ಇತ್ತೀಚೆಗೆ ಪಂಡಿತರು ಹೇಳುತ್ತಿದ್ದಾರೆ ಒಂದೊಂದು ಕೋರಿಕೆ ಈಡೇರುವುದಕ್ಕೆ ಒಂದೊಂದು ಬೆಲೆ ಇರುತ್ತದೆ. ಹುಂಡಿಯಲ್ಲಿ ಇಷ್ಟು ಕಾಣಿಕೆ ಹಾಕಿದರೆ ಈ ಕೋರಿಕೆ ಈಡೇರುತ್ತದೆ ಎಂದು ಹೇಳುತ್ತಾರೆ. ನಾವೆಲ್ಲರೂ ಕೂಡ ದೇವಸ್ಥಾನಕ್ಕೆ ಹೋದಾಗ ನಮ್ಮ ಕೈಲಾದಷ್ಟು ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿ ಬರುತ್ತೇವೆ.
ಆದರೆ ಕೆಲವು ಪಂಡಿತರು ಹಾಗೂ ಕೆಲವು ಧರ್ಮ ಗ್ರಂಥಗಳ ಪ್ರಕಾರ ಹುಂಡಿಯಲ್ಲಿ ಎಷ್ಟು ದುಡ್ಡು ಹಾಕಿದರೆ ಏನು ಸಿಗುತ್ತದೆ, ಹಾಗೂ ಹುಂಡಿಯಲ್ಲಿ ಹಣ ಹಾಕುವುದರಿಂದ ನಾವು ಏನೆಲ್ಲಾ ಲಾಭ ಪಡೆದುಕೊಳ್ಳಬಹುದು ಹಾಗೂ ಯಾವ ದಿನ ಯಾವ ದೇವರ ಹೆಸರಿನಲ್ಲಿ ಪೂಜೆಯನ್ನು ಮಾಡಬೇಕು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.
* ಮೊದಲನೆಯದಾಗಿ ದೇವಸ್ಥಾನದ ಹುಂಡಿಯಲ್ಲಿ 7 ರೂಪಾಯಿ ಹಾಕಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆಹಾಗೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದ್ದರೂ ಕೂಡ ಅದು ದೂರವಾಗುತ್ತದೆ.
ಈ ಸುದ್ದಿ ಓದಿ:-ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!
* ನವರಾತ್ರಿ ಅಂದರೆ 9 ರಾತ್ರಿಗಳು 9 ರುಪಾಯಿಯನ್ನು ಹುಂಡಿಯಲ್ಲಿ ಹಾಕಿದರೆ ಶತ್ರು ಭಾದೆ ಹೋಗುತ್ತದೆ. ನಿಮ್ಮ ಜಾತಕದಲ್ಲಿ ಶನಿ ದೋಷ ಇದ್ದರೂ ಕೂಡ ನಿವಾರಣೆಯಾಗುತ್ತದೆ. ಹಾಗೂ ದೇವಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಸದಾ ಕಾಲ ಇರುತ್ತದೆ.
* ಚಂದ್ರನಿಗೆ ಇಷ್ಟವಾದಂತಹ ಸಂಖ್ಯೆ 11 ದೇವಸ್ಥಾನದ ಹುಂಡಿಯಲ್ಲಿ 11 ರೂಪಾಯಿ ಹಾಕಿದರೆ ನಿಮಗಿರುವ ಸಾಲ ಬೇಗ ತೀರುತ್ತದೆ.
* ದೇವರ ಹುಂಡಿಯಲ್ಲಿ 12 ರೂಪಾಯಿ ಹಾಕಿದರೆ ನಿಮ್ಮ ಇಡೀ ಕುಟುಂಬದವರು ಸುಖ ಶಾಂತಿ ನೆಮ್ಮದಿ ಆರೋಗ್ಯ ಸಂತೋಷ ಸಮೃದ್ಧಿಯಿಂದ ಕೂಡಿರುತ್ತದೆ. ಅನೇಕ ಜನರಿಗೆ ತಮ್ಮ ಜಾತಕದಲ್ಲಿ ಅದೃಷ್ಟ ಎನ್ನುವುದೇ ಇರುವುದಿಲ್ಲ ಯಾವುದೇ ಕೆಲಸ ಮಾಡಿದರು ಕೂಡ ಅವರಿಗೆ ಫಲ ಸಿಗುವುದಿಲ್ಲ ಅಂತವರು ದೇವಸ್ಥಾನದ ಹುಂಡಿಯಲ್ಲಿ 12ರೂ ಹಾಕಿದರೆ ನಿಮ್ಮ ಜೀವನದಲ್ಲಿ ಇರುವಂತಹ ದುರಾದೃಷ್ಟ ಹೋಗಿ ಅದೃಷ್ಟ ಒಲಿಯುತ್ತದೆ.
* ಗುರು ಗ್ರಹದ ಅನುಗ್ರಹದ ಸಂಖ್ಯೆ 54. ಹುಂಡಿಯಲ್ಲಿ 54 ರೂಪಾಯಿ ಹಾಕುವುದರಿಂದ ಗುರುವಿನ ಅನುಗ್ರಹ ಸಿಗುತ್ತದೆ. ನೀವು ಕೈ ಹಿಡಿದಿರುವಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸನ್ನು ಸಾಧಿಸುವಿರಿ. ಹಾಗೆ ನಿಮ್ಮ ಮನೆ ಮೇಲು ಕೂಡ ತಾಯಿ ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ.
* ದೇವರ ಹುಂಡಿಯಲ್ಲಿ 101 ರೂಪಾಯಿ ಹಾಕಿದರೆ ಅಖಂಡ ರಾಜ ಯೋಗ ಹಾಗೂ ಅಖಂಡ ಐಶ್ವರ್ಯ ಸಿದ್ಧಿಯಾಗುತ್ತದೆ.
ಈ ಸುದ್ದಿ ಓದಿ:-ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ
* ಆಶೀರ್ವಾದದ ಮೂಲ ಸಂಖ್ಯೆ 116 ಹಿಂದಿನ ಜನ್ಮದಲ್ಲಿ ತಿಳಿದು ತಿಳಿಯದೆಯೋ ಮಾಡಿರುವಂತಹ ಪಾಪಗಳೆಲ್ಲವೂ ನಾಶವಾಗುವುದಕ್ಕೆ ದೇವರ ಗುಂಡಿಯಲ್ಲಿ 116 ರೂಪಾಯಿ ಕಾಣಿಕೆ ಹಾಕಬೇಕು ಇದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದವನ್ನು ಸಹ ಪಡೆದು ಕೊಳ್ಳಬಹುದು. ದೇವಾಲಯ ಎನ್ನುವುದು ಪವಿತ್ರತೆಗೆ ಪ್ರತಿರೂಪ. ಅಂತಹ ದೇವಾಲಯಗಳಿಗೆ ಹೋದಾಗ ಭಕ್ತರು ತಪ್ಪದೆ ಕೆಲವು ನಿಯಮಗಳನ್ನು ಅನುಸರಿಸಬೇಕು.
* ದೇವಾಲಯಕ್ಕೆ ಹೋಗುವಾಗ ತಪ್ಪದೇ ಸ್ನಾನ ಮಾಡಿ ಹೋಗಬೇಕು.
* ಹಾಗೂ ಹೆಂಗಸರು ಮತ್ತು ಗಂಡಸರು ತಪ್ಪದೇ ಹಣೆಗೆ ಕುಂಕುಮ ಇಟ್ಟು ಕೊಂಡು ಹೋಗಬೇಕು.
* ಶಿವಾಲಯಕ್ಕೆ ಹೋದರೆ ಮಾತ್ರ ಗಂಡಸರು ಹಣೆಗೆ ವಿಭೂತಿ ಇಟ್ಟು ಕೊಂಡಿರಬೇಕು. ಹೆಂಗಸರು ವಿಭೂತಿ ಮತ್ತು ಕುಂಕುಮ ಎರಡನ್ನೂ ಇಟ್ಟುಕೊಂಡಿರಬೇಕು.
* ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ದೇವಸ್ಥಾನಕ್ಕೆ ಹೋದರೆ ತುಂಬಾ ಒಳ್ಳೆಯದು.
* ದೇವಸ್ಥಾನಕ್ಕೆ ಹೋಗುವ ಮುಂಚೆ ಕೈ ಕಾಲು ತೊಳೆದು ಕೊಂಡು ಹೋಗಬೇಕು.
* ಅರ್ಚನೆ ಮಾಡಿಸುವಾಗ ಕೇವಲ ಗಂಡ ಹೆಂಡತಿ ಹೆಸರು ಮಾತ್ರ ಹೇಳುತ್ತಾರೆ ಆದರೆ ಮೊದಲು ಮನೆಯ ಹಿರಿಯರ ಹೆಸರನ್ನು ಹೇಳುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.