ನಟಿ ವಂಶಿಕಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಮುಗ್ಧ ಪ್ರತಿಭೆಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ ಕಿರಿಕರೆಯಲ್ಲಿ ಪ್ರಾರಂಭವಾದ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕದಲ್ಲಿ ನಟಿ ವಂಶಿಕ ಕಾಣಿಸಿಕೊಂಡಳು. ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಅದ್ಭುತವಾಗಿ ನಟನೆ ಮಾಡುವುದರ ಮೂಲಕ ಈ ಒಂದು ಕಾರ್ಯಕ್ರಮದಲ್ಲಿ ವಿಜೇತಳಾದಳು. ಇಲ್ಲಿಂದ ವಂಶಿಕ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಒಂದು ಕಾಲದಲ್ಲಿ ಯಾರಿಗೂ ತಿಳಿಯದಂತಹ ವಂಶಿಕ ಇದೀಗ ಕರ್ನಾಟಕದ ಅತ್ಯಂತ ಫೇಮಸ್ ಆಗಿದ್ದಾರೆ ಅಷ್ಟೇ ಅಲ್ಲದೆ ವಂಶಿಕ ಕಾರ್ಯಕ್ರಮ ಅಂದರೆ ಸಾಕು ಜನ ಮುಗಿದು ನೋಡುತ್ತಾರೆ, ಅಷ್ಟರ ಮಟ್ಟಿಗೆ ಕ್ರೇಜ್ ಬಳಸಿಕೊಂಡಿದ್ದಾರೆ.
ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ಶೋನಲ್ಲಿಯೂ ಕೂಡ ವಂಶಿಕ ಅವರು ನಟನೆ ಮಾಡುತ್ತಿದ್ದಾರೆ. ವಂಶಿಕ ಅವರಿಗೆ ಎಷ್ಟು ಪ್ರತಿಭೆ ಇದೆ ಅಂದರೆ ಅದನ್ನು ನಾವು ಊಹೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ತಂದೆಗಿಂತ ನೂರು ಪಟ್ಟು ಹೆಚ್ಚು ಪ್ರತಿಭೆಯನ್ನು ಹೊಂದಿದ್ದಾರೆ ಅಂತ ಹೇಳಬಹುದು ಯಾವುದೇ ಸ್ಕ್ರಿಪ್ಟ್ ಇರಬಹುದು ಅಥವಾ ಯಾವುದೇ ಡೈಲಾಗ್ ಇರಬಹುದು ಅಥವಾ ಯಾವುದೇ ಸಂಭಾಷಣೆ ಇರಬಹುದು ಹೇಳಿದ ತಕ್ಷಣವೇ ಕ್ಯಾಚ್ ಮಾಡಿಕೊಂಡು ಅದೇ ರೀತಿಯಾಗಿ ಹೇಳುತ್ತಾರೆ. ಒಟ್ಟಾರಿಯಾಗಿ ಹೇಳುವುದಾದರೆ ಪುಟ್ಟ ಬಾಲಕಿ ಇಷ್ಟೊಂದು ಪ್ರತಿಭೆಯನ್ನು ಹೊಂದಿದ್ದಾಳೆ ಅದನ್ನು ನಾವು ಪ್ರಶಂಶಿಸಲೇಬೇಕಾದಂತಹ ವಿಚಾರ.
ಕೇವಲ ಕಿರುತೆರೆಯಲ್ಲಿ ಮಾತ್ರ ಹೆಸರುವಾಸಿಯಾಗಿದಂತಹ ವಂಶಿಕ ಅವರು ಜಾಹೀರಾತಿನಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಹೌದು ವಿಕ್ಸ್ ಜಾಹಿರಾತಿನಲ್ಲಿ ನಟಿ ವಂಶಿಕ ಮಾತ್ರವಲ್ಲದೆ ಮಾಸ್ಟರ್ ಆನಂದ್ ಆಗುವ ಧರ್ಮಪತ್ನಿ ಯಶು ಅವರು ಕೂಡ ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಜಾಹೀರಾತು ಇದೀಗ ಎಲ್ಲಾ ಟಿವಿ ಚಾನೆಲ್ ಗಳಲ್ಲೂ ಪ್ರಸಾರವಾಗುತ್ತಿದೆ ಇವುಗಳನ್ನು ನೋಡಿದಂತಹ ಕೆಲವು ನೆಟ್ಟಿಗರು ಸಕಾರಾತ್ಮಕವಾಗಿ ಮತ್ತು ನಕಾರಾತ್ಮಕವಾಗಿ ಎರಡು ರೀತಿಯಲ್ಲೂ ಕೂಡ ಕಾಮೆಂಟ್ ಮಾಡಿದ್ದಾರೆ. ಹೌದು ಕೇವಲ ಕಿರುತರೆ ಮತ್ತು ರಿಯಾಲಿಟಿ ಶೋನಲ್ಲಿ ನಟಿ ವಂಶಿಕಾ ಕಾಣಿಸಿಕೊಂಡರೆ ಆದರೆ ವಿದ್ಯಾಭ್ಯಾಸದ ಗತಿ ಏನು ಎಂದು ಕೆಲವು ನೆಟ್ಟಿಗರು ಹೇಳಿದರು ಹಾಗಾಗಿ ಕೆಲ ದಿನಗಳ ಕಾಲ ವಂಶಿಕ ಅವರು ಎಲ್ಲದರಿಂದಲೂ ದೂರ ಉಳಿದಿದ್ದರು
ಆದರೆ ಇದೀಗ ಮತ್ತೆ ವಂಶಿಕಾ ಸಿಹಿ ಸುದ್ದಿಯನ್ನು ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಹೌದು ನಟಿ ವಂಶಿಕ ಇದೀಗ ಬೆಳ್ಳಿತೆರೆಯಲ್ಲಿ ನಟನೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಹೊಸದೊಂದು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಬೆಳ್ಳಿ ತೆರಿಗೆ ಪಾದರ್ಪಣೆ ಮಾಡುತ್ತಿದ್ದಾರೆ ಈ ವಿಚಾರ ಕೇಳುತ್ತಿದ್ದ ಹಾಗೆ ವಂಶಿಕ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಬಾಲನಟಿಯಾಗಿ ವಂಶಿಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಲಿದ್ದಾಳೆ ವಂಶಿಕಾ ನಡನೆಯ ಮೊದಲ ಸಿನಿಮಾ ”ಲವ್ ಲಿ” ನಟ ವಸಿಷ್ಠ ಸಿಂಹ ಅಭಿನಯದ ಈ ಚಿತ್ರದಲ್ಲಿ ವಂಶಿಕ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ ಗಣೇಶ ಹಬ್ಬದ ಪ್ರಯುಕ್ತ ವಂಶಿಕ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿದೆ ಹಾಗಾಗಿ ಇನ್ನು ಮುಂದೆ ಕಿರುತೆರೆಯಲ್ಲಿ ಮಾತ್ರವಲ್ಲ ವಂಶಿಕಾಳನ್ನು ದೊಡ್ಡ ಪರದೆಯ ಮೇಲೆ ನೋಡಬಹುದು.
ಇದು ಒಂದು ರೀತಿಯಲ್ಲಿ ಖುಷಿ ಪಡಬೇಕಾದ ವಿಚಾರವೇ ಆದರೆ ಕೇವಲ ರಿಯಾಲಿಟಿ ಶೋ ಕಿರುತೆರೆ ಬೆಳ್ಳಿ ತೆರೆಯಲಿ ನಟಿಸಲು ಮುಂದಾದರೆ ಮುಂದೆ ಈಕೆಯ ವಿದ್ಯಾಭ್ಯಾಸ ಹೇಗೆ ಎಂಬುದೇ ಕೆಲವು ನೆಟ್ಟಿಗರ ಪ್ರಶ್ನೆಯಾಗಿದೆ. ದಿನದ ಸಂಪೂರ್ಣ ಕಾಲ ಚಿತ್ರಿಕರಣದಲ್ಲೇ ಪಾಲ್ಗೊಂಡರೆ ಈಕೆ ವಿದ್ಯಾಭ್ಯಾಸ ಮಾಡುವುದು ಹೇಗೆ ಕಲಿಯುವುದಾದರೂ ಹೇಗೆ ಮಕ್ಕಳ ಜೊತೆ ಒಡನಾಟ ಬೆಳೆಸುವುದಾದರೂ ಹೇಗೆ ಎಂಬುದು ಕೆಲವರ ಪ್ರಶ್ನೆಯಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.