ನಟ ದರ್ಶನ್ ಅವರ ಸ್ನೇಹಜೀವಿ ದರ್ಶನ್ ಅವರ ಸ್ನೇಹ ಬಳಗ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಸ್ನೇಹ ಎಂದರೆ ಪ್ರಾಣ ಬೇಕಾದರೂ ಕೊಡುವ ದಾಸನ ಸ್ನೇಹ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಯಾವಾಗಲೂ ತುಂಬಾ ನೇರ ನುಡಿಯಿಂದ ಫೇಮಸ್ ಆಗಿರುವ ದರ್ಶನ್ ಅವರು ಅಷ್ಟೇ ಮಗುವಿನಂತ ಮನಸ್ಸು ಕೂಡ ಹೊಂದಿದ್ದಾರೆ. ಸ್ನೇಹಿತ ಎಂದು ಬಳಗಕ್ಕೆ ಸೇರಿಸಿಕೊಂಡರೆ ತನ್ನ ಸಹೋದರನಂತೆ ಅವರನ್ನು ಕಾಣುತ್ತಾರೆ. ಇದಕ್ಕೆ ಹತ್ತು ಹಲವರು ಉದಾಹರಣೆಗಳು ನಾವೆಲ್ಲ ನೋಡಿದ್ದೇವೆ ಅದಕ್ಕೊಂದು ಉದಾಹರಣೆ ಎಂದರೆ ನಟ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಸ್ನೇಹ. ನಟ ಬುಲೆಟ್ ಪ್ರಕಾಶ್ ಅವರು ದರ್ಶನ್ ಅವರಿಗೆ ತುಂಬಾ ಆತ್ಮೀಯರು ದರ್ಶನ್ ಮಾತವಲ್ಲದೆ ದರ್ಶನ್ ಕುಟುಂಬದ ಎಲ್ಲಾ ಸದಸ್ಯರಿಗೂ ಕೂಡ ಬುಲೆಟ್ ಪ್ರಕಾಶ್ ಅವರು ಅವರ ಮನೆಯವರಂತೆಯೇ ಇದ್ದರು.
ಬುಲೆಟ್ ಪ್ರಕಾಶ್ ಅವರು ಕನ್ನಡದಲ್ಲಿ 325 ಸಿನಿಮಾಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪ್ರತಿ ಬಾರಿ ಕೂಡ ತೆರೆ ಮೇಲೆ ಇವರನ್ನು ನೋಡಿದವರು ಹೊಟ್ಟೆ ಹಿಡಿದು ನಗುವಷ್ಟು ಹಾಸ್ಯವನ್ನು ಪ್ರೇಕ್ಷಕರಿಗೆ ನೀಡುತ್ತಾರೆ. ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಜುಗಲ್ ಬಂದಿ, ಪ್ರಜ್ವಲ್ ದೇವರಾಜ್ ಮತ್ತು ಬುಲೆಟ್ ಪ್ರಕಾಶ್ ಅವರ ಜೋಡಿ, ಹಾಗೂ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಇವರಿಬ್ಬರ ಕಾಂಬಿನೇಷನ್ ಪ್ರೇಕ್ಷಕರ ಕಣ್ಣಿಗೆ ಹಬ್ಬದೂಟ ಎನ್ನಬಹುದು. ಇಷ್ಟೊಂದು ಪ್ರತಿಭಾನ್ವಿತ ನಟ ತುಂಬಾ ಕಡಿಮೆ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಅ.ಗ.ಲಿ.ದ್ದು ಕರ್ನಾಟಕ ಚಲನಚಿತ್ರ ರಂಗಕ್ಕೆ ತುಂಬಲಾಗದ ನ.ಷ್ಟ ಬುಲೆಟ್ ಪ್ರಕಾಶ್ ಅವರು ತುಂಬ ದೊಡ್ಡ ದೇಹ ಹೊಂದಿದ್ದರು. ಹಾಗೂ ಅದನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಆಪರೇಷನ್ ಮೊರೆ ಹೋದರು.
ಆದರೆ ಅವರ ದುರಾದೃಷ್ಟದಿಂದ ತುಂಬಾ ಸೈಡ್ ಎಫೆಕ್ಟ್ ಗಳಿಗೆ ಒಳಗಾಗಿ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಬೇಕಾಯಿತು. ಈ ಸಮಯದಲ್ಲಿ ಸಿನಿಮಾ ಅವಕಾಶಗಳನ್ನು ಕೂಡ ಕಳೆದುಕೊಂಡ ಬುಲೆಟ್ ಪ್ರಕಾಶ್ ಅವರು ತೀರ ಮಾನಸಿಕವಾಗಿ ಕೂಡ ಕುಗ್ಗಿ ಹೋಗಿದ್ದರು. ಆದರೆ ದರ್ಶನ್ ಅವರು ಮಾತ್ರ ಬುಲೆಟ್ ಪ್ರಕಾಶ್ ಅವರಿಗೆ ಯಾವಾಗಲೂ ಬೆನ್ನೆಲುವಾಗಿ ನಿಂತಿದ್ದರು ಅವರ ಕ.ಷ್ಟ ಸುಖ ಎಲ್ಲದರಲ್ಲಿ ಕೂಡ ಭಾಗಿ ಆಗುತ್ತಿದ್ದರು. ಆದರೆ ಬುಲೆಟ್ ಪ್ರಕಾಶ್ ಅವರು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರ ಜೊತೆ ಮನಸ್ತಾಪ ಮಾಡಿಕೊಂಡರು ಆಗಲು ಕೂಡ ಸಹೋದರನನ್ನು ಸಂಭಾಳಿಸಿ ಬುಲೆಟ್ ಪ್ರಕಾಶ್ ಅವರ ಸ್ನೇಹವನ್ನು ಕೂಡ ಉಳಿಸಿಕೊಂಡಿದ್ದರು ದರ್ಶನ್ ಅವರು. ಇಷ್ಟೆಲ್ಲಾ ಆದ ಬಳಿಕ ಏಪ್ರಿಲ್ 6, 2022 ರಲ್ಲಿ ಬುಲೆಟ್ ಪ್ರಕಾಶ್ ಅವರು ತಮ್ಮ ಮನೆಯಲ್ಲಿ ಅವರ ಕೊ.ನೆ ಉಸಿರನ್ನು ಎ.ಳೆ.ದ.ರು.
ಬುಲೆಟ್ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗಳು ಹಾಗೂ ಒಬ್ಬ ಮಗ ಬುಲೆಟ್ ಪ್ರಕಾಶ್ ಅವರ ಸಾ.ವಿ.ನ ಬಳಿಕ ಅವರ ಮಗಳ ಮದುವೆ ಸಂಪೂರ್ಣ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ದರ್ಶನ್ ಅವರು ಮಾತು ಕೊಟ್ಟಿದ್ದಾರೆ. ಬುಲೆಟ್ ಪ್ರಕಾಶ್ ಅವರಿಗೆ ಅವರ ಮಗನಾದ ರಕ್ಷಕ್ ಬುಲೆಟ್ ಅವರನ್ನು ದೊಡ್ಡ ನಾಯಕ ನಟನನ್ನಾಗಿ ಮಾಡುವ ಆಸೆ ಇತ್ತು. ದರ್ಶನ್ ಅವರು ಕೂಡ ರಕ್ಷಕ್ ಬುಲೆಟ್ ಅವರಿಗೆ ಒಳ್ಳೆ ರೀತಿಯಲ್ಲಿ ಗೈಡ್ ಮಾಡುತ್ತಾ ತಪ್ಪು ಮಾಡಿದ್ದಾಗ ತಿದ್ದುತ್ತಾ, ಸ್ವಂತ ಮಗನಷ್ಟೇ ಪ್ರೀತಿ ತೋರಿಸಿ ನೋಡಿಕೊಳ್ಳುತ್ತಿದ್ದಾರಂತೆ. ಸದ್ಯಕ್ಕೆ ಬುಲೆಟ್ ಪ್ರಕಾಶ್ ಮಗನಾದ ರಕ್ಷಕ ಬುಲೆಟ್ ಅವರು ನಂದ ಕಿಶೋರ್ ಅವರ ನಿರ್ದೇಶನದ ಅಧ್ಯಕ್ಷ ಖ್ಯಾತಿಯ ಶರಣ್ ಅವರ ಅಭಿನಯದ ಗುರು ಶಿಷ್ಯರು ಎನ್ನುವ ಸಿನಿಮಾದಲ್ಲಿ ಶಿಷ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅಕ್ಕನ ಮದುವೆಗೆ ಈಗಾಗಲೇ ಸಾಕಷ್ಟು ಹಣದ ಸಹಾಯ ಮಾಡಿದ್ದಾರೆ ರಂದು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹೇಳಿಕೊಂಡಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರಲ್ಲಿ ದರ್ಶನ್ ಅವರು ಮೊದಲಿಗರು ಎಂಬುವುದು ಇದರಿಂದಲೇ ಸಾಬೀತಾಗಿದೆ ದರ್ಶನ್ ಅವರ ಈ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.