ಕನ್ನಡದ ಹಾಸ್ಯ ನಟಿಯರನ್ನು ನೆನೆದಾಗ ಮೊದಲಿಗೆ ಕಣ್ಮುಂದೆ ತುಂಬಿಕೊಳ್ಳೋದು ಉಮಾಶ್ರೀ (Umashree) ಅವರ ಚಿತ್ರ. ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ನಾನಾ ಪಾತ್ರಗಳಲ್ಲಿ ರಂಜಿಸುತ್ತ ವಿಶೇಷವಾಗಿ ಹಾಸ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಾಗೆ ರಾಜಕೀಯದತ್ತ ಕೂಡ ಮುಖ ಮಾಡಿ, ಇಂದು ಕಿರುತೆರೆಯ ಪ್ರೇಕ್ಷಕರನ್ನು ತನ್ನ ಅಮೋಘ ನಟನೆಯ ಮೂಲಕ ಹಿಡಿದಿಟ್ಟುಕೊಂಡಿರುವ ಪ್ರತಿಭಾವಂತೆ.
ಉಮಾಶ್ರೀ ಎಂದ ತಕ್ಷಣ ನಮಗೆಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran) ಅವರ ಪುಟ್ನಂಜ (Putnanja) ಚಿತ್ರದ ಪುಟ್ಪಲ್ಲಿ (Putmalli) ಪಾತ್ರ ತಕ್ಷಣ ನೆನಪಾಗಿಬಿಡುತ್ತದೆ. ಸಂಪ್ರದಾಯ ಕುಟುಂಬದ ಹಳ್ಳಿ ಅಜ್ಜಿ ಒಬ್ಬಳು ಫ್ಯಾಷನ್ ಮಾಡುವ ಮೊಮ್ಮಗನ ಹೆಂಡತಿಗೆ ಸಂಸ್ಕಾರ ಕಲಿಸುವ ಘಾಟಿ ಅಜ್ಜಿ ಪಾತ್ರ ಎಲ್ಲರ ಮನಸನ್ನ ಮೇಲೆ ಒಂದು ದೊಡ್ಡ ಪ್ರಭಾವ ಬೀರಿತ್ತು. ಆನಂತರ ಉಮಾಶ್ರೀ ಅವರ ಇಮೇಜ್ ಪುಟ್ಮಲ್ಲಿ ಎಂದೇ ಬದಲಾಯಿತು ಎಂದು ಹೇಳಬಹುದು.
ಆದರೆ ಆರಂಭದ ದಿನಗಳಲ್ಲಿ ಪುಟ್ಮಲ್ಲಿ ಅಲಿಯಾಸ್ ಉಮಾಶ್ರೀ ಅವರು ಸಹ ಸಿನಿಮಾಗಳಲ್ಲಿ ಫ್ಯಾಶನ್ ಉಡುಗೆಗಳನ್ನು ಧರಿಸಿದ್ದಾರೆ. ಆದರೆ ಒಂದು ಹಂತದಲ್ಲಿ ಅಂದರೆ ಬಹುತೇಕ ಅವರು ಪುಟ್ಮಲ್ಲಿ ಸಿನಿಮಾದಲ್ಲಿ ನಟಿಸಿದ ಬಳಿಕ ಸಂಪೂರ್ಣವಾಗಿ ಇದೇ ರೀತಿ ತುಂಬಾ ಸಂಪ್ರದಾಯವಾಗಿ ಕಾಣಿಸಿಕೊಳ್ಳಲು ಶುರು ಮಾಡಿದರು ಎನ್ನಬಹುದು. ಅದು ಸಿನಿಮಾಗೆ ಮಾತ್ರ ಸೀಮಿತವಾಗದೆ ತೆರೆ ಹಿಂದೆ ಕೂಡ ಅವರ ವ್ಯಕ್ತಿತ್ವವೇ ಈ ರೀತಿ ರೂಪಗೊಂಡಿತು.
ಹಲವು ವರ್ಷಗಳಿಂದ ಉಮಾಶ್ರೀ ಅವರು ಸಾರ್ವಜನಿಕವಾಗಿ ಕೂಡ ಇದೇ ರೀತಿ ಕಾಣಿಸಿಕೊಳ್ಳುತ್ತಾರೆ. ಲಕ್ಷಣವಾಗಿ ಸೀರೆಯುಟ್ಟು ಹಣೆ ತುಂಬಾ ಕುಂಕುಮ ಇಟ್ಟುಕೊಂಡು, ಕೈಯಲ್ಲಿ ಬಾಳೆ ಹಾಕಿಕೊಂಡು, ಸಂಪ್ರದಾಯಸ್ಥ ಭಾರತ ನಾರಿಯ ಹಾಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಲೂ ಉಮಾಶ್ರೀ ಅವರಿಗೆ ಯಾವ ಉಡುಗೆ ಇಷ್ಟ ಎಂದು ಕೇಳಿದರೆ ಅವರು ಹೆಮ್ಮೆಯಿಂದ ಹೇಳಿ ಬಿಡುತ್ತಾರೆ.
ನನಗೆ ಬಾಲ್ಯದಿಂದಲೂ ಭಾರತೀಯ ಸಂಸ್ಕೃತಿಯ ಲಂಗ ಧವಣಿ, ಸೀರೆ ಇಂತಹ ಉಡುಗೆಗಳು ಇಷ್ಟ, ಆದರೆ ಪಾತ್ರಗಳಿಗೆ ಅನುಗುಣವಾಗಿ ಫ್ಯಾಶನ್ ಬಟ್ಟೆ ಧರಿಸುತ್ತದೆ ಹೊರತು ಅದನ್ನು ಹೊರತುಪಡಿಸಿ ಉಳಿದ ಸಮಯದಲ್ಲೆಲ್ಲ ನಾನು ಈ ರೀತಿಯೇ ಇರಲು ಇಷ್ಟಪಡುತ್ತಿದ್ದೆ, ಇದೇ ರೀತಿ ಇರುತ್ತಿದ್ದೆ ಎಂದು. ಆದರೆ ಇಷ್ಟು ಸಂಪ್ರದಾಯವನ್ನು ಪಾಲಿಸುವ ಉಮಾಶ್ರೀ ಅವರನ್ನು ಜನ ಅಂದು ನೋಡುತ್ತಿದ್ದದ್ದೇ ಬೇರೆ ರೀತಿ.
ಒಂದು ಕಾಲದಲ್ಲಿ ಅವರನ್ನು ಕುಂಕುಮಕ್ಕೆ ಕರೆಯುವುದಕ್ಕೂ ಕೂಡ ಜನರು ಹಿಂದೆ ಮುಂದೆ ನೋಡುತ್ತಿದ್ದರಂತೆ ಕಾರಣ ಇಷ್ಟೇ ಅವರು ನಾಟಕದವರು ಜೊತೆಗೆ ಗಂಡನಿಂದ ಬೇರೆ ಆಗಿದ್ದಾರೆ ಎಂದು. ಆ ಕಹಿ ನೆನಪುಗಳನ್ನು ನೆನೆದು ಹೇಳಿಕೊಳ್ಳುವ ಇವರು ಅದರ ಜೊತೆಗೆ ಧೈರ್ಯವಾಗಿ ಮತ್ತೊಂದು ಮಾತನ್ನು ಸಹ ಹೇಳುತ್ತಾರೆ.
ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲೇ ನಮ್ಮ ದೇಶದಲ್ಲಿ ಅರಿಶಿನ ಕುಂಕುಮ ಹಾಕಿಕೊಳ್ಳುವ ಶಾಸ್ತ್ರ ಮಾಡುತ್ತಾರೆ. ಅಂದಿನಿಂದಲೇ ಅವರಿಗೆ ಅದರ ಮೇಲೆ ಅಧಿಕಾರ ಇರುತ್ತದೆ ಯಾರು ಸಹ ಅದನ್ನು ಕೊಡುವುದು ಅಲ್ಲ ಕಿತ್ತುಕೊಳ್ಳುವುದು ಅಲ್ಲ ಯಾರು ಕೊಡದೆ ಇದ್ದರೂ ನಾವೇ ಅದನ್ನು ಧರಿಸಬಹುದು. ನಾನು ಅಷ್ಟೇ ಸಾಕಷ್ಟು ಬಾರಿ ಈ ರೀತಿ ಬೇಸರ ಅನುಭವಿಸಿದೆ ಆಮೇಲೆ ಬುದ್ಧಿ ಬಂತು.
ಯಾರು ಯಾಕೆ ಕೊಡಬೇಕು ನನಗೆ ಇಷ್ಟ ನಾನು ಲಕ್ಷಣವಾಗಿ ಕಾಣುತ್ತೇನೆ ನನಗೆ ಖುಷಿಯಾಗುತ್ತದೆ ಹಾಗಾಗಿ ಅದೇ ಕಾರಣಕ್ಕೆ ಯಾರು ಕೊಡದಿದ್ದರೂ ನಾನೇ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ಮತ್ತೊಂದು ಕಥೆಯ ಮೂಲಕ ಈ ಬಾರಿ ಇವರು ಬಂದಿದ್ದಾರೆ. ಈ ತನ್ನ ಜೊತೆ ತನ್ನ ಮೂರು ಹೆಣ್ಣು ಮಕ್ಕಳ ಕಾಲ್ಪನಿಕ ಕಥೆಯನ್ನು ಸಹ ಹೇಳಲಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿರುವ ಈ ಸೂಪರ್ ಹಿಟ್ ಧಾರಾವಾಹಿಗೆ ಪುಟ್ಟಕ್ಕನ ಮಕ್ಕಳು (Puttakkana Makkalu) ಎಂದು ಹೆಸರಿಡಲಾಗಿದೆ.