ವಿಕ್ರಾಂತ್ ರೋಣ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಚಿತ್ರ. ಅನೂಪ್ ಭಂಡಾರಿ ಅವರ ನಿರ್ದೇಶನದ ಈ ಸಿನಿಮಾ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಶೇಷತೆಯಿಂದ ಸುದ್ದಿಯಾಗಿರುವ ಈ ಸಿನಿಮಾ ಜುಲೈ ತಿಂಗಳಿನ 29ನೇ ತಾರೀಖಿನಂದು ಬಿಡುಗಡೆಯಾಗಲು ಸಜ್ಜು ಮಾಡಿಕೊಳ್ಳುತ್ತಿದೆ. ಈ ಸಂಬಂಧವಾಗಿ ಈಗಾಗಲೇ ಪ್ರಚಾರ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿರುವ ಸಿನಿಮಾ ತಂಡ ಟ್ರೈಲರ್ ಕೂಡ ಲಾಂಚ್ ಮಾಡಿದೆ. ಈ ಸಿನಿಮಾದ ಫಸ್ಟ್ ಲುಕ್
ಹಾಗೂ ಟೈಟಲ್ ಲಾಂಚ್ ದುಬೈನ ಬುರ್ಜ ಖಲೀಫಾ ಕಟ್ಟಡದ ಮೇಲೆ ಬೆಳಗಿಸಿದ ಖ್ಯಾತಿ ಸುದೀಪ್ ಅವರಿಗೆ ಸಲ್ಲುತ್ತದೆ. ಇದುವರೆಗೆ ಈ ರೀತಿಯ ಹೊಸ ಪ್ರಯೋಗವನ್ನು ಸಿನಿಮಾದ ಲೋಗೋಗಾಗಿ ಪ್ರಯತ್ನ ಮಾಡಿದ ಇತಿಹಾಸ ಸುದೀಪ್ ಅವರಿಂದ ಶುರುವಾಗಿದೆ.
ಇದಾದ ಬಳಿಕ ಸಹಜವಾಗಿ ಇಡೀ ಪ್ರಪಂಚಕ್ಕೆ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಭಾರತದ ಆರು ಭಾಷೆಗಳಲ್ಲಿ ರಾರಾಜಿಸಲು ಸಿದ್ಧವಾಗಿದೆ. ಅಲ್ಲದೆ ವಿದೇಶಿ ಭಾಷೆಗಳಲ್ಲಿ ಕೂಡ ವಿಕ್ರಾಂತ್ ರೋಣ ಸಿನಿಮಾವು ತೆರೆ ಕಾಣುತ್ತಿದೆ. ಇಲ್ಲಿಯವರೆಗೆ ಭಾರತದಾದ್ಯಂತ ಎಲ್ಲಾ ಭಾಷೆಗಳ ಸಿನಿಮಾಗಳಲ್ಲೂ ಕೂಡ ಸುದೀಪ್ ಅವರಿಗೆ ಬೇಡಿಕೆ ಇದ್ದು ಹಾಗೂ ಸುದೀಪ್ ಅವರಿಗೆ ಎಲ್ಲಾ ಭಾಷೆಗಳಲ್ಲೂ ಕೂಡ ಅಭಿಮಾನಿಗಳು ಇದ್ದಾರೆ. ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾದ ಬಳಿಕ ಸುದೀಪ್ ಅವರು ನ್ಯಾಷನಲ್ ಸ್ಟಾರ್ ಮಾತ್ರವಲ್ಲದೆ ಇಂಟರ್ನ್ಯಾಷನಲ್ ಸ್ಟಾರ್ ಆಗಿ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕಂದರೆ ಇಷ್ಟು ಮಟ್ಟದ ಒಂದು ವಿಶ್ವಾಸವನ್ನು ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ನೋಡಿದ ಸಿನಿಮಾ ವಿಮರ್ಶಕರು ಹೇಳುತ್ತಿದ್ದಾರೆ.

ಸಿನಿಮಾ ತಂಡ ಮೊದಲಿಗೆ ರಾರಾ ರಕ್ಕಮ್ಮ ಎನ್ನುವ ಐಟಂ ಹಾಡನ್ನು ರಿಲೀಸ್ ಮಾಡಿತ್ತು. ಹಾಡು ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ಸ್ ಪಡೆದು ಜನಮನ್ನಣೆ ಗಳಿಸಿತು. ಅದರಲ್ಲೂ ಕಿಚ್ಚ ಸುದೀಪ್ ಅವರು ಈ ಹಾಡಿಗೆ ರೀಲ್ಸ್ ಮಾಡಿದ ಬಳಿಕ ಇದು ಮತ್ತೊಂದು ಮಟ್ಟಕ್ಕೆ ಪ್ರಚಾರ ಪಡೆದುಕೊಂಡಿತು ಎಂದೇ ಹೇಳಬಹುದು. ಕಿಚ್ಚ ಸುದೀಪ್ ಅವರ ಹೆಜ್ಜೆಗಳನ್ನು ಅನುಸರಿಸಿದ ಅವರ ಅಭಿಮಾನಿಗಳು ಕಿರುತೆರೆ ಕಲಾವಿದರು ಮತ್ತು ಫೇಮಸ್ ಸೆಲೆಬ್ರಿಟಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಎಲ್ಲರೂ ಕೂಡ ರೀಲ್ಸ್ ಮಾಡಿ ತಮ್ಮ ತಮ್ಮ ಅಕೌಂಟ್ ಗಳಲ್ಲಿ ಶೇರ್ ಮಾಡಿ ಖುಷಿಪಟ್ಟರು. ಸದ್ಯಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನದ್ದೇ ಅಬ್ಬರ ಎನ್ನಬಹುದು ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಕೂಡ ಈ ಹಾಡನ್ನು ಬಹಳ ಇಷ್ಟಪಟ್ಟು ಆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ಈ ಹಾಡಿಗೆ ಸುದೀಪ್ ಅವರ ಜೊತೆ ಚಾಕ್ವೆಲಿನ್ ಅವರು ಕುಣಿದಿದ್ದಾರೆ. ಜಾಕ್ವೆಲಿನ್ ಅವರು ಬಹು ಬೇಡಿಕೆಯ ನಟಿ, ಸಂಭಾವನೆಯ ವಿಷಯದಲ್ಲೂ ಕೂಡ ಜಾಕ್ವೆಲಿನ್ ಆಗಾಗ ಸುದ್ದಿ ಆಗುತ್ತಾರೆ. ಹಾಗಾಗಿ ಈ ಸಿನಿಮಾಕ್ಕಾಗಿ ಅವರು ಎಷ್ಟು ಹಣ ಪಡೆದಿರಬಹುದು ಎಂದು ಎಲ್ಲರೂ ಕುತೂಹಲ ಭರಿತರಾಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಅಭಿನಯಕ್ಕಾಗಿ ಜಾಕ್ವೆಲಿನ್ ಅವರು ಬರೋಬ್ಬರಿ ನಾಲ್ಕು ಕೋಟಿ ರೂಗಳನ್ನು ಸಂಭಾವನೆ ರೂಪದಲ್ಲಿ ತೆಗೆದುಕೊಂಡಿದ್ದಾರೆ ಸದ್ಯಕ್ಕೆ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ರಂಜಿಸಿರುವ ಜಾಕ್ವೆಲಿನ್ ಅವರ ಪಾತ್ರದ ಬಗ್ಗೆ ಕೂಡ ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಒಂದು ಹಾಡಿಗೆ 4 ಕೋಟಿ ಸಂಭಾವನೆ ಪಡೆದಿರುವ ಜಾಕ್ವೇಲಿನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.