ಅಪ್ಪು ಅವರನ್ನು ಕಳೆದುಕೊಂಡು ನಾವು ಇಂದಿಗೆ 9 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಪ್ರತಿನಿತ್ಯವೂ ಒಂದಲ್ಲ ಒಂದು ವಿಚಾರಕ್ಕಾಗಿ ನಾವು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಪ್ಪು ಅವರು ಕೇವಲ ಆರು ತಿಂಗಳ ಮಗು ಆಗಿದ್ದಾಗಲೇ ಪ್ರೇಮಾ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಚಿಕ್ಕವಯಸ್ಸಿನಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಂತಹ ವ್ಯಕ್ತಿ. ಅಷ್ಟೇ ಅಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ಕೂಡ ಹೌದು ಬಾಲ ಕಲಾವಿದನಾಗಿ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದರು. ಆದರೆ ಯವನ ವ್ಯವಸ್ತೆಗೆ ಬಂದ ನಂತರ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿಯುತ್ತಾರೆ ಅಪ್ಪು ಅವರಿಗೆ ಬಿಸಿನೆಸ್ ಮಾಡಬೇಕು ಎಂಬ ಆಸೆ ಇರುತ್ತದೆ.
ಈ ಕಾರಣಕ್ಕಾಗಿಯೇ ಕನಕಪುರದ ಸಮೀಪದಲ್ಲಿ ಇರುವಂತಹ ಸ್ಥಳ ಒಂದರಲ್ಲಿ ಗ್ರಾನೈಟ್ ಬಿಸಿನೆಸ್ ಮಾಡುವುದಕ್ಕೆ ಕೈ ಹಾಕುತ್ತಾರೆ ಅಂದುಕೊಂಡ ಮಾದರಿಯಲೇ ಈ ಬ್ಯುಸಿನೆಸ್ ಒಳ್ಳೆಯ ಯಶಸ್ಸು ಮತ್ತು ಲಾಭವನ್ನು ತಂದುಕೊಡುತ್ತದೆ. ಆದರೆ ಕೆಲವು ಕಿಡಿಗೇಡಿಗಳು ಅಪ್ಪು ಅವರ ಹೆಸರನ್ನು ಹಾಳು ಮಾಡುವುದಕ್ಕಾಗಿ ಈ ಗ್ರಾನೈಟ್ ಬಿಸಿನೆಸ್ ಕರಾಳದಂತೆ ಎಂಬ ಪಟ್ಟವನ್ನು ಕಟ್ಟುತ್ತಾರೆ. ಇದರಿಂದ ಅಣ್ಣವರ ಕುಟುಂಬಕ್ಕೆ ಹೆಚ್ಚು ಅಪಮಾನವಾಗುತ್ತದೆ ಅಷ್ಟೇ ಅಲ್ಲದೆ ಅಪ್ಪು ಅವರ ಹೆಸರು ಕೂಡ ಕಳಂಕ ತರುವಂತಹ ಕೆಲಸ ನಡೆಯುತ್ತದೆ. ಇದನ್ನೆಲ್ಲ ಗಮನಿಸಿದಂತಹ ಅಣ್ಣವ್ರು ಈ ಬಿಸಿನೆಸ್ ಬೇಡ ಇದನ್ನು ಬಿಟ್ಟು ಬಿಡು ಅಂತ ಹೇಳುತ್ತಾರೆ ಆ ಸಮಯದಲ್ಲಿ ಅಪ್ಪು ಅವರು ಮತ್ತೆ ಮರಳಿ ನಟನೆಯತ್ತ ಮುಖ ಮಾಡುತ್ತಾರೆ.
2001ರಲ್ಲಿ ಕೆರೆಕಂಡಂತಹ ಅಪ್ಪು ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡುತ್ತರೆ. ಈ ಸಿನಿಮಾದಲ್ಲಿ ನಟಿ ರಕ್ಷಿತಾ ಅವರು ನಾಯಕ ನಟಿಯಾಗಿ ಅಭಿನಯಿಸುತ್ತಾರೆ ರಕ್ಷಿತಾ ಅವರಿಗೂ ಕೂಡ ಇದು ಚೊಚ್ಚಲ ಸಿನಿಮಾ ಆಗಿರುತ್ತದೆ. ಈ ಸಿನಿಮಾ ಅಂದುಕೊಂಡ ಮಟ್ಟದಲ್ಲಿಯೇ ಯಶಸ್ಸನ್ನು ಪಡೆಯುತ್ತದೆ ಅಪ್ಪು ಅವರು ರಕ್ಷಿತಾ ಅವರು ಇಬ್ಬರೂ ಕೂಡ ನಟ ನಟಿಯರಾಗಿ ಗುರುತಿಸಿಕೊಳ್ಳುತ್ತಾರೆ. ಇದಾದ ನಂತರ ಅಭಿ, ಆಕಾಶ್, ಮೌರ್ಯ, ಬಿಂದಾಸ್, ಮಿಲನ, ಪರಮಾತ್ಮ, ಅಣ್ಣಾ ಬಾಂಡ್, ಜಾಕಿ ದೊಡ್ಮನೆ ಹುಡುಗ, ಯುವರತ್ನ, ರಾಜಕುಮಾರ, ಹೀಗೆ ಕನ್ನಡದ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಾರೆ ಎಲ್ಲ ಸಿನಿಮಾಗಳು ಕೂಡ ಹೆಚ್ಚು ಯಶಸ್ಸನ್ನು ತಂದುಕೊಡುತ್ತದೆ.
ಅಪ್ಪು ಅವರ ಕೊನೆಯ ಬಾರಿ ನಾಯಕ ನಟನಾಗಿ ನಟಿಸಿದ ಸಿನಿಮಾ ಅಂದರೆ ಅದು ಜೇಮ್ಸ್ ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಆಗಲಿ ಹೋಗುತ್ತಾರೆ. ತದನಂತರ ಇನ್ನು ಮುಂದೆ ಅಪ್ಪು ಅವರ ಸ್ಥಾನವನ್ನು ಯಾರು ತುಂಬಾ ಬಲ್ಲರು ಎಂಬುವ ವಿಚಾರ ಚರ್ಚೆಯಾಗುತ್ತದೆ. ಏಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಅಪ್ಪು ಅವರನ್ನು ಹೊರತುಪಡಿಸಿದರೆ ಬೇರೆ ಯಾವ ನಟ ಕೂಡ ಅವರ ಮಾದರಿಯಲ್ಲಿ ಡ್ಯಾನ್ಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ದೊಡ್ಡ ಮನೆಯಲ್ಲಿ ಮತ್ತು ಗಾಂಧಿನಗರದಲ್ಲಿ ಅಪ್ಪು ಸ್ಥಾನವನ್ನು ತುಂಬಾ ಬಲ ಏಕೈಕ ನಟ ಅಂದರೆ ಅದು ಯುವರಾಜ್ ಕುಮಾರ್ ಮಾತ್ರ ಅಂತ ಹೇಳುತ್ತಿದ್ದಾರೆ. ಹೌದು ಗುಣದಲ್ಲಿ ಯುವರಾಜ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರನ್ನು ಹೋಲುತ್ತಾರೆ. ಮಾತಿನಲ್ಲಿ ಇರಬಹುದು ನಟನೆಯಲ್ಲಿ ಇರಬಹುದೋ ಡಾನ್ಸ್ ನಲ್ಲಿ ಇರಬಹುದು ಎಲ್ಲವೂ ಕೂಡ ಚಿಕ್ಕಪ್ಪನ ಗುಣವನ್ನೇ ಹೊಂದಿದ್ದರೆ. ಈ ಕಾರಣಕ್ಕಾಗಿಯೇ ಅಪ್ಪು ಅವರ ನಂತರ ಸಿನಿಮಾ ಕಾರ್ಯ ಆಗಿರಬಹುದು ಅಥವಾ ಮನೆಯ ಜವಾಬ್ದಾರಿಯಾಗಿರಬಹುದು ಎಲ್ಲವನ್ನು ನಿಭಾಯಿಸುವಂತಹ ಗುಣವನ್ನು ಯುವರಾಜ್ ಕುಮಾರ್ ಅವರು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಇದೀಗ ತಿಳಿದುಬಂದಿದೆ.