ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಯುಕ್ತ ರಾರಾಜಿಸುತ್ತಿದೆ ಅಪ್ಪು ಕಟೌಟ್, ಅಪ್ಪು ಆಶೀರ್ವಾದ ಸಿಕ್ಕ ಮೇಲೆ ಸೋಲೋ ಮಾತೆ ಇಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.

ವಿಕ್ರಾಂತ್ ರೋಣ ಸಿನಿಮಾ ನಾಡಿದ್ದು ಅಂದರೆ ಜುಲೈ 28 ರಂದು ಬಿಡುಗಡೆಯಾಗಲಿದ್ದು ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತರಿಸಿದ್ದಾರೆ. ವಿಕ್ರಾಂತ್ ರೋಣ ಭಾರತೀಯ ಕನ್ನಡ ಭಾಷೆಯ ಫ್ಯಾಂಟಸಿ ಸಾಹಸ ಚಿತ್ರವಾಗಿದ್ದು, ಇದನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಇದರಲ್ಲಿ ಸುದೀಪ್  ಅವರು ನಿರೂಪ್ ಭಂಡಾರಿ, ಚೊಚ್ಚಲ ನಟಿ ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಹಾಡುಗಳು ಸಹ ಅದ್ಭುತವಾಗಿ ಮೂಡಿಬಂದಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಹಾಗೂ ನೃತ್ಯದ ತುಣುಕುಗಳು ಹರಿದಾಡುತ್ತಿವೆ. ಈ ಚಿತ್ರದ ಟೀಸರ್ ನಲ್ಲಿ ಸುದೀಪ್ ಒಂದು ಡೈಲಾಗ್ ಹೇಳಿದ್ದು ಅದರಿಂದ ಪ್ರಭಾವಿತಗೊಂಡಿರುವ ಅಭಿಮಾನಿಗಳು ಸುದೀಪ್ ಅವರ ಪಾತ್ರದ ನಟನೆಯನ್ನು ಕಣ್ಣುತುಂಬಿಕೊಳ್ಳಲು ಕಾತರಿಸಿ ಕಾಯುತ್ತಿದ್ದಾರೆ.

ಈ ಚಿತ್ರವು ಹೆಚ್ಚು ನಿರೀಕ್ಷೆಗಳನ್ನು ಹೊಂದಿರುವುದಲ್ಲದೆ 2021 ರಲ್ಲೇ ಬಿಡುಗಡೆಯಾಗಬೇಕಿದ್ದ ವಿಕ್ರಾಂತ್ ರೋಣ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟು ಜುಲೈ 28 ಕ್ಕೆ ತೆರೆ ಕಾಣಲು ಸಿದ್ದವಾಗಿ ಚಿತ್ರಮಂದಿರಗಳ ಮುಂದೆ ಸುದೀಪ್ ಅವರ ಎತ್ತರದ ಕಟೌಟ್ ಗಳು ರಾರಾಜಿಸುತ್ತ ಚಿತ್ರಮಂದಿರಗಳು ಕಟೌಟ್ ಗಳಿಂದ ಮುಚ್ಚಿ ಹೋಗಿವೆ. ಇವುಗಳ ನಡುವೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ವಿಶೇಷ ವ್ಯಕ್ತಿಯ ಕಟೌಟ್ ಒಂದು ಗಮನ ಸೆಳೆದು ನೋಡುಗರನ್ನು ಆಕರ್ಷಸಿ ಮನಸೂರೆಗೊಳಿಸಿ ರೋಮಾಂಚನಗೊಳಿಸುತ್ತಿದೆ. ಹೌದು ನವರಂಗ್ ಚಿತ್ರಮಂದಿರದಲ್ಲಿ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಕಟೌಟ್ ಜೊತೆಗೆ ಅಪ್ಪು ಅವರ ಕಟೌಟ್ ಕೂಡ ಹಾಕಿದ್ದು ಸುದೀಪ್ ಅವರನ್ನು ಅಪ್ಪು ಅವರು ತಬ್ಬಿಕೊಂಡಿರುವ ಕಟೌಟ್ ಅನ್ನು ಹಾಕಿ ಅಪ್ಪು ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಅಪ್ಪು ಅವರು ಹಿಂದೆ ಇವೆಂಟ್ ಒಂದರಲ್ಲಿ ಭಾಗವಹಿಸಿದ್ದಾಗ ಅದರಲ್ಲಿ ಸುದೀಪ್ ಅವರೂ ಸಹ ಇರುತ್ತಾರೆ. ಆ ಸಂದರ್ಭದಲ್ಲಿ ಸುದೀಪ್ ಹಾಗೂ ಅಪ್ಪು ಇಬ್ಬರನ್ನು ವೇದಿಕೆ ಮೇಲೆ ಕರೆದು ಚಿಕ್ಕ ವಯಸ್ಸಿನಲ್ಲಿ ಅವರಿಬ್ಬರೂ ತಬ್ಬಿಕೊಂಡು ತೆಗೆಸಿದ್ದ ರೆಟ್ರೋ ಫೋಟೋ ಒಂದನ್ನು ರಿವೀಲ್ ಮಾಡಿಸುತ್ತಾರೆ ಆಗ ಇದೇ ರೀತಿಯಲ್ಲಿ ಈ ಸಂದರ್ಭದಲ್ಲಿ ತಬ್ಬಿಕೊಳುವಂತೆ ಹೇಳಿದಾಗ ಅಪ್ಪು ಅವರು ಸುದೀಪ್ ಅವರನ್ನು ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಂಭ್ರಮಿಸಿರುತ್ತಾರೆ. ಇದೇ ಫೋಟೋ ದ ಕಟೌಟ್ ಅನ್ನು ಇಂದು ನವರಂಗ್ ಥೀಯೇಟರ್ ಎದುರು ಹಾಕಿ ಆ ಸಂದರ್ಭದ ಕ್ಷಣವನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಅಪ್ಪು ಗೆ ಎಲ್ಲರೂ ಅಪ್ಪುಗೆ ನೀಡಲು ಬಯಸುತ್ತಾರೆ ಎನ್ನುವುದನ್ನು ಸಾಬೀತು ಪಡಿಸುವಂತಿದೆ ಈ ಚಿತ್ರದ ಕಟೌಟ್.

ಸಾಮಾನ್ಯವಾಗಿ ಅಪ್ಪು ಅವರು ಎಂದಿಗೂ ಯಾರನ್ನು ದ್ವೇ.ಷಿಸದೇ ತಮ್ಮ ಪಾಡಿಗೆ ತಾವಿದ್ದ ಜೀವ ಅದು ಅಲ್ಲದೇ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಲಗೈ ನಲ್ಲಿ ಮಾಡಿದ್ದು ಎಡಗೈ ಗೆ ತಿಳಿಯದಂತಹ ಮೌನ ನಿಲುವನ್ನು ಹೊಂದಿದ್ದ ಧ್ರುವ ತಾರೆ ನಮ್ಮ ಅಪ್ಪು ಎಲ್ಲರಿಗೂ ಪ್ರೀತಿಯ ಅಪ್ಪುಗೆ ನೀಡುತ್ತಿದ್ದ ಅಪ್ಪು ಅವರು ಸುದೀಪ್ ರವರಿಗೆ ನೀಡಿದ್ದ ಪ್ರೀತಿಯ ಅಪ್ಪುಗೆಯ ಪಟವನ್ನು ದೊಡ್ಡದಾಗಿ ಕಟೌಟ್ ಮಾಡಿ ಹಾಕಿಸಿ ನೋಡುಗರ ಕಣ್ಣುಗಳನ್ನು ಪ್ರೇಮಮಯ ಮಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾಗೆ ಅಪ್ಪು ಆಶೀರ್ವಾದ ನೀಡಿದ್ದಾರೆ ಎನ್ನುವ ಹಾಗೆ ಸದಾ ಅಪ್ಪುವಿನ ಪ್ರೇಮಾಶಿರ್ವಾದ ಕನ್ನಡ ಹಾಗೂ ಕರ್ನಾಟಕದಲ್ಲಿ ದೇಶದಲ್ಲಿ ಇದ್ದೇ ಇರುತ್ತದೆ ಎಂಬುದನ್ನು ಪ್ರತಿಯೊಬ್ಬ ನಟರ ಅಭಿಮಾನಿಗಳು ಸಹ ಸ್ವೀಕರಿಸಿದ್ದಾರೆ ಎನ್ನುವುದನ್ನು ಈ ಕಟೌಟ್ ಸಾಬೀತು ಪಡಿಸುವಂತಿದೆ. ನಿಮ್ಮ ಪ್ರಕಾರ ಅಪ್ಪು & ಕಿಚ್ಚ ಸುದೀಪ್ ಅವರ ಈ ಕೌಟ್ ನೋಡಿ ನೋಡಿದರೆ ಏನ್ ಅನಿಸುತ್ತದೆ.? ಇದು ಕಿಚ್ಚ & ಅಪ್ಪುವಿನ ಸ್ನೇಹ ಸಂಕೇತವಾ.? ಅಥವಾ ಸಿನಿಮಾಗಾಗಿ ಮಾಡುತ್ತಿರುವ ತಯಾರಿನಾ.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment

WhatsApp Group Join Now
Telegram Group Join Now