ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಒಂದು ಸ್ವಂತ ಮನೆ ಇರಬೇಕು ಎಂದು ಆಸೆ ಖಂಡಿತವಾಗಿಯೂ ಇರುತ್ತದೆ. ಯಾಕೆಂದರೆ ಸ್ವಂತ ಮನೆ ಇಲ್ಲದವರಿಗೆ ಅವರ ಆದಾಯದ ಅತಿ ಹೆಚ್ಚು ಭಾಗ ಬಾಡಿಗೆಗಾಗಿಯೇ ಖರ್ಚು ಆಗುತ್ತದೆ ಮತ್ತು ಬಾಡಿಗೆ ಮನೆಯಲ್ಲಿ ಇದ್ದರೆ ಆಗಾಗ ಮನೆ ಖಾಲಿ ಮಾಡಬೇಕಾದ ಸಮಸ್ಯೆ ಮತ್ತು ಮನೆ ನಮ್ಮದಲ್ಲ ಎನ್ನುವ ಕೊರಗು ಹಾಗೂ ನಮಗೆ ಬೇಕಾದ ರೀತಿ ಮನೆಯಲ್ಲಿ ಇರಲು ಆಗುವುದಿಲ್ಲ ಎನ್ನುವ ತೊಡಕುಗಳು ಇರುತ್ತವೆ.
ಹಾಗಾಗಿ ಕಷ್ಟವೋ ಸುಖವೋ ಆದಷ್ಟು ಬೇಗ ನಮ್ಮ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಪ್ರತಿಯೊಬ್ಬರು ಆಸೆ ಪಡುತ್ತಾರೆ. ಶ್ರೀಮಂತರಿಗೆ ಇದೊಂದು ವಿಚಾರವೇ ಅಲ್ಲ. ಆದರೆ ಬಡ ಹಾಗೂ ಸಾಮಾನ್ಯ ವರ್ಗದವರು ಮನೆ ಕಟ್ಟಬೇಕು ಎಂದರೆ ಅದು ಬಹಳ ದೊಡ್ಡ ಯೋಜನೆ ಯಾಕೆಂದರೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತು ಇದೆ.
ಇದರಿಂದಲೇ ತಿಳಿಯುತ್ತದೆ ಮನೆ ಕಟ್ಟುವುದು ಎಷ್ಟು ದೊಡ್ಡ ಕೆಲಸ ಎಂದು ಮನೆ ಕಟ್ಟಬೇಕು ಎಂದರೆ ಹಣದ ವ್ಯವಸ್ಥೆ ಜೊತೆಗೆ ಆ ಮನೆಯಲ್ಲಿ ದೀರ್ಘಕಾಲದವರೆಗೆ ನಾವು ನಮ್ಮ ಮಕ್ಕಳು ಸಂತೋಷವಾಗಿ ಇರಬೇಕಾದ ಕಾರಣ ಅದಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು ಕೂಡ ಹೊಂದಿಸಿ ಶಾಸ್ತ್ರ ಬದ್ಧವಾಗಿ ಮನೆ ನಿರ್ಮಾಣ ಮಾಡಬೇಕು.
ಹೀಗಾಗಿ ಇದು ಹಣಕಾಸಿನ ಜವಾಬ್ದಾರಿ ಮಾತ್ರ ಅಲ್ಲದೆ ಇನ್ನು ಹೆಚ್ಚಿನ ಹೊಣೆಗಾರಿಕೆ ಆಗಿದೆ. ಆದ್ದರಿಂದ ಬಹಳ ಸಲೀಸಾಗಿ ಮನೆ ಕಟ್ಟುವ ಕಾರ್ಯ ಮುಗಿಯುವುದಿಲ್ಲ ಮತ್ತು ಮನೆ ಕಟ್ಟಲು ಶುರು ಮಾಡಿದ ಮೇಲೆ ಅನೇಕ ವಿಘ್ನಗಳು ಕೂಡ ಎದುರಾಗುತ್ತಾ ಇರುತ್ತವೆ. ಈ ರೀತಿ ತೊಂದರೆ ಇಲ್ಲದೆ ಈ ಕಾರ್ಯ ನಡೆಯಬೇಕು ಎಂದರೆ ದೈವ ಬಲ ಬೇಕು.
ಕೆಲವರು ಜೀವನಮನ ಪೂರ್ತಿ ಹಣ ಕೂಡಿಟ್ಟು ವಯಸ್ಸಾದ ಕಾಲದಲ್ಲಿ ಮನೆ ನಿರ್ಮಿಸಿ ತಮ್ಮ ಮಕ್ಕಳಿಗಾಗಿ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ದುಡಿವಾಗಲೇ ಲೋನ್ ಗಳನ್ನು ಮಾಡಿ ಮನೆ ಕಟ್ಟುತ್ತಾರೆ. ಕೆಲವರಿಗೆ ಮನೆ ಕಟ್ಟಲು ಜಾಗ ಕೂಡ ಇರುವುದಿಲ್ಲ ಇಂತವರ ಕ’ಷ್ಟ ಹೇಳ ತೀರದು. ಅವರು ಮೊದಲ ಸೈಟ್ ಖರೀದಿಸಿ ನಂತರ ಮನೆ ಕಟ್ಟಿಕೊಳ್ಳುವಷ್ಟರಲ್ಲಿ ಅವರ ಜೀವನ ಹೈರಾಣಾಗಿರುತ್ತದೆ.
ಆದರೆ ಈ ಆಸೆಯನ್ನು ಕೈಬಿಡುವಂತಿಲ್ಲ. ಮನೆ ಎನ್ನುವುದು ಆಸ್ತಿ ಮಾತ್ರ ಅಲ್ಲದೆ ನಮ್ಮ ಸುಖ ಸಂತೋಷ ನೆಮ್ಮದಿ ಸಮೃದ್ಧಿ ಎಲ್ಲವೂ ಆಗಿದೆ. ಎಲ್ಲರಿಗೂ ಸ್ವಂತ ಮನೆ ಬೇಕೇ ಬೇಕು. ನಿಮಗೂ ಕೂಡ ಈ ರೀತಿ ಸ್ವಂತ ಮನೆ ಹೊಂದುವ ಆಸೆ ಇದ್ದರೆ ಅದಕ್ಕಾಗಿ ಪ್ರಯತ್ನ ಪಡುತ್ತಿದ್ದರೆ ನಿಮ್ಮ ಕನಸು ಶೀಘ್ರವಾಗಿ ಕೈಗೂಡಬೇಕು ಎಂದರೆ ಹೀಗೆ ನಾವು ಹೇಳುವ ಈ ಒಂದು ಪೂಜೆ ಮಾಡಿ ಸಾಕು.
ನಾಲ್ಕು ಮಂಗಳವಾರದ ಈ ವ್ರತವನ್ನು ಮಾಡಿ. ಹಿಂದಿನ ದಿನವೇ ಮನೆಯನ್ನು ಸ್ವಚ್ಛ ಮಾಡಿ ಮಂಗಳವಾರದ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮಡಿಯಾಗಿ ದಕ್ಷಿಣ ದಿಕ್ಕಿನಲ್ಲಿ ಒಂಬತ್ತು ಬತ್ತಿಯನ್ನು ಹಾಕಿ ಎಳ್ಳೆಣ್ಣೆಯಲ್ಲಿ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬೇಕು.
ಈ ಸಮಯದಲ್ಲಿ ನಿಮ್ಮ ಮನೆ ದೇವರಿಗೆ ಹರಕೆ ಕಟ್ಟಿಕೊಳ್ಳಿ, ಇಷ್ಟ ದೇವರ ಬಳಿ ಪ್ರಾರ್ಥಿಸಿಕೊಳ್ಳಿ ಮತ್ತು ಲಕ್ಷ್ಮಿ ಸಮೇತ ಭೂ ವರಹಾ ಸ್ವಾಮಿಯನ್ನು ಕೂಡ ಬೇಡಿಕೊಳ್ಳಿ. ಹೀಗೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಾಗೂ ಸಂಜೆ ಗೋಧೂಳಿ ಲಗ್ನದಲ್ಲಿ ಈ ರೀತಿ ದೀಪಾರಾಧನೆ ಮಾಡುತ್ತಾ ಬನ್ನಿ.
ನಾಲ್ಕು ವಾರಗಳು ಆಗುತ್ತಿದ್ದ ನಂತರವೇ ನಿಮಗೆ ಈ ವಿಚಾರದಲ್ಲಿದ್ದ ಸಮಸ್ಯೆಗಳು ಪರಿಹಾರವಾಗಿ ನಿಮ್ಮ ಮನೆ ಕಟ್ಟುವ ಕನಸಿನ ಕುರಿತಾದ ಸಿಹಿ ವಿಚಾರವನ್ನು ಕೇಳುತ್ತೀರಿ ನಂತರ ನೀವು ಈ ಪೂಜೆಯನ್ನು ಮುಂದುವರಿಸಲೂಬಹುದು. ನಿರ್ವಿಘ್ನವಾಗಿ ನಿಮ್ಮ ಮನೆ ಕಟ್ಟುವ ಕನಸು ಪೂರ್ತಿಗೊಳ್ಳುತ್ತದೆ. ತಪ್ಪದೆ ಈ ಸರಳ ಆಚರಣೆ ಮಾಡಿ ನಿಮ್ಮ ಮನೆ ಕಟ್ಟುವ ಕನಸಿನತ್ತ ಈ ಪ್ರಯತ್ನವನ್ನು ತೀವ್ರಗೊಳಿಸಿ.