ವಿಕ್ರಾಂತ್ ರೋಣ ಸದ್ಯಕ್ಕೆ ಕನ್ನಡದಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಸಿನಿಮಾ. ಕೆಜಿಎಫ್ ಸಿನಿಮಾದ ನಂತರ ಕನ್ನಡದಲ್ಲಿ ತಯಾರಾಗಿರುವ ಹೈ ಬಜೆಟ್ ಸಿನಿಮಾ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಬ್ಬರಿಸಲು ಸಿದ್ಧವಾಗಿದೆ. ನಟ ಕಿಚ್ಚ ಸುದೀಪ್ ಅವರು ತಮ್ಮ ಅಭಿನಯ ಚಾತುರ್ಯತೆಯನ್ನು ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಯೋಗ ಮಾಡಿ ನಿರೂಪಿಸಿದ್ದಾರೆ. ಕಿಚ್ಚ ಸುದೀಪ್ ಅವರು ಕನ್ನಡದ ನಂಬರ್ ಒನ್ ಸ್ಟಾರ್ ಪಟ್ಟಿಯಲ್ಲಿದ್ದಾರೆ. ಕನ್ನಡದಲ್ಲಿ ಈಗಾಗಲೇ ಬಹುತೇಕ ಅತ್ಯುತ್ತಮ ಸಂಖ್ಯೆಯಲ್ಲಿ ಸಿನಿಮಾಗಳನ್ನು ನೀಡಿರುವ ಇವರು ಕನ್ನಡಕ್ಕೆ ಸ್ಪರ್ಶ ಎನ್ನುವ ಸಿನಿಮಾದ ಮೂಲಕ ಹೀರೋ ಆಗಿ ಪಾದರ್ಪಣೆ ಮಾಡಿದರು. ಆನಂತರ ಬಂದ ಹುಚ್ಚ ಸಿನಿಮಾವು ಅವರ ಸಿನಿಮಾ ಬದುಕಿನ ಅತ್ಯುತ್ತಮ ಸಿನಿಮಾ ವಾಗಿ ಅವರ ಬದುಕಿನ ದಿಕ್ಕನ್ನು ಬದಲಾಯಿಸಿತು.
ಅದಾದ ಬಳಿಕ ನಂದಿ ಕಿಚ್ಚ ವಾಲಿ ಧಮ್ ಚಂದು ಸ್ವಾತಿಮುತ್ತು ಮೈ ಆಟೋಗ್ರಾಫ್ ವೀರ ಮದಕರಿ ವೀರ ಪರಂಪರೆ ಮುಸ್ಸಂಜೆ ಮಾತು ಗೂಳಿ ಕಾಮಣ್ಣನ ಮಕ್ಕಳು ಜಸ್ಟಮಾತ್ ಮಾತಲ್ಲಿ ಕಿಚ್ಚ ಹುಚ್ಚ ರಂಗ ಎಸ್‌ಎಸ್‌ಎಲ್‌ಸಿ ರನ್ನ ಮಾಣಿಕ್ಯ ಕೋಟಿಗೊಬ್ಬ 2 ಕೋಟಿಗೊಬ್ಬ 3 ಮುಂತಾದ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿರುವ ಕಿಚ್ಚ ಸುದೀಪ್ ಅವರು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಸಿನಿಮಾಗಳನ್ನು ಖಳನಾಯಕನಾಗಿ ಮಿಂಚುತ್ತಿದ್ದಾರೆ. ಅಮಿತಾ ಬಚ್ಚನ್ ಅವರ ಜೊತೆ ಅಭಿನಯಿಸುವ ಅದೃಷ್ಟ ಪಡೆದ ಇವರು ರಾಜಮೌಳಿ ಅವರ ನಿರ್ದೇಶನದ ಬಾಹುಬಲಿ ಸಿನಿಮಾದಲ್ಲೂ ಕೂಡ ತಮಗಾಗಿ ಒಂದು ಪಾತ್ರವನ್ನು ಮೀಸಲಾಗಿಡುವಷ್ಟು ಎಲ್ಲಾ ಭಾಷೆಗಳಲ್ಲೂ ಅಭಿಮಾನ ಹೊಂದಿದ್ದಾರೆ. ಕಿಚ್ಚ ಸುದೀಪ್ ಅವರು ಈಗ ತಮ್ಮ ವರ್ಚಸ್ಸನ್ನು ವಿಕ್ರಾಂತ್ ರೋಣ ಸಿನಿಮಾದ ಮೂಲಕ ಮತ್ತೊಂದು ಹಂತಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾವು ಈಗಾಗಲೇ ಹಲವು ವಿಷಯಗಳಿಂದ ಫೇಮಸ್ ಆಗಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜಾ ಖಲಿಫ್ ಅಂತಹ ಕಟ್ಟಡದ ಮೇಲೆ ತನ್ನ ಲೋಗೋ ಲಾಂಚ್ ಮಾಡಿಕೊಂಡ ಸಿನಿಮಾ ಕನ್ನಡದ ಹೆಸರನ್ನು ವಿಶ್ವಮಟ್ಟಕ್ಕೆ ಗುರುತಿಸಿಕೊಳ್ಳುವಷ್ಟು ಖ್ಯಾತಿಯನ್ನು ಕನ್ನಡಿಗರಿಗೆ ತಂದಿದೆ. ಒಂದಾದ ಮೇಲೆ ಒಂದರಂತೆ ಹಲವು ವಿಚಾರದಲ್ಲಿ ಈ ಸಿನಿಮಾ ದಾಖಲೆ ಮಾಡುತ್ತಿದ್ದು ಕಳೆದ ತಿಂಗಳಷ್ಟೇ ಈ ಸಿನಿಮಾದ ಐಟಂ ಹಾಡೊಂದನ್ನು ರಿಲೀಸ್ ಮಾಡತ್ತು. ಜಾಕ್ವೆಲಿನ್ ಮತ್ತು ಸುದೀಪ್ ಅವರು ಹೆಜ್ಜೆ ಹಾಕಿದ್ದ ರಾರಾ ರಕ್ಕಮ್ಮ ಎನ್ನುವ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಅಲ್ಲಿ ಇದ್ದು, ರೀಲ್ ಮಾಡಲು ಇಚ್ಚಿಸುವವರ ನಂಬರ್ ಒನ್ ಫೇವರೆಟ್ ಸಾಂಗ್ ಆಗಿದೆ. ಅಲ್ಲದೆ ಭಾರತದ ಹಲವಾರು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಬಳಕೆದಾರರು ಸೇರಿದಂತೆ ಅತಿ ಹೆಚ್ಚಿನ ಜನರು ಈ ಹಾಡಿಗೆ ರೀಲ್ಸ್ ಮಾಡಿ ಅದನ್ನು ಕೂಡ ಒಂದು ದಾಖಲೆ ಮಾಡಿದ್ದಾರೆ.
ಇನ್ನೇನು ಸಿನಿಮಾ ತೆರೆ ಮೇಲೆ ಅಬ್ಬರಿಸಲು ದಿನಾಂಕ ಕೂಡ ಗೊತ್ತಾಗಿದೆ. ಈ ತಿಂಗಳ 29ನೇ ತಾರೀಕು ಸಿನಿಮಾ ಥಿಯೇಟರ್ ನಲ್ಲಿ ನೋಡಲು ಸಿಗುತ್ತದೆ. ಈ ಸಮಯದಲ್ಲಿ ಸುದೀಪ್ ಅವರು ಈ ಸಿನಿಮಾಗಾಗಿ ತೆಗೆದುಕೊಂಡಿರುವ ಸಂಭಾವನೆ ಬಾರಿ ಸುದ್ದಿಯಾಗುತ್ತಿದೆ. ಸಿನಿಮಾ 95 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಈ ಸಿನಿಮಾದ ನಾಯಕ ಕಿಚ್ಚ ಸುದೀಪ್ ಅವರು ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.