ಇದು ನಮ್ಮದೇ ದೇಶದ ಉತ್ತರ ಪ್ರದೇಶದಲ್ಲಿ ನಡೆದ ಒಂದು ಸತ್ಯ ಘಟನೆ ಆಗಿದೆ. ನಮ್ಮ ದೇಶ ಕಾಯುವ ಯೋಧನ ಬದುಕಿನಲ್ಲಿ ನಡೆದ ದು’ರಂ’ತ ಕಥೆಯೊಂದರ ಉದಾಹರಣೆಯೊಂದಿಗೆ ಈಗಿನ ಕಾಲದ ಮಕ್ಕಳ ಮನಸ್ಥಿತಿ ಹೇಗಿದೆ ಇದರಿಂದ ಪೋಷಕರಿಗೆ ಆಗುತ್ತಿರುವ ನ’ಷ್ಟ ಎಷ್ಟು ಹಾಗೂ ಇದರಲ್ಲಿ ಪೋಷಕರ ತಪ್ಪು ಎಷ್ಟು ಎನ್ನುವುದನ್ನು ಮನದಟ್ಟು ಮಾಡಿಸುವ ಪ್ರಯತ್ನವಾಗಿದೆ.
ಮಿಲ್ಟ್ರಿಯಲ್ಲಿ ಕರ್ನಲ್ ಆಗಿದ್ದ ವ್ಯಕ್ತಿಯೊಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದರೂ ಅವರನ್ನು ಪ್ರೀತಿಯಿಂದ ಚಿನ್ನ ಮುನ್ನ ಎಂದು ಕರೆಯಲಾಗುತ್ತಿತ್ತು. ತಂದೆ ಹಾಗೂ ತಾಯಿ, ಇಬ್ಬರು ಸೇರಿ ಮಕ್ಕಳನ್ನು ಬಹಳ ಕಷ್ಟಪಟ್ಟು ಚೆನ್ನಾಗಿ ಬೆಳೆಸಿದರು ಅವರು ಕೇಳಿದ್ದಕ್ಕೆ ಯಾವುದಕ್ಕೂ ಅಡ್ಡಿ ಬರಲಿಲ್ಲ ಅವರ ಇಷ್ಟದಂತೆ ಆಟ ಪಾಠ ಎಲ್ಲವನ್ನು ನಡೆಸಿಕೊಟ್ಟರು ಬೆಳೆದ ಮಕ್ಕಳು ವಿದೇಶದಲ್ಲಿ ಹುದ್ದೆ ಮಾಡಲು ಬಯಸಿ ದೇಶ ಬಿಟ್ಟರು.
ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ತಂದೆಗೆ ಇದು ಇಷ್ಟ ಇರಲಿಲ್ಲ ಆದರೂ ಹೆಂಡತಿಯ ಒತ್ತಾಯಕ್ಕೆ ಕಟ್ಟುಬಿದ್ದು ತಡೆಯಲಾಗಲಿಲ್ಲ. ವಿದೇಶಕ್ಕೆ ಹೋದ ಮಕ್ಕಳು ಅಲ್ಲೇ ಹೆಣ್ಣು ನೋಡಿ ಮದುವೆಯೂ ಮಾಡಿಕೊಂಡರು. ಮೊದಲೇ ಅಪರೂಪ ಆಗಿದ್ದ ಮಕ್ಕಳು ಮದುವೆ ಮಕ್ಕಳು ಎಂದು ಆದ ಮೇಲೆ ದೇಶಕ್ಕೆ ಬರುವುದನ್ನೇ ಬಿಟ್ಟರು.
ನಿಧಾನವಾಗಿ ಹೆತ್ತವರ ಜೊತೆಗಿದ್ದ ಕೊಂಡಿ ಸವೆಯುತ್ತಾ ಬಂತು. ಇಲ್ಲಿ ತಂದೆ ತಾಯಿ ಇಬ್ಬರು ತಮ್ಮ ಮಕ್ಕಳು ಇಂದು ಮನಸ್ಸು ಬದಲಾಯಿಸಿ ಕೊಂಡು ಬರುತ್ತಾರೆ ನಾಳೆ ಬರುತ್ತಾರೆ ಎಂದು ಕಾದಿದ್ದೆ ಆಯ್ತು. ತಂದೆ ತಾಯಿಗೆ ವಯಸ್ಸಾಯ್ತ, ವಯಸ್ಸಾದ ಕಾಲಕ್ಕೆ ಮಕ್ಕಳು ಬಂದು ಆಸರೆಯಾಗುತ್ತಾರೆ ಎಂದುಕೊಂಡಿದ್ದ ಕನಸು ಚೂರಾಯಿತು.
ಕೊನೆ ಕೊನೆಗೆ ಮಕ್ಕಳಿಗೆ ಹೆತ್ತವರ ಜೊತೆ ಸಮಯ ಕಳೆಯುವುದಿರಲಿ ಫೋನಿನಲ್ಲಿ ಮಾತನಾಡಲು ಕೂಡ ಮನಸಿರದಷ್ಟು ಉತ್ಸಾಹ ಕಡಿಮೆ ಆಯ್ತು. ಇದಕ್ಕೆ ಬ್ಯುಸಿ ಎನ್ನುವ ನೆಪ, ಇದೇ ಕೊರಗಿನಲ್ಲಿ ಕರ್ನಲ್ ಹೆಂಡತಿ ಮೃ’ತಪಡುತ್ತಾರೆ. ಅಂದು ಕಿರಿಯ ಮಗ ತಾಯಿಯ ಅಂತ್ಯಸಂಸ್ಕಾರಕ್ಕೆ ಬರುತ್ತಾನೆ, ಇಲ್ಲಿ ಬಂದು ಬಾಂಧವರೆಲ್ಲ ಸೇರಿರುತ್ತಾರೆ.
ಹಿರಿಯ ಮಗ ಮಾತ್ರ ಇನ್ನು ಪತ್ತೆ ಇಲ್ಲ ಎಲ್ಲರೂ ಕೂಡ ಹಿರಿಯ ಮಗ ಬರಲಿ ಹಿರಿಯ ಮಗ ಕೊನೆ ಬಾರಿ ತಾಯಿ ಮುಖ ನೋಡಲಿ ಎಂದು ಕಾಯುತ್ತಿರುತ್ತಾರೆ. ಆದರೆ ಆ ಸಮಯದಲ್ಲಿ ಕಿರಿಯ ಮಗ ಹೆಂಡತಿ ಹತ್ತಿರ ಹೇಳುತ್ತಿರುತ್ತಾನೆ. ಶಾಸ್ತ್ರದ ಪ್ರಕಾರ ಅಮ್ಮನ ಕೊನೆಯ ವಿಧಿ ವಿಧಾನಗಳನ್ನು ಕಿರಿಯ ಮಗ ಮಾಡಬೇಕು ಅದಕ್ಕೆ ನಾನು ಬಂದಿದ್ದೇನೆ.
ಅಪ್ಪ ಸತ್ತಾ.ಗೆ ಹಿರಿಯ ಮಗ ಬರ್ತಾನೆ ಇಲ್ದಿರುವವರಿಗೆ ಅದು ಗೊತ್ತಿಲ್ಲ ಹೇಳಲು ಆಗುತ್ತಿಲ್ಲ ಎಂದು ಇದನ್ನು ಕೇಳಿದ ಕರ್ನಲ್ ಅವರ ಹೃದಯ ಅಲ್ಲೇ ಒಡೆಯುತ್ತದೆ. ಏನು ಮಾತನಾಡದೆ ಕಣ್ಣಿನಲ್ಲಿ ನೀರು ತುಂಬಿಕೊಂಡು ಅವರು ಹೋಗಿ ಕೊಠಡಿ ಬಾಗಿಲು ಹಾಕಿಕೊಳ್ಳುತ್ತಾರೆ ಮತ್ತು ಒಂದು ಪತ್ರದಲ್ಲಿ ಈ ರೀತಿ ಬರೆಯುತ್ತಾರೆ.
ನಾನು ಮತ್ತು ನನ್ನ ಹೆಂಡತಿ ನಮ್ಮ ಜೀವನವನ್ನೆಲ್ಲ ನಮ್ಮ ಮಕ್ಕಳ ಬದುಕು ಕಟ್ಟುವುದರಲ್ಲಿ ಕಳೆದೆವು, ನಮ್ಮ ಮಕ್ಕಳು ಚೆನ್ನಾಗಿರಬೇಕು ಎಂದು ಆಸೆ ಪಟ್ಟೆವು, ನಮ್ಮ ಮಕ್ಕಳು ಕೊನೆಯವರೆಗೂ ನಮ್ಮ ಜೊತೆಗೆ ಸಂತೋಷವಾಗಿರುತ್ತಾರೆ ಎಂದು ಬಯಸಿದೆವು ಅದು ಕೂಡ ಆಗಲಿಲ್ಲ, ಕೊನೆಗೆ ಅಂತ್ಯಕಾಲದಲ್ಲಾದರೂ ಜೊತೆಗೆ ಇರುತ್ತಾರೆ ಎಂದುಕೊಂಡರೆ ಹೆತ್ತವರ ಸತ್ತಾಗಲು ಬರುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.
ಅಂತ್ಯಸಂಸ್ಕಾರಕ್ಕೂ ಬರಲು ಅವರಿಗೆ ಆಗುತ್ತಿಲ್ಲ ಎಂದರೆ ಅವರ ಈ ಮನಸ್ಥಿತಿಗೆ ಕಾರಣ ಏನು ನಾವು ಬೆಳೆಸಿದ್ದರಲ್ಲೇ ಏನಾದರೂ ದೋಷವಾಯಿತೇ? ಅವರಿಗೆ ವಿದ್ಯೆ ಕಲಿಸುವುದರಲ್ಲಿ ತೋರಿಸಿದ ಆಸಕ್ತಿಯನ್ನು ಸ್ವಲ್ಪ ಸಂಸ್ಕಾರ ಕಲಿಸುವುದರಲ್ಲಿ ಕೂಡ ತೋರಬೇಕಿತ್ತು. ನಾವು ಕೊಟ್ಟ ಸ್ವತಂತ್ರವನ್ನು ಸ್ವೇಚ್ಛಾಚಾರ ಮಾಡಿಕೊಂಡಿದ್ದಾರೆ ಎಲ್ಲವೂ ಕೈಮೀರಿ ಹೋಗಿದೆ.
ನನ್ನ ಹೆಂಡತಿ ಕೊನೆ ಆಸೆ ಇಬ್ಬರು ಮಕ್ಕಳನ್ನು ಕಡೆಗಾಲದಲ್ಲಿ ಕಾಣಬೇಕು ಎನ್ನುವುದು ಆದರೆ ಅದು ಆಗಲಿಲ್ಲ ಈಗ ಅಂತ್ಯ ಸಂಸ್ಕಾರಕೂ ಬರುತ್ತಿಲ್ಲ ನಾನು ಸತ್ತರೆ ಹಿರಿಯ ಮಗ ಬರುತ್ತಾನೆ ಎಂದು ನಾನು ಸಾ’ಯುತ್ತಿದ್ದೇನೆ. ನನ್ನ ಆಸ್ತಿಯಲ್ಲಿ ಅರ್ಧ ಪಾಲು ವೃದ್ಧಾಶ್ರಮಕ್ಕೆ ಹಾಗೂ ಅರ್ಧ ಪಾಲು ಸೈನಿಕರ ಶ್ರೇಯೋಭಿವೃದ್ಧಿಗೆ ಕೊಡಿ.
ಎಲ್ಲ ಸರ್ಕಾರಿ ಗೌರವಗಳನ್ನು ಪದವಿ ಪಾರತೋಷಕಗಳನ್ನು ಸರ್ಕಾರಕ್ಕೆ ಮರಳಿ ಕೊಟ್ಟುಬಿಡಿ. ನಮ್ಮ ಸಾ’ವು ಎಲ್ಲರಿಗೂ ಪಾಠವಾಗಲಿ ಎಂದು ಬರೆದು ಗುಂಡು ಹಾರಿಸಿಕೊಂಡು ಸ’ತ್ತು ಹೋಗುತ್ತಾರೆ. ಇಷ್ಟನ್ನು ಕೇಳಿದ ಮೇಲೆ ಹೆಚ್ಚಿಗೆ ವಿವರಿಸುವ ಅಗತ್ಯವೇ ಇಲ್ಲ ಎಲ್ಲರ ಮನಸ್ಸಿನಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಎಂದು ಲೆಕ್ಕಾಚಾರ ಬಂದಿರುತ್ತದೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.