ವಂಶಿಕ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ . ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.ನನ್ನಮ್ಮ ಸೂಪರ್ ಸ್ಟಾರ್ ಎಂಬುದುಪ್ರಸಿದ್ಧ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡಿರುವ ಕನ್ನಡ ಆಟದ ಪ್ರದರ್ಶನವಾಗಿದೆ. ನನ್ನಮ್ಮ ಸೂಪರ್ ಸ್ಟಾರ್ ಪಟ್ಟಕ್ಕಾಗಿ ತಾಯಿ-ಮಗು ಜೋಡಿಗಳು ಮೋಜಿನ ಟಾಸ್ಕ್‌ಗಳಲ್ಲಿ ಸ್ಪರ್ಧಿಸುವುದರಿಂದ ಈ ಕಾರ್ಯಕ್ರಮವನ್ನು ತಾಯ್ತನಕ್ಕೆ ಸಮರ್ಪಿಸಲಾಗಿದೆ.
ಕಾರ್ಯಕ್ರಮದ ತೀರ್ಪುಗಾರರು ಸೃಜನ್ ಲೋಕೇಶ್, ಅನು ಪ್ರಭಾಕರ್ ಮತ್ತು ತಾರಾ ಕಾರ್ಯಕ್ರಮವನ್ನು ಅನುಪಮಾ ಗೌಡ ನಡೆಸಿಕೊಡುತ್ತಿದ್ದಾರೆ. ಪ್ರದರ್ಶನವು 27 ನವೆಂಬರ್ 2021 ರಂದು ಪ್ರಥಮ ಪ್ರದರ್ಶನಗೊಂಡಿತು ಈ ಶೋ ಆರಂಭವಾದ ಬಳಿಕ ಹೆಚ್ಚು ಸುದ್ದಿ ಮಾಡಿದ್ದೇ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ. ಎಲ್ಲರಿಗೂ ಮಾಸ್ಟರ್ ಆನಂದ್ಗೆ ಮಗಳಿದ್ದಾಳೆ ಎಂದು ಗೊತ್ತಿತ್ತು ಆದರೆ ಇಷ್ಟು ಆ್ಯಕ್ಟೀವ್ ಆಗಿರುವ ವಂಶಿಕಾ ಕಂಡು ಎಲ್ಲರೂ ಬೆರಗಾಗಿದ್ದರು. ತನ್ನ ಮುದ್ದಾದ ಮಾತುಗಳಿಂದ ಚುರುಕುತನದಿಂದ ಎಲ್ಲರ ಮನೆ ಮಾತಾಗಿದ್ದಳು ಸೋಶಿಯಲ್ ಮೀಡಿಯಾದಲ್ಲೂ ವಂಶಿಕಾ ಹವಾ ಜೋರಾಗಿತ್ತು.
ಕಳೆದ ಮೂರು ತಿಂಗಳಿನಿಂದ ಸಖತ್ ಸೌಂಡ್ ಮಾಡಿದ್ದ ‘ನನ್ನಮ್ಮ ಸೂಪರ್ ಸ್ಟಾರ್ ಶೋ ಮುಕ್ತಾಯಗೊಂಡಿದೆ. ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋನ ಗ್ರ್ಯಾಂಡ್ ಫಿನಾಲೆ ಭಾನುವಾರ (ಏ.3) ನಡೆದಿದೆ. ತಾಯಿ ಯಶಸ್ವಿನಿ ಹಾಗೂ ಮಗಳು ವಂಶಿಕಾ ಅಂಜನಿ ಕಶ್ಯಪ ವಿನ್ನರ್ ಆಗಿ ಗೆಲುವಿನ ಟ್ರೋಫಿಯನ್ನು ಎತ್ತಿ ಹಿಡಿದ್ದಾರೆ. ಈ ಶೋ ಆರಂಭವಾದ ದಿನಗಳಿಂದ ತನ್ನದೇ ಆದ ವಿಶೇಷತೆಗಳಿಂದ ವೀಕ್ಷಕರ ಮನಗೆದ್ದಿತ್ತು. ಅದರಲ್ಲೂ ವಂಶಿಕಾ ಎಲ್ಲರ ಮನ ಸೂರೆಗೊಂಡಿದ್ದಳು ಪಟಪಟ ಮಾತಾಡುತ್ತಿದ್ದ ವಂಶಿಕಾಗೆ ಈ ಬಾರಿ ವಿನ್ನರ್ ಪಟ್ಟ ಸಿಗಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರ. ಅದರಂತೆ ಯಶಸ್ವಿನಿ ಮತ್ತು ವಂಶಿಕಾ ‘ನನ್ನಮ್ಮ ಸೂಪರ್ ಸ್ಟಾರ್’ ಪಟ್ಟ ಪಡೆದುಕೊಂಡಿದ್ದಾರೆ.ಇನ್ನೂ ತಾಯಿ-ಮಗಳ ಜೋಡಿಗೆ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನದ ಹಣ ಸಿಕ್ಕಿದೆ.
‘ನನ್ನಮ್ಮ ಸೂಪರ್ ಸ್ಟಾರ್’ ಟೈಟಲ್ ಗೆದ್ದ ಯಶಸ್ವಿನಿ ಹಾಗೂ ವಂಶಿಕಾ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ ಇತ್ತೀಚೆಗೆ ಮಾಸ್ಟರ್ ಆನಂದ್ ಅವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಹಾಗೆ ತಮ್ಮ ಗ್ರೀನ್ ಗೆಳೆಯರು ತಂಡದ ಮುಖಾಂತರ ಸ್ವಚ್ಛತಾ ಕಾರ್ಯವನ್ನು ಧರ್ಮಸ್ಥಳದಲ್ಲಿ ಹಮ್ಮಿಕೊಂಡಿದ್ದರು. ಧರ್ಮಾಧಿಕಾರಿಗಳನ್ನು ಭೇಟಿ ಮಾಡಿ ಆಶೀರ್ವಚನವನ್ನು ಪಡೆಯುವ ವೇಳೆ ವಂಶಿಕಳಿಂದ ಸ್ತೋತ್ರವನ್ನು ಹೇಳಿಸಿದರು. ವಂಶಿಕ ತನ್ನ ಮುಗ್ಧ ಮಾತುಗಳಿಂದ ಪಟಾಕಿಯಂತೆ ಡೈಲಾಗ್ ಹೇಳುವುದು, ಡ್ಯಾನ್ಸ್ ಮಾಡುವುದಲ್ಲದೆ ನಾನು ದೇವರ ಹಾಡುಗಳನ್ನು ಮತ್ತು ಶ್ಲೋಕಗಳನ್ನು ಹೇಳುವುದರಲ್ಲೂ ಮುಂದೆ ಇರುವೆ ಎಂದು ಸಾಬೀತು ಪಡಿಸಿದ್ದಾಳೆ.
ಇವಳ ಈ ಶ್ಲೋಕಗಳನ್ನು ಮೌನದಿಂದ ಆಲಿಸಿದ ಡಾಕ್ಟರ್ ವೀರೇಂದ್ರ ಹೆಗಡೆಯವರು ಉಡುಗೊರೆಯನ್ನು ನೀಡಿದ್ದಾರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಅವರು ಹೀಗೆಂದು ತಾಯಿಯಂತೆ ಅವಳಿಗೆ ಉಡುಗೊರೆಯನ್ನು ನೀಡಿದ ಧರ್ಮದೇವತೆಯ ಪ್ರೀತಿಯ ಪುತ್ರ ಶ್ರೀ ವೀರೇಂದ್ರ ಹೆಗಡೆ ಅಪ್ಪಾಜಿ ಅವರಿಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ವಂಶಿಕಾಗೆ ಇರುವ ಪ್ರತಿಭೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಅದಷ್ಟು ಶೇರ್ ಮತ್ತು ಲೈಕ್ ಮಾಡಿ.