ಎಲ್ಲರ ಮನೆಯ ಬಾತ್ರೂಮ್ ನಲ್ಲೂ ಕೂಡ ಕಾಡುವ ಒಂದು ಸಮಸ್ಯೆ ಎಂದರೆ ನಲ್ಲಿಗಳ ಮೇಲೆ ಬಿಸಿನೀರಿನ ಉಪ್ಪುನೀರಿನ ಕಲೆಗಳು ಆಗಿರುತ್ತದೆ ಎನ್ನುವುದು. ಟೈಲ್ಸ್ ಗಳ ಮೇಲೆ ನೀರಿನ ಕಲೆ ಬರೆ ರೀತಿ ಕೊಳೆ ರೀತಿ ಕಾಣುತ್ತದೆ ಇದರಿಂದ ಟೈಲ್ಸ್ ಶೈನಿಂಗ್ ಹೋಗಿ ಬಹಳ ಹಳೆಯ ಮನೆ ರೀತಿ ಕಾಣಲು ಶುರು ಆಗುತ್ತದೆ.
ಮತ್ತು ಇದರಿಂದ ನಮಗೆ ಲುಕ್ ಹೋಯಿತಲ್ಲ ಎಂದು ಬೇಸರವಾಗಿರುತ್ತದೆ ನಿಮಗೂ ಕೂಡ ಈ ರೀತಿ ಕಂಪ್ಲೇಂಟ್ ಇದ್ದರೆ ನಿಮ್ಮ ಬಾತ್ರೂಮ್ ನ ಟೈಲ್ಸ್ ಕೇವಲ 10 ನಿಮಿಷಗಳಲ್ಲಿ ಪಳಪಳ ಹೊಳೆಯುವಂತೆ ಮಾಡಬಹುದು ಎಲ್ಲಾ ಕಲೆಗಳನ್ನು 10 ನಿಮಿಷದಲ್ಲಿ ತೆಗೆದು ಹಾಕಿ ಹೊಸ ಲುಕ್ ಕೊಡಬಹುದು ಅದಕ್ಕಾಗಿ ನಾವು ಹೇಳುವ ಈ ಸಿಂಪಲ್ ಟ್ರಿಕ್ ಅಪ್ಲೈ ಮಾಡಿ ಸಾಕು.
ಈ ಸುದ್ದಿ ಓದಿ:- ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಡುವುದರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ? ಇದು ನಿಮ್ಮ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ.?
ಇದಕ್ಕಾಗಿ ಯಾವುದೇ ದುಬಾರಿ ಬೆಲೆಯ ಕೆಮಿಕಲ್ ತರುವ ಅವಶ್ಯಕತೆ ಇಲ್ಲ ನಿಮ್ಮ ಮನೆಯಲ್ಲಿಯೇ ಕಲೆಗಳನ್ನು ತೆಗೆಯುವ ಗುಣ ಹೊಂದಿರುವ ವಿಶೇಷ ಪದಾರ್ಥಗಳನ್ನು ಬಳಸಿಕೊಂಡು ಒಂದು ಸಲ್ಯೂಷನ್ ರೆಡಿ ಮಾಡಿಕೊಂಡರೆ ಸಾಕು.
15 ದಿನಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆ ನೀವು ಈ ರೀತಿ ಸೊಲ್ಯೂಷನ್ ಮಾಡಿಕೊಂಡು ನಾವು ಹೇಳಿರುವ ರೀತಿಯಲ್ಲಿ ಬಾತ್ರೂಮ್ ಕ್ಲೀನ್ ಮಾಡಿದರೆ ಎಷ್ಟೇ ವರ್ಷ ಆದರೂ ಹೊಸ ಮನೆ ರೀತಿ ಲುಕ್ ಹೊಂದಿರುತ್ತದೆ. ನಿಮ್ಮ ಮನೆ ಅಳತೆಗೆ ಬೇಕಾಗುವಷ್ಟು ನೀರನ್ನು ತೆಗೆದುಕೊಳ್ಳಿ. ನಾನು ಉದಾಹರಣೆಗೆ ಅರ್ಧ ಲೀಟರ್ ತೆಗೆದುಕೊಳ್ಳುತ್ತೇನೆ ಅರ್ಧ ಲೀಟರ್ ನೀರನ್ನು ಗ್ಯಾಸ್ ಮೇಲೆ ಕಾಯಲು ಇಡಿ.
ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!
ಆ ನೀರಿಗೆ ಎರಡು ಚಮಚ ಡಿಟರ್ಜೆಂಟ್ ಪೌಡರ್ ಹಾಕಿ ಮತ್ತು ಎರಡು ಚಮಚ ಅಡುಗೆ ಸೋಡಾ ಹಾಕಿ ಒಂದೆರಡು ಕುದಿ ಬಂದು ಇವೆರಡು ಚೆನ್ನಾಗಿ ಮಿಕ್ಸ್ ಆದಮೇಲೆ ಸ್ಟವ್ ಆಫ್ ಮಾಡಿ. ಈಗ ಇದಕ್ಕೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಕ್ಲೀನ್ ಮಾಡಲು ಬಳಸುವ ವಿಮ್ ಜೆಲ್ ಎರಡು ಚಮಚ ಹಾಕಿ ಮತ್ತು ಎರಡು ಚಮಚ ವಿನೆಗರ್ ಹಾಕಿ ಒಂದು ನಿಂಬೆ ಹಣ್ಣನ್ನು ಕತ್ತರಿಸಿ.
ಈಗ ನೀರು ಸ್ವಲ್ಪ ಬಿಸಿ ಕಡಿಮೆ ಆಗಿದೆ ವಾಟರ್ ಬಾಟಲ್ ಗೆ ಹಾಕಬಹುದು ಎನ್ನುವಷ್ಟು ಇದ್ದಾಗ ಅದನ್ನು ನಿಮ್ಮ ಮನೆಯಲ್ಲಿರುವ ಖಿಲಿ ವಾಟರ್ ಬಾಟಲ್ ಗೆ ಹಾಕಿಕೊಳ್ಳಿ ಮತ್ತು ಚೆನ್ನಾಗಿ ಶೇಕ್ ಮಾಡಿ ನೀವು ಬಿಸಿ ಇರುವುದನ್ನು ಹಾಕಿದರೆ ಬಾಟಲ್ ಮೆಲ್ಟ್ ಆಗಿ ಬಿಡಬಹುದು ಹಾಗಾಗಿ ಹದ ನೋಡಿಕೊಂಡು ಈ ರೀತಿ ಬಾಟಲಿಗೆ ಹಾಕಿ ಈಗ ಮುಚ್ಚಳವನ್ನು ನಾಲ್ಕೈದು ಹೋಲ್ ಮಾಡಿ ಅಥವಾ ನಿಮ್ಮಲ್ಲಿ ಸ್ಪ್ರೇ ಬಾಟಲ್ ಇದ್ದರೆ ಅದನ್ನೂ ಕೂಡ ಹಾಕಬಹುದು.
ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!
ಈಗ ಇದನ್ನು ಬಾತ್ರೂಮ್ ಟೈಲ್ಸ್ ಗಳ ಮೇಲೆ ಸ್ಪ್ರೇ ಮಾಡಿ ಪಾತ್ರೆ ತೊಳೆಯುವ ಸ್ಕ್ರಬ್ ತೆಗೆದುಕೊಂಡು ಚೆನ್ನಾಗಿ ಉಜ್ಜಿ. ನಲ್ಲಿ, ಬಾತ್ರೂಮ್ ಡೋರ್, ಟೈಲ್ಸ್ ಎಲ್ಲದರ ಮೇಲು ಕೂಡ ಸ್ಪ್ರೇ ಮಾಡಿ ಬ್ರಷ್ ಮಾಡಿ ನೀರಿನಿಂದ ತೊಳೆಯಿರಿ. ಒಮ್ಮೆಲೇ ಎಲ್ಲಾ ಕ್ಲೀನ್ ಆದಮೇಲೆ ಇದನ್ನು ಮಾಡುವ ಮೊದಲು ಹೇಗಿತ್ತು ಈಗ ಹೇಗಿದೆ ಎನ್ನುವ ವ್ಯತ್ಯಾಸ ನಿಮಗೆ ತಿಳಿಯುತ್ತದೆ. ನಂತರ ಇದು ಬಹಳ ಉಪಯುಕ್ತ ಎಂದು ನಿಮಗೆ ಅನಿಸಿದರೆ ಈ ಟ್ರಿಕ್ ನ್ನು ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರಿಗೂ ಕೂಡ ತಿಳಿಸಿ ಅವರಿಗೂ ಅನುಕೂಲವಾಗಲಿ.