ವ್ಯಕ್ತಿಯೊಬ್ಬನ ಮೇಲೆ ಅಣ್ಣನ ಹೆಂಡತಿಯೊಂದಿಗೆ ಅ.ಕ್ರ.ಮ ಸಂಬಂಧವನ್ನು ಹೊಂದಿರುವುದರ ಕುರಿತಾಗಿ ಅಪವಾದ ಬಂದಿತ್ತಂತೆ. ಆದರೆ ತಾನು ಯಾವುದೇ ರೀತಿಯ ಸಂಬಂಧವನ್ನು ಅತ್ತಿಗೆಯೊಂದಿಗೆ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಲು ಅಗ್ನಿಪರೀಕ್ಷೆಯನ್ನು ಮಾಡಿಕೊಂಡಿದ್ದಾನಂತೆ. ‘ನಾನು ನಿರಪರಾಧಿ ಎಂಬುದನ್ನು ಅಗ್ನಿ ದೇವನೇ ಎಲ್ಲರದುರು ಹೇಳಲಿ’ ಎನ್ನುತ್ತಾ ಅಗ್ನಿಪರೀಕ್ಷೆಗೆ ವ್ಯಕ್ತಿ ಒಳಗಾದನಂತೆ. ಇಂಥದ್ದೊಂದು ಘಟನೆ ನಡೆದಿರುವುದು ತೆಲಂಗಾಣದಲ್ಲಿ.
ನಾವು ಪುರಾಣ ಕಥೆಗಳಲ್ಲಿ ಕೇಳಿದ ಹಾಗೆ ಸಂಬಂಧಗಳ ಕುರಿತಾದ ಅಪಮಾನವನ್ನು ಅನುಭವಿಸಿದ ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು ಎಲ್ಲರಿಗೂ ಸಾಬೀತು ಪಡಿಸಲು ಅಗ್ನಿ ಪ್ರವೇಶವನ್ನು ಮಾಡುತ್ತಿದ್ದರು. ದಾಂಪತ್ಯ ಜೀವನವು ಎಂದಿಗೂ ಅನುಮಾನವೆಂಬ ಅಡ್ಡಗೋಲಿನಿಂದ ಹಾಳಾಗದಿರಲಿ ಎಂಬ ಉದ್ದೇಶವು ಇರುತ್ತಿತ್ತು. ಅಗ್ನಿಯನ್ನು ಪ್ರವೇಶ ಮಾಡಿ ಮನಸ್ಸು ಹಾಗೂ ದೇಹ ಎರಡರಲ್ಲಿಯೂ ಸಂಬಂಧದ ಕುರಿತಾಗಿ ಶುದ್ಧವಾಗಿದ್ದೇವೆ ಎಂದು ತೋರ್ಪಡಿಸುತ್ತಿದ್ದರು. ಅಗ್ನಿ ದೇವನು ಯಾರನ್ನು ಸುಡುವುದಿಲ್ಲವೋ ಅವರು ಪವಿತ್ರವಾಗಿದ್ದಾರೆ ಎಂದು ಹೇಳಲಾಗುತ್ತಿತ್ತು.
ಇತಿಹಾಸದ ಪುಟಗಳಲ್ಲಿಯೂ ಅಗ್ನಿಪರೀಕ್ಷೆಗೆ ಒಳಗಾದ ಮಹಿಳೆಯರ ಅನೇಕ ಉದಾಹರಣೆಗಳು ಸಿಗುತ್ತವೆ. ಈಗಿನ ಕಾಲದಲ್ಲಿ ಅಗ್ನಿಪರೀಕ್ಷೆಯು ಪ್ರಚಲಿತವಿರುವ ಉದಾಹರಣೆಗಳನ್ನು ಅಷ್ಟಾಗಿ ಕೇಳಿರಲಿಲ್ಲ. ಆದರೆ ಈ ಆಚರಣೆಯು ತೆಲಂಗಾಣದಲ್ಲಿ ನಡೆದಿದೆ. ಹೌದು. ತೆಲಂಗಾಣದ ಬಂಜಾರಿಪಲ್ಲಿ ಗ್ರಾಮದಲ್ಲಿ ವ್ಯಕ್ತಿ ಒಬ್ಬ ತನ್ನ ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂಬುದಾಗಿ ಆರೋಪಿಸಲಾಗಿತ್ತಂತೆ ಖುದ್ದಾಗಿ ಅಣ್ಣನೇ ಪಂಚಾಯತಿಯ ಮೆಟ್ಟಿಲು ಏರಿದ್ದನಂತೆ.
ತನ್ನ ಸಹೋದರನ ಬಗ್ಗೆ ವಿಚಾರಣೆ ಮಾಡಿ ನ್ಯಾಯ ಒದಗಿಸುವಂತೆ ಕೇಳಿದ್ದನಂತೆ. ಆಗ ಹೇಳಿ ಪಂಚಾಯತಿಯ ಮುಖಂಡರು ಆರೋಪಿತ ವ್ಯಕ್ತಿಯು ಸಂಬಂಧದ ಶುದ್ಧತೆಯನ್ನು ತಿಳಿಸಲು ಅಗ್ನಿ ಪ್ರವೇಶ ಮಾಡಬೇಕೆಂದು ಆದೇಶಿಸಿದರಂತೆ. ಆರೋಪಿತ ವ್ಯಕ್ತಿಯು ಸುಡುವ ಬಿಸಿಬಿಸಿ ಕೆಂಡಗಳ ಮಧ್ಯೆ ಇಡಲಾಗಿದ್ದ ಬಿಸಿಯಾದ ಕಬ್ಬಿಣದ ಸಲಾಕೆ ಒಂದನ್ನು ಕೈಗೆತ್ತಿಕೊಳ್ಳುವ ಮೂಲಕ, ತಾನು ಅತ್ತಿಗೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂಬುದನ್ನು ಸ್ಥಳೀಯರ ಎದುರಲ್ಲಿ ತೋರ್ಪಡಿಸಬೇಕಾಗಿತ್ತಂತೆ.
ಅತ್ತಿಗೆಯೊಂದಿಗೆ ಅಕ್ರಮ ಸಂಬಂಧದ ಅಪವಾದವನ್ನು ಹೊತ್ತ ವ್ಯಕ್ತಿಯು ಪಂಚಾಯತಿಯ ಮುಖಂಡರ ಹಾಗೂ ಕೆಲವು ಸ್ಥಳೀಕರಣ ಎದುರಲ್ಲಿ ಬಿಸಿಯಾದ ಕೆಂಡಗಳ ಮಧ್ಯೆ ಇಡಲಾಗಿದ್ದ ಕಬ್ಬಿಣದ ಸಲಾಕೆಯನ್ನು ಎತ್ತಲು ಒಪ್ಪಿಕೊಂಡನಂತೆ. ನಂತರ ಕೈ ಸುಡುಗಷ್ಟು ಕಾದಿದ್ದ ಸಲಾಕೆಯನ್ನು ಎತ್ತಿ ಹೊರಗಡೆ ಎಸೆದನಂತೆ. ಈ ರೀತಿಯಾಗಿ ಅಗ್ನಿ ಪರೀಕ್ಷೆಯ ಆಚರಣೆಯಿಂದ, ಯಾವುದೇ ಅಕ್ರಮ ಸಂಬಂಧವನ್ನು ಹೊಂದಿಲ್ಲ. ತಾನು ನಿರಪರಾಧಿ ಎಂಬುದನ್ನು ಸಾಬೀತು ಪಡಿಸಿದನಂತೆ.
ಆದರೆ ಇಷ್ಟಕ್ಕೂ ಒಪ್ಪದ ಪಂಚಾಯತಿಯ ಮುಖಂಡರು, ಆ ವ್ಯಕ್ತಿಯಲ್ಲಿ ಆತನ ಸಹೋದರ ಮಾಡಿದ್ದ ಆರೋಪದಂತೆ ಅತ್ತಿಗೆಯೊಂದಿಗೆ ಹೊಂದಿದ್ದ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರಂತೆ. ಈ ವಿಷಯವು ಗ್ರಾಮದಲ್ಲಿ ಎಲ್ಲರಿಗೂ ತಿಳಿಯುತ್ತಿದ್ದಂತಲೇ ಆರೋಪವನ್ನು ಹೊತ್ತಿದ್ದ ಮಹಿಳೆಗೂ ತಲುಪಿದಂತೆ. ಬಳಿಕ ಆ ಮಹಿಳೆ ಸಂಬಂಧದ ಶುದ್ಧತೆಯನ್ನು ಅಳೆಯಲು ನಡೆಸಿದ ಅಗ್ನಿಪರೀಕ್ಷೆಯ ಆಚರಣೆಯ ಬಗ್ಗೆ ಪೊಲೀಸರಲ್ಲಿ ದೂರು ನೀಡಿದಳಂತೆ.
ಇದೀಗ ಆರೋಪಿತ ವ್ಯಕ್ತಿಯು ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳಲು ಬಿಸಿಯಾದ ಕೆಂಡಗಳ ಮಧ್ಯೆ ಇಟ್ಟ ಸಲಾಕೆಯನ್ನು ಕೈಗೆತ್ತಿಕೊಂಡು ಹೊರಗಡೆ ಎಸೆದ ವಿಡಿಯೋ ಸಖತ್ ಸದ್ದು ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ರೀವ್ಸ್ ಹಾಗೂ ಲೈಕ್ಸ್ ಗಳನ್ನು ಪಡೆಯುತ್ತಾ ಎಲ್ಲೆಡೆ ಹರಡುತ್ತಿವೆ. ಬರಿ ಕೈಯಲ್ಲಿ ಸಲಾಕೆ ಎತ್ತಿದ ಭೂಪ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಇದೊಂದು ಘಟನೆಯ ಬಳಿಕ ಆತ ನಾನ ಭಾಗಗಳಲ್ಲಿ ಪರಿಚಿತನಾಗಿದ್ದಾನೆ. ವೈರಲ್ ಆಗಿದ್ದಾನೆ. ಪುರಾಣ ಕಥೆಗಳಲ್ಲಿ ಕೇಳಿದ್ದ ಆಚರಣೆಯು ತೆಲಂಗಾಣದ ಬಂಜರಪಲ್ಲಿ ಗ್ರಾಮದಲ್ಲಿ ನಡೆದಿರುವುದು ಅನೇಕ ಚರ್ಚೆಗಳಿಗೂ ಕಾರಣವಾಗಿದೆ.