Sunday, June 4, 2023
HomeEntertainmentಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶ್ಯಪ ಪಾತ್ರ ಗಾಂಭೀರ್ಯದಿಂದ ಮಾಡುತ್ತಿದ್ದ ವಂಶಿಕಾ ನರಸಿಂಹನನ್ನು ನೋಡುತ್ತಿದ್ದ...

ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶ್ಯಪ ಪಾತ್ರ ಗಾಂಭೀರ್ಯದಿಂದ ಮಾಡುತ್ತಿದ್ದ ವಂಶಿಕಾ ನರಸಿಂಹನನ್ನು ನೋಡುತ್ತಿದ್ದ ಹಾಗೆ ಭಯ ಪಟ್ಟ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.

ವಂಶಿಕಾ ಅಂಜನಿ ಕಶ್ಯಪ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ರಿಯಾಲಿಟಿ ಶೋ ಗೆ ಕಾಲಿಟ್ಟರು. ಈ ಕಾರ್ಯಕ್ರಮದಿಂದ ಇವರು ಅಪಾರ ಕೀರ್ತಿ ಯಶಸ್ಸನ್ನು ಗಳಿಸಿದರು ಹೌದು ಕೇವಲ ನಾಲ್ಕು ವರ್ಷವಾದರೂ ಕೂಡ ಈ ಪುಟ್ಟ ಪೋರಿ ಮಾತನಾಡುವ ರೀತಿ ಡೈಲಾಗ್ ಹೊಡೆಯುವ ಶೈಲಿ ಇವೆಲ್ಲವನ್ನೂ ನೋಡುತ್ತಿದ್ದರೆ ನಿಜಕ್ಕೂ ಈಕೆ ದೇವರು ಕೊಟ್ಟ ಮಗಳೇ ಅಂತ ಅನಿಸುತ್ತದೆ.

ಇನ್ನು ವಂಶಿಕಾ ಅವರ ತಂದೆ ಮಾಸ್ಟರ್ ಆನಂದ್ ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟರು ಹಾಗಾಗಿ ತಂದೆಗೆ ಇರುವಂತಹ ಬುದ್ಧಿವಂತಿಕೆ ಗುಣ ಹಾಗೂ ಪ್ರತಿಭೆ ಎಲ್ಲವೂ ಮಗಳಿಗೂ ಕೂಡ ಬಳುವಳಿಯಾಗಿ ಬಂದಿದೆ ಎಂದು ಕೆಲವು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಿಜೇತಲಾದ ನಂತರ ವಂಶಿಕಾಗಿ ಎಲ್ಲಿಲ್ಲದ ಬೇಡಿಕೆ ಬಂದಿತು. ಈ ಕಾರ್ಯಕ್ರಮ ಮುಕ್ತಾಯವಾದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಮತ್ತೊಂದು ರಿಯಾಲಿಟಿ ಶೋ ಕಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಳು ಅದ್ಭುತವಾದ ಸ್ಕಿಟ್ ಗಳನ್ನು ಮಾಡುವ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದಳು.

ದಿನದಿಂದ ದಿನಕ್ಕೆ ವಂಶಿಕಾಳ ಜನಪ್ರಿಯತೆ ಹೆಚ್ಚಾಯಿತು ವಂಶಿಕ ಇದ್ದ ಕಡೆ ಆ ಕಾರ್ಯಕ್ರಮ ಚೆನ್ನಾಗಿ ಮೂಡಿಬರುತ್ತದೆ ಹಾಗೂ ವಂಶಿಕಾ ಇದ್ದ ಕಡೆ ಸಖತ್ ಎಂಟರ್ಟೈನ್ಮೆಂಟ್ ದೊರೆಯುತ್ತದೆ ಎಂಬುದು ಎಲ್ಲರಿಗೂ ಕೂಡ ಅರಿವಾಯಿತು. ಈ ಕಾರಣಕ್ಕಾಗಿ ಯಾವುದೇ ಕಾರ್ಯಕ್ರಮ ಮಾಡಿದರು ಕೂಡ ಅಲ್ಲಿ ವಂಶಿಕ ಇರಲೇಬೇಕು ಎಂದು ಅಭಿಮಾನಿಗಳು ಬೇಡಿಕೆಯನ್ನು ಇಟ್ಟರು. ಹಾಗಾಗಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ ಎರಡರ ನಿರೂಪಕಿಯಾಗಿ ಇದೀಗ ವಂಶಿಕ ಅಂಜನಿ ಕಶ್ಯಪ ಅವರು ಕಾಣಿಸಿಕೊಂಡಿದ್ದರೆ.

ಈ ಕಾರ್ಯಕ್ರಮಕ್ಕೆ ನಿರಂಜನ್ ದೇಶಪಾಂಡೆ ಅವರು ಕೂಡ ನಿರೂಪಕರು ಅವರ ಜೊತೆಗೆ ವಂಶಿಕ ಸಾತ್ ಕೊಡುವ ಮೂಲಕ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಇದು ಈಕೆಯ ಸಾಧನೆ ಅಂತಾನೆ ಹೇಳಬಹುದು ಏಕೆಂದರೆ ನಾಲ್ಕು ವರ್ಷದ ಪುಟ್ಟ ಮಗು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1ರ ಸ್ಪರ್ಧಿಯಾಗಿ ವಿಜೇತಳಾದಳು ಈಗ ನನ್ನ ಸೂಪರ್ ಸ್ಟಾರ್ ಸೀಸನ್ ಎರಡರ ನಿರೂಪಕಿಯಾಗಿದ್ದಾಳೆ ಅಂದರೆ ಈಕೆಯ ಪ್ರತಿಭೆ ಎಷ್ಟಿರಬಹುದು ಎಂಬುದನ್ನು ನೀವೇ ಊಹೆ ಮಾಡಿ.

ಇದೆಲ್ಲ ಒಂದು ಕಡೆಯಾದರೆ ಈ ವಾರದ ಸಂಚಿಕೆಯಲ್ಲಿ ಅಪ್ಪು ಅವರಿಗಾಗಿ ವಿಶೇಷ ಕಾರ್ಯಕ್ರಮ ಒಂದನ್ನು ಆ ಯೋಜನೆ ಮಾಡಲಾಗಿದೆ. ಹಾಗಾಗಿ ವಂಶಿಕ ಈ ಬಾರಿಯ ಕಾರ್ಯಕ್ರಮದಲ್ಲಿ ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶ್ಯಪ ಪಾತ್ರವನ್ನು ನಿಭಾಯಿಸಲಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಸಿನಿಮಾದಲ್ಲಿ ನರಸಿಂಹನ ಅವತಾರ ಬಹಳ ಭಯಾನಕವಾಗಿರುತ್ತದೆ. ಪ್ರಹ್ಲಾದ ಪಾತ್ರದಲ್ಲಿ ಅಪ್ಪು ಅವರು ಮನಮೋಹಕವಾಗಿ ನಟಿಸುತ್ತಾರೆ ಹಾಗಾಗಿ ಈ ಕಾರ್ಯಕ್ರಮವನ್ನು ಅಪ್ಪು ಅವರಿಗೆ ಅರ್ಪಣೆ ಮಾಡುವುದಕ್ಕಾಗಿ ಈ ಸ್ಕಿಟ್ ಅನ್ನು ಆಯೋಜನೆ ಮಾಡಲಾಗುತ್ತದೆ.

ಈ ಸ್ಕ್ರಿಪ್ಟ್ ನಲ್ಲಿ ವಂಶಿಕ ಅಣ್ಣವ್ರ ಹಿರಣ್ಯ ಕಶ್ಯಪ ಪಾತ್ರವನ್ನು ನಿಭಾಯಿಸಿದ್ದಾರೆ ಮತ್ತೊಬ್ಬ ಪುಟ್ಟ ಪೋರ ಭಕ್ತ ಪ್ರಹಲ್ಲಾದನ ಪಾತ್ರವನ್ನು ನಿಭಾಯಿಸುತ್ತಾನೆ. ಇದೇ ವೇಳೆಯಲ್ಲಿ ಈ ಕಂಬದಲ್ಲಿ ನಿನ್ನ ಹರಿ ಇದ್ದಾನೆಯೇ ಈ ಕಂಬದಲ್ಲಿ ನಿನ್ನ ಹರಿ ಇದ್ದಾನೆಯೇ ಎಂದು ವಂಶಿಕ ಹೇಳುತ್ತಾ ಹೋಗುತ್ತಾಳೆ. ಭಕ್ತ ಪ್ರಹ್ಲಾದ ಹೌದು ಅಲಿಯು ಇದ್ದಾನೆ ಇಲ್ಲಿಯೂ ಇದ್ದಾನೆ ಅಂತ ಹೇಳುತ್ತಾನೆ ತದನಂತರ ವಂಶಿಕ ಪಕ್ಕದಲ್ಲಿಯೇ ಇದ್ದಂತಹ ಕಂಬ ಒಂದಕ್ಕೆ ತನ್ನ ಗದೆಯಿಂದ ಹೊಡೆಯುತ್ತಾಳೆ.

ಕಂಬದ ಒಳಗಿಂದ ನರಸಿಂಹನ ಅವತಾರ ಎತ್ತಿದ ವ್ಯಕ್ತಿ ಒಬ್ಬನು ಹೊರ ಬರುತ್ತಾನೆ ಈತನ ಉಗ್ರ ಅವತಾರ ನೋಡುತ್ತಿದ್ದ ಹಾಗೆ ವಂಶಿಕ ತಾನು ಅಣ್ಣವ್ರ ಪಾತ್ರದಲ್ಲಿ ಇದ್ದೇನೆ ಎಂಬುವುದನ್ನು ಮರೆತು ಭಯ ಬೀಳಾಗಿ ಸ್ಟೇಜಿನಲ್ಲಿ ಅಳುತ್ತಾಳೆ. ಇದು ನಿಜಕ್ಕೂ ಹಾಸ್ಯ ಭರಿತವಾದ ಸನ್ನಿವೇಶವಾಗಿದೆ ಮೊದಮೊದಲು ರಾಜ ಗಾಂಭೀರ್ಯದಿಂದ ಡೈಲಾಗ್ ಹೊಡೆಯುತ್ತಿದ್ದ ವಂಶಿಕಾ ಕೊನೆಯಲ್ಲಿ ನರಸಿಂಹನನ್ನು ನೋಡುತ್ತಿದ್ದ ಹಾಗೆ ಅಳುವ ದೃಶ್ಯ ಎಲ್ಲರ ಕಣ್ಮಣವನ್ನು ಸೆಳೆದಿದೆ.

ಅಷ್ಟೇ ಅಲ್ಲದೆ ಈಕೆ ಮಾಡಿದಂತಹ ಅಭಿನಯ ನೋಡಿ ಎಲ್ಲರೂ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ ಈ ಮನಮೋಹಕ ವಿಡಿಯೋ ಒಮ್ಮೆ ನೋಡಿ ನಿಜಕ್ಕೂ ನೀವು ಕೂಡ ನಕ್ಕು ನಕ್ಕು ಸುಸ್ತಾಗುತ್ತೀರಾ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.