ಅಡುಗೆಗೆ ಈರುಳ್ಳಿಯನ್ನು ಹಾಕುವುದರಿಂದ ಅಡುಗೆಯ ರುಚಿ ಹೆಚ್ಚಾಗು ತ್ತದೆ ಎಂದು ಪ್ರತಿಯೊಬ್ಬರಿಗೂ ಕೂಡ ಗೊತ್ತು. ಆದರೆ ಈರುಳ್ಳಿ ಹಚ್ಚು ವುದು ಎಷ್ಟು ಕಷ್ಟ ಎನ್ನುವುದು ಅಡುಗೆ ಮಾಡುವವರಿಗೆ ಮಾತ್ರ ಗೊತ್ತು ಹೌದು ಕೇವಲ ಒಂದು ಎರಡು ಈರುಳ್ಳಿಯನ್ನು ಕತ್ತರಿಸಿದರೆ ಹೆಚ್ಚಿನ ಪ್ರಮಾಣದ ಕಣ್ಣೀರು ಬರುವುದಿಲ್ಲ ಆದರೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ನಾವು ಕತ್ತರಿಸುತ್ತೇವೆ ಎಂದು ಕಣ್ಣಿನಲ್ಲಿ ನೀರು ಬರುವುದು ಸರ್ವೇಸಾಮಾನ್ಯ.
ಆದ್ದರಿಂದ ಕೆಲವೊಂದಷ್ಟು ಜನ ನಾವು ಯಾವುದೇ ಕೆಲಸವನ್ನು ಬೇಕಾದರೂ ಮಾಡುತ್ತೇವೆ ಆದರೆ ಈರುಳ್ಳಿ ಹಚ್ಚುವ ಕೆಲಸ ಮಾತ್ರ ನನ್ನಿಂದ ಅಸಾಧ್ಯ ಎಂದು ಹೇಳುವ ಮಾತನ್ನು ಸಹ ನಾವೆಲ್ಲರೂ ಕೇಳಿರುತ್ತೇವೆ. ಅದರಲ್ಲೂ ಇನ್ನೂ ಕೆಲವೊಂದಷ್ಟು ಜನ ಆ ಸ್ಥಳದಲ್ಲಿ ಈರುಳ್ಳಿ ಕತ್ತರಿಸುತ್ತಿದ್ದರೆ ಆ ಜಾಗದಿಂದ ಆಚೆ ಹೋಗುತ್ತಾರೆ ಅಷ್ಟು ಕಷ್ಟಪಟ್ಟು ಈರುಳ್ಳಿಯನ್ನು ಕತ್ತರಿಸಬೇಕು.
ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಲು ಈರುಳ್ಳಿಯ ಒಳಗಿರುವ ಕಿಣ್ವಗಳೇ ಕಾರಣ. ಈರುಳ್ಳಿಯನ್ನು ಕತ್ತರಿಸಿದಾಗ, ಅದರೊಳಗೆ ಇರುವ ಈ ಅನಿಲಗಳಲ್ಲಿ ಒಂದು ಹೊರಬರುತ್ತದೆ.ಇದರಿಂದ ಈರುಳ್ಳಿ ಕತ್ತರಿಸು ವಾಗ ಕಣ್ಣಿನಲ್ಲಿ ನೀರು ಬರುತ್ತದೆ. ಇದನ್ನು ಸೈ ಪ್ರೊಪನೆಥಿಯಲ್ ಆಕ್ಸೈಡ್ ಎಂದು ಕರೆಯಲಾಗುತ್ತದೆ. ಇದು ಮೂಗಿನ ಮೂಲಕ ಕಣ್ಣು ಗಳ ಪೊರೆಯನ್ನು ಕೆರಳಿಸುತ್ತದೆ ಮತ್ತು ಕಣ್ಣುಗಳಿಂದ ಕಣ್ಣೀರು ಬರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈರುಳ್ಳಿಯನ್ನು ಕತ್ತರಿಸುವಾಗ ಕಣ್ಣೀ ರು ಬರಬಾರದು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸ ಬಹುದು ಹಾಗೂ ಆ ವಿಧಾನಗಳು ಯಾವುದು ಎನ್ನುವುದನ್ನು ತಿಳಿದು ಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಜನ ಹಲವಾರು ರೀತಿಯ ಟ್ರಿಕ್ಸ್ ಗಳನ್ನು ಉಪಯೋಗಿಸುತ್ತಾರೆ.
ಅಂದರೆ ಈರುಳ್ಳಿ ಕತ್ತರಿಸುವ ಮೊದಲು ಅದನ್ನು ಸ್ವಲ್ಪ ಹೊತ್ತು ನೀರಿ ನಲ್ಲಿ ಹಾಕಿಟ್ಟು ಆನಂತರ ಕತ್ತರಿಸುವುದು, ಕನ್ನಡಕ ಹಾಕಿಕೊಂಡು ಕತ್ತರಿಸುವುದು, ಹಾಗೂ ಸ್ವಲ್ಪ ಸಮಯ ಫ್ರಿಜ್ ನಲ್ಲಿ ಇಟ್ಟು ಆನಂತರ ಈರುಳ್ಳಿ ಕತ್ತರಿಸುವುದು, ಹೀಗೆ ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಿರುತ್ತಾರೆ. ಅದೇ ರೀತಿಯಾಗಿ ಈರುಳ್ಳಿ ಹಚ್ಚುವಾಗ ಕಣ್ಣೀರು ಬರಬಾರದು ಎಂದರೆ ಯಾವ ಮತ್ತಷ್ಟು ಕೆಲವು ವಿಧಾನಗಳನ್ನು ಅನುಸರಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಈರುಳ್ಳಿ ಹಚ್ಚುವಾಗ ಕಣ್ಣೀರಿನಿಂದ ತಪ್ಪಿಸಿಕೊಳ್ಳಲು ಕ್ಯಾಂಡಲ್ ಹಚ್ಚಿ ಅದರ ಸಮೀಪವೇ ಈರುಳ್ಳಿ ಕತ್ತರಿಸಿ. ಈರುಳ್ಳಿಯಲ್ಲಿರುವ ಸಲ್ಪರಿಕ್ ಸಂಯೋಜನೆಯ ತೀಕ್ಷತೆಯನ್ನು ಕ್ಯಾಂಡಲ್ ಜಾಲೆ ಕಡಿಮೆ ಮಾಡುತ್ತದೆ.
* ಬಾಯಲ್ಲಿ ಬ್ರೆಡ್ ತುಣುಕು ಇಟ್ಟು ಈರುಳ್ಳಿ ಕತ್ತರಿಸಿ ಇದು ಕಣ್ಣಿಗೆ ತಲುಪಲು ಯತ್ನಿಸುವ ಸಲ್ಪರಿಕ್ ಸಂಯೋಜನೆಯನ್ನು ಹೀರುತ್ತದೆ.
* ಈರುಳ್ಳಿಯನ್ನು 15 ನಿಮಿಷಗಳ ಕಾಲ ಫ್ರೀಜ್ ಮಾಡಿ ಆಮೇಲೆ ಕತ್ತರಿಸಿ. ಇದರಿಂದ ಈರುಳ್ಳಿಯಿಂದ ಗಾಳಿಗೆ ಬಿಡುಗಡೆಯಾಗುವ ಆಮ್ಲದ ಪ್ರಮಾಣ ಕಡಿಮೆಯಾಗುತ್ತದೆ.
* ಹರಿತ ಚಾಕುವಿನಿಂದ ಈರುಳ್ಳಿ ಕತ್ತರಿಸಿದರೆ ಈರುಳ್ಳಿಯ ಕೋಶಗಳಿಗೆ ಕಡಿಮೆ ಹಾನಿಯಾಗಿ ಆಮ್ಲದ ಬಿಡುಗಡೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಕಣ್ಣೀರು ಬರುವುದಿಲ್ಲ.
* ಈರುಳ್ಳಿಯನ್ನು 45 ಸೆಕೆಂಡುಗಳ ಕಾಲ ಮೈಕ್ರೋಓವನ್‌ನಲ್ಲಿಟ್ಟು ಕತ್ತರಿಸಿ ಇದರಿಂದ ಕಣ್ಣೀರು ಬರಿಸುವ ಆಮ್ಲದ ಸಂಯೋಜನೆ ವಿಭಜನೆಗೊಳ್ಳುತ್ತದೆ.
* ಈರುಳ್ಳಿಯನ್ನು ತಣ್ಣೀರಿನಲ್ಲಿ ಮುಳುಗಿಸಿ ಅಥವಾ ಹರಿಯುವ ನೀರಿನ ಕೆಳಗಡೆ ಇಟ್ಟು ಕತ್ತರಿಸಿದರೂ ಕಣ್ಣೀರು ಬಾರದಂತೆ ಮಾಡಬಹುದು.
* ಚಾಕುವಿಗೆ ನಿಂಬೆ ಹೋಳಿನಿಂದ ಉಜ್ಜಿ ಈರುಳ್ಳಿ ಕತ್ತರಿಸಿದರೂ ಕಣ್ಣೀರು ಬರುವುದಿಲ್ಲ.