ಟ್ರಾವೆಲ್ ಮಾಡುವುದು ಎಲ್ಲರಿಗೂ ಇಷ್ಟ. ಗೆಳೆಯರೊಂದಿಗೆ, ಕುಟುಂಬದೊಂದಿಗೆ ಪ್ರೇಕ್ಷಣೀಯ ಸ್ಥಳಗಳು ಅಥವಾ ದೇವಸ್ಥಾನಗಳಿಗೆ ಕಪ್ರವಾಸ ಹೋಗುತ್ತಾರೆ. ಆದರೆ ದೂರದ ಊರುಗಳಿಗೆ ಪ್ರಯಾಣ ಮಾಡುವಾಗ ಕೆಲವರಿಗೆ ವಾಂತಿ ಬರುವ ರೀತಿ ಆಗುತ್ತದೆ ಮತ್ತು ವಾಕರಿಕೆ ಬರುತ್ತಿರುತ್ತದೆ.
ಅದರಲ್ಲೂ ತಿರುವುಗಳು ಹೆಚ್ಚಾಗಿರುವ ರಸ್ತೆಗಳಲ್ಲಿ, ಘಾಟ್ ಸೆಕ್ಷನ್ಗಳಲ್ಲಿ ಸುಧಾರಿಸಿಕೊಳ್ಳುವುದು ಬಹಳ ಕಷ್ಟ. ಇದರಿಂದ ಬಹಳ ಸುಸ್ತಾಗಿ ಅವರು ಪ್ರಯಾಣವನ್ನು ಎಂಜಾಯ್ ಮಾಡುವುದೇ ಇಲ್ಲ. ಎಲ್ಲರ ಮನೆಯಲ್ಲೂ ಕೂಡ ಒಬ್ಬರಲ್ಲ ಒಬ್ಬರು ಈ ಸಮಸ್ಯೆ ಇರುವವರು ಇದ್ದೇ ಇರುತ್ತಾರೆ, ಇವರಿಂದ ಎಲ್ಲರಿಗೂ ಕೂಡ ಬೇಸರವಾಗುತ್ತದೆ.
ಇದನ್ನು ಕಂಟ್ರೋಲ್ ಮಾಡಲು ಅವರು ಸಹ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮೆಡಿಕಲ್ ಗಳಿಗೆ ಹೋಗಿ ಮಾತ್ರೆ ತೆಗೆದುಕೊಳ್ಳುತ್ತಾರೆ ಆದರೆ ಈ ರೀತಿ ಮಾಡುವ ಅವಶ್ಯಕತೆ ಇಲ್ಲ. ಇನ್ನು ಮುಂದೆ ನಾವು ಹೇಳುವ ಈ ಒಂದು ವಿಧಾನ ಫಾಲೋ ಮಾಡಿ ಸಾಕು ನಿಮಗೆ ಪ್ರಯಾಣದಲ್ಲಿ ವಾಂತಿ ಆಗುವುದಿಲ್ಲ, ವಾಕರಿಕೆ ಬರುವುದಿಲ್ಲ.
* ಪ್ರಯಾಣ ಮಾಡುವಾಗ ಆದಷ್ಟು, ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳಿ. ಬಸ್ ಗಳಾದರೂ ಆದಷ್ಟು ಮುಂದೆ ಇರುವ ಸೀಟ್ ಗಳಲ್ಲಿ ಕುಳಿತುಕೊಳ್ಳಿ. ಇದರಿಂದ ನಿಮಗೆ ಮುಂದಿನ ರಸ್ತೆ ಸ್ಪಷ್ಟವಾಗಿ ಕಾಣುವುದರಿಂದ ಗಮನ ರಸ್ತೆಯ ಮೇಲೆ ಹಾಗೂ ಪ್ರಯಾಣದ ಮೇಲೆ ಕುತೂಹಲ ಬರುತ್ತದೆ. ಮೈಂಡ್ ಡೈವರ್ಟ್ ಆದಕಾರಣ ವಾಮಿಟ್ ಕಂಟ್ರೋಲ್ ಆಗಬಹುದು.
* ಕೆಲವರು ಊಟ ಮಾಡಿದರೆ ತಾನೆ ವಾಮಿಟ್ ಆಗುವುದು ಎಂದು ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡುತ್ತಾರೆ ಆಗಲೂ ಕೂಡ ಬಹಳ ಸುಸ್ತಾಗುತ್ತದೆ. ಆ ಸುಸ್ತಿನಿಂದ ಕೂಡ ವಾಮಿಟ್ ಬರುವ ರೀತಿ ಆಗುತ್ತದೆ. ಅದರ ಬದಲು ಆರಾಮಾಗಿ ಊಟ ಮಾಡಿ ಪ್ರಯಾಣಿಸಿ. ಆದಷ್ಟು ಲೈಟ್ ಫುಡ್ ತೆಗೆದುಕೊಳ್ಳಿ, ಎಣ್ಣೆಯಲ್ಲಿ ಕರಿದಿರುವ ಪದಾರ್ಥಗಳನ್ನು ಸೇವಿಸಬೇಡಿ ಮತ್ತು ಕಡಲೆಕಾಯಿ ಅಲರ್ಜಿ ಇರುವವರು ಕಡಲೆಕಾಯಿ ಇರುವ ತಿನಿಸುಗಳನ್ನು ತಿನ್ನಬೇಡಿ.
* ಪ್ರಯಾಣಕ್ಕು ಮುನ್ನ ಶುಂಠಿ ಹಾಕಿರುವ ಕಾಫಿ ಅಥವಾ ಟೀ ಅಥವಾ ಶುಂಠಿ ಬಳಸಿ ಮಾಡಿರುವ ಯಾವುದೇ ಪದಾರ್ಥ ಸೇವನೆ ಮಾಡಿ ಪ್ರಯಾಣ ಮಾಡುವುದರಿಂದ ಕೂಡ ವಾಮಿಟ್ ಕಂಟ್ರೋಲ್ ಆಗುತ್ತದೆ. ಅಂಗಡಿಗಳನ್ನು ಕೂಡ ಜಿಂಜರ್ ನಿಂದ ಮಾಡಿರುವ ಚಾಕಲೇಟ್ ಅಥವಾ ತಿನಿಸುಗಳು ಸಿಗುತ್ತವೆ ಅವುಗಳನ್ನು ಸೇವಿಸಬಹುದು.
* ನಿಂಬೆಹಣ್ಣು ಅಥವಾ ಕಿತ್ತಳೆ ಹಣ್ಣನ್ನು ಜೊತೆಗೆ ಇಟ್ಟುಕೊಂಡಿರಿ, ಆಗಾಗ ಇವುಗಳನ್ನು ಜಿಗುಟಿ ಸ್ಮೆಲ್ ತೆಗೆದುಕೊಳ್ಳುವುದರಿಂದ ಕೂಡ ವಾಮಿಟ್ ಕಂಟ್ರೋಲ್ ಆಗುತ್ತದೆ. ಬಹುತೇಕರಿಗೆ ಈ ಒಂದು ಟ್ರಿಕ್ ವರ್ಕ್ ಆಗುತ್ತದೆ.
* ಪದೇಪದೇ ಟೀ ಕಾಫಿ ಕುಡಿಯುವುದು ಮಾಡಬೇಡಿ ಇದು ಕೂಡ ಗ್ಯಾಸ್ಟ್ರಿಕ್ ಹೆಚ್ಚಾಗಿ ವಾಂತಿ ಬರುವುದಕ್ಕೆ ಕಾರಣವಾಗುತ್ತದೆ.
* ಹೆಚ್ಚಿನ ಜನರು ಟ್ರಾವೆಲ್ ಮಾಡುವಾಗ ಮೊಬೈಲ್ ನೋಡುತ್ತಿರುತ್ತಾರೆ, ಕೆಲವರಿಗೆ ಇದು ಆಗುವುದಿಲ್ಲ ಮೊಬೈಲ್ ನೋಡುವುದರಿಂದ ತಲೆನೋವು ಬಂದು ನಂತರ ವಾಮಿಟ್ ಆಗುತ್ತದೆ ಹಾಗಾಗಿ ವಾಂತಿಯಾಗುವ ಸಮಸ್ಯೆ ಇದ್ದವರು ಮೊಬೈಲ್ ನೋಡಬೇಡಿ.
* ಕೆಲವರು ಆರಾಮಾಗಿ ಪುಸ್ತಕ ಓದುತ್ತಾರೆ ಅವರಿಗೆ ಏನು ಆಗೋದಿಲ್ಲ ಆದರೆ ವಾಂತಿ ಬರುವ ರೀತಿ ಆಗುವುದು ವಾಕರಿಕೆ ಬರುವುದು ಈ ರೀತಿ ಸಮಸ್ಯೆ ಇದ್ದವರು ಇದನ್ನು ಮಾಡದಿರುವುದು ಒಳ್ಳೆಯದು.
* ಕೆಲವರು ಪ್ರಯಾಣ ಮಾಡುವಾಗ ನನಗೆ ವಾಮಿಟ್ ಬಿಡುತ್ತದೆ ಎನ್ನುವ ಯೋಚನೆಯಲ್ಲೇ ಇರುತ್ತಾರೆ. ಮನಸ್ಸಿನಿಂದ ಅದನ್ನು ತೆಗೆದು ಹಾಕಿ ಆ ಬಗ್ಗೆ ಯೋಚನೆ ಮಾಡದೆ ಆರಾಮಾಗಿ ಸಾಂಗ್ ಕೇಳುತ್ತಾ, ಪ್ರಯಾಣಿಸಿದರೆ ಏನು ಆಗುವುದಿಲ್ಲ.
* ನಿದ್ರೆ ಮಾಡುವುದು ಕೂಡ ಒಂದು ಒಳ್ಳೆ ಐಡಿಯಾ ಎಂದು ಹೇಳಬಹುದು. ನಿಮಗೆ ವಾಮಿಟ್ ಬರುವ ರೀತಿ ಆಗುತ್ತಿದ್ದರೆ ಆರಾಮಾಗಿ ನಿದ್ದೆ ಮಾಡಿ ಆಗ ಅದು ಕಂಟ್ರೋಲ್ ಆಗುತ್ತದೆ.