ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದೇವರ ಮನೆ ಇದ್ದೇ ಇರುತ್ತದೆ ಈ ಒಂದು ದೇವರ ಮನೆಗೆ ಬಹಳ ಅತ್ಯುತ್ತಮವಾದಂತಹ ಸ್ಥಾನವನ್ನು ನಾವು ಕೊಟ್ಟಿರುತ್ತೇವೆ. ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟ ಸುಖ ದುಃಖ ಎಲ್ಲವುಗಳ ಸಂದರ್ಭ ಈ ಪೂಜಾ ಕೋಣೆಯಿಂದಲೇ ನೆರವೇರುತ್ತದೆ ಎಂದೇ ಹೇಳಬಹುದು.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಪೂಜಾ ಕೋಣೆಯನ್ನು ಬಹಳ ಸುಂದರವಾಗಿ ಹಾಗೂ ಅಚ್ಚುಕಟ್ಟಾಗಿ ಶುಚಿತ್ವದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗೂ ಪೂಜಾ ಕೋಣೆಯನ್ನು ಕೆಲವೊಂದು ವಾಸ್ತು ಶಾಸ್ತ್ರದ ಪ್ರಕಾರ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ವಸ್ತುಗಳನ್ನು ದೇವರ ಮನೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!
ಹಾಗೇನಾದರೂ ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಅಂತಹ ವಸ್ತುಗಳನ್ನು ನಾವು ದೇವರ ಕೋಣೆಯಲ್ಲಿ ಇಟ್ಟಿದ್ದೆ ಆದರೆ ನಮ್ಮ ಮನೆಗೆ ಕಷ್ಟದ ಪರಿಸ್ಥಿತಿಗಳು ಪ್ರಾರಂಭವಾಗುತ್ತದೆ ಎಂದೇ ಹೇಳಬಹುದು. ಆದ್ದರಿಂದ ದೇವರ ಮನೆಯ ವಿಚಾರವಾಗಿ ಪ್ರತಿ ಯೊಬ್ಬರು ನಿಯಮ ಬದ್ಧವಾದ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.
ಇಲ್ಲವಾದರೆ ಮೊದಲೇ ಹೇಳಿದಂತೆ ಜೀವನದಲ್ಲಿ ನಿಮಗೆ ಎಲ್ಲಾ ರೀತಿಯ ಕೆಲಸ ಕಾರ್ಯಗಳಾಗಿರಬಹುದು ನಿಮ್ಮ ಮನೆಯಲ್ಲಾಗಿರಬಹುದು ಕೆಲವೊಂದು ಸಮಸ್ಯೆಗಳು ಎದುರಾಗುವು ದಕ್ಕೆ ಪ್ರಾರಂಭವಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ನಿಮ್ಮ ಮನೆಯ ಯಜಮಾನ ಹಾಗೂ ಆ ಮನೆಯಲ್ಲಿರುವಂತಹ ಹಿರಿಯರಿಗೆ ಅವರ ಆರೋಗ್ಯದಲ್ಲಿ ಬಹಳಷ್ಟು ತೊಂದರೆಗಳು ಉಂಟಾಗುವುದಕ್ಕೆ ಪ್ರಾರಂಭವಾಗುತ್ತದೆ.
ಆದ್ದರಿಂದ ದೇವರ ಕೋಣೆಯ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ವಾಸ್ತು ಪ್ರಕಾರ ವಿಧಾನಗಳನ್ನು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ದೇವರ ಕೋಣೆಯಲ್ಲಿ ಯಾವ ರೀತಿಯ ಕೆಲವು ವಸ್ತುಗಳನ್ನು ಇಡಬಾರದು ಅದು ಹೇಗೆ ನಮಗೆ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಈ ಕೆಳಗೆ ತಿಳಿಯೋಣ.
ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!
* ಪೂಜಾ ಮಂದಿರದಲ್ಲಿ ಎರಡು ಶಂಖಗಳನ್ನು ಇಡಬಾರದು.
* ಮನೆಯಲ್ಲಿ ಮೂರು ಗಣೇಶ ಇಟ್ಟು ಪೂಜೆಯನ್ನು ಸಲ್ಲಿಸಬಾರದು.
* ಕಲಶದಲ್ಲಿ ಇರುವಂತಹ ಎಲೆ ಒಣಗಿದ್ದರೆ ಅದನ್ನು ತೆಗೆಯದೆ ಹಾಗೆ ಪೂಜೆ ಮಾಡಲು ಈ ರೀತಿ ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಕಳಸದ ಎಲೆ ಒಣಗಿದ ತಕ್ಷಣವೇ ಅದನ್ನು ತೆಗೆದು ಹೊಸ ಎಲೆಯನ್ನು ಇಟ್ಟು ಪೂಜೆ ಮಾಡುವುದು ತುಂಬಾ ಒಳ್ಳೆಯದು ಇದರಿಂದ ನಮಗೆ ಒಳ್ಳೆಯ ಶುಭಫಲಗಳು ಪ್ರಾಪ್ತಿಯಾಗುತ್ತದೆ.
* ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಎರಡು ಗೋಮತಿ ಚಕ್ರವನ್ನು ಇಟ್ಟು ಪೂಜೆ ಮಾಡಬಾರದು.
* ಫೋಟೋ ಅಥವಾ ವಿಗ್ರಹದಲ್ಲಿ ಲಕ್ಷ್ಮಿ ನಿಂತಿದ್ದರೆ ಅವುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಬಾರದು. ಬದಲಿಗೆ ಕುಳಿತಿರುವಂತಹ ಶಾಂತ ರೂಪದಲ್ಲಿರುವಂತಹ ಲಕ್ಷ್ಮಿ ಫೋಟೋವನ್ನು ದೇವರ ಮನೆ ಯಲ್ಲಿ ಇಟ್ಟು ಪೂಜೆ ಮಾಡುವುದು ಒಳ್ಳೆಯದು.
* ಪೂಜೆ ಮಂದಿರದಲ್ಲಿ ಎರಡು ಶಿವಲಿಂಗಗಳನ್ನು ಇಟ್ಟು ಪೂಜೆ ಮಾಡ ಬಾರದು ಇದು ನಿಷಿದ್ಧ.
* ಮನೆಯ ಪೂಜಾ ಮಂದಿರದಲ್ಲಿ ಎರಡು ಸೂರ್ಯ ರನ್ನು ಇಟ್ಟು ಪೂಜೆಯನ್ನು ಸಲ್ಲಿಸಬಾರದು.
* ಪೂಜಾ ಮಂದಿರದಲ್ಲಿ ಮೂರು ದುರ್ಗಾ ಮಾತೆಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಬಾರದು.
* ಮನೆಯಲ್ಲಿ ದೊಡ್ಡ ದೇವರ ವಿಗ್ರಹವನ್ನು ಇಟ್ಟುಕೊಳ್ಳಬಾರದು ಒಂದು ವೇಳೆ ಇದ್ದರೆ ತಪ್ಪದೇ ಪ್ರತಿದಿನ ಅಖಂಡಲ ದೀಪವನ್ನು ಇಟ್ಟು ಪೂಜೆ ನೈವೇದ್ಯಗಳನ್ನು ಸಲ್ಲಿಸಬೇಕು.
ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ ಕಾಣುತ್ತದೆ.!
* ಎರಡು ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯ ಎಲ್ಲಾ ಸದಸ್ಯರು ತುಂಬಾ ನಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಕಷ್ಟ ನಷ್ಟಗಳ ಜೊತೆ ಹಣಕಾಸಿನ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ.