Sunday, May 28, 2023
HomeDevotionalಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!

ಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!

 

ಗುರುರಾಯರ ಮೇಲೆ ನಂಬಿಕೆ ಇರುವವರು ಯಾರು ಬೇಕಾದರೂ ರಾಘವೇಂದ್ರ ಶ್ರೀಗಳ ಪೂಜೆ ಮಾಡಬಹುದು. ಅವರ ದೇವಾಲಯಗಳಿಗೆ ಹೋಗಿ, ಮಠಗಳಿಗೆ ಹೋಗಿ ಅವರನ್ನು ಪ್ರಾರ್ಥನೆ ಮಾಡಬಹುದು. ಆದರೆ ಶ್ರೀ ಗುರು ರಾಘವೇಂದ್ರರ ಅನುಗ್ರಹ ಎಲ್ಲರಿಗೂ ದೊರೆಯುವುದಿಲ್ಲ. ಕೆಲವರು ತಮ್ಮ ಕನಸಿನಲ್ಲಿ ಬಂದು ಗುರುರಾಯರು ಆಶೀರ್ವಾದ ಮಾಡಿದರು, ಅವರ ದರ್ಶನ ಮಾಡಿಸಿದರು ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ.

ಆದರೆ ಎಲ್ಲರಿಗೂ ಕೂಡ ಈ ರೀತಿಯ ಒಂದು ಸೌಭಾಗ್ಯ ಇರುವುದಿಲ್ಲ. ಯಾಕೆಂದರೆ ಆಡಂಬರದಿಂದ ಪೂಜೆ ಮಾಡುವುದರ ಮೂಲಕ ಗುರುರಾಯರನ್ನು ಒಲಿಸಿಕೊಳ್ಳಲು ಆಗುವುದಿಲ್ಲ. ಹಾಗೆಯೇ ಗುರುರಾಯರ ಆಶೀರ್ವಾದ ಸಿಗಲಿ ಎನ್ನುವ ಕಾರಣಕ್ಕಾಗಿ ಪ್ರಾರ್ಥಿಸಿದರು ಕೂಡ ಆ ಮಟ್ಟದ ಪ್ರತಿಫಲ ಸಿಗುವುದಿಲ್ಲ. ಅದರ ಬದಲು ಶ್ರೀ ಗುರುರಾಯರೇ ನೆಚ್ಚಿ ನಮಗೆ ಅನುಗ್ರಹ ಮಾಡಬೇಕು ಎಂದರೆ ನೀವು ಮೂರು ನಿಯಮಗಳನ್ನು ಪಾಲಿಸಬೇಕು.

ಈ ಮೂರು ವಿಧಾನಗಳಲ್ಲಿ ನಡೆದುಕೊಂಡವರಿಗೆ ಶ್ರೀ ಗುರುರಾಯರು ರಕ್ಷೆಯಾಗಿರುತ್ತಾರೆ ಅವರ ಬೆನ್ನ ಹಿಂದೆ ಇದ್ದು ಸದಾ ಕಾವಲಾಗಿರುತ್ತಾರೆ. ಅವರ ಕಷ್ಟಗಳನ್ನು ಪರಿಹರಿಸುತ್ತಾರೆ, ಅವರ ಜೀವನದಲ್ಲಿ ಯಾವಾಗಲೂ ಸುಖ ನೆಮ್ಮದಿ ಶಾಂತಿ ತುಂಬಿರುವಂತೆ ನೋಡಿಕೊಂಡು ಅವರ ಏಳಿಗೆಯಲ್ಲಿ ಕೈಹಿಡಿದು ಮುನ್ನಡೆಸುತ್ತಾರೆ. ಈ ರೀತಿ ಗುರು ರಾಘವೇಂದ್ರರಿಗೆ ಹತ್ತಿರರಾಗಲು ಅನುಸರಿಸಬೇಕಾದ ವಿಧಾನಗಳು ಯಾವುವು ಎಂದರೆ ಮೊದಲಿಗೆ ನಮ್ಮಲ್ಲಿರುವ ದುರ್ಗುಣಗಳನ್ನು ಬಿಡಬೇಕು.

ನಾನು, ನನ್ನದೇ, ನನ್ನಿಂದಲೇ ಎಲ್ಲಾ ಎನ್ನುವ ಅಹಂಕಾರವನ್ನು ಬಿಡಬೇಕು. ಎಲ್ಲವೂ ನನಗೆ ಬೇಕು ನಾನು ಮಾತ್ರ ಚೆನ್ನಾಗಿರಬೇಕು ಎನ್ನುವ ಸ್ವಾರ್ಥವನ್ನು ಬಿಡಬೇಕು. ಇನ್ನೊಬ್ಬರನ್ನು ಕಂಡರೆ ಅಸೂಯೆ ಪಡುವುದನ್ನು ಬಿಡಬೇಕು, ಮತ್ತೊಬ್ಬರಿಗೆ ಕೆಟ್ಟದು ಮಾಡುವುದನ್ನು ಬಿಡಬೇಕು, ವಂಚನೆ ಮಾಡುವುದು, ಸುಳ್ಳು ಹೇಳುವುದು, ಇನ್ನೊಬ್ಬರ ಮನಸ್ಸನ್ನು ನೋಯಿಸುವುದು ಈ ರೀತಿಯ ಎಲ್ಲಾ ಕೆಟ್ಟ ಗುಣಗಳನ್ನು ಬಿಟ್ಟು ಸತ್ಚಾರಿತ್ರ್ಯವಾಗಿರಬೇಕು.

ಎರಡನೇ ವಿಧಾನ ಏನು ಎಂದರೆ ನೀವು ನಿಮ್ಮ ಸುತ್ತಲಿನ ಪರಿಸರದಲ್ಲಿ ಯಾರು ಕಡುಬಡವರಿದ್ದಾರೆ ಅಥವಾ ಸಂಕಷ್ಟದಲ್ಲಿ ಇದ್ದಾರೆ ಅವರ ಸಮಸ್ಯೆಗಳಿಗೆ ಹೆಗಲಾಗಬೇಕು. ನಿಮ್ಮ ಕೈಯನುಸಾರ ಅಥವಾ ಅವರ ಪರಿಸ್ಥಿತಿಗೆ ನಿಮ್ಮಿಂದ ಏನು ಸಹಾಯ ಮಾಡಬಹುದು ಅದನ್ನು ನಿಸ್ವಾರ್ಥ ಗುಣದಿಂದ ಮಾಡಬೇಕು. ಯಾವುದೇ ಕಾರಣಕ್ಕೂ ಈ ರೀತಿ ಮಾಡುವುದರಿಂದ ರಾಯರು ನಮಗೆ ಅನುಗ್ರಹಿಸುತ್ತಾರೆ ಎನ್ನುವ ಆಲೋಚನೆಯಿಂದ ಈ ಕೆಲಸವನ್ನು ಮಾಡಬಾರದು.

ನೀವೇ ಸ್ವ ಇಚ್ಛೆಯಿಂದ ಅವರ ಕಷ್ಟಗಳನ್ನು ಪರಿಹಾರ ಮಾಡುವಲ್ಲಿ ಪ್ರಯತ್ನ ಪಟ್ಟರೆ ಆಗಲು ಸಹ ರಾಯರು ನಿಮ್ಮನ್ನು ಮೆಚ್ಚುತ್ತಾರೆ. ಅದರಲ್ಲೂ ಹಸಿವಿನಿಂದ ಒದ್ದಾಡುತ್ತಿರುವವರಿಗೆ ಆಹಾರ ನೀಡಿದರೆ ಗುರುರಾಯರು ಹೆಚ್ಚು ತೃಪ್ತರಾಗಿ ನಿಮಗೆ ಆಶೀರ್ವದಿಸುತ್ತಾರೆ. ಇದರೊಂದಿಗೆ ನೀವು ಪಾಲಿಸಬೇಕಾದ ಮೂರನೇ ವಿಧಾನ ಈ ರೀತಿ ಇದೆ.

ನೀವು ನಿಮಗಿಂತ ಕಿರಿಯರೇ ಆಗಿರಲಿ ಹಿರಿಯರೇ ಆಗಿರಲಿ ಎಲ್ಲರ ಜೊತೆಗೂ ಕೂಡ ನಗುನಗುತ್ತಾ ಇರಬೇಕು. ಯಾರ ಮೇಲೂ ದರ್ಪ ತೋರಿಸಬಾರದು. ಸದಾ ಹಸನ್ಮುಖರಾಗಿ ಮನಸ್ಸಿನಿಂದ ಎಲ್ಲರ ಮೇಲು ದಯೆ ಪ್ರೀತಿ ಅನುಕಂಪದಿಂದ ನಡೆದುಕೊಂಡರೆ ಆಗಲು ಸಹ ಗುರು ರಾಘವೇಂದ್ರರು ನಿಮ್ಮನ್ನು ಪೋಷಿಸುತ್ತಾರೆ. ಸಕಲ ಜೀವರಾಶಿಗಳ ಮೇಲು ಕೂಡ ಕರುಣೆ ಹೊಂದಿದ್ದರೆ ಅಂತವರು ಸಹ ರಾಯರ ಕೃಪೆಗೆ ಪಾತ್ರರಾಗುತ್ತಾರೆ. ಈ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡು ಪ್ರತಿ ಗುರುವಾರ ರಾಯರ ಮಠಕ್ಕೆ ಹೋಗಿ ರಾಯರ ದರ್ಶನ ಪಡೆಯಿರಿ. ನೀವು ಯಾವುದೇ ಕಾರ್ಯ ಮಾಡಿದರು ಕೂಡ ಗುರುರಾಯರು ನಿಮ್ಮ ಜೊತೆಗೆ ಇದ್ದು ಆಶೀರ್ವದಿಸುತ್ತಾನೆ.