Sunday, June 4, 2023
HomeEntertainmentVaishnavi Gowda: ನೋವಿನಿಂದ ಹೊರ ಬರಲು ಟ್ಯಾಟೋ ಹಾಕಿಸಿಕೊಂಡ ನಟಿ ವೈಷ್ಣವಿ ಗೌಡ, ಈ ಟ್ಯಾಟೋದ...

Vaishnavi Gowda: ನೋವಿನಿಂದ ಹೊರ ಬರಲು ಟ್ಯಾಟೋ ಹಾಕಿಸಿಕೊಂಡ ನಟಿ ವೈಷ್ಣವಿ ಗೌಡ, ಈ ಟ್ಯಾಟೋದ ಹಿಂದಿರುವ ಅರ್ಥವೇನು ಗೊತ್ತಾ.?

ವೈಷ್ಣವಿ ಗೌಡ ಹೊಸ ಟ್ಯಾಟೋ ನೋಡಿ

ನೋವಿನಿಂದ ಹೊರ ಬರಲು ಈ ರೀತಿ ದಾರಿ ಹುಡಿಕಿದ್ರಾ ಸನ್ನಿಧಿ

ಬದುಕಲ್ಲಿ ನೆಡೆಯಬಾರದ ಘಟನೆ ನೆಡೆದು ಹೋಯ್ತು

ಕಿರುತೆರೆಯ ಸಿಂಪಲ್ ಕ್ವೀನ್, ಅಗ್ನಿಸಾಕ್ಷಿ ಯ ಸುಂದರಿ, ಲೇಡಿ ಬುದ್ದ ಹೀಗೆಲ್ಲಾ ಕರೆಸಿಕೊಂಡಿರುವ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರಿಗೆ ಕರ್ನಾಟಕದಾದ್ಯಂತ ಬಹಳ ಅಭಿಮಾನಿಗಳು ಇದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಮೇಲೆ ಇನ್ನು ಹೆಚ್ಚಿನ ಜನರಿಗೆ ಪರಿಚಿತವಾದ ಇವರು ಈ ಹಿಂದೆ ದೇವಿ, ಮುಂಗಾರು ಮಳೆ, ಪುನರ್ ವಿವಾಹ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರೂ.

ಅಗ್ನಿಸಾಕ್ಷಿ ಎನ್ನುವ ಧಾರಾವಾಹಿಯು ಈಕೆಗೆ ಬೆಳ್ಳಿತೆರೆ ನಟಿಯಷ್ಟೇ ಸ್ಥಾನಮಾನ ತಂದು ಕೊಟ್ಟಿತು. ಜೊತೆಗೆ ಬಿಗ್ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸದಾ ತಾಳ್ಮೆ ಮತ್ತು ನಗುಮುಖದಿಂದ ಇದ್ದ ಇವರ ವ್ಯಕ್ತಿತ್ವಕ್ಕೆ ನೋಡುಗರು ಮಾರು ಹೋಗಿದ್ದರು. ಯೋಗ, ಧ್ಯಾನ ಮೆಡಿಟೇಶನ್ ಹೀಗೆ ಅಂದುಕೊಂಡು ಸಾಧ್ಯವಾದಷ್ಟು ಎಲ್ಲವನ್ನು ಶಾಂತವಾಗಿ ತೆಗೆದುಕೊಂಡು ಮನೆ ಒಳಗೆ ಆಟವಾಡುತ್ತಿದ್ದ ಇವರ ಆಟದ ಪರಿಗೆ ಪ್ರೇಕ್ಷಕರು ಮನಸೋತಿದ್ದರು.

ಸಹಜ ಸುಂದರಿ ಆಗಿರುವ ಇವರು ಬಹಳ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಇದುವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ವ್ಯಕ್ತಿತ್ವ ಮತ್ತು ಕೆರಿಯರ್ ರೂಪಿಸಿಕೊಂಡಿದ್ದ ವೈಷ್ಣವಿ ಗೌಡ ಅವರ ಬದುಕಿನಲ್ಲಿ ವಿವಾದಾತ್ಮಕ ಘಟನೆಯೊಂದು ನಡೆದಿದೆ. ವಿರಾಟ್ ಸಿನಿಮಾದ ನಾಯಕ ವಿದ್ಯಾಭರಣ್ ಎನ್ನುವವರ ಜೊತೆ ಹಾರ ಬದಲಾಯಿಸಿಕೊಂಡು ಸಿಹಿ ತಿನಿಸಿದ್ದ ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ ನಿಶ್ಚಿತಾರ್ಥ ಆಗಿದೆ ಎಂದುಕೊಂಡು ಎಲ್ಲರೂ ಕಮೆಂಟ್ ಮಾಡುತ್ತಿದ್ದರು.

ಸನ್ನಿಧಿ ಅವರ ಗಮನಕ್ಕೆ ಇದು ಬಂದ ತಕ್ಷಣ ಆಗಿರೋದು ನಿಶ್ಚಿತಾರ್ಥವಲ್ಲ ತಾವಿನ್ನು ಮದುವೆಗೆ ಒಪ್ಪಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಇಷ್ಟಾಗುತ್ತಿದ್ದಂತೆ ಇಬ್ಬರು ಯುವತಿಯರು ವಿದ್ಯಾಭರಣ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಹಾಗೂ ಅವರು ಸರಿ ಇಲ್ಲ ಅವರ ಜೊತೆ ವೈಷ್ಣವಿ ಮದುವೆಯಾಗಬಾರದು ಎಂದು ಹೇಳಿರುವ ಆಡಿಯೋ ಎಲ್ಲೆಡೆ ಹಬ್ಬಿ ವಿವಾದ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಈಗ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ವೈಷ್ಣವಿ ಗೌಡ ಅವರ ಮದುವೆ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದ್ದು, ಇಷ್ಟೆಲ್ಲಾ ಆದ ಮೇಲೆ ವೈಷ್ಣವಿ ಗೌಡ ಅವರು ತಮ್ಮ ಮದುವೆ ವಿದ್ಯಾಭರಣ್ ಜೊತೆ ಆಗುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿ ಬಿಟ್ಟಿದ್ದಾರೆ. ಮತ್ತು ಇಷ್ಟೆಲ್ಲ ಘಟನೆಗಳಿಂದ ನೊಂದಿರುವ ವೈಷ್ಣವಿ ಗೌಡ ಅವರು ತಮ್ಮ ದುಃಖವನ್ನೆಲ್ಲ ತಾಯಿ ಬಳಿ ಹೇಳಿಕೊಂಡು ಹೊರಗಿನ ಪ್ರಪಂಚದಲ್ಲಿ ಏನು ಆಗಿಲ್ಲ ಎನ್ನುವಂತೆ ನಗು ಮುಖವಾಡ ಇಟ್ಟುಕೊಂಡು ಓಡಾಡುತ್ತಿದ್ದಾರೆ.

ಪಾಂಡವಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಡ್ಯಾನ್ಸಿಂಗ್ ತಾಲೀಮಿನಲ್ಲಿ ತೊಡಗಿಕೊಂಡಿರುವ ಇವರು ಇಂದು ಬಿಡುವು ಮಾಡಿಕೊಂಡು ಟ್ಯಾಟು ಹಾಕಿಸಿಕೊಳ್ಳಲು ಹೋಗಿದ್ದಾರೆ. ಬಹಳ ವಿಶೇಷವಾದ ಟ್ಯಾಟುವನ್ನು ಇವರ ಹಾಕಿಸಿಕೊಂಡಿದ್ದು, ತಮ್ಮ ಮೊದಲ ಟಾಟು ಹಾಕಿಸಿಕೊಳ್ಳುವ ವಿಡಿಯೋವನ್ನು instagram ಖಾತೆಯಲ್ಲಿ ಶೇರ್ ಮಾಡಿ ಅದರ ಅರ್ಥವನ್ನು ತಿಳಿಸಿದ್ದಾರೆ.

ಇವರು ಹಾಕಿಸಿಕೊಂಡಿರುವ ಟ್ಯಾಟುವಿನ ಅರ್ಥ ಸೂರ್ಯ ಎನ್ನುವ ಪುರುಷ ಶಕ್ತಿ ಹಾಗೂ ಚಂದ್ರ ಎನ್ನುವ ಪ್ರಕೃತಿ ಶಕ್ತಿ ಸೇರಿ ಸೃಷ್ಟಿ ಮಾಡುವ ಎನರ್ಜಿಯು ಡಿವೈನ್ ಯೂನಿಯನ್ ಸ್ಪಿರಿಟ್ ಎಂದು ಕರೆಸಿಕೊಳ್ಳುತ್ತದೆ. ಎತ್ತರಕ್ಕೆ ಬೆಳೆದು ಜೀವನದಲ್ಲಿ ಮುಂದೆ ನಡೆಯಲು ದಾರಿ ಎನ್ನುವ ಇನ್ಸ್ಪಿರೇಷನ್ ಇದರಿಂದ ಸಿಗುತ್ತದೆ ಎಂದು ವೈಷ್ಣವಿ ಆ ವಿಡಿಯೋ ಜೊತೆ ಬರೆದು ಹಂಚಿಕೊಂಡಿದ್ದಾರೆ.

ಈ ಸಿಂಬಲ್ “ದ ರೈಸಿಂಗ್ ವುಮೆನ್” ಎನ್ನುವ ಅರ್ಥವನ್ನು ಕೊಡುತ್ತದೆ. ಈ ಸಂದರ್ಭದಲ್ಲಿ ಅವರು ಈ ರೀತಿ ಟ್ಯಾಟು ಹಾಕಿಸಿಕೊಂಡಿರುವುದು ಇನ್ನು ಹತ್ತು ಹಲವು ರೀತಿಯ ಚರ್ಚೆಗಳಿಗೆ ವಿಷಯ ಕೂಡ ಆಗಿದೆ. ಆಗಿರುವುದೆಲ್ಲವನ್ನು ಮರೆತು ಸನ್ನಿಧಿ ಆದಷ್ಟು ಬೇಗ ಈ ವಿಚಾರಗಳಿಂದ ಆಚೆ ಬಂದು ಮುಂಚೆಯಂತೆ ಲವಲವಿಕೆಯಿಂದ ಕಾಣಿಸಿಕೊಳ್ಳಲಿ ಎಂದು ಹಾರೈಸೋಣ.