ಕೆಮ್ಮು ಕಫ ಎನ್ನುವಂತಹ ಸಮಸ್ಯೆ ಪ್ರತಿಯೊಬ್ಬರಲ್ಲಿಯೂ ಕೂಡ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿದ್ದು ಇದನ್ನು ದೂರ ಮಾಡಿಕೊಳ್ಳು ವುದಕ್ಕೆ ಹೆಚ್ಚಿನ ಜನ ಹಲವಾರು ರೀತಿಯ ಕೆಮ್ಮಿನ ಸಿರಪ್ ಗಳನ್ನು ಕುಡಿ ಯುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಕೆಲವೊಂದು ಮನೆ ಮದ್ದುಗಳನ್ನು ಮಾಡಿ ಉಪಯೋಗಿಸಿ ಸೇವನೆ ಮಾಡುತ್ತಾರೆ.
ಹಾಗೆಂದ ಮಾತ್ರಕ್ಕೆ ಎಷ್ಟೇ ಕೆಮ್ಮು ಬಂದರು ಕೆಲವೊಂದಷ್ಟು ಕಷಾಯಗಳನ್ನು ಮಾಡಿ ಸೇವನೆ ಮಾಡಿದರೆ ಆ ಕೆಮ್ಮು ಗುಣವಾಗುವುದಿಲ್ಲ ಬದಲಿಗೆ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತದೆ ಎಂದೇ ಹೇಳಬಹುದು. ಹೌದು ನಮ್ಮ ಆರೋಗ್ಯದ ವಿಚಾರವಾಗಿ ನಮ್ಮ ಆರೋಗ್ಯವನ್ನು ಸರಿಪಡಿಸಿ ಕೊಳ್ಳಬೇಕು ಎಂದರೆ ಕೆಲವೊಂದಷ್ಟು ಆಯುರ್ವೇದದ ವಿಧಾನಗಳನ್ನು ಅಂದರೆ ಔಷಧಿಗಳನ್ನು ಮಾಡಿ ಸೇವನೆ ಮಾಡುವುದನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ನಾವು ಯಾವುದೇ ಸಮಸ್ಯೆ ಬಂದರೆ ಅದನ್ನು ಹೇಗೆ ದೂರ ಮಾಡಿಕೊಳ್ಳಬಹುದು. ಹಾಗೂ ಅದನ್ನು ಹೇಗೆ ಬಾರದಂತೆ ನೋಡಿ ಕೊಳ್ಳುವುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಹಾಗಾದರೆ ಈ ದಿನ ಕೆಮ್ಮಿನ ಸಮಸ್ಯೆ ಬಂದರೆ ಯಾವ ಮನೆಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಅದನ್ನು ದೂರ ಮಾಡಿಕೊಳ್ಳ ಬಹುದು ಎನ್ನುವ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವೆಲ್ಲರೂ ತಿಳಿದುಕೊಂಡಿರುವುದು ಕೆಮ್ಮು ಒಂದೇ ಒಂದು ಕಾರಣಕ್ಕಾಗಿ ಬರುತ್ತದೆ ಅದು ಶೀತ ನೆಗಡಿಗೆ ಆಗಿರಬಹುದು. ಅಥವಾ ಯಾವುದಾದರೂ ಆಹಾರ ಪದಾರ್ಥದ ವ್ಯತ್ಯಾಸದಿಂದ ತಂಪಾಗಿ ನಮಗೆ ಕೆಮ್ಮು ಬರಬಹುದು ಎಂದು ಎಲ್ಲರಿಗೂ ತಿಳಿದಿರು ವಂತಹ ಮಾಹಿತಿ. ಆದರೆ ಅದು ತಪ್ಪು. ಕೆಮ್ಮಿನಲ್ಲಿ ಎರಡು ವಿಧ ಇದೆ ಅದು ಯಾವುದೆಂದರೆ.
• ಶುಷ್ಕ ಖಾಸ
• ಆರ್ದ್ರ ಖಾಸ
ಸಂಸ್ಕೃತದಲ್ಲಿ ಕೆಮ್ಮಿಗೆ ಖಾಸ ಎಂದು ಕರೆಯುತ್ತಾರೆ.
* ಶುಷ್ಕ ಖಾಸ ಎಂದರೆ ಒಣ ಕೆಮ್ಮು. ಅಂದರೆ ಯಾವುದೇ ರೀತಿಯ ಗಾಳಿ ಸೋಕಿದರು ಪದೇ ಪದೇ ಗಂಟಲಿನಲ್ಲಿ ಒಣಗಿರುವoತಹ ಅನುಭವ ಉಂಟಾಗಿ ಒಣಕೆಮ್ಮು ಉಂಟಾಗುತ್ತದೆ ಯಾವುದೇ ರೀತಿಯ ಕಫ ಬರುವುದಿಲ್ಲ ಇದನ್ನು ಶುಷ್ಕ ಖಾಸ ಎಂದು ಕರೆಯುತ್ತೇವೆ. ಹಾಗಾದರೆ ಇಂತಹ ಸಮಯದಲ್ಲಿ ಯಾವ ಒಂದು ಮನೆ ಮದ್ದನ್ನು ಮಾಡಿ ಸೇವನೆ ಮಾಡಬೇಕು ಹಾಗೂ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.
* ಕಲ್ಲು ಸಕ್ಕರೆ
* ಏಲಕ್ಕಿ
* ಚಕ್ಕೆ
ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣನೆ ಪುಡಿ ಮಾಡಿ ಕೊಳ್ಳಬೇಕು. ಇದನ್ನು ತುಳಸಿ ರಸದ ಜೊತೆ ಮಿಶ್ರಣ ಮಾಡಿ ದಿನಕ್ಕೆ ಐದು ಬಾರಿಯಂತೆ 2ML ನಷ್ಟು ತೆಗೆದುಕೊಳ್ಳಬೇಕು. ಈ ರೀತಿ ತೆಗೆದುಕೊಳ್ಳುತ್ತಾ ಬರುವುದರಿಂದ ಮೂರು ದಿನದಲ್ಲಿಯೇ ಶುಷ್ಕ ಖಾಸ ಅಂದರೆ ಒಣ ಕೆಮ್ಮು ಸಂಪೂರ್ಣವಾಗಿ ಶಮನವಾಗುತ್ತದೆ.
ಹೀಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಈ ಕೆಮ್ಮನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಇದು ಸಾಮಾನ್ಯವಾಗಿ ನಿಮ್ಮ ಮನೆಯಲ್ಲಿಯೇ ಸಿಗುವಂತಹ ಪದಾರ್ಥ ಗಳಾಗಿದ್ದು ಯಾವುದೇ ಅಂಗಡಿಯಿಂದ ಕೊಂಡು ತಂದು ಅದನ್ನು ಉಪಯೋಗಿಸುವಂತಹ ಅವಶ್ಯಕತೆ ಬರುವುದಿಲ್ಲ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣವೇ ಈ ಒಂದು ಮನೆಮದ್ದನ್ನು ಮಾಡಿ ಸೇವನೆ ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ಅದೇ ರೀತಿಯಾಗಿ ಇದನ್ನು ಮಾಡಿ ಸೇವನೆ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ ಬದಲಿಗೆ ನಮ್ಮ ಮನೆಯಲ್ಲಿಯೇ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ನೈಸರ್ಗಿಕವಾಗಿ ಮಾಡಿ ಸೇವನೆ ಮಾಡುವುದರಿಂದ ಯಾವುದೇ ಅಪಾಯ ಇರುವುದಿಲ್ಲ.