ಪುಟ್ಟಣ್ಣ ಕಣಗಾಲ್ ಈ ನಾಡು ಕಂಡ ಶ್ರೇಷ್ಠ ನಿರ್ದೇಶಕ. ಅವರು ಇಲ್ಲವಾಗಿ ಇಷ್ಟು ದಶಕಗಳು ಕಳೆದರೂ ಕೂಡ ಇನ್ನೂ ಸಹ ಜನ ಅವರ ನಿರ್ದೇಶನದ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಅವರ ನಿರ್ದೇಶನಕ್ಕಿದ್ದ ಶಕ್ತಿ. ಕನ್ನಡ ಚಲನಚಿತ್ರ ರಂಗಕ್ಕೆ ನಾಗರಹಾವು, ಶರಪಂಜರ, ಶುಭ ಮಂಗಳ ಮುಂತಾದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಇವರು ಅನೇಕ ಹೀರೋಗಳ ತಯಾರಕರು ಹೌದು.
ಪುಟ್ಟಣ್ಣ ಕಣಗಾಲ್ ಎನ್ನುವ ಇಂತಹ ಪ್ರತಿಭಾನ್ವಿತ ನಿರ್ದೇಶಕರಿಂದ ಕರ್ನಾಟಕಕ್ಕೆ ವಿಷ್ಣುವರ್ಧನ್, ಅಂಬರೀಶ್, ಆರತಿ ಮುಂತಾದ ಅನೇಕ ಪ್ರತಿಭೆಗಳು ದೊರಕಿದ್ದು. ಸಂಪತ್ ಕುಮಾರ್ ಆಗಿದ್ದ ವಿಷ್ಣುವರ್ಧನ್ ಅವರನ್ನು ನಾಗರಹಾವು ಸಿನಿಮಾ ರಾಮಾಚಾರಿ ಯಂಗ್ ಆಂಗ್ರಿ ಮ್ಯಾನ್ ಲುಕ್ ಗೆ ಬದಲಾಯಿಸಿ ಇಂದು ಕನ್ನಡಕ್ಕೆ ವಿಷ್ಣು ದಾದಾ ಎನ್ನುವ ಆಸ್ತಿಯನ್ನಾಗಿ ಮಾಡಿಕೊಟ್ಟಿದ್ದು ಪುಟ್ಟ ಕಣಗಾಲ್ ಅವರೇ.
ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಸಿನಿಮಾದ ನಿರ್ದೇಶಕರಾಗಿ ಹೊಸ ಇತಿಹಾಸವನ್ನೇ ಬರೆದರು. ವಿಷ್ಣುವರ್ಧನ್ ಅವರನ್ನು ಚಿಗುರು ಮೀಸೆಯ ಯುವಕನಾಗಿ ತೋರಿಸಿ ಅವರ ಬದುಕಿಗೆ ಬಹುದೊಡ್ಡ ಬ್ರೇಕ್ ಕೊಟ್ಟರು. ಅಂದಿನಿಂದ ವಿಷ್ಣುವರ್ಧನ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಆಗುವ ರೀತಿ ವರ್ಷಕ್ಕಿಂತ ವರ್ಷಕ್ಕೆ ಅವರ ಖ್ಯಾತಿ ಹೆಚ್ಚುತ್ತಲೆ ಹೋಯಿತು.
ಸಾಮಾನ್ಯವಾಗಿ ಯಾವುದಾದರೂ ಒಂದು ಗುಡ್ ಕಾಂಬಿನೇಷನ್ ವರ್ಕ್ ಆದರೆ ಆ ಕಾಂಬಿನೇಷನ್ ನಲ್ಲಿ ಮತ್ತಷ್ಟು ಸಿನಿಮಾಗಳು ಬರುವುದು ಗ್ಯಾರಂಟಿ. ಆದರೆ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾ ಆದ ಬಳಿಕ ಯಾವ ಸಿನಿಮಾಗಳಲ್ಲೂ ಕೂಡ ಒಟ್ಟಿಗೆ ಕೆಲಸ ಮಾಡಲೇ ಇಲ್ಲ. ಇದಕ್ಕೆ ಕಾರಣ ತಿಳಿದುಕೊಳ್ಳುವ ಕುತೂಹಲ ಕನ್ನಡಿಗರಿಗೆ ಇನ್ನೂ ಇದೆ.
ಇವರ ನಡುವೆ ಮನಸ್ತಾಪ ಏನಾದ್ರೂ ಮೂಡಿ ಬಂದಿತ್ತಾ ಅಥವಾ ಇನ್ನೇನಾದರೂ ಕಾರಣ ಇತ್ತಾ ಎಂದು ಹಲವರು ತಮಗೆ ತಾವೇ ಉತ್ತರ ಕಂಡುಕೊಳ್ಳಲು ಅನುಮಾನ ವ್ಯಕ್ತಪಡಿಸಿದ್ದು ಇದೇ. ಆದರೆ ಆ ರೀತಿ ಏನು ಇಲ್ಲ ಕಡೆವರೆಗೂ ಕೂಡ ಇವರು ಉತ್ತಮ ಸ್ನೇಹಿತರಾಗಿಯೇ ಇದ್ದರು. ಆದರೆ ನಾಗರಹಾವು ಸಿನಿಮಾದ ಬಳಿಕ ವಿಷ್ಣುವರ್ಧನ್ ಅವರು ಬಹಳಷ್ಟು ಬಿಸಿ ಆದರು.
ನಂತರದಲ್ಲಿ ಶುಭಮಂಗಳ ಮುಂತಾದ ಚಿತ್ರಗಳಿಗೆ ವಿಷ್ಣುವರ್ಧನ್ ಅವರನ್ನು ನಾಯಕನಾಗಿ ಮಾಡುವ ಪ್ರಯತ್ನ ಮಾಡಿದರು ಡೇಟ್ಸ್ ಗಳು ಹೊಂದಾಣಿಕೆ ಆಗುತ್ತಿರಲಿಲ್ಲವಂತೆ. ಒಂದು ವೇಳೆ ವಿಷ್ಣುವರ್ಧನ್ ಅವರ ಡೇಟ್ ಸಿಕ್ಕಾಗ ಅದಕ್ಕೆ ಹೊಂದುವ ಕಥೆ ಅಥವಾ ಹಣ ಕೊಡುವ ನಿರ್ಮಾಪಕರು ಸಿಗುತ್ತಿರಲಿಲ್ಲವಂತೆ, ಈ ಕಾರಣಗಳಿಂದಾಗಿ ಮತ್ತೊಮ್ಮೆ ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲ್ ಅವರ ಕಾಂಬಿನೇಷನ್ ನಲ್ಲಿ ಸಿನಿಮಾ ನೋಡುವ ಅದೃಷ್ಟ ಕನ್ನಡಿಗರಿಗೆ ತಪ್ಪಿ ಹೋಯಿತು.
ಆದರೂ ನಾಗರಹಾವು ಅಂತಹ ಒಂದು ದಂತ ಕಥೆ ಆಗುವಂತಹ ಸಿನಿಮಾವನ್ನು ಕನ್ನಡಿಗರಿಗಾಗಿ ಮಾಡಿಕೊಟ್ಟು ಆ ಫೀಲ್ ಹಾಗೆ ಉಳಿಸಿ ಹೋಗಿದ್ದಾರೆ. ಇಂದು ಈ ಇಬ್ಬರು ಕನ್ನಡ ಚಲನಚಿತ್ರರಂಗದ ದಿಗ್ಗಜರು ನಮ್ಮೊಂದಿಗೆ ಇಲ್ಲದೆ ಹೋದರು ಈ ಸಿನಿಮಾದ ಹಾಡುಗಳು ಪಾತ್ರಗಳು ಮತ್ತು ಕಥೆ ಸೂರ್ಯ ಚಂದ್ರ ಇರುವ ತನಕ ಮಾತನಾಡುವಂತಹ ಇತಿಹಾಸ ಸೃಷ್ಟಿಸಿರುವುದು ಸುಳ್ಳಲ್ಲ.
ಇಂದಿಗೂ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಅನೇಕ ಯುವ ನಿರ್ದೇಶಕರಿಗೆ ಪುಟ್ಟಣ್ಣ ಕಣಗಾಲ್ ಅವರೇ ಸ್ಪೂರ್ತಿ ಮತ್ತು ಯುವ ನಾಯಕರಿಗೆ ಆಂಗ್ರಿ ಯಂಗ್ ಮನ್ ರಾಮಾಚಾರಿಯೇ ಸ್ಪೂರ್ತಿ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಹಾಗೂ ನಾಗರಹಾವು ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.