ಹಿಂದೆಲ್ಲಾ ವಯಸ್ಸಾಗಿ ಅಥವಾ ಯಾವುದಾದರೂ ಗಂಭೀರ ಕಾಯಿಲೆಗೆ ತುತ್ತಾಗಿ ಜನರು ಪ್ರಾ.ಣ ಕಳೆದುಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಆಧುನಿಕತೆ ಬೆಳದಂತೆಲ್ಲಾ ನಾವು ದಿನನಿತ್ಯ ಬಳಸುವ ವಸ್ತುಗಳೇ ನಮಗೆ ಯಮ ಪಾಶವಾಗಿ ನಮ್ಮ ಪ್ರಾ.ಣವನ್ನು ಕೊಂಡೊಯ್ಯುತ್ತಿವೆ. ಈಗಾಗಲೇ ಗ್ಯಾಸ್ ಸಿಲೆಂಡರ್ ಬ್ಲಾಸ್ಟ್ ಆಗಿರುವುದು, ನೀರಿನ ಸಂಪಲ್ಲಿ ಮುಳುಗಿ ಸ.ತ್ತಿ.ರುವುದು, ವಾಹನ ಅ.ಪ.ಘಾ.ತ.ವಾಗಿ ಅದರಿಂದ ಮೃ.ತ ಪಟ್ಟಿರುವುದು ಈ ರೀತಿ ಅನೇಕ ಸುದ್ದಿಗಳ ಬಗ್ಗೆ ವರದಿ ಆಗಿರುವುದನ್ನು ಕೇಳಿದ್ದೇವೆ.
ಆದರೆ ಈಗ ಕರೆಂಟ್ ವಾಟರ್ ಹೀಟರ್ ಕೂಡ ಅದೇ ರೀತಿ ತಾಯಿ ಮಗರಿಬ್ಬರ ಪ್ರಾ.ಣ ತೆಗೆದಿದೆ. ಬೆಂಗಳೂರು ಗ್ರಾಮಾಂತರ ಹೊಸಪೇಟೆ ಬಳಿಯ ಕನಕ ನಗರ ಎಂಬಲ್ಲಿ ಪ್ರಕರಣ ನಡೆದಿದ್ದು ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಎನ್ನುವ 25 ವರ್ಷದ ಮಹಿಳೆ ಮತ್ತು ಧನಂಜಯ ಇರುವ ನಾಲ್ಕು ವರ್ಷದ ಮಗು ಈ ಘಟನೆಯಿಂದ ಪ್ರಾ.ಣ ಕಳೆದುಕೊಂಡಿದ್ದಾರೆ. ರಾಯಚೂರಿನಿಂದ ಬಂದ ಕುಟುಂಬ ಕನಕ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು. ಜ್ಯೋತಿ, ಆಕೆಯ ಪತಿ ಹಾಗೂ ಮಗು ಇದ್ದ ಚಿಕ್ಕ ಚೊಕ್ಕ ಸುಖಿ ಸಂಸಾರ. ಜ್ಯೋತಿ ಪತಿ ಗಾರೆ ಕೆಲಸ ಮಾಡುತ್ತಿದ್ದರು.
ಒಮ್ಮೊಮ್ಮೆ ಕೆಲಸಕ್ಕಾಗಿ ಹೊರ ಹೋದರೆ ಬರುವುದು ಮೂರು ನಾಲ್ಕು ದಿನಗಳಾಗುತ್ತಿತ್ತು. ಜ್ಯೋತಿ ಮನೆಯಲ್ಲಿಯೇ ಇರುತ್ತಿದ್ದರು. ಹೀಗೆ ನೆನ್ನೆ ಬೆಳಿಗ್ಗೆ ಮಗುವಿಗೆ ಸ್ನಾನ ಮಾಡಿಸಲು ಬಕೆಟ್ ಒಂದಕ್ಕೆ ನೀರು ಕಾಯಲು ವಾಟರ್ ಹೀಟರ್ ಹಾಕಿ ಅದನ್ನು ಸ್ಥಾನದ ಕೊನೆಯ ಚಿಕ್ಕ ಕಟ್ಟೆ ಮೇಲೆ ಇಟ್ಟು ಕೆಲಸ ಮಾಡಲು ಶುರು ಮಾಡಿದ್ದಾರೆ. ಇವರಿಗೆ ಕಾಣದಂತೆ ಸ್ನಾನದ ಕೋಣೆಗೆ ಹೋಗಿದ್ದ ಮಗು ಬಕೆಟ್ ಅನ್ನು ಬೀಳಿಸಿದೆ. ಇದರಿಂದ ಕರೆಂಟ್ ಪಾಸ್ ಆಗಿ ಮಗುವಿಗೆ ಶಾ.ಕ್ ಹೊಡೆದು ಮಗು ಚೀರಿಕೊಂಡಿದೆ.
ಮಗುವಿನ ಧ್ವನಿ ಕೇಳಿ ಮಗು ರಕ್ಷಿಸಲು ನೀರು ಚೆಲ್ಲಿರುವುದನ್ನು ಕಾಣದೆ ಅದರ ಮೇಲೆ ಕಾಲಿಟ್ಟಿದ್ದಾರೆ ಜ್ಯೋತಿ ಅದರಲ್ಲೂ ಕರೆಂಟ್ ಪಾಸ್ ಆಗಿದ್ದರಿಂದ ಜ್ಯೋತಿಗೂ ಕೂಡ ಕರೆಂಟ್ ಹೊಡೆದು ತಾಯಿ ಮಗು ಸ್ಥಳದಲ್ಲೇ ಮೃ.ತ ಪಟ್ಟಿದ್ದಾರೆ. ಒಂದು ದಿನ ಪೂರ್ತಿ ಮನೆಯಿಂದ ಈಕೆ ಆಚೆ ಬರದಿದ್ದನ್ನು ಅಕ್ಕಪಕ್ಕದವರು ಗಮನಿಸಿ ಸುಮ್ಮನಾಗಿದ್ದಾರೆ. ಪತಿ ಕೂಡ ಜ್ಯೋತಿಗೆ ಎಷ್ಟೇ ಬಾರಿ ಕರೆ ಮಾಡಿದರು ಆಕೆ ಕರೆ ಸ್ವೀಕರಿಸುತ್ತಿಲ್ಲದ್ದರಿಂದ ನಂತರ ಪಕ್ಕದ ಮನೆಯವರಿಗೆಲ್ಲಾ ಕರೆ ಮಾಡಿ ವಿಚಾರಿಸಿದ್ದಾರೆ.
ಎಲ್ಲರೂ ಮನೆ ಒಳಗೆ ಹೋಗಿ ನೋಡಿದಾಗ ಹೀಗಾಗಿರುವುದು ಎಲ್ಲರಿಗೂ ಗೊತ್ತಾಗಿದೆ. ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಜೊತೆಗೆ ಪತಿ ಹಾಗೂ ಕುಟುಂಬಸ್ಥರು ಕೂಡ ಧಾವಿಸಿ ಇವರ ಪರಿಸ್ಥಿತಿ ಕಂಡು ಕರಳು ಕೀಳುವಂತೆ ಕೂಗಾಡಿದ್ದಾರೆ. ದೂರದ ಊರಿನಿಂದ ಹೊಟ್ಟೆ ಪಾಡಿಗಾಗಿ ಬಂದಿದ್ದ ಈ ಬಡಜೀವಗಳು ಒಂದು ಸಣ್ಣ ಅವಘಡದಿಂದ ಪ್ರಾ.ಣ ಕಳೆದುಕೊಂಡಿದ್ದಾರೆ. ಇತ್ತ ಪತ್ನಿ ಹಾಗೂ ಮಗುವನ್ನು ಒಂದೇ ದಿನ ಕಳೆದುಕೊಂಡ ಜ್ಯೋತಿ ಪತಿಯ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.
ಇತ್ತೀಚಿಗೆ ಜನ ಬಹಳ ನಿರ್ಲಕ್ಷ ಮಾಡುತ್ತಿದ್ದಾರೆ. ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಸಾಲದು, ಜೊತೆಗೆ ಕರೆಂಟ್ ಜೊತೆಗೆ ಸರಸ ಸಲ್ಲದು. ಈ ರೀತಿ ಕರೆಂಟ್ ಉಪಕರಣಗಳನ್ನು ಬಳಸುವಾಗ ಮೈಯೆಲ್ಲಾ ಕಣ್ಣಾಗಿದ್ದು ಜಾಗರೂಕರಾಗಿ ಅದರ ಬಳಕೆ ಮಾಡಬೇಕಾಗಿದೆ. ಇಲ್ಲವಾದರೆ ಕರೆಂಟ್ ಎನ್ನುವ ಮಹಾಮಾರಿಯೂ ತನ್ನ ಕೆನ್ನಾಳಿಕೆಯನ್ನು ಚಾಚಿ, ಒಬ್ಬರನ್ನಷ್ಟೇ ಅಲ್ಲದೆ ಸಿಕ್ಕ ಸಿಕ್ಕವರನ್ನೆಲ್ಲಾ ತನ್ನೊಳಗೆ ಎಳೆದುಕೊಂಡು ಬಿಡುತ್ತದೆ. ವಿಷಯ ಎಲ್ಲೆಡೆ ಮುಟ್ಟಿ ಈ ಬಗ್ಗೆ ಎಲ್ಲರೂ ಸಹ ಹುಷಾರಾಗಿರಲಿ ಎನ್ನುವುದಷ್ಟೇ ನಮ್ಮ ಆಶಯ.