ಕರ್ನಾಟಕದಲ್ಲಿರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಯಾಕೆಂದರೆ 2023ನೇ ಸಾಲಿನಲ್ಲಿ ಖಾಲಿ ಇರುವ ಕರ್ನಾಟಕ ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಕರ್ನಾಟಕ ಕಂದಾಯ ಇಲಾಖೆ ಜಾಹಿರಾತು ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಅದರ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೇರಿ 2,000ಕ್ಕೂ ಹೆಚ್ಚು ವಿಲೇಜ್ ಅಕೌಂಟೆಂಟ್ ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗೆ ಮಾನದಂಡವಾಗಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿರುವ ಕರ್ನಾಟಕದ ಎಲ್ಲ ಮಹಿಳಾ ಮತ್ತು ಪುರುಷ ಸರ್ಕಾರಿ ಉದ್ಯೋಗಿ ಆಕಾಂಕ್ಷಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಪ್ರಕಟಣೆಯಲ್ಲಿರುವ ನಿಯಮಗಳ ಅನುಸಾರವಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಕೂಡ ಹುದ್ದೆಗಳ ಕುರಿತಂತೆ ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ಜಿಲ್ಲಾವಾರು ಪಟ್ಟಿ:-
● ಬೀದರ್ – 57
● ರಾಯಚೂರು – 31
● ಕಲ್ಬುರ್ಗಿ- 134
● ಕೊಪ್ಪಳ – 31
● ಯಾದಗಿರಿ – 32
● ಬಳ್ಳಾರಿ – 33
● ವಿಜಯನಗರ – 24
● ಬೆಂಗಳೂರು ನಗರ – 48
● ಬೆಂಗಳೂರು ಗ್ರಾಮಾಂತರ – 51
● ತುಮಕೂರು – 129
● ರಾಮನಗರ – 80
● ಚಿಕ್ಕಬಳ್ಳಾಪುರ – 63
● ಚಿತ್ರದುರ್ಗ – 93
● ಕೋಲಾರ – 66
● ದಾವಣಗೆರೆ – 17
● ಶಿವಮೊಗ್ಗ – 49
● ಮೈಸೂರು – 105
● ಮಂಡ್ಯ – 116
● ಚಾಮರಾಜನಗರ – 102
● ಹಾಸನ – 85
● ಕೊಡಗು – 37
● ಚಿಕ್ಕಮಂಗಳೂರು – 32
● ದಕ್ಷಿಣ ಕನ್ನಡ – 89
● ಉಡುಪಿ – 38
● ಬೆಳಗಾವಿ – 135
● ವಿಜಯಪುರ – 22
● ಬಾಗಲಕೋಟೆ – 60
● ಧಾರವಾಡ – 31
● ಗದಗ – 44
● ಹಾವೇರಿ – 57
● ಉತ್ತರ ಕನ್ನಡ – 94
ವೇತನ ಶ್ರೇಣಿ:-
21,400 – 42,000 ಮಾಸಿಕವಾಗಿ
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಮತ್ತು ಪದವಿಯನ್ನು ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು.
● ಗರಿಷ್ಠ 32 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:-
● 2A, 2B, 3A & 3B ಅಭ್ಯರ್ಥಿಗಳಿಗೆ – 200ರೂ.
● SC & ST ಅಭ್ಯರ್ಥಿಗಳಿಗೆ – 100ರೂ.
ಅರ್ಜಿ ಸಲ್ಲಿಸುವ ವಿಧಾನ:-
●:ಮೇಲ್ಕಂಡ ಹುದ್ದೆಗಳಿಗೆ ಅಜ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಆದಾಯ.kar.nic.in ಅಥವಾ ವೆಬ್ ಸೈಟ್ ಗೆ ಭೇಟಿ ಕೊಟ್ಟು ಕರ್ನಾಟಕ ಗ್ರಾಮಲೆಕ್ಕಾಧಿಕಾರಿ 2023-24 ಅರ್ಜಿ ಫಾರಂ ಅನ್ನು ಭರ್ತಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ www.revenue.kar.nic.in ಗೆ ಭೇಟಿಕೊಟ್ಟು ಲಭ್ಯವಿರುವ ಕರ್ನಾಟಕ ಗ್ರಾಮ ಲೆಕ್ಕಿಗರ ನೇಮಕಾತಿ 2023 ಅರ್ಜಿ ಫಾರಂ ಭರ್ತಿ ಮಾಡಿ ಕೂಡ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ
ಕೇಳದಾಗುವ ದಾಖಲೆಗಳು:-
● 10ನೇ ತರಗತಿ ಅಂಕಪಟ್ಟಿ
● 12ನೇ ತರಗತಿ ಅಂಕಪಟ್ಟಿ
●ಪದವಿ ಅಂಕಪಟ್ಟಿ
●ಆಧಾರ್ ಕಾರ್ಡ್
●ಫೋಟೋ ಮತ್ತು ಸಹಿ
●ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
●ಇತರ ಮೀಸಲಾತಿ ಪ್ರಮಾಣ ಪತ್ರಗಳು.
ಪ್ರಮುಖ ಅಂಶಗಳು:-
● ಈ ಹಿಂದೆ ಅಭ್ಯರ್ಥಿಗಳನ್ನು ಅರ್ಜಿ ಸಲ್ಲಿಸಿದ್ದ ಅಕ್ಷಾಂಕ್ಷಿಗಳ ಪಟ್ಟಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆಧಾರದ ಮೇಲೆ ಆರಿಸಿಕೊಳ್ಳಲಾಗುತ್ತಿತ್ತು, ಆದರೆ ಈಗ KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ದುಕೊಡಲು ಚರ್ಚೆ ನಡೆಯುತ್ತಿದೆ.
● ಅರ್ಜಿ ಸಲ್ಲಿಕೆ ಕಾರ್ಯಕ್ರಮವು ಜೂನ್ ತಿಂಗಳಲ್ಲಿ ಆರಂಭವಾಗಲಿದೆ ಎಂದು ಇಲಾಖೆಯು ಜಾಹೀರಾತು ಪ್ರಕಟಣೆಯಲ್ಲಿ ತಿಳಿಸಿದೆ.