ಕನ್ನಡ ಕಿರುತೆರೆಯ ಸ್ಟಾರ್ ಕಿಡ್ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸ್ಟಾರ್ ಆಗಿರುವ ಕನ್ನಡದ ಹೆಮ್ಮೆಯ ಕಲಾವಿದ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾಗೆ (Vamshika) ಇಂದು ಹುಟ್ಟು ಹಬ್ಬದ ಸಂಭ್ರಮ. ವಂಶಿಕ ಇಂದು ತಮ್ಮ ಏಳನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಈ ದಿನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗಿಂತ ಮುಂಚೆ ಕುಟುಂಬದ ಪರವಾಗಿ ವಂಶಿಕ ತಂದೆ ಆಗಿರುವ ಮಾಸ್ಟರ್ ಆನಂದ್ ಅವರು ಮಗಳಿಗೆ ಹುಟ್ಟುಹಬ್ಬಕ್ಕಾಗಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.
ಮಧ್ಯ ರಾತ್ರಿ ಮಗಳಿಗಾಗಿ ಮನೆಯಲ್ಲಿಯೇ ಕೇಕ್ ಡೆಕೋರೇಟ್ ಮಾಡಿ ತಂದೆ ತಾಯಿ ಇಬ್ಬರು ಕೇಕ್ ಕಟ್ ಮಾಡಿ ವಂಶಿಕಾಗಿ ತಿನ್ನಿಸಿ ಅವಳನ್ನು ಖುಷಿ ಪಡಿಸಿದ್ದಾರೆ. ವಂಶಿಕಾಳಿಗೆ ಅಪ್ಪ ಸರ್ಪ್ರೈಸ್ ಆಗಿ ರೆಡಿ ಮಾಡಿ ಆಚರಿಸಿದ ಈ ಹುಟ್ಟುಹಬ್ಬ ಸಂತಸ ತಂದಿದೆ, ಅವಳು ಖುಷಿಯಿಂದ ಕುಣಿದು ಸಂಭ್ರಮಪಟ್ಟಿದ್ದಾಳೆ. ಸದ್ಯಕ್ಕೆ ಅದರ ವಿಡಿಯೋ ಕ್ಲಿಪ್ಪಿಂಗ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪುಟ್ಟ ವಂಶಿಕಾ ಕಿರುತೆರೆ ಲೋಕದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ನಮ್ಮಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಟಫ್ ಕಾಂಪಿಟೇಶನ್ ನೀಡಿ, ಈ ಎರಡು ಕಾರ್ಯಕ್ರಮಗಳ ವಿನ್ನರ್ ಸಹ ಆಗಿದ್ದಾಳೆ. ಎರಡು ಕಾರ್ಯಕ್ರಮದಿಂದ ಸಾಕಷ್ಟು ಸ್ಕಿಟ್ ಗಳನ್ನು ಮಾಡಿ ಸ್ಟೇಜ್ ಮೇಲೆ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾಳೆ.
ಚಿಕ್ಕ ವಯಸ್ಸಿಗೆ ಇವಳ ತರ್ಲೆ ತುಂಟಾಟಗಳು ಚಟುವಟಿಕೆಗಳು ಹಾಗೂ ನೆನಪಿನ ಶಕ್ತಿ ಮತ್ತು ಪ್ರಬುದ್ಧ ಪರ್ಫಾರ್ಮೆನ್ಸ್ ಅನ್ನು ಸಹ ನೋಡಿ ಮೆಚ್ಛಿದ ಪ್ರೇಕ್ಷಕ ವರ್ಗ ಬೆಕ್ಕಸ ಬೆರಗಾಗಿದೆ. ಕಿರುತೆರೆಗೆ ಬಂದ ಮೇಲೆ ವಂಶಿಕಾಳಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಸಿಕ್ಕಿದೆ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ ಎರಡರಲ್ಲಿ ಕೂಡ ನಿರಂಜನ್ ದೇಶಪಾಂಡೆ ಜೊತೆ ವಂಶಿಕ ನಿರೂಪಣೆಯನ್ನು ಮಾಡುತ್ತಾ ಎಲ್ಲರನ್ನು ನಕ್ಕು ನಗಿಸಲು ಬಂದಿದ್ದಾರೆ.
ಈ ರಿಯಾಲಿಟಿ ಶೋಗಳಿಗೆ ಬರುವ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆದ ಸೆನ್ಸೇಷನ್ ಕ್ರಿಯೇಟ್ ಮಾಡಿದ ವಂಶಿಕಾ ಸಾಕಷ್ಟು ರೀಲ್ಸ್ ಗಳನ್ನು ಮಾಡಿ ಫೇಮಸ್ ಆಗಿದ್ದರು. ತಂದೆ ತಾಯಿಯ ಜೊತೆ ರೀಲ್ಸ್ ಮಾಡುತ್ತಿದ್ದ ವಂಶಿಕಾ ಈಗ ಸೆಟ್ ಅಲ್ಲಿರುವ ಇತರೆ ಕಂಟೆಸ್ಟೆಂಟ್ ಗಳು ಮತ್ತು ತನ್ನ ಪುಟ್ಟ ಸ್ನೇಹಿತೆಯರ ಜೊತೆಗೂ ಕೂಡ ರೀಲ್ಸ್ ಮಾಡಿ ಅದನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ.
ಇನ್ಸ್ಟಾಗ್ರಾಮ್ ಅಲ್ಲಿ ಈಗಲೇ ಈಕೆಯ ಫಾಲೋವರ್ಸ್ ಸಂಖ್ಯೆ ಲಕ್ಷ ಮುಟ್ಟುತ್ತಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ತನ್ನ ಕ್ರೇಝ್ ಉಳಿಸಿಕೊಂಡಿದ್ದಾರೆ. ಅನೇಕ ಕಾಮಿಡಿ ವೆಬ್ ಸೀರೀಸ್ ಮತ್ತು ಶಾರ್ಟ್ ವಿಡಿಯೋಗಳಲ್ಲಿ ಪಾತ್ರ ಮಾಡಿದ್ದಾರೆ. ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಲ್ಲಿರುವ ವಂಶಿಕಾ ಗೆ ಅವರ ಎಲ್ಲಾ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಕೋರುತ್ತಿದ್ದಾರೆ.
ಈ ವರ್ಷವೂ ಕೂಡ ಪ್ರತಿ ವರ್ಷದಂತೆ ನಮ್ಮನ್ನು ಇನ್ನಷ್ಟು ಮನೋರಂಜಿಸಲಿ, ಈಕೆಯ ಟ್ಯಾಲೆಂಟ್ ಗೆ ತಕ್ಕ ವೇದಿಕೆಗಳು ದೊರೆತು ಕರ್ನಾಟಕದ ಖ್ಯಾತಿ ಬೆಳಗಿಸುವಂತಹ ಪ್ರತಿಭೆ ಇವಳಾಗಲಿ ಎಂದು ಮನಪೂರ್ವಕವಾಗಿ ಈಕೆಗೆ ಹರಸಿ ಹುಟ್ಟು ಹಬ್ಬದ ಶುಭಾಶಯಗಳು ಕೋರುತ್ತಿದ್ದಾರೆ. ಮತ್ತೊಮ್ಮೆ ಎಲ್ಲರ ಕಡೆಯಿಂದ ವಂಶಿಕಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನೀವು ಕೂಡ ವಂಶಿಕಾಗೆ ವಿಶ್ ಮಾಡಿ