ಮಕ್ಕಳು ಇಲ್ಲ ಎನ್ನುವ ನೋ’ವು ಬಹಳ ದುಃ’ಖಕರವಾದದ್ದು, ಪ್ರತಿ ಹೆಣ್ಣಿಗೂ ಕೂಡ ಮಾತೃಭಾಗ್ಯ ಸಿಗಬೇಕು. ಪ್ರಪಂಚದ ಎಲ್ಲಾ ಪದವಿಗಿಂತಲೂ ಅಮ್ಮ ಎನ್ನುವುದೇ ಶ್ರೇಷ್ಠ. ಈ ಭೂಮಿ ಮೇಲೆ ಮನುಷ್ಯರಾಗಿ ಜನಿಸಿರುವ ನಮಗೆ ನಮ್ಮ ಜನರೇಶನ್ ಮುಂದೆ ತೆಗೆದುಕೊಂಡು ಹೋಗಬೇಕಾದ ಜವಾಬ್ದಾರಿ ಇದೆ.
ಮಕ್ಕಳು ಇಲ್ಲದೆ ಇದ್ದವರಿಗೆ ಗೌರವ ಬಹಳ ಕಡಿಮೆ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ತಪ್ಪು ಇದೆಯೋ ಇಲ್ಲವೋ ಬಹಳಷ್ಟು ಮಾತುಗಳನ್ನು ಕೇಳಬೇಕಾಗುತ್ತದೆ. ಈ ರೀತಿ ಸಂತಾನ ದೋಷಗಳು ಉಂಟಾಗಲು ಪತಿ ಪತ್ನಿ ಇಬ್ಬರದು ಕಾರಣ ಇರುತ್ತದೆ. ಒಂದು ಮಗು ಜನಿಸಲು ತಾಯಿ ರಕ್ತ ಮತ್ತು ಮಾಂಸ ನೀಡಿದರೆ ತಂದೆ ಮೂಳೆ ಆಗಿರುತ್ತಾನೆ ಹಾಗಾಗಿ ಮಕ್ಕಳಾಗದೆ ಇರುವ ಸಮಸ್ಯೆಗೆ ಇಬ್ಬರು ಕಾರಣ ಇರಬಹುದು.
ನಿಮಗೆ ಯಾವುದೇ ಕಾರಣದಿಂದ ಈ ರೀತಿ ಸಮಸ್ಯೆ ಉಂಟಾಗಿದ್ದರು ನೀವು ಶೀಘ್ರವಾಗಿ ನಿಮ್ಮ ಮನೆಯಲ್ಲಿ ತೊಟ್ಟಿಲು ತೂಗುವಂತೆ ಆಗಬೇಕು ಎನ್ನುವ ಪ್ರಬಲ ಇಚ್ಛೆ ಹೊಂದಿದ್ದರೆ ನಾವು ಹೇಳುವ ಸರಳ ಪೂಜೆಯನ್ನು ಮಾಡಿ. ಹೀಗೆ ಮಾಡುವ ವ್ರತವು ಪೂರ್ತಿಯಾಗುವುದರ ಒಳಗೆ ನಿಮ್ಮ ಮನೆಯಲ್ಲಿ ಶುಭ ಸಮಾಚಾರ ಕೇಳುತ್ತೀರಿ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
ಈ ವ್ರತವನ್ನು ಗುರುವಾರಗಳಂದೇ ಮಾಡಬೇಕು ಮತ್ತು ಒಂಬತ್ತು ಗುರುವಾರಗಳು ಈ ವ್ರತವನ್ನು ಮಾಡಬೇಕು. ಯಾಕೆಂದರೆ ಗುರುವಾರವು ಗುರು ಗ್ರಹ ಕಾರಕವಾದ ದಿನವಾಗಿದೆ ಗುರು ಬಲ ಇಲ್ಲದೆ ಇದ್ದರೆ ಆಸ್ತಿ ಯೋಗ, ವಿವಾಹ ಯೋಗ, ಸಂತಾನಯೋಗ ಸಿಗುವುದಿಲ್ಲ ಹಾಗಾಗಿ ಜಾತಕದಲ್ಲೂ ಕೂಡ ಗುರು ಸ್ಥಾನಕ್ಕೆ ಮೊದಲ ಪ್ರಾಶಸ್ತ್ಯ.
ಹಾಗೆ ಗುರುವಾರವು ಮಹಾವಿಷ್ಣುವಿನ ದಿನವೂ ಆಗಿರುವುದರಿಂದ ಸಂತಾನ ಫಲ ನೀಡುವ ಬಾಲ ಗೋಪಾಲನನ್ನು ಆರಾಧಿಸುವುದಕ್ಕೆ ಈ ದಿನ ಶುಭವಾಗಿದೆ. ನಿಮ್ಮ ಮನೆಯಲ್ಲಿ ಗುರು ರಾಘವೇಂದ್ರ ಸಾಯಿಬಾಬಾ ಅಥವಾ ಗುರುದತ್ತಾತ್ರೇಯರು ಈ ರೀತಿ ಗುರುವಿನ ಸ್ಥಾನದಲ್ಲಿರುವವರ ಫೋಟೋ ಇಟ್ಟುಕೊಳ್ಳಿ ಹಾಗೆ ಒಂದು ಸಂತಾನ ಗೋಪಾಲನ ಚಿಕ್ಕ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಬನ್ನಿ.
ಪ್ರತಿ ಗುರುವಾರ ಇವುಗಳನ್ನು ಸ್ವಚ್ಛಗೊಳಿಸಿ ಹಳದಿ ಹೂಗಳಿಂದ ಅಲಂಕರಿಸಿ ಗಂಧ ಕುಂಕುಮ ಲೇಪಿಸಿ, ಧೂಪ ದೀಪದಿಂದ ಆರಾಧನೆ ಮಾಡಿ ನೈವೇದ್ಯ ಅರ್ಪಿಸಬೇಕು. ಬಾಲ ಗೋಪಾಲನಿಗೆ ಬೆಣ್ಣೆಯ ನೈವೇದ್ಯ ಮಾಡಿದರೆ ಇನ್ನು ಶ್ರೇಷ್ಠ ಮತ್ತು ಈ ದಿನ ನಿಮ್ಮ ಮನೆ ಅಕ್ಕ ಪಕ್ಕ ಇರುವ ಒಂಬತ್ತು ಪುಟ್ಟ ಹೆಣ್ಣು ಮಕ್ಕಳನ್ನು ಮನೆಗೆ ತಂದು ಅವರ ಪಾದ ಪೂಜೆ ಮಾಡಿ ಅವರಿಗೆ ತಿನ್ನಲು ಸಿಹಿ ಕೊಟ್ಟು ಆ ಮಕ್ಕಳಿಂದ ಆಶೀರ್ವಾದ ಪಡೆಯಬೇಕು.
ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್.!
ಬಾಲೆಯರನ್ನು ನವದುರ್ಗೆಯರ ಅವತಾರ ಎಂದು ಹೇಳಲಾಗುತ್ತದೆ. ಹೀಗೆ ನೀವು 9 ಗುರುವಾರ ಪ್ರತಿ ವಾರವು 9 ಹೆಣ್ಣು ಮಕ್ಕಳನ್ನು ಕರೆತಂದು ಅವರಿಗೆ ಊಟೋಪಚಾರ ಮಾಡಿ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರೆ ಮತ್ತು ಈ 9 ವಾರಗಳಂದು ಗುರುಗಳು ಹಾಗೂ ಸಂತಾನ ಗೋಪಾಲನ ಆರಾಧನೆ ಮಾಡಿ ಆಶೀರ್ವಾದ ಪಡೆದರೆ ಪತಿ ಹಾಗೂ ಪತ್ನಿಯ ದೋಷಗಳ ನಿವಾರಣೆಯಾಗಿ ಸಂತಾನಫಲ ನೂರಕ್ಕೆ ನೂರರಷ್ಟು ಗ್ಯಾರಂಟಿ ಸಿಗುತ್ತದೆ.
ನೆನಪಿರಲಿ ಈ ವ್ರತವನ್ನು ಪತಿ ಪತ್ನಿ ಇಬ್ಬರು ಕೂಡ ಒಟ್ಟಿಗೆ ಸೇರಿ ಮಾಡಬೇಕು ಶ್ರದ್ಧಾ ಭಕ್ತಿ ನಂಬಿಕೆಯಿಂದ ಇವುಗಳನ್ನು ಮಾಡಿ ಫಲ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಗೆಳತಿಯರು ಹಾಗೂ ಸಹೋದರಿಯರೊಂದಿಗೆ ಹಂಚಿಕೊಳ್ಳಿ.