ಈಗಿನ ಕಾಲದಲ್ಲಿ ಸಂಖ್ಯಾಶಾಸ್ತ್ರವನ್ನು ಹೆಚ್ಚಿನ ಜನರು ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರದಂತೆ ಸಂಖ್ಯಾಶಾಸ್ತ್ರವು ಕೂಡ ಬಹಳ ಚೆನ್ನಾಗಿ ವರ್ಕ್ ಆಗುತ್ತದೆ. ಸಂಖ್ಯಾಶಾಸ್ತ್ರವು ಕಣ್ಣೆದುರಿಗೆ ಕಾಣುತ್ತಿರುವ ಸತ್ಯ ಎಂದು ಹೇಳಬಹುದು. ಹಾಗಾಗಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬದಿದ್ದರೂ ಕೂಡ ಸಂಖ್ಯಾಶಾಸ್ತ್ರವನ್ನು ನಂಬಲೇಬೇಕು.
ಸಂಖ್ಯಾಶಾಸ್ತ್ರದಲ್ಲಿ ಎಲ್ಲವೂ ನಂಬರ್ ಆಧಾರಿತವೇ ನಮ್ಮ ಬದುಕು ಕೂಡ ನಂಬರ್ ಆಧಾರಿತವಾಗಿ ನಡೆಯುತ್ತಿರುವುದರಿಂದ ಕಣ್ಣು ಮುಚ್ಚಿ ಇದನ್ನು ನಂಬಬಹುದು. ಸಂಖ್ಯಾಶಾಸ್ತ್ರವನ್ನು ನಂಬಿ ನಡೆದವರಿಗೆ ಮಾತ್ರ ಅದರ ರುಚಿ ತಿಳಿದಿರುತ್ತದೆ. ಸಂಖ್ಯಾಶಾಸ್ತ್ರದಲ್ಲಿ ಜನ್ಮ ಸಂಖ್ಯೆ ಹಾಗೂ ಭಾಗ್ಯ ಸಂಖ್ಯೆ ಎನ್ನುವುದು ಬಹಳ ಮುಖ್ಯವಾದ ವಿಷಯಗಳು ಮತ್ತು ಇದರ ನಡುವೆ ಲಕ್ಕಿ ನಂಬರ್ ಎನ್ನುವುದು ಅಥವಾ ಲಕ್ಕಿ ಕಾಂಬಿನೇಶನ್ ನಂಬರ್ ಎನ್ನುವುದು ಹೆಚ್ಚು ವರ್ಕ್ ಆಗುತ್ತದೆ.
ಇದರ ಜೊತೆಗೆ ಇಂದು ನಿಮಗೆ ಹಿಡನ್ ಲಕ್ಕಿ ನಂಬರ್ ಬಗ್ಗೆ ಕೂಡ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ ಉದಾಹರಣೆಗೆ ನೀವು 14 ಏಪ್ರಿಲ್ 1994ರಲ್ಲಿ ಹುಟ್ಟಿದ್ದೀರಾ ಎಂದುಕೊಳ್ಳೋಣ. ಇಲ್ಲಿ ನಿಮ್ಮ ಜನ್ಮ ಸಂಖ್ಯೆ 1+4=5, 5 ಎಂದರೆ ಬುಧ ಗ್ರಹದ ಪ್ರಭಾವವಿರುವ ಸ್ವಭಾವವನ್ನು ನೀವು ಹೊಂದಿರುತ್ತೀರಿ ಮತ್ತು ನಿಮ್ಮ ಭಾಗ್ಯ ಸಂಖ್ಯೆಯು 1+4+0+4+1+9+9+4=32=5 ಭಾಗ್ಯ ಸಂಖ್ಯೆ ಕೂಡ 5 ಬಂದಿರುತ್ತದೆ.
ಹಾಗಾಗಿ ನೀವು ಹೆಚ್ಚು ಬುದ್ಧಿವಂತರು ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಹೊಂದಿರುತ್ತೀರಾ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಬುಧ ಗ್ರಹದ ರೀತಿ ಮಗುವಿನ ಸ್ವಭಾವ ಇರುವ ಗುಣ ನಿಮ್ಮದು ಎಲ್ಲರ ಮಧ್ಯ ಹೆಚ್ಚು ಆಕರ್ಷಣೀಯವಾಗಿರುತ್ತೀರಿ ಇದೆಲ್ಲವೂ ಸತ್ಯ ಈಗ ನಿಮ್ಮ ಸ್ವಭಾವವು ಇದರ ಜೊತೆ ಇನ್ನು ಕೆಲವು ಲಕ್ಷಣಗಳನ್ನು ಹೋಲುತ್ತಿರುತ್ತದೆ.
ಉದಾಹರಣೆಗೆ ಇದೇ 14ನೇ ಸಂಖ್ಯೆಯಲ್ಲಿ ಹುಟ್ಟಿದ ಕೆಲವರು ಬಹಳ ಕೋ’ಪಿ’ಷ್ಟ ರಾಗಿರುತ್ತಾರೆ. ಕೆಲಸ ಕಾರ್ಯದ ವಿಚಾರದಲ್ಲಿ ಬಹಳಷ್ಟು ಆಗಿರುತ್ತಾರೆ, ನಿಷ್ಟೂರವಾದಿಗಳಾಗಿರುತ್ತಾರೆ. ಇವರಲ್ಲಿ ಮಂಗಳಗ್ರಹದ ಪ್ರಭಾವ ಹೆಚ್ಚಾಗಿ ಕಾಣಿಸುತ್ತಿರುತ್ತದೆ. ಹೀಗ್ಯಾಕೆ ಎನ್ನುವ ಗೊಂದಲ ಇದ್ದರೆ ಅದಕ್ಕೆ ಉತ್ತರ ಹೀಗಿದೆ ನೋಡಿ, ಅದು ನಿಮ್ಮ ಹಿಡನ್ ಲಕ್ಕಿ ನಂಬರ್ ಆಗಿರುತ್ತದೆ.
ಇದು ಹೇಗೆಂದರೆ ನಿಮ್ಮ ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಸಂಖ್ಯೆಯನ್ನು ಮಾತ್ರ ಕೂಡಿಸಬೇಕು. 1+4+0+4=9 ಆದಕಾರಣ ನಿಮಗೆ ಬುಧ ಗ್ರಹದ ಜೊತೆ ಮಂಗಳ ಗ್ರಹದ ಪ್ರಭಾವವು ಹೆಚ್ಚಾಗಿದ್ದು ಆ ವರ್ತನೆ ಕೂಡ ನಿಮ್ಮಲ್ಲಿ ಕಂಡು ಬರುತ್ತಿರುತ್ತದೆ ಇದು ನಿಮ್ಮ ಲಕ್ಕಿ ನಂಬರ್ ಕೂಡ ಆಗಿರುತ್ತದೆ.
ಸಾಮಾನ್ಯವಾಗಿ ಬುಧಗ್ರಹಕ್ಕೆ 2, 6, 8, 9 ಒಳ್ಳೆಯ ಕಾಂಬಿನೇಷನ್ ಆಗಿರುವುದರಿಂದ ಈ 9ನೇ ಲಕ್ಕಿ ನಂಬರ್ ಪ್ರಕಾರ ನೀವು ಒಳ್ಳೆಯ ಕೆಲಸಗಳನ್ನು ಮಾಡಿದರೆ ಕೆಲವು ವಿಷಯಗಳಲ್ಲಿ 9 ಎನ್ನುವ ಸಂಖ್ಯೆ ಆರಿಸಿದರೆ ಅಥವಾ 9 ಬರುವ ದಿನಗಳಲ್ಲಿ ಆ ಕಾರ್ಯಗಳನ್ನು ಮಾಡಿದರೆ ಹೀಗೆ 9ಕ್ಕೆ ಸಂಬಂಧಿಸಿದಂತೆ ನೀವು ಎಲ್ಲದರಲ್ಲೂ ನಡೆದುಕೊಂಡರೆ ಯೂನಿವರ್ಸ್ ಕೂಡ ನಿಮಗೆ ಸಪೋರ್ಟ್ ಮಾಡಿ ನಿಮ್ಮ ಎಲ್ಲಾ ಕಾರ್ಯಗಳು ಜಯಿಸುತ್ತವೆ.
ಇದೊಂದು ಹಿಡನ್ ಸೀಕ್ರೆಟ್ ಆಗಿದೆ ಆದರೆ ಹೆಚ್ಚಿನ ಜನರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ. ಇದನ್ನು ಕೂಡ ನೀವು ನಿಮ್ಮ ಜೀವನದಲ್ಲೇ ಅಳವಡಿಸಿಕೊಂಡು ಇನ್ನಷ್ಟು ಸಕ್ಸಸ್ ಆಗಲಿ ಎನ್ನುವುದಷ್ಟೇ ಈ ಅಂಕಣದ ಆಶಯ.