Friday, June 9, 2023
HomePublic Vishyaದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?

ದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?

ನಮ್ಮ ಹಿಂದೂ ನಂಬಿಗಳ ಪ್ರಕಾರ ದೇವರಿಗೆ ಸಂಬಂಧಪಟ್ಟ ಯಾವುದೇ ವಿಷಯವಾದರೂ, ವಸ್ತುವಾದರೂ ಸರಿ ದೇವರಿಗೆ ಸಮಾನ. ಕಾಣುವ ಪ್ರತಿ ಕಲ್ಲಿನಲ್ಲೂ ಕೂಡ ದೇವರಿದ್ದಾನೆ ಎಂದು ನಂಬುವ ನಂಬಿಕೆ ನಮ್ಮದು. ನಮ್ಮ ನಂಬಿಕೆಗೆ ತಕ್ಕ ಹಾಗೆ ಇಡೀ ಪ್ರಕೃತಿಯಲ್ಲಿ ಪ್ರತಿಯೊಂದು ವಿಷಯವು ನಮಗೆ ದೇವರಂತೆ ಆಶೀರ್ವಾದ ಮಾಡಿ ನಮ್ಮನ್ನು ಕಾಯುತ್ತಿದೆ. ಭಾರತದಂತಹ ವಿವಿಧತೆಯಲ್ಲಿ ಏಕತೆ ಕಂಡ ದೇಶದಲ್ಲಿ ಪ್ರತಿಯೊಂದು ಭಾಗದಿಂದ ಭಾಗಕ್ಕೆ ಪೂಜಿಸುವ ದೇವರು, ಆಚರಿಸುವ ಆಚಾರ-ವಿಚಾರ, ನಂಬಿಕೆಗಳ ವಿಧಾನ ಬದಲಾಗಿರಬಹುದು.

ಆದರೆ ದೇವರ ಆಲಯ ದೇವಸ್ಥಾನ ತೀರ್ಥ ಪ್ರಸಾದ ಇಂತಹ ವಿಷಯಗಳಲ್ಲಿ ಒಂದೇ ತೆರನಾದ ಹೋಲಿಕೆ ಇದೆ. ದೇವಸ್ಥಾನ ಎಂದರೆ ಹೆಸರೇ ಸೂಚಿಸುವಂತೆ ದೇವರುಗಳು ವಾಸಿಸುವ ಸ್ಥಳ ಎಂದೇ ನಂಬಲಾಗಿದೆ, ನಂಬಿಕೆಗೆ ಸಾಕ್ಷಿಯಾಗಿ ಅಲ್ಲಿ ಅಷ್ಟು ಸಕರಾತ್ಮಕತೆ ತುಂಬಿರುವುದು ಸಹ ಈ ನಂಬಿಕೆಗೆ ಇನ್ನಷ್ಟು ಪುಷ್ಟಿ ನೀಡುತ್ತದೆ. ದೇವಸ್ಥಾನಗಳಲ್ಲಿ ದೇವರ ಮೂರ್ತಿ ಮತ್ತು ಅಲ್ಲಿ ನಡೆಯುವ ಪೂಜೆ-ಪುನಸ್ಕಾರ, ವಿಶೇಷವಾದ ಅಲಂಕಾರ, ಅಭಿಷೇಕ, ಯಜ್ಞ-ಯಾಗ, ನೀಡುವ ಮಂಗಳಾರತಿ, ತೀರ್ಥ-ಪ್ರಸಾದ ಎಲ್ಲವೂ ಕೂಡ ವಿಶೇಷವಾದದ್ದು.

ದೇವರಿಗೆ ಅರ್ಪಿಸಿ ಏನನ್ನೇ ಕೊಟ್ಟರು ಅದು ಪ್ರಸಾದವಾಗುತ್ತದೆ. ಅದರಲ್ಲೂ ದೇವರ ಮುಂದೆ ಅರ್ಚಕರು ಮಂಗಳಾರತಿ ಮಾಡಿ ಅದನ್ನು ನೋಡುವ ಅವಕಾಶ ಮಾಡಿಕೊಟ್ಟರೆ ಸಾಕ್ಷಾತ್ ದೇವರ ಮೂರ್ತಿಯ ಮುಂದೆ ನಿಂತು ನಾವು ನೋಡುತ್ತಿದ್ದೇವೆ ಎನ್ನುವಂತಹ ಸಾಕ್ಷಾತ್ಕಾರ ಉಂಟಾಗುತ್ತದೆ. ಆರತಿ ಆದ ಬಳಿಕ ನೀಡುವ ಮಂಗಳಾರತಿಯು ದೇವರೇ ನಮಗಾಗಿ ಕಳುಹಿಸಿರುವ ಆಶೀರ್ವಾದ ಎನ್ನುವಂತೆ ಭಾಸವಾಗುತ್ತದೆ.

ಜೊತೆಗೆ ಮಂಗಳಾರತಿ ಆದ ತಕ್ಷಣ ಎಲ್ಲಾ ದೇವಾಲಯಗಳಲ್ಲೂ ಕೂಡ ತಪ್ಪದೆ ತೀರ್ಥವನ್ನು ಕೂಡ ಕೊಡುತ್ತಾರೆ ದೇವರ ಮುಂದೆ ಇಟ್ಟು ದೇವರಿಗೆ ಅರ್ಪಿಸಿ ಆ ನೀರನ್ನು ಪ್ರಸಾದವೆಂದು ಎಲ್ಲರಿಗೂ ತೀರ್ಥವಾಗಿ ಕೊಡಲಾಗುತ್ತದೆ. ಕನ್ನಡದಲ್ಲಿ ಒಂದು ಗಾದೆ ಮಾತು ಕೂಡ ಹೇಳುತ್ತಾರೆ. ಕಂಚಿನಿಂದ ಬಂದರೆ ತೀರ್ಥ ಎಂದು ಆದರೆ ಇದರ ಸರಿಯಾದ ಅರ್ಥವನ್ನು ಈ ರೀತಿ ಹೇಳಬಹುದು. ದೇವರ ಮುಂದೆ ಇಟ್ಟು ಪೂಜೆ ಮಾಡಿ ಪ್ರೋಕ್ಷಣೆ ಮಾಡಿ ಕೊಟ್ಟಾಗ ಮಾತ್ರ ಅದು ತೀರ್ಥ ಎಂದು, ಇಲ್ಲವಾದಲ್ಲಿ ಅದು ಎಷ್ಟೇ ಬೆಲೆಬಾಳುವ ದ್ರವ್ಯ ಅಥವಾ ದ್ರವ ಆಗಿದ್ದರು ಅದು ಪ್ರಸಾದ ಅಥವಾ ತೀರ್ಥ ಎಂದು ಕರೆಸಿಕೊಳ್ಳಲಾರದು.

ಈ ರೀತಿ ತೀರ್ಥ ಸೇವನೆ ಮಾಡುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳಾಗುತ್ತವೆ. ದೇವರ ಆಶೀರ್ವಾದದ ರೂಪದಲ್ಲಿ ಸಿಗುವ ಈ ತೀರ್ಥ ಒಂದು ತೊಟ್ಟು ಕೂಡ ನೆಲದ ಮೇಲೆ ಬೀಳದಂತೆ ಸ್ವೀಕರಿಸಬೇಕು. ಹಾಗಾಗಿ ಎರಡು ಕೈಗಳನ್ನು ಹಿಡಿದು ಇದನ್ನು ಬಲಗೈ ಮೇಲೆ ಮಾಡಿಟ್ಟು ಸ್ವೀಕರಿಸುತ್ತೇವೆ. ಆಮೇಲೆ ಕೈಯನ್ನು ತಲೆಗೆಸವರಿ ಕೊಳ್ಳುತ್ತೇವೆ ಹಾಗೂ ಕೆಲವೊಮ್ಮೆ ಎಡಗೈನ ಮಣಿಕಟ್ಟಿ ಬಳಗೈನ ಮಣಿಕಟ್ಟಿಗೂ ಕೂಡ ಸವರಿ ಕೊಳ್ಳುತ್ತೇವೆ.

ದೇವರ ಪ್ರಸಾದ ನೆಲಕ್ಕೆ ತಾಕಬಾರದು ಎನ್ನುವ ಉದ್ದೇಶ ಇದ್ದರೂ ಇದರ ಹಿಂದೆ ಇನ್ನೊಂದು ಅಂಶ ಕೂಡ ಇದೆ. ಅದೇನೆಂದರೆ, ತೀರ್ಥದ ರೂಪದಲ್ಲಿ ನಮಗೆ ಸಿಗುವ ಗಂಗೆಯು ಬಹಳ ಪವಿತ್ರವಾದದ್ದು. ಈ ರೀತಿ ಪವಿತ್ರವಾದ ಗಂಗೆಯನ್ನು ನಾವು ಸ್ವೀಕರಿಸಿದ ನಂತರ ತಲೆಗೆ ಸವರಿಕೊಳ್ಳುವುದರಿಂದ ನಾವು ಮಾಡಿದ ಅಷ್ಟು ಪಾಪಗಳು ಪರಿಹಾರ ಆಗುತ್ತದೆ ಎನ್ನುವ ನಂಬಿಕೆ ಇದೆ.

ಜೊತೆಗೆ ನಮ್ಮ ದೇಹದಲ್ಲಿ ಯಾವುದಾದರೂ ನೆಗೆಟಿವ್ ಎನರ್ಜಿ ಇದ್ದರೂ ಈ ರೀತಿ ನೆತ್ತಿ ಮೇಲೆ ದೇವರ ತೀರ್ಥ ಸೋಕಿದ ತಕ್ಷಣವೇ ಅದೆಲ್ಲ ಹೊರಟು ಹೋಗುತ್ತದೆ. ಸಕಾರಾತ್ಮಕತೆ ನಮ್ಮ ದೇಹದಲ್ಲಿ ತುಂಬಿ ಹೊಸ ಚೈತನ್ಯ ಆವರಿಸುತ್ತದೆ, ಈ ಕಾರಣಕ್ಕಾಗಿ ಈ ರೀತಿ ಮಾಡುತ್ತೇವೆ. ಹಾಗಾಗಿ ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ನಮ್ಮ ತಲೆಗೆ ಸವರಿಕೊಳ್ಳುವುದರಿಂದ ನಾವು ಮಾಡಿರುವಂತಹ ಪಾಪ ಕರ್ಮಗಳೆಲ್ಲವೂ ಕೂಡ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.