ನಮ್ಮ ಪ್ರಕೃತಿಯು ನಮಗೆ ಹಲವಾರು ರೀತಿಯ ಗಿಡಮೂಲಿಕೆಗಳನ್ನು ನಮ್ಮ ಸುತ್ತಮುತ್ತ ಕೊಟ್ಟಿದೆ. ಹೌದು ಆದರೆ ಹೆಚ್ಚಿನ ಜನಕ್ಕೆ ಅದರ ಮಾಹಿತಿ ತಿಳಿದಿಲ್ಲ. ಬದಲಿಗೆ ಅದನ್ನು ಕಳೆ ಗಿಡ ಎಂದು ಕಿತ್ತು ಹಾಕುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಗಿಡಮೂಲಿಕೆ ನಿಮಗೆ ಏನಾದರೂ ತಿಳಿದರೆ ಅದರ ಸಂಪೂರ್ಣವಾದ ಆರೋಗ್ಯ ಪ್ರಯೋಜನ ವನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಅಷ್ಟೊಂದು ಔಷಧಿ ಗುಣ ಈ ಗಿಡ ತನ್ನಲ್ಲಿ ಹೊಂದಿದೆ. ಹೌದು ಹಾಗಾದರೆ ನಮ್ಮ ಸುತ್ತಮುತ್ತ ನಮ್ಮ ಅಕ್ಕ ಪಕ್ಕದ ಸ್ಥಳದಲ್ಲಿ ಸಾಮಾನ್ಯವಾಗಿ ಬೆಳೆಯುವಂತಹ ಈ ಒಂದು ಸಸ್ಯ ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸುವುದರ ಮೂಲಕ ನಾವು ಯಾವ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವುದರ ಮಾಹಿತಿಯನ್ನು ತಿಳಿಯೋಣ.
ಈ ಒಂದು ಗಿಡಮೂಲಿಕೆಯ ಹೆಸರು ಆಡು ಮುಟ್ಟದ ಸೊಪ್ಪು ಇದನ್ನು ಆಯುರ್ವೇದದಲ್ಲಿ ವಾಸ ಎಂದು ಕರೆಯುತ್ತಾರೆ. ಹಾಗಾದರೆ ಈ ಒಂದು ಎಲೆಯನ್ನು ಹೇಗೆ ಉಪಯೋಗಿಸಬೇಕು ಇದರ ಆರೋಗ್ಯ ಪ್ರಯೋಜನ ಏನು ಎಂದು ಈ ಕೆಳಗೆ ತಿಳಿಯೋಣ. ಆಯುರ್ವೇದದಲ್ಲಿ ಈ ಸೊಪ್ಪಿನ ಬಗ್ಗೆ ಬಹಳ ಅದ್ಭುತವಾದಂತಹ ವಿವರಣೆಗಳು ಇದೆ.
ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಸರ್ವ ರೋಗಗಳಿಗೂ ಅದ್ಭುತವಾದಂತಹ ಔಷಧಿ ಎಂದರೆ ಅದು ಆಡು ಮುಟ್ಟದ ಸೊಪ್ಪು ಈ ಸೊಪ್ಪನ್ನು ನೀವು ಪ್ರತಿನಿತ್ಯ ಸೇವನೆ ಮಾಡಿದರೆ ಅದರಲ್ಲೂ ಕನಿಷ್ಠ ಪಕ್ಷ 3 ತಿಂಗಳವರೆಗೆ ಇದನ್ನು ಸೇವನೆ ಮಾಡಿದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರೂ ಅದನ್ನು ನೀವು ದೂರ ಮಾಡಿಕೊಳ್ಳಬಹುದು.
ಹಾಗಾದರೆ ಹೇಗೆ ಇದನ್ನು ಉಪಯೋಗಿಸಬೇಕು ಎಂದು ಈ ಕೆಳಗೆ ನೋಡೋಣ. ಆಡುಮುಟ್ಟದ ಸೊಪ್ಪನ್ನು ತಂದು ಅದನ್ನು ಚೆನ್ನಾಗಿ ಕುಟ್ಟಿ ಎರಡು ಚಮಚದಷ್ಟು ಇದರ ರಸವನ್ನು ತೆಗೆದುಕೊಳ್ಳಬೇಕು ಯಾವುದೇ ನೀರನ್ನು ಮಿಶ್ರಣ ಮಾಡದೆ ಈ ರಸವನ್ನು ತೆಗೆದು ಆ ರಸಕ್ಕೆ ಎರಡು ಚಮಚ ಶುದ್ಧವಾದ ಜೇನುತುಪ್ಪ ಹಾಗೂ ಎರಡು ಚಿಟಿಕೆ ಮೆಣಸನ್ನು ಹಾಕಿ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು ಈ ರೀತಿ ಸೇವನೆ ಮಾಡುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದನ್ನು ನಾವು ದೂರ ಮಾಡಿಕೊಳ್ಳಬಹುದು.
* ಈ ಒಂದು ಕಷಾಯವನ್ನು ನೀವು ಮಕ್ಕಳಿಗೂ ಸಹ ಕೊಡಬಹುದು ಮಕ್ಕಳಲ್ಲಿ ಕಫಜ ವ್ಯಾಧಿಗಳು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಮಕ್ಕಳಿಗೂ ಸಹ ಇದನ್ನು ಕೊಡಬಹುದು. ಹಾಗಾದರೆ ಮಕ್ಕಳಿಗೆ ಇದನ್ನು ಯಾವ ಪ್ರಮಾಣದಲ್ಲಿ ಕೊಡಬೇಕು ಎಂದರೆ ಅರ್ಧ ಚಮಚ ಅಥವಾ ಕಾಲು ಚಮಚ ಕೊಡುವುದು ಉತ್ತಮ.
ಹಾಗೇನಾದರೂ ನಿಮಗೆ ಇದರ ಪ್ರಮಾಣ ತಿಳಿಯುತ್ತಿಲ್ಲ ಎಂದರೆ ನಿಮ್ಮ ಹತ್ತಿರದ ಆಯುರ್ವೇದದ ಆಸ್ಪತ್ರೆಗಳಿಗೆ ಹೋಗಿ ಅವರ ಬಳಿ ಎಷ್ಟು ಪ್ರಮಾಣದಲ್ಲಿ ಕೊಡುವುದು ಎನ್ನುವುದನ್ನು ತಿಳಿದು ಆನಂತರ ಮಕ್ಕಳಿಗೆ ಕೊಡುವುದು ಉತ್ತಮ ಇದರ ಜೊತೆ ನೀವು ಕೆಲವೊಂದಷ್ಟು ರಾಸಾಯನಗಳನ್ನು ಸೇವನೆ ಮಾಡುವುದು ಒಳ್ಳೆಯದು.
* ಬೂದುಗುಂಬಳಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಚೆನ್ನಾಗಿ ಕುದಿಸಿ ಬೆಲ್ಲ ಹಾಗೂ ತುಪ್ಪವನ್ನು ಮಿಶ್ರಣ ಮಾಡಿ ಸೇವನೆ ಮಾಡುತ್ತಾ ಬಂದರೆ ದೇಹದಲ್ಲಿ ವೀಕ್ನೆಸ್ ಕಡಿಮೆಯಾಗುತ್ತಾ ಬರುತ್ತದೆ.
* ಯಾರಿಗೆ ಟಿವಿ ಸಮಸ್ಯೆ ಇರುತ್ತದೆಯೋ ಅಂತವರಲ್ಲಿ ನಿಶಕ್ತತೆ ಸುಸ್ತು ಅಧಿಕವಾಗಿ ಇರುತ್ತದೆ ಅಂಥವರು ಈ ಎರಡು ವಿಧಾನವನ್ನು ಅನುಸರಿ ಸುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಸಹ ಸರಿಪಡಿಸಿಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.