Sunday, June 4, 2023
HomeViral Newsಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.

ಸತ್ಯ ಸಿಂಹ ಇದ್ದಂತೆ, ಅದನ್ನು ಯಾರು ರಕ್ಷಿಸಬೇಕಾಗಿಲ್ಲ ಎಂದು ಕಣ್ಣಿರಿಟ್ಟ ವಿಜಯಲಕ್ಷ್ಮಿ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಪತ್ನಿ ವಿಜಯಲಕ್ಷ್ಮಿ (wife Vijayalakshmi) ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಆದರೆ ಹೆಚ್ಚಾಗಿ ಅವರು ಯಾವ ವಿಷಯದ ಬಗ್ಗೆಯೂ ಪ್ರತಿಕ್ರಿಯೆ ಕೊಡುತ್ತಿರಲಿಲ್ಲ ಇತ್ತೀಚಿಗೆ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಅವರ ಬಗ್ಗೆ ಕುತಂತ್ರದಿಂದ ನೆಗೆಟಿವ್ ಆಗಿ ಸುದ್ದಿ ಆಗುತ್ತಿದ್ದ ವೇಳೆ ಮಾತ್ರ ಪತಿ ಬಗ್ಗೆ ತಮ್ಮ ಧ್ವನಿ ಎತ್ತಿದ್ದರು.

ಆಗಿನಿಂದ ಎಲ್ಲರೂ ಸಹ ವಿಜಯಲಕ್ಷ್ಮಿ ಅವರ ಸೋಶಿಯಲ್ ಮೀಡಿಯಾ ಖಾತೆ ಮೇಲೆ ಒಂದು ಕಣ್ಣು ಇಟ್ಟಿದ್ದರು ಎಂದು ಹೇಳಬಹುದು. ಆದರೆ ಇದೀಗ ಕುಟುಂಬದ ಪರವಾಗಿ ಮತ್ತೊಬ್ಬ ನಟಿಯ ಮೇಲೆ ಸರಿಯಾಗಿ ಚಾಟಿ ಬಿಸಿದ್ದಾರೆ. ಆದರೆ ಈ ಬಾರಿಯೂ ದರ್ಶನ್ ಅವರ ಕುರಿತ ವಿಚಾರವಾಗಿ ಆಕೆಯನ್ನು ತರಾಟೆಗೆ ತೆಗೆದುಕೊಂಡು ಬುದ್ಧಿ ಹೇಳಿದ್ದಾರೆ, ಅದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ.

ಮೊನ್ನೆ ಅದ್ದೂರಿಯಾಗಿ ದರ್ಶನ್ ಅವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಣೆ ಆಗಿತ್ತು. ತಡರಾತ್ರಿಯಿಂದಲೇ ಮನೆ ಅತ್ತ ಧಾವಿಸಿದ ಅಭಿಮಾನಿಗಳು ಕೈಕುಲಕಿ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಂಡು ಸಮಾಧಾನದಿಂದ ಹೋದರು. ದರ್ಶನ್ ಅವರು ಸಹ ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವ ಕಾರಣಕ್ಕೆ ಊಟದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಮೊದಲ ಬಾರಿಗೆ ಅಚ್ಚುಕಟ್ಟಾಗಿ ಈ ರೀತಿ ಒಬ್ಬ ನಟನ ಹುಟ್ಟುಹಬ್ಬ ಆಚರಣೆ ಆಗಿತ್ತು.

ಇಷ್ಟಾದ ಮೇಲೆ ಸಂಜೆ ವೇಳೆಗೆ ದರ್ಶನ್ ಕುರಿತ ವಿವಾದ ಒಂದು ಎಲ್ಲೆಡೆ ಭುಗಿಲೇಳಲು ಶುರು ಆಯ್ತು. ಅದೇನೆಂದರೆ ದರ್ಶನ್ ಅವರು ಮೇಘ ಶೆಟ್ಟಿ (Megha Shetty) ಅವರು ಅರೆಂಜ್ ಮಾಡಿದ ಬರ್ತಡೇ ಪಾರ್ಟಿಗೆ (private birth day larty) ಹೋಗಿದ್ದರು. ಆದರೆ ಈ ಬರ್ತಡೇ ಪಾರ್ಟಿಯಲ್ಲಿ ಸದಾ ದರ್ಶನ್ ಜೊತೆಗೆ ತಳಕು ಹಾಕಿಕೊಳ್ಳುವ ಹೆಸರಾದ ಪವಿತ್ರ ಗೌಡ ಮತ್ತು ಇನ್ನಿತರ ಸೆಲೆಬ್ರಿಟಿಗಳು ಇದ್ದರು.

ದರ್ಶನ್ ಅವರನ್ನು ವಿಶೇಷವಾಗಿ ಬರಮಾಡಿಕೊಂಡು ಕೇಕ್ ಕಟ್ ಮಾಡಿಸಿ ಬಹಳ ಹತ್ತಿರದವರಂತೆ ಫೋಟೋಗೆ ಫೋಸ್ ಕೊಟ್ಟು ಅದಕ್ಕೆ ದರ್ಶನ್ ಅವರ ಬೃಂದಾವನ ಸಿನಿಮಾದ ಹಾರ್ಟ್ ಅಲ್ಲಿರೋ ಹಾರ್ಮೋನಿಯಂ ಈ ಹಾಡನ್ನು ಸೇರಿಸಿ ವಿಡಿಯೋ ಮಾಡಿ ಮೇಘ ಶೆಟ್ಟಿ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ವಿಜಯಲಕ್ಷ್ಮಿ ಅವರ ಕಣ್ಣಿಗೆ ಬಿದ್ದಿದ್ದೆ ತಡ ದರ್ಶನ್ ಪತ್ನಿ ಅವರು ಸಹ ಅವರು instagram ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಮೇಘ ಶೆಟ್ಟಿ ಅವರಿಗೆ ಬಿಸಿ ಮುಟ್ಟುವ ಹಾಗೆ ಮಾಡಿದರು.

ಎಚ್ಚೆತ್ತುಕೊಂಡ ಮೇಘ ಶೆಟ್ಟಿ ಅವರು ಕೂಡಲೇ ಅದನ್ನು ಡಿಲೀಟ್ ಕೂಡ ಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಈ ಎಲ್ಲಾ ನಡವಳಿಗಳ ಬಗ್ಗೆ ವ್ಯಾಪಕ ಪ್ರತಿಕ್ರಿಯೆ ಆರಂಭವಾಯಿತು. ಕೆಲವರು ವಿಜಯಲಕ್ಷ್ಮಿ ಪರ, ಕೆಲವರು ದರ್ಶನ್ ಪರ ಮತ್ತು ಕೆಲವರು ಮೇಘ ಶೆಟ್ಟಿ ಪರ ಕಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯವನ್ನು ಸಹ ಹೇಳಿಕೊಂಡರು. ಇದೀಗ ವಿಜಯಲಕ್ಷ್ಮಿ ಅವರು ಮತ್ತೊಂದು ಪೋಸ್ಟ್ ಹಾಕಿದ್ದಾರೆ.

ಅದೇನೆಂದರೆ ಸತ್ಯ ಸಿಂಹ ಇದ್ದ ಹಾಗೆ ಅದನ್ನು ರಕ್ಷಿಸಬೇಕಾದ ಅವಶ್ಯಕತೆ ಇಲ್ಲ. ಅದನ್ನು ಸಡಿಲ ಬಿಟ್ಟರೆ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ ಎನ್ನುವ ಕೋಟ್ ಅನ್ನು ಹಾಕಿದ್ದಾರೆ. ಈಗ ದರ್ಶನ್ ಅಭಿಮಾನಿಗಳ ಬಳಗದಲ್ಲಿ ಅತ್ತಿಗೆಯ ಈ ಪೋಸ್ಟ್ ಯಾವ ವಿಷಯ ಕುರಿತಾಗಿದ್ದು ಎಂದು ಯೋಚನೆ ಶುರು ಆಗಿದೆ. ಅಥವಾ ಮತ್ಯಾರಿಂದಲಾದರೂ ಪ್ರತಿಕ್ರಿಯೆ ಆಗುವ ಮೂಲಕ ಇದಕ್ಕೆ ಸ್ಪಷ್ಟನೆ ಸಿಗಲಿದೆಯಾ ಎಂದು ಕಾದು ನೋಡೋಣ.