ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಕೇವಲ ಒಂದೇ ಒಂದು ದಿನವಾಗಿದೆ ಈ ಸಿನಿಮಾ ಗುರುವಾರ ಅಂದರೆ ಜುಲೈ 28 ನೇ ತಾರೀಕು ಬೆಳಿಗ್ಗೆ ಎಲ್ಲಾ ಚಿತ್ರಮಂದಿರದಲ್ಲಿಯೂ ಕೂಡ ಪ್ರಸಾರವಾಯಿತು.ಬಆದರೆ ಅದೇ ಗುರುವಾರದ ಸಾಯಂಕಾಲದ ಹೊತ್ತಿಗೆ ಎಲ್ಲರ ಮೊಬೈಲ್ ನಲ್ಲಿಯೂ ಕೂಡ ವಿಕ್ರಂತ್ ರೋಣ ಸಿನಿಮಾ ಲಿಕ್ ಔಟ್ ಆಗಿದೆ. ಅಷ್ಟಕ್ಕೂ ಈ ರೀತಿ ಹೈ ಬಜೆಟ್ ಸಿನಿಮಾ ಪೈರೇಸಿ ಆಗುವುದಕ್ಕೆ ಕಾರಣ ಯಾರು ಗೊತ್ತಾ ಈ ರೀತಿ ಪೈರೆಸಿ ಮಾಡಿದವರು ಯಾರು? ಈ ರೀತಿ ಪೈರೆಸಿ ಮಾಡುವುದರ ಹಿಂದಿನ ಉದ್ದೇಶವೇನು ಇದರಿಂದ ಪಡೆಯುವಂತಹ ಲಾಭವಾದರೂ ಏನು ಎಂಬುದನ್ನು ತಿಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು ಆದರೂ ಕೂಡ ಇದು ಸತ್ಯ.
ನಮ್ಮ ಕನ್ನಡ ಇಂಡಸ್ಟ್ರಿ ಬೆಳೆಯದೆ ಇರುವುದಕ್ಕೆ ಮುಖ್ಯ ಕಾರಣ ಆದರೆ ನಮ್ಮಲ್ಲಿ ಇರುವಂತಹ ಹಿ.ತ.ಶ.ತ್ರುಗಳಿಂದಲೇ ಹೌದು ಮೊದಲು ನಮಗೆ ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ಒಲವು ಆಸೆ ಆಸಕ್ತಿ ಇರಬೇಕು ಯಾರಿಗೆ ಕನ್ನಡ ಸಿನಿಮಾದ ಬಗ್ಗೆ ಆಸಕ್ತಿ ಒಲವು ಇಲ್ಲವೋ ಅಂತವರು ಮಾತ್ರ ಸಿನಿಮಾವನ್ನು ಪೈರೆಸಿ ಮಾಡುತ್ತಾರೆ, ಸಾಮಾನ್ಯವಾಗಿ ಸಿನಿಮಾ ಪೈರಸಿ ಮಾಡುವಂತಹ ಕೆಲಸವನ್ನು ಯಾವಾಗಲೂ ತಮಿಳ್ ರಾಕರ್ಸ್ ತಂಡ ಮಾಡುತ್ತಿದ್ದು ಆದರೆ ಇದೇ ಮೊದಲ ಬಾರಿಗೆ ನಮ್ಮ ಕನ್ನಡಿಗರು ಇಂತಹ ಹೀ.ನಾ.ಯ ಕೃ.ತ್ಯ.ಕ್ಕೆ ಇಳಿದಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ.
ಒಂದು ಸಿನಿಮಾವನ್ನು ತಯಾರಿ ಮಾಡಬೇಕು ಅಂದರೆ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಪರಿಶ್ರಮ ಇರುತ್ತೆ ನಟ ನಟಿ ನಿರ್ದೇಶಕರು ನಿರ್ಮಾಪಕರು ಸಹ ಕಲಾವಿದರು ಟೆಕ್ನಿಷಿಯಲ್ ಟೀಮ್ ಈ ರೀತಿ ಸುಮಾರು ಸಾವಿರಕ್ಕೂ ಹೆಚ್ಚಿನ ಜನ ಕೆಲಸ ಮಾಡುತ್ತಾರೆ. ಇಷ್ಟು ಕಷ್ಟಪಟ್ಟು ನಿರ್ಮಾಣ ಮಾಡಿದಂತಹ ಸಿನಿಮಾವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಪೈರೆಸಿ ಮಾಡಿದಾಗ ಅದರ ನೋವು ಎಷ್ಟಿರಬೇಕು ಎಂಬುದನ್ನು ಊಹೆ ಮಾಡಿ. ಇನ್ನು ಈ ಸಿನಿಮಾ ಏನು ಸುಮ್ಮನೆ ತಯಾರಾಗುವುದಿಲ್ಲ ಅದರಲ್ಲೂ ಹೈ ಬಜೆಟ್ ಸಿನಿಮಾ ಮತ್ತು ಸ್ಟಾರ್ ನಟರಾ ಸಿನಿಮಾ ವನ್ನು ತಯಾರಿ ಮಾಡಬೇಕು ಅಂದರೆ ಕೋಟಿಗಟ್ಟಲೆ ಬಂಡವಾಳವನ್ನು ಹಾಕಬೇಕಾಗುತ್ತದೆ.
ಇಷ್ಟು ದೊಡ್ಡ ಮೊತ್ತದ ಹಣವನ್ನು ಹಾಕಿ ಸಿನಿಮಾವನ್ನು ನಿರ್ಮಾಣ ಮಾಡಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ತಿಂಗಳುಗಳ ಗಟ್ಟಲೆ ಇಡೀ ರಾಜ್ಯವನ್ನೆಲ್ಲ ಸುತ್ತಿ ಪರ ರಾಜ್ಯದಲ್ಲೂ ಹೋಗಿ ಪ್ರಚಾರ ಮಾಡಿ ಇನ್ನೇನು ಸಿನಿಮಾ ಉತ್ತಮ ರೀತಿಯಾದಂತಹ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಥಿಯೇಟರ್ ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಿದರೆ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತದೆ ಅಂತ ಹದ್ದುಕೊಂಡು ಸಿನಿಮಾ ಬಿಡುಗಡೆ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಈ ಸಿನಿಮಾ ಪೈರಸಿಯಾಗುತ್ತದೆ. ಈ ರೀತಿ ಆದಾಗ ಈ ನಿರ್ಮಾಪಕರ ಕಥೆ ಏನು ನಟ ನಟಿಯರ ಕಥೆ ಏನು ವರ್ಷಾನು ಗಟ್ಟಲೇ ಶ್ರಮವಹಿಸಿ ಕೆಲಸ ಮಾಡಿದಂತಹ ಕೆಲಸಕ್ಕೆ ಸಿಕ್ಕ ಪ್ರತಿಫಲವಾದರೂ ಏನು ಎಂಬುದೇ ಇದೀಗ ಚಿತ್ರತಂಡದವರ ಪ್ರಶ್ನೆಯಾಗಿದೆ.
ನಿಮಗೆ ಗೊತ್ತು ಕಿಚ್ಚ ಸುದೀಪ್ ಅವರು ಈ ಕನ್ನಡದ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಅಂತ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ದುಬೈನಾ ಬುರ್ಜ್ ಖಲೀಫಾದಲ್ಲಿ ವಿಕ್ರಂತ್ ರೋಣ ಸಿನಿಮಾದ ಪೋಸ್ಟರ್ ಅನ್ನು ಹಾಕಿಸಿದರು ಕೇವಲ ಅರ್ಧ ಗಂಟೆ ಪೋಸ್ಟರ್ ಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರು. ಪ್ರಚಾರ ಕಾರ್ಯಕ್ಕಾಗಿ ಒಂದು ತಿಂಗಳಿನಿಂದಲೂ ಕೂಡ ಸುತ್ತಾಡುತ್ತಿದ್ದಾರೆ ರಕ್ಕಮ್ಮ ಹಾಡಿಗೆ ಜಾಕ್ವೇಲಿಯನ್ ಅವರನ್ನು ಕರೆತಂದರು ಇದಕ್ಕೆ ಆರು ಕೋಟಿ ಹಣ ಖರ್ಚು ಮಾಡಿದ್ದಾರೆ. ಕನ್ನಡ ಸಿನಿಮಾ 3Dಯಲ್ಲಿ ಮೂಡಿ ಬರಬೇಕು ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಸಿನಿಮಾ ಪರಭಾಷೆಗಳ ಸಿನಿಮಾ ಗಿಂತಲೂ ಏನು ಕಮ್ಮಿ ಇಲ್ಲ ನಾವು ಎಲ್ಲದರ ಮುಂದಿದ್ದೇವೆ ಎಂಬುದನ್ನು ತೋರ್ಪಡಿಸಬೇಕು ಅಂತ ಅಂದುಕೊಂಡಿದ್ದರು.
ಆದರೆ ಈ ಸಿನಿಮಾ ಯಶಸ್ಸಿನ ಹಾದಿಯನ್ನು ಸಾಗುವ ವೇಳೆಗಿಂಚ ಮುಂಚೆಯೇ ಸೋಲುತ್ತಿದೆ ಒಟ್ಟಾರೆಯಾಗಿ ಹೇಳುವುದಾದರೆ ಈ ಸಿನಿಮಾ ಪೈರೈಸಿ ಮಾಡಿತು ಬೇರೆ ಯಾರು ಅಲ್ಲ ಕನ್ನಡಿಗರೇ. ಹೌದು ಯಾರೋ ಒಬ್ಬ ಥಿಯೇಟರ್ ಗೆ ಹೋಗಿ ನೂರು ರೂಪಾಯಿ ಟಿಕೆಟ್ ಕೊಟ್ಟು ಸಿನಿಮಾ ವನ್ನು ನೋಡುತ್ತಾನೆ. ಸಿನಿಮಾ ನೋಡಿ ಸುಮ್ಮನೆ ಬರುವುದಿಲ್ಲ ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಬಂದು ಅದನ್ನು ಟೆಲಿಗ್ರಾಂ ಎಂಬ ಆಪ್ ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುತ್ತಾನೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಏನೇ ಅಪ್ಲೋಡ್ ಮಾಡಿದರು ಕೂಡ ಬೇಗ ಸುದ್ದಿಯಾಗುತ್ತದೆ ಅದರಲ್ಲಿಯೂ ಕೂಡ ಸಿನಿಮಾ ಗೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಹರಿ ಬಿಟ್ಟರೆ ಅಲ್ಲಿಗೆ ಮುಗಿತು ಅಂತ.
ಈ ಒಂದು ಸಿನಿಮಾದ ವಿಡಿಯೋ ಇದೀಗ ಇಡೀ ಕರ್ನಾಟಕದಲ್ಲಿ ವೈರಲ್ ಆಗುತಿದೆ ಚಿತ್ರಮಂದಿರಕ್ಕೆ ಯಾರು ಕೂಡ ಹೋಗಿ ಸಿನಿಮಾ ನೋಡುತ್ತಿಲ್ಲ. ಬದಲಾಗಿ ಮನೆಯಲ್ಲಿ ಕುಳಿತುಕೊಂಡು ಸಿನಿಮಾ ನೋಡುತ್ತಿದ್ದಾರೆ ಕೋಟಿ ಕೋಟಿ ಬಂಡವಾಳ ಹಾಕಿದವರು ಮಾತ್ರ ತೇಪೆ ಮೋರೆ ಹಾಕಿಕೊಂಡು ಯೋಚನೆ ಮಾಡುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ನೂರಾರು ರೂಪಾಯಿ ಯಾಕೆ ಖರ್ಚು ಮಾಡಬೇಕು ಮೊಬೈಲ್ ನಲ್ಲಿ ಫ್ರೀ ಡಾಟಾ ಇದೆ ಇಲ್ಲೇ ನೋಡಿಕೊಳ್ಳೋಣ ಬಿಡು ಅಂತ ಹೇಳುತ್ತಿದ್ದಾರೆ. ಈ ರೀತಿ ಮಾಡಿದರೆ ಕನ್ನಡ ಸಿನಿಮಾ ಹೇಗೆ ಬೆಳೆಯುತ್ತದೆ ಬೇರೆ ಭಾಷೆಯ ಸಿನಿಮಾಗಳ ಮುಂದೆ ಕನ್ನಡ ಸಿನಿಮಾ ಹೇಗೆ ನಿಲ್ಲುತ್ತದೆ.? ನಿಜಕ್ಕೂ ಈ ರೀತಿ ಪೈರೆಸಿ ಮಾಡುವುದು ಸರಿನಾ ನೀವೇ ಯೋಚನೆ ಮಾಡಿ ನೋಡಿ ನಿಮ್ಮ ಪ್ರಕಾರ ಪೃರೆಸಿ ಮಾಡುವುದು ತಪ್ಪ ಅಥವಾ ಸರಿಯಾಗಿ ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಈ ಮಾಹಿತಿ ಶೇರ್ & ಲೈಕ್ ಮಾಡಿ.