ನಿರ್ದೇಶಕ ಹಾಗೂ ಬರಹಗಾರ ಪ್ರಕಾಶ್ ಮೇಹು ಅವರು ಅಣ್ಣಾವ್ರ ಕುಟುಂಬಕ್ಕೆ ಭಾರೀ ಆತ್ಮೀಯರು. ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯೂ ಕೂಡ ಆಗಿರುವ ಇವರು ಅಣ್ಣಾವ್ರ ಬಗ್ಗೆ ಅಂತರಂಗದಲ್ಲಿ ಅಣ್ಣ ಎನ್ನುವ ಪುಸ್ತಕವನ್ನು ಬರೆದು ಅಣ್ಣಾವ್ರ ಜೀವದಲ್ಲಿ ಕಪ್ಪು ಚುಕ್ಕೆ ಹಾಕಿದ್ದ ಲೀಲಾವತಿ ಹಾಗೂ ವಿನೋದ್ ರಾಜಕುಮಾರ್ ಅವರೊಂದಿಗೆ. ಅಣ್ಣಾವ್ರಿಗೆ ಇರುವ ಸಂಬಂಧದ ಗಾಸಿಪ್ ಬಗ್ಗೆ ಅಣ್ಣಾವ್ರು ಹೇಳಿದ ಸತ್ಯಾಂಶವನ್ನು ಬರೆದಿದ್ದರು.
ಲೀಲಾವತಿ ಅವರ ಗಂಡ ಮಹಾಲಿಂಗ ಭಾಗವತರ್ ಮತ್ತು ವಿನೋದ್ ರಾಜಕುಮಾರ್ ಅವರು ಡಾ. ರಾಜಕುಮಾರ್ ಅವರ ಮಗ ಅಲ್ಲ ಎಂದು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದ ಇವರು ಈಗ ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ. ಜೊತೆಗೆ ವಿನೋದ್ ರಾಜಕುಮಾರ್ ಅವರು ಸಹ ಮದುವೆ ಆಗಿರುವ ವಿಷಯದ ಬಗ್ಗೆ ಅವರ ಪತ್ನಿ ಹಾಗೂ ಪುತ್ರನ ಫೋಟೋ ರಿವಿಲ್ ಮಾಡುವುದರ ಜೊತೆಗೆ ಹಂಚಿಕೊಂಡಿದ್ದಾರೆ.
ತಮ್ಮ ಫೇಸ್‌ಬುಕ್ ಪೇಜ್ ಅಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿರುವ ಅವರು ಸುದೀರ್ಘವಾದ ಬರಹವನ್ನು ಬರೆದಿದ್ದಾರೆ. ನಾನು ಎಷ್ಟೋ ದಿನಗಳಿಂದ ಹೇಳುತ್ತಲೇ ಇದ್ದೆ, ಆದರೆ ಯಾರು ನಂಬುತ್ತಿರಲಿಲ್ಲ ಅದಕ್ಕೆ ಈ ಬಾರಿ ಸಾಕ್ಷಿ ಸಮೇತ ತಂದಿದ್ದೇನೆ. ಈ ವಿಷಯ ನನಗೆ ಗೊತ್ತಾಗಿ ಆರು ತಿಂಗಳ ಮೇಲಾಯಿತು ಆದರೆ ಆಗಲೇ ಹೇಳಿದರೆ ಯಾರು ನಂಬುತ್ತಿರಲಿಲ್ಲ, ಅನೇಕರು ಯಾರೋ ಅಭಿಮಾನಿಗಳು ಇರಬೇಕು ಎಂದು ಮುಚ್ಚಿ ಬಿಡುತ್ತಿದ್ದರು.
ಇದೇ ಕಾರಣಕ್ಕಾಗಿ ಸಾಕ್ಷಿ ಬೇಕು ಎಂದು ಇಷ್ಟು ದಿನ ಕಾಯುತ್ತಿದ್ದೆ. ಈಗ ನನ್ನ ಸ್ನೇಹಿತರು ಏಪ್ರಿಲ್ 7ರಂದು ನನಗೆ ವಿನೋದ್ ರಾಜ್ ಮಗನ ಮಾರ್ಕ್ಸ್ ಕಾರ್ಡ್ ಮತ್ತು ಲೀಲಾವತಿ ಅವರ ಚೆನ್ನೈನ ಆಸ್ತಿಯ ಮಾಹಿತಿ ಬಗ್ಗೆ ಕಳುಹಿಸಿಕೊಟ್ಟರು. ಆದಕಾರಣ ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯಾಗಿ ಅವರ ಮೇಲಿರುವ ಆರೋಪ ಸುಳ್ಳು ಎಂದು ನಿರೂಪಿಸುವ ಸಲುವಾಗಿ ನಾನು ಈ ಕೆಲಸ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಮೊದಲಿಗೆ ಲೀಲಾವತಿ ಅವರು ಮಹಾಲಿಂಗ ಭಾಗವತ ಅವರ ಪತ್ನಿ ಇದಕ್ಕೆ ಸಾಕ್ಷಿ ಚೆನೈನಲ್ಲಿರುವ ಅವರ ಆಸ್ತಿಯ ವಿವರ. ಚೆನ್ನೈಯಲ್ಲಿರುವ ಅವರ ಆಸ್ತಿಯಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾರ್ ಎಂದರೆ ಲೀಲಾವತಿ ಅಮ್ಮ ಎಂಬುದಾಗಿ ಇದೆ. ಜೊತೆಗೆ ಅಣ್ಣಾವ್ರು ಸಹ ಹಿಂದೆ ನನ್ನೊಂದಿಗೆ ಹೇಳಿಕೊಂಡಿದ್ದರು ಲೀಲಾವತಿ ಅವರಿಗೆ ಮದುವೆ ಆಗಿ ಮಗ ಇದ್ದಾನೆ ಅವರನ್ನು ಚೆನೈ ನಲ್ಲಿ ಇಟ್ಟಿದ್ದಾರೆ ಎಂದು. ಇದಕ್ಕೆ ಈ ಆಸ್ತಿಯ ವಿವರದ ಫೋಟೋ ಸಾಕ್ಷಿಯಾಗಿದೆ.
ಇನ್ನು ವಿನೋದ್ ರಾಜ್ ಅವರು ಮದುವೆಯಾಗದೆ ತಮ್ಮ ತಾಯಿಯ ಸೇವೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ಅವರ ಹಂಚಿಕೊಂಡಿರುವ ಮತ್ತೊಂದು ಫೋಟೋದಲ್ಲಿ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಜೊತೆ ಒಬ್ಬ ಹುಡುಗ ಮತ್ತು ಒಬ್ಬ ಮಹಿಳೆ ಇದ್ದಾರೆ, ಪ್ರಕಾಶ್ ರಾಜ್ ಮೆಹು ಇದು ವಿನೋದ್ ರಾಜ್ ಅವರ ಕುಟುಂಬದ ಫೋಟೋ ಎಂದಿದ್ದಾರೆ.
ಫೋಟೋದಲ್ಲಿರುವ ಹುಡುಗನ ಹೆಸರು ಯುವರಾಜ್ ಇವರು ಚೆನೈ ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಇವರು ವಿನೋದ್ ರಾಜ್ ಮಗ ಎನ್ನುವುದಕ್ಕೆ ಸಾಕ್ಷಿ ಹುಡುಗನ ಮಾರ್ಕ್ಸ್ ಕಾರ್ಡ್ ಅಲ್ಲಿ ತಂದೆಯ ಹೆಸರು ವಿನೋದ್ ರಾಜ್ ಎಂದು ಇರುವುದು ಎಂದು ಹೇಳಿ ಹುಡುಗನ ಮಾರ್ಕ್ಸ್ ಕಾರ್ಡ್ ಫೋಟೋ ಶೇರ್ ಮಾಡಿದ್ದಾರೆ. ವಿನೋದ್ ರಾಜ್ ಅವರು ತಮ್ಮ ಮನೆ ಕೆಲಸದವರನ್ನೇ ಮದುವೆಯಾದ ಕಾರಣ ಆ ವಿಷಯವನ್ನು ಎಲ್ಲೂ ಹೇಳಿಕೊಂಡಿಲ್ಲ ಹೇಳಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಪ್ರಚಾರ ಬಯಸದೆ ಅವರು ಹೇಳಿಕೊಳ್ಳದೆ ಇರಬಹುದು. ಎಂದು ಹೇಳಿದ್ದಾರೆ ಇಷ್ಟೆಲ್ಲ. ಬೆಳವಣಿಗಳು ಆಗಿದ್ದರು ವಿನೋದ್ ರಾಜ್ ಅವರು ಇದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.