ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ದಶಕಗಳಿಂದಲೂ ಕೂಡ ಲೀಲಾವತಿ ಮತ್ತು ವರನಟ ಡಾಕ್ಟರ್ ರಾಜಕುಮಾರ್ ಅವರ ನಡುವೆ ಸಂಬಂಧವಿದೆ ಎಂಬ ವಿಚಾರ ಚರ್ಚೆಯಾಗುತ್ತಿರುವುದರ ಬಗ್ಗೆ ತಿಳಿದೆ ಇದೆ. ಈ ವಿಚಾರದ ಬಗ್ಗೆ ರಾಜಕುಮಾರ್ ಆಗಲಿ ಪಾರ್ವತಮ್ಮನಾಗಲಿ ಅಥವಾ ಲೀಲಾವತಿಯಾಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ನಮ್ಮ ಸಂಬಂಧ ಈ ರೀತಿ ಇದೆ ಎಂದು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಹಾಗೂ ಲೀಲಾವತಿಯವರು ಒಬ್ಬರು ಇನ್ನೊಬ್ಬರು ಇಷ್ಟ ಪಡುತ್ತಿದ್ದರು ಇವರಿಬ್ಬರ ಮಗನೇ ವಿನೋದ್ ರಾಜ್ ಎಂದು ಹೇಳುತ್ತಾರೆ. ಇದಕ್ಕೆ ಪೂರಕವಾಗುವಂತೆ ರವಿ ಬೆಳಗೆರೆ ಅವರು ರಾಜ್ ವಿನೋದ್ ಲೀಲಾ ಎಂಬ ಪುಸ್ತಕವನ್ನು ಕೂಡ ಬರೆದು ಅದನ್ನು ಪ್ರಕಟಣೆ ಮಾಡಿದರು. ಈ ಒಂದು ಪುಸ್ತಕ ಓದಿದ ನಂತರ ರಾಜಕುಮಾರ್ ಅವರ ಮಗನೇ ವಿನೋದ್ ರಾಜ್ ಎಂದು ಹೇಳುತ್ತಿದ್ದರು ಇದು ಒಂದು ಕಡೆಯಾದರೆ.
ಮತ್ತೊಂದು ಕಡೆ ಡಾಕ್ಟರ್ ರಾಜಕುಮಾರ್ ಹಾಗೂ ಲೀಲಾವತಿಯವರಿಗೆ ಯಾವುದೇ ಸಂಬಂಧವಿಲ್ಲ ಲೀಲಾವತಿಯವರು ನಾಟಕ ಕಂಪನಿಯ ಓನರ್ ಆದಂತಹ ಮಹಾಲಿಂಗ ಭಾಗವತ್ ಅವರನ್ನು ಮದುವೆಯಾಗಿದ್ದರು ಈ ದಂಪತಿಗಳಿಗೆ ಹುಟ್ಟಿದ ಮಗನೇ ವಿನೋದ್ ಎಂದು ಹೇಳುತ್ತಾರೆ. ಇನ್ನು ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರು ಯಾಕೆ ಸೇರ್ಪಡೆಯಾಯಿತು ಎಂಬ ಇತಿಹಾಸವನ್ನು ನೋಡುವುದಾದರೆ. ವಿನೋದ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಬೇಕಾದ ಅನಿವಾರ್ಯ ಎದುರಾಗುತ್ತದೆ ಈ ಸಮಯದಲ್ಲಿ ದ್ವಾರಕೀಶ್ ಅವರು ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಇಡುತ್ತಾರೆ. ತದನಂತರ ವಿನೋದ್ ಎಂಬ ಹೆಸರು ವಿನೋದ್ ರಾಜ್ ಎಂದು ಬದಲಾಗುತ್ತದೆ ಡಾನ್ಸ್ ರಾಜ ಡಾನ್ಸ್ ಎಂಬ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಾರೆ.
ವಿನೋದ್ ಹೆಸರಿನ ಪಕ್ಕ ರಾಜ್ ಎಂಬ ಹೆಸರು ಬಂದ ಕಾರಣ ಎಲ್ಲರೂ ಕೂಡ ಡಾಕ್ಟರ್ ರಾಜಕುಮಾರ್ ಅವರ ಮಗನೇ ವಿನೋದ್ ಈ ಕಾರಣಕ್ಕಾಗಿ ರಾಜ್ ಎಂಬ ಹೆಸರನ್ನು ಸೇರಿಸಿದ್ದಾರೆ ಎಂಬ ಮಾತುಗಳನ್ನು ಆಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಜ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಚರ್ಚೆ ಕೊನೆಯವರೆಗೂ ಮುಗಿಯುವುದೇ ಇಲ್ಲ. ಆದರೆ ಚಿತ್ರರಂಗದ ಹಿರಿಯರು ಹಾಗೂ ಕೆಲವು ಆಪ್ತರು ಹೇಳುವ ಪ್ರಕಾರ ಲೀಲಾವತಿ ಹಾಗೂ ಡಾಕ್ಟರ್ ರಾಜಕುಮಾರ್ ನಡುವೆ ಸ್ನೇಹ ಸಂಬಂಧವಿತ್ತು ಅಷ್ಟೇ ಅದನ್ನು ಹೊರತು ಪಡಿಸಿದರೆ ಬೇರೆ ಯಾವ ಸಂಬಂಧವೂ ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಬಹಳಷ್ಟು ಚರ್ಚೆ ಹಾಗೂ ತೀವ್ರ ವಿರೋಧಗಳು ಉಂಟಾದವು ಈ ಸಮಯದಲ್ಲಿ ಪಾರ್ವತಮ್ಮನವರು ಒಂದು ನಿಲುವನ್ನು ತೆಗೆದುಕೊಳ್ಳುತ್ತಾರೆ.
ಹೌದು ಅದೇನಂದರೆ ಪಾರ್ವತಮ್ಮದವರು ಬಹಿರಂಗವಾಗಿ ಲೀಲಾವತಿಯವರನ್ನು ಮನೆಗೆ ಕರೆಸಿ, ನೀವು ಪ್ರಚಾರ ಮಾಡುತ್ತಿರುವ ಈ ವಿಚಾರ ನಿಜವೇ ಆದರೆ ನೀವು ನಿಸ್ಸಂಕೋಚವಾಗಿ ಡಾಕ್ಟರ್ ರಾಜಕುಮಾರ್ ಅವರ ಜೊತೆ ಬದುಕಬಹುದು ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುತ್ತಾರಂತೆ. ಈ ಮಾತನ್ನು ಕೇಳುತ್ತಿದ್ದ ಹಾಗೆ ಲೀಲಾವತಿ ಅವರು ನನ್ನನ್ನು ಕ್ಷಮಿಸಿ ಇದು ನನ್ನಿಂದ ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಟು ಹೋಗುತ್ತಾರಂತೆ. ನಿಜಕ್ಕೂ ಪಾರ್ವತಮ್ಮನವರ ಈ ಧೈರ್ಯವನ್ನು ಹಾಗೂ ಅವರು ಲೀಲಾವತಿ ಅವರ ಬಗ್ಗೆ ಇಟ್ಟು ಕೊಂಡಿರುವಂತಹ ಗೌರವವನ್ನು ಮೆಚ್ಚಿಕೊಳ್ಳಲೇಬೇಕು. ಏಕೆಂದರೆ ಅಂದಿನ ಕಾಲದಲ್ಲಿ ಪಾರ್ವತಮ್ಮ ಅಂದರೆ ಚಿತ್ರರಂಗದಲ್ಲಿ ಒಂದು ಹೆಸರಿತ್ತು ಗತ್ತು ಇತ್ತು ಆಕೆ ಏನು ಬೇಕಾದರೂ ಮಾಡಬಹುದಾಗಿತ್ತು ಆದರೆ ಹೆಂಗರಳು ಲೀಲಾವತಿಗೆ ಹಾಗೂ ಅವರ ಮಗ ವಿನೋದ್ ಗೆ ಯಾವುದೇ ರೀತಿಯಾದಂತಹ ತೊಂದರೆ ಮಾಡಲಿಲ್ಲ.
ಮತ್ತೊಂದು ವಿಚಾರ ಏನೆಂದರೆ 1978ರಲ್ಲಿ ಭಕ್ತ ಕುಂಬಾರ ಎಂಬ ಸಿನಿಮಾ ಪ್ರಾರಂಭವಾಗುತ್ತದೆ ಈ ಸಮಯದಲ್ಲಿ ಪಾರ್ವತಮ್ಮನವರು ರಾಜಕುಮಾರ್ ಅವರ ಹೆಂಡತಿಯ ಪಾತ್ರವನ್ನು ಲೀಲಾವತಿಯವರೆ ಮಾಡಬೇಕು ಎಂದು ಪಟ್ಟು ಹಿಡಿದುಕೊಳ್ಳುತ್ತಾರೆ. ಈ ಸಮಯದಲ್ಲಿ ಕೆಲವೊಂದು ನಿರ್ಮಾಪಕರು ಮತ್ತು ನಿರ್ದೇಶಕರು ಬೇಡ ಇದರಿಂದ ರಾಜಕುಮಾರ ಅವರ ಹೆಸರಿಗೆ ಮತ್ತೆ ಚ್ಯೂತಿ ಬಂದಂತೆ ಆಗುತ್ತದೆ ಎಂಬ ಮಾತನ್ನು ಹೇಳುತ್ತಾರಂತೆ. ಆದರೂ ಕೂಡ ಪಾರ್ವತಮ್ಮನವರು ಇದು ಸಿನಿಮಾರಂಗಕ್ಕೆ ಸೇರ್ಪಡೆಯಾದಂತಹ ವಿಚಾರ ವೈಯಕ್ತಿಕ ವಿಚಾರಗಳನ್ನು ಇಲ್ಲಿ ಎಳೆಯಬೇಡಿ ನಾನು ಕಲೆಗೆ ಮಾತ್ರ ಬೆಲೆಯನ್ನು ನೀಡುತ್ತೇನೆ ಎಂದು ಹಠ ಹಿಡಿದು ಲೀಲಾವತಿಯವರೆ ಈ ಪಾತ್ರವನ್ನು ಮಾಡಬೇಕು ಅಂತ ಹೇಳಿದರಂತೆ. ಈ ವಿಚಾರವನ್ನು ಸಂದರ್ಶನ ಗಾರರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ ಆ ವಿಡಿಯೋ ಕೆಳಗೆದೆ ಇದನ್ನು ನೋಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.