ಜೇಮ್ಸ್ ಸಿನಿಮಾ ಕನ್ನಡದ ಅಭಿಮಾನಿಗಳ ದೇವರ ಕೊನೆಯ ಚಿತ್ರ ಈ ಸಿನಿಮಾದಲ್ಲಿ ಅಭಿನಯಿಸಿದ ಎಷ್ಟೋ ಕಲಾವಿದರು ನಾವೆಷ್ಟು ಪುಣ್ಯ ಮಾಡಿದ್ದೇವೆ ಪುನೀತ್ ಅವರೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುವ ಅವಕಾಶ ನಮಗೆ ಸಿಕ್ಕಿತಲ್ಲ ಎಂದು ತೃಪ್ತಿ ಪಟ್ಟು ಕೊಳ್ಳುತ್ತಿದ್ದಾರೆ. ಅದರಲ್ಲಿ ಈ ಸಿನಿಮಾದ ನಟಿ ಪ್ರಿಯ ಆನಂದ್ ಅವರಿಗೆ ಇದು ಎರಡನೇ ಬಾರಿ ಸಿಕ್ಕಿರುವ ಅವಕಾಶವಾಗಿದೆ ಯಾಕೆಂದರೆ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವಮಾನದ ಶ್ರೇಷ್ಠ ಚಿತ್ರ ಎಂದು ಕರೆಯಬಹುದಾದ ರಾಜಕುಮಾರ ಎನ್ನುವ ಸಿನಿಮಾದಲ್ಲಿ ಪ್ರಿಯ ಆನಂದ್ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಮತ್ತು ಈಗ ಜೇಮ್ಸ್ ಸಿನಿಮಾದಲ್ಲೂ ಕೂಡ ಪ್ರಿಯ ಆನಂದ್ ಅವರೇ ಪುನೀತ್ ಅವರಿಗೆ ಜೋಡಿಯಾಗಿ ನಟಿಸುವ ಅದೃಷ್ಟ ಕೂಡ ಅವರ ಪಾಲಿಗೆ ದೊರಕಿದೆ.
ಮೂಲತಃ ತಮಿಳು ನಟಿ ಆದ ಇವರನ್ನು ಆ ರೀತಿ ಗುರಿತುಸುವುದೇ ಕಷ್ಟ. ಏಕೆಂದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಹೊಂದಿಕೊಂಡಂತೆ ಇರುವ ಇವರನ್ನು ಕನ್ನಡದ ನಟಿ ಎಂದೇ ಹೇಳಬಹುದು ಅಷ್ಟು ಕನ್ನಡಿಗರ ಮನಕ್ಕೆ ಇವರು ಹತ್ತಿರವಾಗಿದ್ದಾರೆ. ಮೊದಲಿಗೆ ಪ್ರಿಯ ಆನಂದ್ ಅವರು ಕಿಚ್ಚ ಸುದೀಪ್ ಅವರ ಮಾಣಿಕ್ಯ ಎನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅವರಿಗೆ ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ಸಿಗಲು ಶುರುವಾದವು ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಆರೆಂಜ್ ಸಿನಿಮಾದಲ್ಲಿ ಅಭಿನಯಿಸುವ ಅದೃಷ್ಟ ಪಡೆದುಕೊಂಡರು. ಹೀಗೆ ರಾಜಕುಮಾರ ಹಾಗೂ ಜೇಮ್ಸ್ ಎನ್ನುವ ಎರಡು ಸಿನಿಮಾಗಳು ನಟಿಸಿರುವ ಇವರಿಗೆ ಕನ್ನಡದಲ್ಲಿ ನಟಿಸಲು ಹಲವಾರು ಆಫರ್ ಗಳು ಈಗಲೂ ಕೂಡ ಇವೆ.
ತಮಿಳಿನಲ್ಲೂ ಕೂಡ ಬಹುತೇಕ ಸ್ಟಾರ್ ಹೀರೋ ಸಿನಿಮಾಗಳಲ್ಲಿ ನಟಿಸಿರುವ ಇವರು ಮಿರ್ಚಿ ಶಿವ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಸುಮೋ ಮತ್ತು ಕಾಸೆದೆನ್ ಕಡವುಲಡ ಎನ್ನುವ ಸಿನಿಮಾಗಳು ತೆರೆ ಕಾಣಬೇಕಾಗಿದೆ. ಇದಲ್ಲದೆ ಹಿರಿಯ ನಟ ಪ್ರಶಾಂತ್ ಅವರೊಂದಿಗೂ ಕೂಡ ಅಂದಗನ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಕೂಡ ಸದ್ಯದಲ್ಲೇ ತೆರೆ ಕಾಣಲಿದೆ ಹೀಗೆ ಕೈ ತುಂಬಾ ಸಿನಿಮಾ ಆಫರ್ ಗಳನ್ನು ಕನ್ನಡ ಮತ್ತು ತಮಿಳು ಭಾಷೆಯಿಂದ ಗಿಟ್ಟಿಸಿಕೊಂಡಿರುವ ಪ್ರಿಯ ಆನಂದ್ ಅವರು ಮದುವೆ ಆಗುವುದರ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ. ಇವರು ಮದುವೆ ಆಗಲು ಒಪ್ಪಿಕೊಂಡಿರುವ ವ್ಯಕ್ತಿ ಯಾರು ಗೊತ್ತಾ ದೇವಮಾನವ ಎಂದು ಕರೆಸಿಕೊಂಡಿರುವ ನಿತ್ಯಾನಂದ ಅವರ ಜೊತೆ ಇವರು ವಿವಾಹವಾಗುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದ ಈ ಮಾತುಗಳು ವೈರಲ್ ಆಗಿದ್ದೆ ತಡ ಸೋಶಿಯಲ್ ಮೀಡಿಯಾದಲ್ಲಿ ಇವರನ್ನು ನೆಟ್ಟಿಗರು ಹಿಗ್ಗಾಮುಗ್ಗ ವಾಗಿ ಟ್ರೋಲ್ ಮಾಡಿದ್ದಾರೆ.
ನಂತರ ಅದಕ್ಕೆ ಸ್ಪಷ್ಟನೆ ಕೊಟ್ಟ ಪ್ರಿಯ ಆನಂದ್ ಅವರು ನಾನು ತಮಾಷೆಗಾಗಿ ಈ ಮಾತನ್ನು ಹೇಳಿದೆ ನನ್ನ ಹೆಸರು ಪ್ರಿಯ ಆಗಿರುವುದರಿಂದ ನಿತ್ಯಾನಂದ ಅವರ ಹೆಸರು ಹೋಲುತ್ತದೆ ಹಾಗಾಗಿ ಮದುವೆಯಾದರೆ ಹೆಸರನ್ನು ಹೆಚ್ಚಿಗೆ ಬದಲಾಯಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕೂಡ ತಮಾಷೆಗಾಗಿಯೇ ನುಡಿದಿದ್ದು ಅದನ್ನು ಬೇರೆ ಅರ್ಥ ಕಲ್ಪಿಸಿಕೊಂಡು ತಿಳಿದುಕೊಳ್ಳುವುದರಲ್ಲಿ ಅರ್ಥವಿಲ್ಲ. ಈ ವಿಚಾರವನ್ನು ಇನ್ನು ಮುಂದೆ ಇಲ್ಲಿಗೆ ಬಿಟ್ಟುಬಿಡಿ ಎಂದು ಕೇಳಿಕೊಂಡಿದ್ದರು. ಅಂದಹಾಗೆ ಈ ಸ್ಪಷ್ಟನೆ ಕೊಟ್ಟ ಬಳಿಕ ಅವರು ಮದುವೆ ಬಗ್ಗೆ ಮಾತನಾಡಿರುವುದು ಕೂಡ ಕೇವಲ ತಮಾಷೆಗಾಗಿ ಎನ್ನುವುದು ರುಜುವಾದಂತೆ ಆಯಿತು.