಲಸ ಮಾಡುವುದರಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ನಡೆಯುತ್ತಿರುವುದು ಕೂಡ ಇಂತಹ ಯಂತ್ರಗಳ ಸಹಾಯದಿಂದಲೇ.
ಯಂತ್ರಗಳ ಪ್ರಭಾವ ಹೆಚ್ಚಿರುವ ಈ ಕಾಲದಲ್ಲಿ ಮಂತ್ರ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಬದಲಿಗೆ ವಿರುದ್ಧವಾದ ತಂತ್ರ ಶಕ್ತಿಗಳ ಬಳಕೆ ಹೆಚ್ಚಾಗಿದೆ. ಈಗಿನ ಕಾಲದಲ್ಲಿ ಬಹಳ ಬೇಗ ತಂತ್ರಗಳು ಅಂದರೆ ಉಪಾಯಗಳು ಕೆಲಸ ಮಾಡುತ್ತವೆ. ಈ ಮಾತು ಸುಳ್ಳಲ್ಲ ಬೇಕಾದಲ್ಲಿ ನೀವು ಈಗ ನಾವು ಹೇಳುವ ಈ ಒಂದು ತಂತ್ರವನ್ನು ಬಹಳ ನಿಷ್ಠೆಯಿಂದ ನಂಬಿಕೆ ಇಟ್ಟು ಪ್ರಯೋಗ ಮಾಡಿ ನೋಡಿ.
ಈ ತಂತ್ರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಇದು ನಿಮ್ಮ ಹಣಕಾಸಿನ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಮತ್ತು ನಿಮ್ಮನ್ನು ಕೋಟ್ಯಾಧಿಪತಿಗಳಾಗಿ ಮಾಡುವ ಶಕ್ತಿಯನ್ನು ಹೊಂದಿದೆ. ಈ ಕೆಲಸ ಮಾಡುವುದು ಹೇಗೆಂದರೆ ನೀವು ಮಧ್ಯರಾತ್ರಿಯಲ್ಲಿ ಮಾತ್ರ ಈ ತಂತ್ರವನ್ನು ಮಾಡಬೇಕು. ಯಾವುದೇ ದಿನ ಯಾವುದೇ ವಾರದ ಮಧ್ಯರಾತ್ರಿ ಬೇಕಾದರೂ ಇದನ್ನು ಪ್ರಯೋಗ ಮಾಡಬಹುದು.
ಆದರೆ ಇದನ್ನು ಮಾಡುವ ಮುನ್ನ ನೀವು ತಣ್ಣೀರಿನಿಂದ ಸ್ನಾನ ಮಾಡಿ ಶುದ್ಧ ಬಟ್ಟೆಯನ್ನು ಧರಿಸಿರಬೇಕು. ನೀವು ಹಾಕುವ ಬಟ್ಟೆ ಬಿಳಿ ಬಣ್ಣದಾಗಿದ್ದರೆ ಇನ್ನೂ ಉತ್ತಮ ಫಲಗಳನ್ನು ಪಡೆಯುತ್ತೇವೆ. ತಣ್ಣೀರಿನಲ್ಲಿ ಸ್ನಾನ ಮಾಡಿ, ಮಡಿಯುಟ್ಟು ಮನೆಯ ನಡು ಮನೆ ಅಂದರೆ ಹಾಲ್ ನಲ್ಲಿ ಒಂದು ಮಣೆಯ ಮೇಲೆ ಬಂದು ಕುಳಿತುಕೊಳ್ಳಿ.
ಈ ತಂತ್ರ ಮಾಡಲು ಬೇಕಾದ ಸಾಮಗ್ರಿಗಳನ್ನು ಮೊದಲೇ ಹೊಂದಿಸಿಕೊಳ್ಳಿ. ನಿಮ್ಮ ಮುಂದೆ ಒಂದು ಬಿಳಿ ವಸ್ತ್ರವನ್ನು ಹಾಕಿ ಆ ವಸ್ತ್ರಕ್ಕೆ ಮೂರು ಹಿಡಿ ಅಕ್ಕಿಯನ್ನು ಹಾಕಿ ಅಕ್ಕಿಯ ಮೇಲೆ ಒಂದು ಅರಿಶಿಣದ ಕೊಂಬನ್ನು ಇಡಿ. ಇದು ಚೆನ್ನಾಗಿರಬೇಕು, ಮುರಿದಿರಬಾರದು ಅಥವಾ ಹುಳುಕಾಗಿರಬಾರದು.
ಇದಾದ ಮೇಲೆ ಇದಕ್ಕೆ ಮಡಿ ನೀರಿನಿಂದ ಸಿಂಚನ ಮಾಡಿ ಅರಿಶಿಣ ಕುಂಕುಮ ಹೂ ಅಕ್ಷತೆ ಇಟ್ಟು ಧೂಪ ದೀಪಗಳಿಂದ ಪೂಜೆ ಮಾಡಿ ಅದರ ಎದುರುಗಡೆ ಕುಳಿತುಕೊಂಡು ಕಣ್ಣು ಮುಚ್ಚಿ ನಿಮ್ಮ ಆರ್ಥಿಕ ಅಭಿವೃದ್ಧಿಯಾಗಿ ಮನಸಾರೆ ಪ್ರಾರ್ಥಿಸಿ, ನಂತರ ಅದನ್ನು ಹಳದಿ ದಾರದಿಂದ ಗಂಟು ಕಟ್ಟಿ ಇಡಿ. ಮರುದಿನ ಈ ಗಂಟನ್ನು ಹರಿಯುವ ನೀರಿಗೆ ಬಿಡಬೇಕು ಮತ್ತು ತಿರುಗಿ ನೋಡದೆ ಬರಬೇಕು. ಈ ರೀತಿಯ ಒಂದು ಪ್ರಯೋಗ ಮಾಡಿ ನೋಡಿ ನಿಮ್ಮ ಜೀವನದ ಹಣಕಾಸಿನ ಸಮಸ್ಯೆಗಳು ಎಷ್ಟು ಬೇಗ ಪರಿಹಾರ ಆಗುತ್ತವೆ ನೀವೆ ನೋಡಿ.