Home Entertainment ಸೃಜನ್ ಲೋಕೇಶ್ ಕಂಡ್ರೆ ನನ್ಗೆ ಆಗ್ತಿರಲಿಲ್ಲ ಅವನೊಬ್ಬ ದುರಹಂಕಾರಿ ಎಂಬ ಶಾ-ಕಿಂ-ಗ್ ವಿಚಾರ ಹೊರ ಹಾಕಿದ ಶ್ವೇತಾ ಚಂಗಪ್ಪ ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದದ್ದೇನು ನೋಡಿ.!

ಸೃಜನ್ ಲೋಕೇಶ್ ಕಂಡ್ರೆ ನನ್ಗೆ ಆಗ್ತಿರಲಿಲ್ಲ ಅವನೊಬ್ಬ ದುರಹಂಕಾರಿ ಎಂಬ ಶಾ-ಕಿಂ-ಗ್ ವಿಚಾರ ಹೊರ ಹಾಕಿದ ಶ್ವೇತಾ ಚಂಗಪ್ಪ ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದದ್ದೇನು ನೋಡಿ.!

0
ಸೃಜನ್ ಲೋಕೇಶ್ ಕಂಡ್ರೆ ನನ್ಗೆ ಆಗ್ತಿರಲಿಲ್ಲ ಅವನೊಬ್ಬ ದುರಹಂಕಾರಿ ಎಂಬ ಶಾ-ಕಿಂ-ಗ್ ವಿಚಾರ ಹೊರ ಹಾಕಿದ ಶ್ವೇತಾ ಚಂಗಪ್ಪ ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದದ್ದೇನು ನೋಡಿ.!

ಶ್ವೇತಾ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅಮೋಘ ಅಭಿನಯದಿಂದಲೇ ಎಲ್ಲರ ಗಮನವನ್ನು ಸೆಳೆತಿದ್ದಾರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಸುಮತಿ ಎಂಬ ಧಾರವಾಹಿಯಲ್ಲಿ ಮೊಟ್ಟಮೊದಲ ಬಾರಿಗೆ ನಟನೆ ಮಾಡುವುದರ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದರು‌. ಈ ಧಾರಾವಾಹಿ ಇವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದು ಕೊಟ್ಟಿದ್ದು ತದನಂತರ 2006ರಲ್ಲಿ ತೆರೆಕಂಡಂತಹ ಕಾದಂಬರಿ ಎಂಬ ಧಾರವಾಹಿಯಲ್ಲಿ ನಾಯಕನಟಿಯಾಗಿ ಮುಖ್ಯ ಪಾತ್ರದಲ್ಲಿ ನಟಿಸಲು ಪ್ರಾರಂಭಿಸಿದರು. ಇಲ್ಲಿಂದ ಇವರ ಜೀವನಕ್ಕೆ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕಿತು ಅಂತ ಹೇಳಬಹುದು ಈ ಒಂದು ಧಾರಾವಾಹಿಯ ಮೂಲಕ ಅಪಾರ ಕೀರ್ತಿ ಹೆಸರು ಜನ ಹಾಗೂ ಹಣ ಎಲ್ಲವನ್ನು ಕೂಡ ಸಂಪಾದನೆ ಮಾಡಿದರು.

ತದನಂತರ ಇವರು ಸಿನಿಮಾದಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ ದರ್ಶನ್ ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಹಲವು ದಿಗ್ಗಜರ ನಟ ತೆರೆಯನ್ನು ಹಂಚಿಕೊಂಡಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ನಿರೂಪಕಿಯಾಗಿಯೂ ಕೂಡ ಶ್ವೇತಾ ಚಂಗಪ್ಪ ಅವರು ಕಾಣಿಸಿಕೊಂಡಿದ್ದಾರೆ ಹೌದು, ಯಾರಿಗುಂಟು ಯಾರಿಗಿಲ್ಲ, ರಾಜಾ ರಾಣಿ, ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಶ್ವೇತಾ ಚಂಗಪ್ಪ ಅವರು ಬಿಗ್ ಬಾಸ್ ಸೀಸನ್ ಎರಡರಲ್ಲಿಯೂ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡರು ಇಲ್ಲಿಂದ ಹೊರ ಬಂದ ನಂತರ ಇವರಿಗೆ ಹೆಚ್ಚು ಸಿನಿಮಾ ಮತ್ತು ಸೀರಿಯಲ್ ನಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಇನ್ನು ಶ್ವೇತ ಚೆನ್ನಪ್ಪ ಅವರು ಹೊಸದೊಂದು ಚಾಪನ್ನು ಮೂಡಿಸಿದಂತಹ ಕಾರ್ಯಕ್ರಮ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಜಾ ಟಾಕೀಸ್ ಅಂತಾನೇ ಹೇಳಬಹುದು.

ಇಷ್ಟು ದಿನಗಳ ಕಾಲ ಶ್ವೇತಾ ಚಂಗಪ್ಪ ಅವರು ನಡೆದುಕೊಳ್ಳುತ್ತಿದ್ದಂತಹ ರೀತಿಗೂ ಮಜಾ ಟಾಕೀಸ್ ನಲ್ಲಿ ನಟನೆ ಮಾಡುತ್ತಿದ್ದಂತ ರೀತಿಗೂ ತದ್ವಿರುತವಾಗಿತ್ತು. ಸದಾ ಕಾಲ ಸಂಸಾರಿಕ ಮತ್ತು ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ ಶ್ವೇತ ಚಂಗಪ್ಪ ಅವರು ಇದ್ದಕ್ಕಿದ್ದ ಕಾಮಿಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರಿಂದ ಇವರಿಗೆ ಕೆಲವು ನೆಗೆಟಿವ್ ಕಮೆಂಟ್ಸ್ ಕೂಡ ಬರುತ್ತದೆ ಈ ಕಾರ್ಯಕ್ರಮ ನಿಮಗೆ ಸೂಕ್ತವಲ್ಲ ಇಲ್ಲಿಂದ ಹೊರ ನಡೆಯಿರಿ ಎಂಬ ಮಾತುಗಳನ್ನು ಕೂಡ ಕೇಳಿಸಿಕೊಳ್ಳುತ್ತಾರೆ. ಆದರೆ ಇವೆಲ್ಲವನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ನಾನು ಎಲ್ಲಾ ರೀತಿಯಾದಂತಹ ಅಭಿನಯವನ್ನು ಮಾಡಿ ತೋರಿಸಬಲ್ಲೆ ಎಂಬುದನ್ನು ಸಾಬೀತುಪಡಿಸುತ್ತಾರೆ ಇದಿಷ್ಟು ಇವರ ಸಿನಿಮಾ ಮತ್ತು ಕಿರುತೆರೆ ಲೋಕಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿದೆ.

ಇನ್ನು ಶ್ವೇತ ಚೆಂಗಪ್ಪ ಅವರು ಇತ್ತೀಚಿಗಷ್ಟೇ ಪಾಲ್ಗೊಂಡಿದ್ದಂತಹ ಸಂದರ್ಶನ ಒಂದರಲ್ಲಿ ಸೃಜನ್ ಲೋಕೇಶ್ ಅವರ ಬಗ್ಗೆ ಶಾ-ಕಿಂ-ಗ್ ಹೇಳಿಕೆ ಒಂದನ್ನು ನೀಡಿದ್ದಾರೆ. ಹೌದು ಸೃಜನ್ ಲೋಕೇಶ್ ಅವರ ಬಗ್ಗೆ ಮೊದಲು ಶ್ವೇತಾ ಚಂಗಪ್ಪ ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರಂತೆ. ಅವನೊಬ್ಬ ದುರಹಂಕಾರಿ ಅಂತ ತಿಳಿದುಕೊಂಡಿದ್ದರಂತೆ ಆದರೆ ಸೃಜನ್ ಲೋಕೇಶ್ ಅವರು ಅಂತ ವ್ಯಕ್ತಿತ್ವವನ್ನು ಒಳಗೊಂಡಿರುವಂತಹ ವ್ಯಕ್ತಿ ಅಲ್ಲ ಎಂಬುದು ಇವರಿಗೆ ತಡವಾಗಿ ಅರ್ಥವಾಗುತ್ತದೆ. ವಿಶೇಷ ಏನೆಂದರೆ ಶ್ವೇತ ಚೆಂಗಪ್ಪ ಅವರ ಸ್ನೇಹಿತೆ ಗ್ರೀಷ್ಮ ಅವರ ಪತಿ ಸೃಜನ್ ಲೋಕೇಶ್ ಎಂಬ ವಿಚಾರವನ್ನು ತಿಳಿದ ನಂತರವಷ್ಟೇ ಅವರ ಮೇಲೆ ಇದ್ದಂತಹ ಭಾವನೆ ಬದಲಾಗುತ್ತದೆ. ಈ ವಿಚಾರವನ್ನು ಸ್ವತಃ ಶ್ವೇತ ಚಂಗಪ್ಪ ಅವರ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

LEAVE A REPLY

Please enter your comment!
Please enter your name here