ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.

 

ರಾಧಿಕಾ ಕುಮಾರಸ್ವಾಮಿ ಕನ್ನಡದ ಸ್ಟಾರ್ ಹೀರೋಯಿನ್ ಆಗಿ ಮೆರೆದವರು. 20ರ ದಶಕದ ಆರಂಭದಲ್ಲಿ ಹೀರೋಗಳಿಗೆ ಸಮವಾಗಿ ಬೇಡಿಕೆಯಲ್ಲಿದ್ದ ನಟಿ. ಸಾಂಸಾರಿಕ ಚಿತ್ರಗಳ ಕಥೆಗಳಿಗೆ ಆಗಲಿ ಲವ್ ಸ್ಟೋರಿಗಳಿಗೆ ಆಗಲಿ ಇವರೇ ಬೇಕಾಗಿತ್ತು. ಮನೆಮಗಳು, ತಾಯಿ ಇಲ್ಲದ ತಬ್ಬಲಿ, ಅಣ್ಣ ತಂಗಿ, ತವರಿಗೆ ಬಾ ತಂಗಿ ಇಂತಹ ಕಣ್ಣೀರಿನ ಕಥೆಗಳ ಸಿನಿಮಾಗಳಿಂದ ಹಿಡಿದು ರೋಮಿಯೋ ಜೂಲಿಯೆಟ್, ಪ್ರೇಮ ಖೈದಿ, ನಿನಗಾಗಿ, ಮಣಿ ಇಂತಹ ಪ್ರೇಮ ಕಥೆಗಳಲ್ಲೂ ನಟಿಸಿ ಟ್ರೆಡಿಷನಲ್ ಹಾಗೂ ಗ್ಲಾಮರ್ ಲುಕ್ ಅಲ್ಲಿ ಕನ್ನಡದಲ್ಲಿ ಕಂಗೊಳಿಸುತ್ತಿದ್ದ ನಟಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು.

ಈಕೆ ಲೇಡಿ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳು ಇತ್ತು. ಆದರೆ ದಿಢೀರ್ ಎಂದು ಇವರು ನಿಗೂಢವಾಗಿ ಮದುವೆಯಾಗಿ ಚಿತ್ರರಂಗದಿಂದ ಕಳೆದು ಹೋದರು ಎಂದೇ ಹೇಳಬಹುದು. ಬಹಳ ವರ್ಷಗಳ ಬಳಿಕ ನಿರ್ಮಾಪಕಿಯಾಗಿ ಮತ್ತು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕಂ ಬ್ಯಾಕ್ ಮಾಡಿದ ಈಕೆ ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಾರೆ.

ರಾಧಿಕಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾಗಿರುವ ವಿಚಾರ ಈಗ ಕರ್ನಾಟಕದಲ್ಲಿ ಎಲ್ಲರಿಗೂ ತಿಳಿದಿದೆ. ಜೊತೆಗೆ ಈ ಜೋಡಿಗಳಿಗೆ ಶಮಿಕ ಎನ್ನುವ ಮಗಳು ಕೂಡ ಇದ್ದಾರೆ ಎನ್ನುವುದು ಜಗಜ್ಡಾಹಿರಾಗಿದೆ. ಇತ್ತೀಚಿಗೆ ಕಿರುತೆರೆಯ ಕಾರ್ಯಕ್ರಮದ ವೇದಿಕೆ ಒಂದರಲ್ಲಿ ರಾಧಿಕಾ ಅವರಿಗೆ ಮಗಳ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶಮಿಕಾ ಅವರ ಜೊತೆಗಿನ ಫೋಟೋಗಳನ್ನು ಹಲವು ಬಾರಿ ರಾಧಿಕಾ ಕುಮಾರಸ್ವಾಮಿ ಅವರು ಹಂಚಿಕೊಂಡಿದ್ದಾರೆ.

ಈ ಬಾರಿ ವೇದಿಕೆಯಲ್ಲಿ ಶಮಿಕ ಬಗ್ಗೆ ಹಲವು ವಿಷಯಗಳನ್ನು ಕೂಡ ಹೇಳಿಕೊಂಡಿದ್ದಾರೆ. ನೀವು ಪರ್ಫೆಕ್ಟ್ ಅಮ್ಮ ಆಗಿದ್ದೀರಾ ಎಂದು ನಿಮಗೆ ಅನಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ನನಗೆ ಹಾಗೆ ಅನಿಸುವುದಿಲ್ಲ ನನಗೆ ಇರುವುದು ಒಬ್ಬಳೇ ಮಗಳಾದರೂ ನನ್ನ ಸಹೋದರ ಮಕ್ಕಳನ್ನು ಸೇರಿಸಿ ಎಲ್ಲರಿಗೂ ನಾನು ಅಮ್ಮ ಆಗಿದ್ದೇನೆ. ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತೇನೆ ಹಾಗಾಗಿ ಹಾಗನಿಸುವುದಿಲ್ಲ ಎಂದಿದ್ದಾರೆ. ಜೊತೆಗೆ ಮಗಳಿಗೆ ಶಮಿಕ ಎಂದು ಹೆಸರಿಡಲು ಏನು ಕಾರಣ ಎಂದು ಕೇಳಿದಾಗ ಎಲ್ಲರಂತೆ ನಾವು ಪುರೋಹಿತರ ಬಳಿ ಹೆಸರಿಗಾಗಿ ಕೇಳಿದಾಗ ಶ ಅಕ್ಷರ ಸೂಚಿಸಿದ್ದರು.

ನನ್ನ ಹೆಸರು ರಾಧಿಕಾ ನನ್ನ ತಾಯಿ ಹೆಸರು ಸುರೇಖ ಹೀಗಾಗಿ ಮಗಳಿಗೂ ಕ ಕೊನೆಗೊಳ್ಳುವ ಹೆಸರನ್ನು ಇಡಬೇಕು ಎಂದು ಹುಡುಕಿ ಶಮಿಕ ಎಂದು ಹೆಸರಿಡಲು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ. ಮಗಳ ಜೊತೆಗಿರುವ ಭಾಂದವ್ಯದ ಬಗ್ಗೆ ಮಗಳ ಪ್ರೀತಿಯ ಬಗ್ಗೆ ಸಾಕಷ್ಟು ಮಾತನಾಡಿದ ರಾಧಿಕಾ ಕುಮಾರಸ್ವಾಮಿ ಅವರು ಈ ಪ್ರಪಂಚದಲ್ಲಿ ನಾನು ಎಲ್ಲರಿಗಿಂತ ಅತಿ ಹೆಚ್ಚು ಪ್ರೀತಿಸುವ ವ್ಯಕ್ತಿ ಅಂದರೆ ಅದು ನನ್ನ ಮಗಳು.

ಅವಳನ್ನು ನಾನು ಎಂದಿಗೂ ಕೂಡ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅವಳೇ ನನ್ನ ಸರ್ವಸ್ವ ಎಂದು ಭಾವುಕವಾಗಿ ಮಾತನಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಈಗಲೂ ಸಹ ಸ್ಟಾರ್ ಹೀರೋಗಳ ಜೊತೆ ನಟಿಯಾಗಿ ನಟಿಸಬಲ್ಲ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಜೊತೆಗೆ ಅಭಿಮಾನಿಗಳ ವಲಯದಿಂದಲೂ ಕೂಡ ಈ ಬಗ್ಗೆ ಕೋರಿಕೆ ಇದ್ದೇ ಇದೆ. ಶೀಘ್ರದಲ್ಲಿ ಅವರನ್ನು ತೆರೆ ಮೇಲೆ ಮತ್ತೊಮ್ಮೆ ಯಶಸ್ವಿ ನಾಯಕಿಯಾಗಿ ನೋಡುವ ಹಾಗಾಗಲಿ ಎಂದು ನಾವು ಹಾರೈಸೋಣ.

Leave a Comment