ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

 

ವೈರಲ್ ಆಗುತ್ತಿದೆ ನಿವೇದಿತಾ ಗೌಡ ಜೊತೆ ನಟಿ ಶ್ರುತಿ ಮಾಡಿದ ರೀಲ್ಸ್ ಕಿರುತೆರೆ ಕ್ವೀನ್ ನಿವೇದಿತ ಗೌಡ ಅವರು ಈಗ ಕರ್ನಾಟಕದಾದ್ಯಂತ ಪಾಪುಲರ್ ಫೇಸ್. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಸದಾ ಒಂದಲ್ಲಾ ಒಂದು ಕಾರ್ಯಕ್ರಮದ ಮೂಲಕ ದರ್ಶನ ಕೊಡುವ ನಿವೇದಿತ ಗೌಡ ಅವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚ ಗಿಲಿ ಗಿಲಿ ಸೀಸನ್ 2 ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ನಿವೇದಿತಾ ಗೌಡ ಅವರು ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾರೆ.

ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯ ರಾಜ ರಾಣಿ ಮತ್ತು ಗಿಚ್ಚಗಿಲಿಗಿಲಿ ಸೀಸನ್ 1ರ ಕಂಟೆಸ್ಟೆಂಟ್ ಆಗಿ ತಮ್ಮ ವೇಷಭೂಷಣ, ಮಾತುಕತೆ, ಹಾಸ್ಯ ಇತ್ಯಾದಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದು ಅವರಿಗೆ ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಪ್ರತಿದಿನ ಒಂದು ಪೋಸ್ಟ್ ಅಥವಾ ವಿಡಿಯೋ ಹಾಕುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ತಮ್ಮದೇ ಒಂದು youtube ಚಾನೆಲ್ ಕೂಡ ಓಪನ್ ಮಾಡಿರುವ ಇವರು ಅಲ್ಲೂ ಸಹ ಹೊಸ ಹೊಸ ವಿಷಯಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಜೊತೆಗೆ ಇನ್ಸ್ಟಾಗ್ರಾಮ್ ಅಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಸದಾ ಅವರ ಜೊತೆ ಟಚ್ ಅಲ್ಲಿ ಇರುತ್ತಾರೆ. ಇದುವರೆಗೆ ಚಂದನ್ ಶೆಟ್ಟಿ ಜೊತೆ ಮತ್ತು ತಾಯಿ ಜೊತೆ ನಿವೇದಿತಾ ಗೌಡ ಅವರು ರೀಲ್ಸ್ ಮಾಡುತ್ತಿದ್ದರು. ಹಲವಾರು ಬಾರಿ ಇವರು ಮಾಡಿರುವ ರೀಲ್ಸ್ ಗಳು ಮತ್ತು ಆಡಿರುವ ಮಾತುಗಳು ಟ್ರೋಲ್ ಕೂಡ ಆಗಿವೆ.

ಆದರೆ ಯಾವುದಕ್ಕೂ ಕೇರ್ ಮಾಡದೆ ನಟಿ ತಮ್ಮ ಬ್ಯುಸಿ ಶೂಟಿಂಗ್ ಶೆಡ್ಯೂಲ್ ನಡುವೆಯೂ ಸಹ ಕಂಟೆಸ್ಟೆಂಟ್ಗಳ ಜೊತೆ ಸೇರಿ ರೀಲ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ಇತ್ತೀಚಿಗೆ ಗಿಚ್ಚ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮದಲ್ಲಿ ನಿರೂಪಕರಾದ ನಿರಂಜನ್ ದೇಶಪಾಂಡೆ ಮತ್ತು ನಟಿ ಶ್ರುತಿ ಜೊತೆ ನಿವೇದಿತ ಗೌಡ ಅವರು ರೀಲ್ಸ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಿವೇದಿತ ಗೌಡ ಅವರು ಚರ್ಮ ಬಣ್ಣದ ಸ್ಕರ್ಟ್ ನಲ್ಲಿ ಹೈಸ್ಕೂಲ್ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ‌.

ಎಂದಿನಂತೆ ನಿರಂಜನ್ ದೇಶಪಾಂಡೆ ಅವರು ಸೂಟು ಬೂಟು ಹಾಕಿಕೊಂಡು ಆಂಕರ್ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇದು ಶೂಟಿಂಗ್ ನಡುವೆ ಬ್ರೇಕ್ ಸಿಕ್ಕ ಸಮಯದಲ್ಲಿ ಮಾಡಿರುವ ರೀಲ್ಸ್ ಆಗಿರಬಹುದು. ನಟಿ ಶೃತಿ ಕೂಡ ಜೊತೆಯಾಗಿದ್ದು ಕಡು ನೀಲಿ ಬಣ್ಣದ ಉದ್ದನೆಯ ಗೌನ್ ಅಲ್ಲಿ ದೇವಲೋಕದಿಂದ ಇಳಿದು ಬಂದ ಅಪ್ಸರೆಯ ರೀತಿ ನಟಿ ಶೃತಿ ಅವರು ಮಿಂಚುತ್ತಿದ್ದಾರೆ.

ಮೂವರು ಸೇರಿ ಒಂದು ಮ್ಯೂಸಿಕ್ ಗೆ ರೀಲ್ಸ್ ಮಾಡಿದ್ದಾರೆ. ಮೊದಲಿಗೆ ನಿವೇದಿತ ಗೌಡ ಅವರು ಒಂದು ಸ್ಟೆಪ್ ಅನ್ನು ಮಾಡಿ ತೋರಿಸಿಕೊಡುತ್ತಾರೆ, ನಂತರ ಶ್ರುತಿ ಅವರು ಅದನ್ನು ಫಾಲೋ ಮಾಡುತ್ತಾರೆ, ನಿರಂಜನ್ ದೇಶಪಾಂಡೆ ಅವರು ಫಾಲೋ ಮಾಡುತ್ತಾರೆ. ಹಾಗೆ ಪ್ರತಿ ಬಾರಿ ಹಾಗೂ ನಿವೇದಿತಾ ಗೌಡ ಅವರು ಮಾಡಿ ತೋರಿಸಿದ ಸ್ಟೆಪ್ಗಳನ್ನು ಮಾಡುತ್ತಾ ಮೂರು ಜನರು ಕೂಡ ಮ್ಯೂಸಿಕ್ ತಕ್ಕ ಹಾಗೆ ಮೈಕುಣಿಸಿ ನರ್ತಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಮೆಂಟ್ಗಳು ಶ್ರುತಿ ಅವರ ಬಗ್ಗೆ ಹರಿದು ಬಂದಿದ್ದು ನೋಡುಗರೆಲ್ಲಾ ಈ ಸ್ಟೆಪ್ಗಳನ್ನು ಸಕ್ಕತ್ ಎಂಜಾಯ್ ಮಾಡಿದ್ದಾರೆ. ನೀವು ಸಹ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಏನೇನೋ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

https://www.instagram.com/reel/Cqm2mOEDefU/?igshid=YmMyMTA2M2Y=

 

Leave a Comment