ಶಿವ ಎನ್ನುವ ಎರಡಕ್ಷರದ ಶಕ್ತಿಯನ್ನು ವಿವರಿಸಲು ಎರಡು ಗ್ರಂಥ ಬರೆದರೂ ಸಾಲದು, ಶಿವನನ್ನು 108 ಹೆಸರಿನಿಂದ ಕರೆಯುತ್ತಾರೆ. ಜಗದೀಶ, ಸರ್ವೇಶ, ಗೌರೀಶ, ಗಂಗಾಧರ, ದೇವ ದೇವ ಮಹಾದೇವ ಎಲ್ಲವೂ ಕೂಡ ಈಶ್ವರನೇ. ಈಶ್ವರನನ್ನು ಒಲಿಸಿಕೊಳ್ಳುವುದು ಎಷ್ಟು ಸರಳ ಎಂದರೆ ಆತ ಆಡಂಬರ ಕೇಳಲಾರ, ನಿಜ ಭಕ್ತಿಯೊಂದೇ ಶಿವನ ಸಾಕ್ಷಾತ್ಕಾರಕ್ಕೆ ಇರುವ ದಾರಿ, ಸರಳತೆಯೇ ಆತನ ಆಭರಣ.
ಶಿವ ಅಭಿಷೇಕ ಪ್ರಿಯ ಶುದ್ಧಜಲದಿಂದ ಶಿವನಿಗೆ ಅಭಿಷೇಕ ಮಾಡಿ ತಮ್ಮ ಕೈಲಾದ ಪ್ರಸಾದವನ್ನು ನೈವೇದ್ಯ ಮಾಡಿ ಏಕಾಗ್ರತೆಯಿಂದ ಪಂಚಾಕ್ಷರಿ ಮಂತ್ರವನ್ನು 108 ಬಾರಿ ನುಡಿಯುತ್ತಾ ಸಂಪೂರ್ಣವಾಗಿ ಶಿವನ ಮೇಲೆ ನಂಬಿಕೆ ಇಟ್ಟು ಕರೆದರೆ ಸಾಂಬಸದಾ ಶಿವ ಕರಗದೇ ಇರಲಾರ. ಜೀವನದಲ್ಲಿ ಎಲ್ಲದರ ಮೇಲೆ ಬೇಸರವಾದಾಗ ಶಿವ ನೆನಪಾಗುತ್ತಾನೆ ಹಾಗೂ ಇಂತಹ ಅನಾಥಸ್ಥಿತಿಯಲ್ಲಿರುವವನು ಕೈ ಹಿಡಿಯುವುದು ಈ ದೇವನೆ.
ಶಿವನ ಅನುಗ್ರಹ ದೊರೆತರೆ ಜೊತೆ ಇನ್ನೂ ಐದು ದೇವತೆಗಳ ಆಶೀರ್ವಾದವೂ ಜೊತೆಗೆ ಸಿಗುತ್ತದೆ. ಶಿವನನ್ನು ಕಾಲ ಎಂದು ಕೂಡ ಕರೆಯುತ್ತಾರೆ. ಮಹಾಕಾಳೇಶ್ವರನ ಅಂಶವಾಗಿರುವ ಶ್ರೀ ಕಾಲಭೈರವೇಶ್ವರನನ್ನು ಆರಾಧಿಸುವವರಿಗೆ ಖಂಡಿತವಾಗಿಯೂ ಸಿಗುತ್ತದೆ, ಕಾಲಭೈರವೇಶ್ವರನ ಕೃಪೆಯಿಂದಾಗಿ ನಮ್ಮ ಸಮಯ ಸರಿಯಾಗಿ ನಡೆಯುತ್ತದೆ ಹಾಗೂ ಆತನು ನಮ್ಮ ಸಮಯ ಕಾಯುತ್ತಾನೆ ಎನ್ನುವ ನಂಬಿಕೆ. ಅದೇ ರೀತಿಯಾಗಿ ನಮ್ಮ ಮೇಲೆ ಆಗುವ ದುಷ್ಟಶಕ್ತಿಗಳ ಪ್ರಭಾವವನ್ನು ಕೂಡ ಶ್ರೀ ಕಾಲಭೈರವೇಶ್ವರನ ತಡೆಯುತ್ತಾನೆ.
ಶಿವನ ವಾಹನವಾದ ನಂದಿಯು ಯಾವಾಗಲೂ ಶಿವನ ಜೊತೆ ಇರುತ್ತಾರೆ. ಪ್ರತಿಯೊಂದು ಶಿವನ ದೇವಸ್ಥಾನದಲ್ಲಿ ಕೂಡ ಶಿವಲಿಂಗದ ಎದುರುಗಡೆ ನಂದಿ ಇರುತ್ತಾರೆ. ನಂದಿ ಎಂದರೆ ಸಾತ್ವಿಕತೆ, ನಂದಿ ಎಂದರೆ ಭಕ್ತಿಯ ಪ್ರತೀಕ, ನಂದಿ ಎಂದರೆ ಗುರುಭಕ್ತಿ, ನಂದಿ ಎಂದರೆ ಶಿವನ ಅತ್ಯಂತ ಪ್ರೀತಿ ಪಾತ್ರದಲ್ಲಿ ಒಬ್ಬ ನಂದಿಯು ಶಿವನ ಮೇಲೆ ಅಪಾರವಾದ ಭಯ ಭಕ್ತಿ ಹೊಂದಿದ್ದಾರೆ.
ನಾವು ಶಿವನನ್ನು ಆರಾಧಿಸಿದರೆ ಶಿವನ ಜೊತೆ ನಂದಿಯನ್ನು ಆರಾಧಸಿದಂತೆ, ಶಿವ ಭಕ್ತರೆಲ್ಲರೂ ಕೂಡ ಶಿವನ ಜೊತೆ ನಂದಿಯನ್ನು ಕೂಡ ಪೂಜಿಸುತ್ತಾರೆ ಹಾಗಾಗಿ ನೀವೇನಾದರೂ ಪರಶಿವನ ಕೃಪೆಗಾಗಿ ಪ್ರಾರ್ಥಿಸಿದರೆ ಖಂಡಿತವಾಗಿಯೂ ನಿಮಗೆ ನಂದೀಶ್ವರನ ಆಶೀರ್ವಾದ ಸಿಗುತ್ತದೆ.
ಶಿವನ ಜಟೆಯಿಂದ ಅವತರಿಸಿರುವ ವೀರಭದ್ರನು ಕೂಡ ಶಿವನ ಪ್ರತಿರೂಪ. ವೀರಭದ್ರನು ಶಿವನ ರೌದ್ರ ಅವತಾರವಾಗಿದ್ದಾರೆ ಮತ್ತು ಶಿವನ ಹಿಂಬಾಲಕರಾಗಿದ್ದಾರೆ. ನೀವು ವೀರಭದ್ರನನ್ನು ಪೂಜಿಸಿದರೆ ಸಾಕ್ಷಾತ್ ಶಿವನಿಗೆ ಕೈ ಮುಗಿದಂತೆ ಹಾಗೆ ನೀವು ಶಿವನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರೆ ವೀರಭದ್ರನ ಅನುಗ್ರಹ ಕೂಡ ನಿಮ್ಮ ಮೇಲೆ ಆಗುತ್ತದೆ.
ಅದೇ ರೀತಿಯಾಗಿ ಕಲಿಯುಗದಲ್ಲಿ ಬಹಳ ಬೇಗ ಒಲಿಯುವ ದೇವನಾದ ಆಂಜನೇಯನು ಕೂಡ ಶಿವ ಭಕ್ತರನ್ನು ಕಾಯುತ್ತಾರೆ ಎನ್ನುವ ಪುರಾವೆಗಳಿವೆ, ಶಿವನಿಗೆ ಭಕ್ತಿಯಿಂದ ನಮಿಸುವುದರಿಂದ ಶ್ರೀ ಆಂಜನೇಯನ ಆಶೀರ್ವಾದವೂ ಕೂಡ ಸಿಗುತ್ತದೆ.
ವಿಷ್ಣುವಿನ ಅವತಾರವಾದ ಶ್ರೀ ರಾಮನು ಕೂಡ ಶಿವನನ್ನು ಪ್ರಾರ್ಥಿಸುವವರಿಗೆ ಆಶೀರ್ವಾದ ಮಾಡುತ್ತಾರೆ. ಶಿವನನ್ನು ಪ್ರೀತಿಸುವವರಿಗೆ ಶಿವನ ಮೇಲೆ ಅಪರಾಧ ಭಕ್ತಿ ಉಳ್ಳವರಿಗೆ ಶಿವ ಧ್ಯಾನ ಮಾಡುತ್ತಾ ಬದುಕು ನಡೆಸುವವರಿಗೆ ಸದಾ ಕಾಲ ಶ್ರೀ ರಾಮನ ಶ್ರೀರಕ್ಷೆಯು ದೊರಕುತ್ತದೆ.
ನೀವೇನಾದರೂ ಶಿವನ ಭಕ್ತರಾಗಿದ್ದರೆ ಶಿವನನ್ನು ಪೂಜಿಸುವಾಗ ಈ ಐದು ಜನರನ್ನು ನೆನೆದು ಒಮ್ಮೆ ಕೈ ಮುಗಿಯಿರಿ ಹೆಚ್ಚಿನ ಆಶೀರ್ವಾದ ನಿಮಗೆ ದೊರೆಯುತ್ತದೆ. ಒಂದು ವೇಳೆ ನಿಮಗೆ ಇದುವರೆಗೂ ಕೂಡ ಈ ವಿಷಯ ತಿಳಿಯದೆ ಇದ್ದರೂ ಕೂಡ ನೀವು ಶಿವಭಕ್ತರಾಗಿದ್ದರೆ ಈ ಐದು ದೇವರ ಆಶೀರ್ವಾದವು ನಿಮಗೆ ಮೇಲೆ ಇದ್ದೇ ಇರುತ್ತದೆ.