ಸ್ವಂತ ಮನೆ ಆಸೆ ಎಲ್ಲರಲ್ಲಿಯೂ ಇರುತ್ತದೆ, ಜೀವನದಲ್ಲಿ ನಾವು ಕಷ್ಟಪಟ್ಟು ದುಡಿದು ಹಣ ಉಳಿಸಿ, ನಮ್ಮ ಇಷ್ಟದ ಒಂದು ಮನೆ ಕಟ್ಟಿಸಿ ಪರಿವಾರ ಸಮೇತ ಅಲ್ಲಿ ವಾಸಿಸುವ ಸುಖವೇ ಬೇರೆ. ಪ್ರತಿಯೊಬ್ಬ ದುಡಿಯುವ ವ್ಯಕ್ತಿಯೂ ಕೂಡ ತನ್ನ ದುಡಿಮೆಯಲ್ಲಿ ಅಲ್ಪ ಭಾಗವನ್ನು ಈ ಮನೆ ಕಟ್ಟಿಸುವ ಕನಸಿಗಾಗಿಯೇ ಮೀಸಲಿಟ್ಟಿದರೆ ಇನ್ನು ಕೆಲವರು ಲೋನ್ ಅಪ್ಲೈ ಮಾಡಿ ಈ ರೀತಿ ಸ್ವಂತ ನೆಲೆಯ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ.
ಆದರೂ ಕೂಡ ಎಲ್ಲರಿಗೂ ಈ ಮನೆ ಕಟ್ಟಿಸುವ ಕಾರ್ಯ ಸರಾಗವಾಗಿ ಜರುಗುವುದಿಲ್ಲ. ಕೆಲವರು ಅಂದುಕೊಂಡಂತೆ ಎಲ್ಲವನ್ನು ಪೂರ್ತಿಗೊಳಿಸಿದರೆ ಬಹುತೇಕ ಜನರಿಗೆ ಇದರಲ್ಲಿ ಅಡೆತಡೆಗಳೇ ಹೆಚ್ಚು ಜನರು ಎಷ್ಟು ಸಮಸ್ಯೆ ಪಡುತ್ತಾರೆ ಎಂದರೆ ಮನೆ ಕಟ್ಟಲೆಂದು ಸೈಟ್ ಖರೀದಿಸುತ್ತಾರೆ, ಆ ಸೈಟ್ ಗೂ ಕೂಡ ಲೋನ್ ಮಾಡಿರುತ್ತಾರೆ.
ಆ ಲೋನ್ ಸಂಬಂಧ ಪಟ್ಟಂತೆ ಅಥವಾ ಜಾಗದ ಸಂಬಂಧಪಟ್ಟ ಹಾಗೆ ತಾಪತ್ರಯ ಪಡುತ್ತಲೇ ಇರುತ್ತಾರೆ. ಸೈಟ್ ಇದ್ದರು ನೆಮ್ಮದಿಯಾಗಿ ಮನೆ ಕಟ್ಟಿಸಲಾಗದಂತಹ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಇನ್ನು ಕೆಲವೊಮ್ಮೆ ಮನೆ ಕಟ್ಟಿಸುವ ಕಾರ್ಯ ಆರಂಭಿಸಿದರು ಕೂಡ ಮಧ್ಯದಲ್ಲಿ ಹಣ ಹೊಂದಾಣಿಕೆ ಆಗದೆ ನಾವಂದು ಕೊಂಡ ಸಮಯಕ್ಕೆ ಈ ಕಾರ್ಯ ಪೂರ್ತಿಗೊಳ್ಳುವುದಿಲ್ಲ.
ಈ ಸುದ್ದಿ ಓದಿ:- ನಾಳೆ 27 ಫೆಬ್ರವರಿ 2024ರಂದು ರಾಜ್ಯ ಸರ್ಕಾರದಿಂದ 1 ರಿಂದ 10ನೇ ತರಗತಿ, PUC, Degree ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.!
ಮನೆ ಕಟ್ಟಲು ಕೇಳಿದ್ದ ಸಾಲ ದೊರೆಯುವುದಿಲ್ಲ ಅಥವಾ ಮನೆ ಕಟ್ಟುವಾಗ ತೆಗೆದುಕೊಳ್ಳೋಣ ಎಂದು ಎಲ್ಲೋ ಹೂಡಿಕೆ ಮಾಡಿದ್ದ ಹಣಕ್ಕೆ ತೊಂದರೆ ಆಗುವುದು ಅಥವಾ ನಮ್ಮ ಇಷ್ಟಕ್ಕೆ ಮನೆಯ ಡಿಸೈನ್ ಬರದೇ ಇರುವುದು ಇತ್ಯಾದಿ ಇತ್ಯಾದಿ ತೊಂದರೆಗಳು ಬರಬಹುದು ಅಥವಾ ಕಟ್ಟಿರುವ ಮನೆಯನ್ನೇ ಕೊಂಡಿಕೊಳ್ಳಲು ಹೋದರು ಕೂಡ ಮಾತುಕತೆಗೆ ಬಂದು ನಿಂತು ಹೋಗುವುದು ವಿಪರೀತವಾದ ಬೆಲೆ ಹೇಳಿ ಈ ಕಾರಣಕ್ಕಾಗಿ ಬೇಸರ ಮಾಡಿಕೊಂಡು ಬರುವುದು ಇನ್ನೂ ಮುಂತಾದ ಅಡೆತಡೆಗಳು ಎದುರಾಗಿ ಸ್ವಂತ ಮನೆಯ ಕನಸು ನುಚ್ಚಾಗಬಹುದು.
ಈ ಸಮಸ್ಯೆಗಳೇ ಆಗಿರಲಿ ಅಥವಾ ಇದನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ತೊಂದರೆ ಆಗಿರಲಿ ನಿಮ್ಮ ಕನಸನ್ನು ದೂರ ಮಾಡುತ್ತಿದೆ ಎಂದರೆ ಒಂದು ಸರಳ ಪರಿಹಾರದ ಮೂಲಕ ನೀವು ಇದನ್ನು ನಿವಾರಣೆ ಮಾಡಿಕೊಂಡು ಆದಷ್ಟು ಬೇಗ ಸ್ವಂತ ಮನೆ ಮಾಡಿಕೊಳ್ಳಬಹುದು ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.
ಬಿಳಿ ಸಾಸಿವೆಯನ್ನು ಖರೀದಿಸಿ ಮನೆಗೆ ತನ್ನಿ ಈ ರೀತಿ ಖರೀದಿಸಿದ ಬಿಳಿ ಸಾಸಿವೆಯನ್ನು ದೇವರ ಕೋಣೆಯಲ್ಲಿ ಒಂದು ಚಿಕ್ಕ ಬೌಲ್ ಅಥವಾ ಬಟ್ಟಲಿನ ತುಂಬಾ ತುಂಬಿ ಇಡಿ. ನೀವು ಪ್ರತಿದಿನ ದೇವರಿಗೆ ಪೂಜೆ ಮಾಡುವಾಗ ಕೂಡ ನಿಮ್ಮ ಇಷ್ಟ ದೇವರು, ಕುಲ ದೇವರು ಮತ್ತು ಭೂವರಹ ಸ್ವಾಮಿಯನ್ನು ಮನೆ ಕಟ್ಟುವುದಕ್ಕೆ ಇರುವ ವಿಜ್ಞಗಳ ನಿವಾರಣೆ ಮಾಡುವಂತೆ ಪ್ರಾರ್ಥಿಸಿ, ಈ ಬಿಳಿ ಸಾಸಿವೆಗೆ ಕೂಡ ಪೂಜೆ ಮಾಡಿ.
ಈ ಸುದ್ದಿ ಓದಿ:- ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…
ಈ ಬಿಳಿ ಸಾಸಿವೆಯನ್ನು ಹಾಗೆ ಇಟ್ಟುಕೊಂಡಿರಬೇಕು ಯಾವಾಗ ನಿಮ್ಮ ಮನೆ ಕೆಲಸ ಆರಂಭವಾಗುತ್ತದೆ ಆಗ ಮನೆಗೆ ಅಧಿಪಾಯ ಹಾಕುವಾಗ ಇದನ್ನು ಹಾಕಬೇಕು ಅಥವಾ ಅರ್ಧಕ್ಕೆ ನಿಂತಿದ್ದ ಕೆಲಸ ಮುಂದುವರೆಯುತ್ತದೆ ಆಗ ಇದನ್ನು ನಿಮ್ಮ ಮನೆ ಪೂರ್ತಿ ಹಾಕಬೇಕು ಅಥವಾ ನಿಮ್ಮ ಸೈಟ್ ಗೆ ಸಂಬಂಧ ಪಟ್ಟ ಸಮಸ್ಯೆಯಿಂದ ನೀವು ಮನೆ ಕಟ್ಟಿಸುವ ಕೆಲಸ ವಿಳಂಬ ಆಗುತ್ತಿದೆ ಎಂದರೆ ಒಂದು ಒಳ್ಳೆಯ ದಿನ ಇದನ್ನು ಸೈಟ್ ಗೆ ತೆಗೆದುಕೊಂಡು ಹೋಗಿ ನಿಮ್ಮ ಸೈಟ್ ಇರುವಷ್ಟು ಜಾಗಕ್ಕೆ ಹರಡಬೇಕು ಈ ರೀತಿ ಮಾಡಿದರೆ ಶೀಘ್ರವೇ ಸಮಸ್ಯೆ ಪರಿಹಾರವಾಗುತ್ತದೆ ನಿಮ್ಮ ಕನಸು ಬೇಗ ನೆರವೇರುತ್ತದೆ.