ಆಗಿನ ಕಾಲದಲ್ಲಿ ಮಂತ್ರಗಳನ್ನು ಹೇಳಿದರೆ ಮಳೆಯೇ ಬರುತ್ತಿತ್ತು. ಮಂತ್ರಗಳಿಗೆ ಈ ರೀತಿ ಕೇಳಿದ್ದನ್ನು ಕೊಡುವ ಅಪಾರವಾದ ಶಕ್ತಿ ಇತ್ತು. ಈ ಮಂತ್ರ ಶಕ್ತಿ ಪ್ರಯೋಗದಿಂದ ಮಕ್ಕಳನ್ನು ಪಡೆದವರು, ಸಾಕ್ಷಾತ್ ಭಗವಂತನನ್ನೇ ಧರೆಗಿಳಿಸಿದ ತಪಸ್ವಿಗಳು, ಯುದ್ಧಗಳಲ್ಲಿ ಬಾಣ ಬಿಡುವ ಮುನ್ನ ಮಂತ್ರಗಳನ್ನು ಹೇಳಿ ಶತ್ರುಗಳನ್ನು ಸಂಹರಿಸಿದವರು ಇವರೆಲ್ಲರ ಕಥೆಗಳನ್ನು ಕೇಳಿದ್ದೇವೆ ಪುರಾತನ ಕಾಲದಲ್ಲಿ ಮಾತ್ರವಲ್ಲದೆ ಈಗಲೂ ಕೂಡ ಮಂತ್ರಗಳಿಗೆ ಅಷ್ಟೇ ಶಕ್ತಿ ಇದೆ.
ಆದರೆ ಕಲಿಯುಗದಲ್ಲಿ ಆಧುನಿಕತೆಯ ಭರದಲ್ಲಿ ಭಕ್ತಿ ನಂಬಿಕೆ ಇವುಗಳನ್ನು ಬಹಳ ನಿರ್ಲಕ್ಷ ಮಾಡುವುದರಿಂದ ಅವುಗಳು ಮಂತ್ರಗಳಿಗಿರುವ ಶಕ್ತಿಯ ಪರಿಚಯವಾಗುತ್ತಿಲ್ಲ. ಈಗಿನ ಕಾಲದಲ್ಲಿ ಸಹ ಭಕ್ತಿಯಿಂದ, ವಿನಮ್ರವಾಗಿ ಶ್ರದ್ಧೆಯಿಂದ ಪ್ರಾರ್ಥಿಸಿದರೆ ಖಂಡಿತವಾಗಿಯೂ ಭಗವಂತ ಒಲಿದು ಆ ಕಾರ್ಯ ಕೈಗೂಡುವಂತೆ ಮಾಡುತ್ತಾನೆ.
ಭಗವಂತನನ್ನು ಉಳಿಸಿಕೊಳ್ಳುವುದಕ್ಕೆ ಇರುವುದು ಒಂದೇ ಮಾರ್ಗ ಅದು ಭಕ್ತಿ ಮಾರ್ಗ. ಈ ಭಕ್ತಿ ಮಾರ್ಗವನ್ನು ಹಲವರು ತಮ್ಮದೇ ಆದ ರೀತಿಯಲ್ಲಿ ಕಂಡುಕೊಂಡಿದ್ದಾರೆ. ಕೆಲವರು ಪೂಜೆ ಮಾಡಿದರೆ, ಕೆಲವರು ಉಪವಾಸ ವ್ರತ-ತಪಗಳನ್ನು ಮಾಡುತ್ತಾರೆ ಇನ್ನು ಕೆಲವರು ದೇವರಿಗೆ ಅಲಂಕಾರ ಮಾಡಿ ಪ್ರಸನ್ನರಾಗಿಸುತ್ತಾರೆ.
ಇನ್ನು ಕೆಲವರು ಮಂತ್ರಗಳ ಉಚ್ಚಾರಣೆ ಮೂಲಕವೇ ಒಲಿಸಿಕೊಳ್ಳುತ್ತಾರೆ ಹಾಗಾದರೆ ಭಗವಂತನ ಕೃಪಾಕಟಾಕ್ಷ ನಮ್ಮ ಮೇಲೆ ಆಗಿ, ನಮ್ಮ ಕಾರ್ಯಗಳು ಕೈಗೂಡಬೇಕು ಎಂದರೆ ಯಾವ ರೀತಿ ಮಂತ್ರಗಳನ್ನು ಹೇಳಬೇಕು ಮತ್ತು ಯಾವ ಮಂತ್ರಕ್ಕೆ ಬಹಳ ಬೇಗ ವರ ಕೊಡುವ ಶಕ್ತಿ ಇದೆ, ಕಲಿಯುಗದಲ್ಲೂ ಕೂಡ ಯಾವ ಮಂತ್ರ ಇಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
ಯಾವುದೇ ಕಾಲದಲ್ಲಿ ಆದರೂ ಭಕ್ತರ ಬೇಡಿಕೆಗೆ ತಕ್ಷಣ ಒಲಿಯುವ ದೇವರು ಎಂದರೆ ಅದು ಸಾಂಬಸದ ಶಿವಶಂಕರ. ಶಿವನು ಈ ಬ್ರಹ್ಮಾಂಡದ ಅಧಿನಾಯಕ, ಸತ್ಯದರ್ಶಕ, ಸತ್ಯ ಪೂರ್ಣ, ಆದಿ ಅಂತ್ಯ ಎಲ್ಲವೂ ಆಗಿರುವ ಶಿವನನ್ನು ಒಲಿಸಿಕೊಳ್ಳುವುದು ಕೂಡ ಬಹಳ ಸುಲಭ. ಯಾಕೆಂದರೆ ಈತ ಸರಳಾತಿ ಸರಳವಾಗಿ ಬದುಕುವವನು.
ಯಾವುದೇ ಅಲಂಕಾರ ಬಯಸದ ಈತ ಅಭಿಷೇಕ ಪ್ರಿಯ ಶಿವನನ್ನು ಧ್ಯಾನಿಸುತ್ತಾ ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕ ಮಾಡಿ ಶಿವನ ಕುರಿತಾದ ಈ ಒಂದು ಮಂತ್ರವನ್ನು ಉಚ್ಚಾರ ಮಾಡಿದರೆ ಸಾಕು. ಶಿವ ಒಲಿದು ನಿಮ್ಮ ಮಾನವ ಸಹಜವಾದ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾನೆ ಅಥವಾ ನಿಮ್ಮ ಬೇಡಿಕೆಗಳಿಗೆ ವರಕರುಣಿಸುತ್ತಾನೆ ಎಂದು ನಂಬಲಾಗಿದೆ.
ಈಗಾಗಲೇ ಅನೇಕರು ಈ ಮಂತ್ರಗಳನ್ನು ಹೇಳಿ ಫಲ ಕೂಡ ಪಡೆದಿದ್ದಾರೆ ಹಾಗಾಗಿ ಈ ಮಂತ್ರಗಳ ಮೇಲಿರುವ ನಂಬಿಕೆ ಇಮ್ಮಡಿ ಆಗಿದೆ. ಅಷ್ಟಕ್ಕೂ ಈ ಮಂತ್ರ ಯಾವುದೆಂದರೆ “ನಮೋ ಸ್ತವನ ಅನಂತಾಯ, ಸಹಸ್ರ ಮೂರ್ತಯೇ | ಸಹಸ್ರ ಪಾದಾಕ್ಷಿ ಶಿರರು ವಾಹವೇ, ಸಹಸ್ರನಾಮೆ ಪುರುಷಾಯ ಶಾಶ್ವತೇ |
ಸಹಸ್ರ ಕೋಟಿ ಯುಗ ಧಾರಿಣಿ ನಮಃ” ||
ಈ ಮಂತ್ರದ ಉಚ್ಚರಣೆ ಮಾತ್ರವಲ್ಲದೆ ಈ ಮಂತ್ರಗಳನ್ನು ಕೇಳುವುದು ಕೂಡ ಅಷ್ಟೇ ಪ್ರಭಾವಕಾರಿಯಾಗಿ ಪರಿಣಾಮ ಬೀರುತ್ತದೆ. ಪ್ರತಿದಿನವೂ ಕೂಡ ನಿಮಗೆ ಸಾಧ್ಯವಾದಷ್ಟು ಬಾರಿ ಭಕ್ತಿಯಿಂದ ಮನಸ್ಸಿನಲ್ಲಿ ಶಿವನನ್ನೇ ಧ್ಯಾನಿಸುತ್ತಾ ಈ ಮಂತ್ರವನ್ನು ಹೇಳಿ.
ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಏನು ಎನ್ನುವುದು ಯಾವುದಾದರೂ ರೂಪದಲ್ಲಿ ನಿಮ್ಮ ಕಣ್ಣ ಮುಂದೆ ಎದುರಾಗುತ್ತದೆ. ಭಗವಂತನನ್ನು ಸೂಕ್ಷ್ಮ ಮನಸ್ಸಿನಿಂದ ಕಾಣುವ ರೀತಿ ಭಗವಂತನ ಸಲಹೆ ಸಂಕೇತಗಳನ್ನು ಕೂಡ ಸೂಕ್ಷ್ಮ ಮನಸ್ಸಿನಿಂದ ಗಮನಿಸಿ ಅನುಸರಿಸಿ ಜೀವನವನ್ನು ಉತ್ತಮವಾಗಿ ಸಾಗಿಸಿ.