ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸಿಂಗ್ ಕಿಂಗ್ ಎಂದು ಫೇಮಸ್ ಆದ ಮೊದಲ ನಟ ವಿನೋದ್ ರಾಜ್. ಅವರು ಮೈಕಲ್ ಜಾಕ್ಸನ್ ಕೂಡ ನ್ಯಾಚುವಂತೆ ಹೆಜ್ಜೆ ಹಾಕುತ್ತಿದ್ದ ಇವರು ನೃತ್ಯವನ್ನು ಕನ್ನಡಿಗರು ಬಹಳ ಮೆಚ್ಚಿದ್ದರು. ನೃತ್ಯದ ಜೊತೆಗೆ ಅಭಿನಯವನ್ನು ಕೂಡ ಕರಗತ ಮಾಡಿಕೊಂಡಿದ್ದ ಇವರು 90ರ ದಶಕದಲ್ಲಿ ಮಹಾಭಾರತ, ಡ್ಯಾನ್ಸ್ ರಾಜ ಡ್ಯಾನ್ಸ್ ಮುಂತಾದ ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಹೀರೋ ಆಗಿ ಕೂಡ ಒಳ್ಳೆ ಹೆಸರು ಮಾಡುತ್ತಿದ್ದ ವಿನೋದ್ ರಾಜ್ ಅವರು ಇದ್ದಕ್ಕಿದ್ದಂತೆ ಸಿನಿಮಾ ರಂಗದಿಂದ ದೂರ ಉಳಿದರು.
ಇದಕ್ಕೆ ಯಾವುದೇ ಕಾರಣವೂ ಇದುವರೆಗೂ ರೀವಿಲ್ ಆಗದೆ ಇರುವ ಕಾರಣ ಅವಕಾಶಗಳ ಕೊರತೆಯಿಂದ ಇವರು ಅಭಿನಯಿಸುತ್ತಿಲ್ಲ ಎಂದೇ ಎಲ್ಲರೂ ತಿಳಿದುಕೊಂಡಿದ್ದಾರೆ. ಇವರ ತಾಯಿ ಲೀಲಾವತಿ ಅವರು ಕೂಡ ಕನ್ನಡದ ಫೇಮಸ್ ಹಿರಿಯ ಕಲಾವಿದೆ ನಾಯಕಿಯಾಗಿ, ತಾಯಿಯ ಪಾತ್ರಧಾರಿ ಆಗಿ, ಖಳನಾಯಕಿಯಾಗಿ ಹಲವು ದಶಕಗಳವರೆಗೆ ಕನ್ನಡ ಸಿನಿಮಾ ಲೋಕವನ್ನು ಆಳಿದ ಇವರು ನೂರಾರು ಸಿನಿಮಾಗಳಲ್ಲಿ ಲೀಡ್ ರೋಲ್ ಅಲ್ಲಿ ಅಭಿನಯಿಸಿದ್ದಾರೆ. ವಯಸ್ಸಾದ ಬಳಿಕ ಇವರು ಕೂಡ ಸಿನಿಮಾ ಇಂಡಸ್ಟ್ರಿ ಯಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ಬಳಿಕ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ತಾಯಿ ಮಗ ಅದರಲ್ಲೇ ಜೀವನ ಕಂಡುಕೊಳ್ಳುವ ನಿರ್ಧಾರ ಮಾಡಿದರು.
ಲೀಲಾವತಿ ಅವರು ಚೆನ್ನೈ ಅಲ್ಲಿ ಕೂಡ ಸ್ವಲ್ಪ ಜಮೀನು ಖರೀದಿಸಿದ್ದರು ಮತ್ತು ಬೆಂಗಳೂರಿನ ಸೋಲದೇವನ ಹಳ್ಳಿ ಬಳಿ ಕೃಷಿ ಭೂಮಿ ಖರೀದಿಸಿ ಅದನ್ನೇ ತೋಟವಾಗಿ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಚೆನ್ನೈ ಅಲ್ಲಿ ಇದ್ದ ಜಮೀನನ್ನು ಮಾರಿ ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇವರ ಸೇವಾ ಮನೋಭಾವವನ್ನು ಇಡೀ ಕರ್ನಾಟಕ ಕೊಂಡಾಡಿದೆ.
ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿರುವ ಇವರು ವಿನೋದ್ ರಾಜ್ ಅವರ ಆರೈಕೆಯಲ್ಲಿ ಇದ್ದಾರೆ. ಬಸವರಾಜ ಬೊಮ್ಮಾಯಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ ಸಮಯದಲ್ಲಿ ಲೀಲಾವತಿ ಅವರು ಕೂಡ ಬಂದು ಭಾಗಿಯಾಗಿದ್ದರು. ಇಷ್ಟೆಲ್ಲಾ ಹೆಸರು ಮಾಡಿರುವ ವಿನೋದ್ ರಾಜ್ ಅವರು ಅವರ ಟ್ಯಾಲೆಂಟ್ ಗೆ ತಕ್ಕ ಅವಕಾಶಗಳನ್ನು ಪಡೆದಿದ್ದರೆ ಇಂದಿಗೂ ಬಹಳ ಬಿಝಿ ಇರುವ ನಟ ಆಗಿರುತ್ತಿದ್ದರು. ಇವರು ಇಂಡಸ್ಟ್ರಿಯಿಂದ ದೂರ ಇದ್ದರೂ ಕೂಡ ಇವರು ನೆಮ್ಮದಿಯಾಗಿ ಇಡಲು ಕಾಣದ ಕೈಗಳು ಬಿಡುತ್ತಿಲ್ಲ.
ಇವರಿಗೆ ಎರಡು ಬಾರಿ ಕಾರ್ ಅಟ್ಯಾಕ್ ನಡೆಸಿದ್ದಾರೆ ಮತ್ತು ಒಂದು ಬಾರಿ ಸೋಲದೇವನಹಳ್ಳಿಯ ತೋಟಕ್ಕೆ ಬೆಂಕಿ ಹಾಕಿ ತೊಂದರೆ ಕೊಟ್ಟಿದ್ದಾರೆ. ಇವರನ್ನು ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಜಡ್ಜ್ ಆಗಿ ಕರೆಸಿ ಎಂದು ಜನಗಳಿಂದ ಕೋರಿಕೆಗಳು ಕೇಳಿ ಬರುತ್ತಿದ್ದೆ ಇದಕ್ಕಾಗಿ ಚಾನೆಲ್ ಒಂದು ಅವರನ್ನು ಅಪ್ರೋಚ್ ಮಾಡಿದಾಗ ನನ್ನ ಬದುಕಿಗಾಗಿ ಕೃಷಿ ಇದೆ ನನಗೆ ಅಷ್ಟೇ ಸಾಕು ಎಂದು ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಎನ್ನುತ್ತಿದ್ದಾರೆ ಮತ್ತು ಈಗಾಗಲೇ ಅವರ ಮೇಲೆ ಅಟ್ಯಾಕ್ ಗಳು ಮತ್ತು ಅವರಿಗೆ ತೊಂದರೆ ಕೊಡುವ ಕೆಲಸ ನಡೆದಿರುವುದರಿಂದ ಚಾನೆಲ್ ಹಾಗೂ ಕಾರ್ಯಕ್ರಮಕ್ಕೂ ತೊಂದರೆ ಆಗಬಹುದು ಎನ್ನುವ ಭಯದಿಂದ ಚಾನಲ್ಗಳು ಅವರಿಗೆ ಆಫರ್ ನೀಡುತ್ತಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಅದೇನೆ ಆಗಿದ್ದರೂ ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾವಂತ ನಟನಿಗೆ ಅನ್ಯಾಯ ಆಯ್ತು ಎಂದು ಅನಿಸುವುದಂತು ಸುಳ್ಳಲ್ಲ. ಈ ವಿಚರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.