
ಯೂನಿಯರ್ ಬ್ಯಾಂಕಲ್ಲಿ ಚಿನ್ನಾಭರಣ ಮೌಲ್ಯಮಾಪಕ ಮತ್ತು ತೂಕ ಮಾಪನಗಾರ ಹುದ್ದೆಯ ಹಲವು ಪೋಸ್ಟ್ಗಳು ಖಾಲಿ ಇದ್ದು, ಆಸಕ್ತರಿಗೆ ಅರ್ಜಿ ಸಲ್ಲಿಸಲು ಯೂನಿಯನ್ ಬ್ಯಾಂಕ್ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎನ್ನುವ ವಿಷಯದ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ಜೊತೆಗೆ ಯಾವ ಶಾಖೆಗಳಲ್ಲಿ ಹುದ್ದೆಗಳಿವೆ, ವೇತನ ಶ್ರೇಣಿ ಏನಿರುತ್ತದೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ, ಯಾವ ರೀತಿ ಅರ್ಜಿ ಸಲ್ಲಿಸಬೇಕು ಯಾವೆಲ್ಲಾ ದಾಖಲೆಗಳನ್ನು ಕೊಡಬೇಕು ಮತ್ತು ಈ ಹುದ್ದೆ ಪಡೆಯುವವರಿಗೆ ಇರುವ ಪ್ರಮುಖ ನಿಬಂಧನೆಗಳು ಏನು? ಇತ್ಯಾದಿ ವಿಚಾರಗಳ ಬಗ್ಗೆ ಕೂಡ ವಿವರವಾಗಿ ತಿಳಿಸಲಾಗಿದೆ. ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಉದ್ಯೋಗ ಸಂಸ್ಥೆಯ ಹೆಸರು:- ಯೂನಿಯನ್ ಬ್ಯಾಂಕ್
ಉದ್ಯೋಗ ಸ್ಥಳ:- ಬೆಳಗಾವಿ
ಒಟ್ಟು ಹುದ್ದೆಗಳ ಸಂಖ್ಯೆ:- 200
ಹುದ್ದೆಯ ಹೆಸರು:- ಚಿನ್ನಾಭರಣ ಮೌಲ್ಯಮಾಪಕರು
ವೇತನ ಶ್ರೇಣಿ:- 25,000 ಮಾಸಿಕವಾಗಿ
ಶೈಕ್ಷಣಿಕ ವಿದ್ಯಾರ್ಹತೆ:- 10ನೇ ತರಗತಿ
ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 60 ವರ್ಷಗಳು
ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಬೇಕಾದ ಇತರೆ ಅರ್ಹತೆಗಳು:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಭಾರತೀಯ ಪ್ರಜೆಯಾಗಿರಬೇಕು ಮತ್ತು ಹುದ್ದೆಗಳು ಖಾಲಿ ಇರುವ ಶಾಖೆಯ ಹತ್ತಿರದ ಪ್ರದೇಶದ ಖಾಯಂ ನಿವಾಸಿಯಾಗಿರಬೇಕು. ಇ-ಕೆವೈಸಿ ಪೂರ್ಣಗೊಂಡಿರಬೇಕು.
● ಅವರ ವ್ಯಾಪಾರ, ವ್ಯವಹಾರ ಮತ್ತು ವೃತ್ತಿಯಲ್ಲಿ ಉತ್ತಮವಾಗಿ ಗುರುತಿಸಿಕೊಂಡಿರಬೇಕು.
● ಚಿನ್ನಾಭರಣಗಳ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿ ಐದು ವರ್ಷಗಳ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು. ಹಿಂದಿನ ಉದ್ಯೋಗದಾತರಿಂದ ಅನುಭವದ ಪ್ರಮಾಣ ಪತ್ರ ಪುರಾವೆ ಪಡೆದಿರಬೇಕು.
● ಜ್ಯುವೆಲ್ ಮೌಲ್ಯಮಾಪಕರ ಸಂಘದಿಂದ ಪ್ರಮಾಣ ಪತ್ರ ಕಡ್ಡಾಯ.
● ಪ್ರಾಯೋಗಿಕ ಅನುಭವದ ಆಧಾರದ ಮೇಲೆ ಅಂಗಡಿ ನಡೆಸುತ್ತಿದ್ದರೆ ಪರವಾನಗಿ ಒಂದು ವರ್ಷಗಳ ಹಳೆಯದಾಗಿರಬೇಕು.
● ಸರಿಯಾದ ಗುರುತಿನೊಂದಿಗೆ ಸ್ಥಳೀಯ ಬುಲಿಯನ್ ಮಾರುಕಟ್ಟೆಯ ಸದಸ್ಯನಾಗಿರಬೇಕು.
● ಅರ್ಜಿದಾರರು NSME ವಿಭಾಗ, ಗೋಲ್ಡ್ ಜ್ಯುವೆಲ್ ಅಸೋಸಿಯೇಷನ್, ಗೋಲ್ಡ್ ಸ್ಮಿತ್ ಅಸೋಸಿಯೇಷನ್ ಇತ್ಯಾದಿ ತರಬೇತಿ ಸಂಸ್ಥೆಯಿಂದ ನೀಡಲಾದ ಆಭರಣ ತಯಾರಿಕೆಯಲ್ಲಿ ಅನುಭವ ಪತ್ರ ಹೊಂದಿದ್ದರೂ ಮಾನ್ಯವಾಗುತ್ತದೆ.
● ಅರ್ಜಿದಾರರು ಈಗಾಗಲೇ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಇದೇ ವೃತ್ತಿ ಮಾಡುತ್ತಿದ್ದರೆ NOC ಪ್ರಮಾಣಪತ್ರ ಮತ್ತು ಗೌಪ್ಯತೆಯ ರಿಪೋರ್ಟನ್ನು ಪಡೆಯಬೇಕು.
● ಉದ್ಯೋಗ ಮಾಡುವ ಶಾಖೆಯಲ್ಲಿ ರೂ.25,000 ಭದ್ರತಾ ಠೇವಣಿಯನ್ನು ಎಂಪ್ಯಾನೆಲ್ ಮೆಂಟ್ ಸಮಯದಲ್ಲಿ ಶಾಖೆಯಲ್ಲಿ ಇರಿಸಬೇಕು. ಎಂಪ್ಯಾನೆಲ್ ಆಗಿರುವ ಶಾಖೆಯ ಸಿಬ್ಬಂದಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರಬಾರದು.
ಉದ್ಯೋಗ ಖಾಲಿ ಯೂನಿಯನ್ ಬ್ಯಾಂಕ್ ಶಾಖೆಗಳು:-
● ಅಳಗವಾಡಿ
● ಅವರಾದಿ
● ಹೆಬ್ಬಾಳ
● ಕಡಬಿ
● ಸೌಂದಲಗಾ
● ತುರ್ಕಶಿಗಿ ಹಳ್ಳಿ
● ಚಿಕ್ಕೋಡಿ
● ಬೆಳಗಾವಿ – ಕಡಲೋಕರ ಗಲ್ಲಿ
● ಬೆಳಗಾವಿ – KLS ಗೋಗಟೆ ಕಾಲೇಜು ರಸ್ತೆ
● ಬೆಳಗಾವಿ – ಮಾರ್ಕೆಟ್ ಯಾರ್ಡ್
● ಬೆಳಗಾವಿ – RPD ಕಾಲೇಜು ರಸ್ತೆ
● ಬೆಳಗಾವಿ – ರವಿವಾರ ಪೇಟೆ
● ಬೆಳಗಾವಿ – ಶಹಾಪುರ (ECB)
● ಖಣಾಪುರ
● ಅಥಣಿ
● ಬೈಲಹೊಂಗಲ
● ಸಮಾನದೇವಿ ಗಲ್ಲಿ
● ಪೀರನವಾಡಿ
● ನವಲಿಹಾಳ
ಅರ್ಜಿ ಸಲ್ಲಿಸುವ ವಿಧಾನ:-
● ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಶಾಖೆಯ ವ್ಯವಸ್ಥಾಪಕರ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 12.06.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23.06.2023.