ಇಂದು BP, ಶುಗರ್ ಇದೆಲ್ಲ ಯಾವ ರೀತಿ ಆಗಿಬಿಟ್ಟಿದೆ ಎಂದರೆ ಪ್ರತಿ ಮನೆಯಲ್ಲೂ ಕೂಡ ಈ ಕಾಯಿಲೆಗೆ ತುತ್ತಾಗಿರುವವರು ಸಿಗುತ್ತಾರೆ ಇದನ್ನು ಕಾಯಿಲೆ ಎಂದು ಹೇಳುವುದಕ್ಕಿಂತಲೂ ದೇಹದಲ್ಲಾಗುವ ವ್ಯತ್ಯಾಸ ಎಂದೇ ಹೇಳಬಹುದು.
ಈ ಆರೋಗ್ಯ ವ್ಯತ್ಯಾಸಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಶಕ್ತಿ ನಮ್ಮಲ್ಲಿಯೇ ಇರುತ್ತದೆ ಆದರೆ ನಾವು ಇಂದು ಎಲ್ಲದಕ್ಕೂ ಮೆಡಿಸನ್ ಗಳ ಮೊರೆ ಹೋಗಿದ್ದೇವೆ. ಸಂಪೂರ್ಣವಾಗಿ ಈಗ ಅದನ್ನು ಕೂಡ ತಪ್ಪು ಎಂದು ಹೇಳಲು ಆಗುವುದಿಲ್ಲ. ಇದೆಲ್ಲದರ ಜೊತೆಗೆ ಔಷಧಿ ಅಲ್ಲದ ಔಷಧಿಗಳು ಕೂಡ ಇವೆ.
ಇವು ಇನ್ನು ಉತ್ತಮವಾಗಿ ನಿಮ್ಮ ದೇಹದ ಸಮಸ್ಯೆಗಳನ್ನು ಸರಿಪಡಿಸುತ್ತೇವೆ. ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡುತ್ತಿದ್ದೇವೆ ಮೊದಲೇ ಹೇಳಿದಂತೆ ಹಿಂದೆಲ್ಲ BP ಮತ್ತು ಶುಗರ್ ಬಂದರೆ ಶ್ರೀಮಂತರ ಕಾಯಿಲೆ ಅಥವಾ ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು.
ಈಗ ಹೇಗಾಗಿದೆ ಎಂದರೆ 40ರ ಆಸು ಪಾಸಿನಲ್ಲಿ ಇರುವವರಿಗೂ ಕೂಡ ಅಧಿಕ ರಕ್ತದೊತ್ತಡ ಮಧುಮೇಹ ಭಾದಿಸುತ್ತಿದೆ ಇದಕ್ಕೆ ನಮ್ಮ ಜೀವನ ಶೈಲಿ ಬದಲಾಗಿರುವುದು ಆಹಾರ ಪದ್ಧತಿ ಹಾಳಾಗಿರುವುದು ಕೂಡ ಅಷ್ಟೇ ಕಾರಣವಾಗಿದೆ. ಇದಲ್ಲದೇ ವಂಶವಾಹಿನಿ ಕಾರಣದಿಂದಲೂ ಈ ಸಮಸ್ಯೆ ಬಂದಿರಬಹುದು.
ಇನ್ನು ಕೆಲವರಿಗೆ ಇದರೊಂದಿಗೆ ಥೈರೊಯ್ಡ್, PCOD, ಮಲಬದ್ಧತೆ, ಡಿಪ್ರೆಶನ್ ಇನ್ನು ಮುಂತಾದ ಕಾಯಿಲೆಗಳು ಇವೆ ಇದನ್ನು ದೇಹದ ಅಬ್ ನಾರ್ಮಲ್ ಸ್ಥಿತಿ ಎಂದರೆ ಸೂಕ್ತ. ಇದನ್ನು ಸರಿಪಡಿಸಲೇಬೇಕು ಇಲ್ಲವಾದಲ್ಲಿ ನಮಗೆ ಮಾತ್ರವಲ್ಲದೆ ನಮ್ಮಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬಕ್ಕೂ ಕೂಡ ತೊಂದರೆ ಆಗುತ್ತದೆ.
ರಕ್ತದೊತ್ತಡ ಹೆಚ್ಚಾದರೆ ಸ್ಟ್ರೋಕ್, ಹಾರ್ಟ್ ಅಟ್ಯಾಕ್, ಕಿಡ್ನಿ ಫೇಲ್ಯೂರ್ ಇನ್ನು ಮುಂತಾದ ತೊಂದರೆಗಳಾಗುತ್ತವೆ. ಹಾಗಾಗಿ ಯಾವುದನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರ ಬಳಿ ಹೋಗುವುದು ಸೂಕ್ತ ವೈದ್ಯರು ಕೊಡುವ ಚಿಕಿತ್ಸೆ ಪಡೆದು ಅವರ ಮಾರ್ಗದರ್ಶನದ ಪ್ರಕಾರ ಸರಿಪಡಿಸಿಕೊಳ್ಳುವುದರ ಜೊತೆಗೆ ಇಂದು ನಾವು ಹೇಳುತ್ತಿರುವ ಈ ಸೂಕ್ತ ವಿಚಾರಗಳ ಬಗ್ಗೆಯೂ ಕೂಡ ಸ್ವಲ್ಪ ಗಮನ ಕೊಡಿ.
ಇವು ಸಹ ನೀವು ಯಾವುದೇ ಹಣ ಖರ್ಚು ಮಾಡದೆ ಔಷಧಿಯಾಗಿ ನಿಮ್ಮ ದೇಹವನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ನೀವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಆರೋಗ್ಯವಾಗಿ ಆನಂದವಾಗಿ ಬದುಕಲು ಈಗ ನಾವು ಹೇಳುತ್ತಿರುವ ಔಷಧಿಯಲ್ಲದ ಔಷಧಿಗಳು ಸಹಕರಿಸುತ್ತವೆ.
* ದಿನ ಬೆಳಿಗ್ಗೆ ಎದ್ದು 10 ನಿಮಿಷ ದೇವರ ಧ್ಯಾನ ಮಾಡಿ ನಂತರ ದಿನ ಆರಂಭಿಸಿ. ಬೆಳಗಿನ ಜಾವದ 30 ನಿಮಿಷ ವ್ಯಾಯಾಮ ಯೋಗ ಧ್ಯಾನ ಈ ರೀತಿ ಚಟುವಟಿಕೆಗಳಿಗೆ ಮೀಸಲಿರಲಿ ಅಥವಾ ಬೆಳಗಿನ ಅಥವಾ ಸಂಜೆಯ 30 ನಿಮಿಷಗಳ ವಾಕಿಂಗ್ ಅಭ್ಯಾಸ ಇಂದಿನಿಂದಲೇ ಆರಂಭಿಸಿ ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ದೇಹದ ಅನೇಕ ಅಬ್ ನಾರ್ಮಲ್ ಸ್ಥಿತಿಗಳನ್ನು ಇದು ಸರಿಪಡಿಸುತ್ತದೆ.
* ಸೂರ್ಯನ ಬೆಳಕಿನಲ್ಲಿ ಕೆಲ ಹೊತ್ತು ಸಮಯ ಕಳೆಯಿರಿ ಜೊತೆಗೆ ಹುಲ್ಲಿನ ಮೇಲೆ ಅಥವಾ ಮಣ್ಣು ನೆಲದ ಮೇಲೆ ನಡೆದಾಡಿ ಪ್ರಕೃತಿ ಜೊತೆಗೆ ಸ್ವಲ್ಪ ಬೆರೆಯಿರಿ.
* ದಿನಕ್ಕೆ 7-8 ಘಂಟೆಗಳ ನಿದ್ರೆ ಅವಶ್ಯಕ. ಮಲಗಿರುವ ಸಮಯ ಅಲ್ಲ ನೀವು ಎಷ್ಟು ನಿದ್ರಾ ಅವಸ್ಥೆಯಲ್ಲಿ ಇರುತ್ತೀರ ಅದು ಮುಖ್ಯವಾಗುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಿ. ರಾತ್ರಿ ಮಲಗುವ ಎರಡು ತಾಸಿನ ಮೊದಲು ಊಟ ಮುಗಿಸುವುದು ಒಂದು ತಾಸಿನ ಮೊದಲು ಮೊಬೈಲ್ ಟಿವಿ ಆಫ್ ಮಾಡಿ ಸಮಯ ಕಳೆದು ಮಲಗುವುದು ಇಂತಹ ಅಭ್ಯಾಸ ಬೆಳೆಸಿಕೊಳ್ಳಿ, ಒಳ್ಳೆಯ ನಿದ್ರೆ ಬರುತ್ತದೆ.
* ವಾರಕ್ಕೆ ಒಮ್ಮೆಯಾದರೂ ಉಪವಾಸ ಮಾಡುವುದು ನಿಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ತಪ್ಪದೆ ಇದನ್ನು ಕೂಡ ಪಾಲಿಸಿ ಮತ್ತು ಪ್ರತಿನಿತ್ಯ ಚೆನ್ನಾಗಿ ನೀರು ಕುಡಿಯಿರಿ
* ವಾರಕ್ಕೆ ಒಮ್ಮೆಯಾದರೂ ಅರ್ಧ ದಿನ ನಿಮ್ಮ ಸ್ನೇಹಿತರ ಜೊತೆಗೆ ಸಂತೋಷದಿಂದ ಮಾತನಾಡುತ್ತಾ ಸಮಯ ಕಳೆಯಿರಿ, ಇದು ನಿಮ್ಮ ಮನಸ್ಸಿಗೆ ಚೈತನ್ಯ ತುಂಬುತ್ತದೆ ಮತ್ತು ಇದೆಲ್ಲವೂ ಉಚಿತವೇ ಆಗಿದೆ.