ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲ್ಲಿ ಕುಳಿತುಕೊಳ್ಳಲಿರುವ 5ನೇ ಸೀಸನ್ ನ ಅತಿಥಿಗಳು ಯಾರ್ಯಾರು ಗೊತ್ತಾ.?

 

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಮೂರು ಸೀಸನ್ ಪೂರ್ತಿ ಗೊಳಿಸಿದೆ. ಮೂರು ಸೀಸನ್ ನಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಹಾಗೆ ಸಿನಿಮಾ ಕ್ಷೇತ್ರದಲ್ಲಿ, ರಾಜಕೀಯದಲ್ಲಿ ಮತ್ತು ಉದ್ಯಮದಲ್ಲಿ ಈ ರೀತಿ ನಾನು ಕ್ಷೇತ್ರಗಳಿಂದ ಹೆಸರುವಾಸಿಯಾದ ಅನೇಕ ಸಾಧಕರು ಈ ಸೀಟ್ ಅಲಂಕರಿಸಿ ತಮ್ಮ ಜೀವನದ ಕಥೆಯಲ್ಲಿ ಹೇಳಿಕೊಂಡು ಕಿರಿಯರಿಗೆ ಸ್ಪೂರ್ತಿ ಆಗಿದ್ದಾರೆ.

ಈ ರೀತಿ ಬದುಕಿದ ಅನುಭವದ ಸಾರದ ಜೊತೆಗೆ ಒಂದೊಳ್ಳೆ ಪಾಠವನ್ನು ಕೂಡ ಕಲಿಸುವ, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಈ ಕಾರ್ಯಕ್ರಮದ ನಾಲ್ಕನೇ ಸೀಸನ್ ಶೀಘ್ರದಲ್ಲೇ ಆರಂಭಕೊಳ್ಳಲಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಚಾನೆಲ್ ಕೂಡ ಪ್ರೋಮೋಗಳನ್ನು ಹರಿಬಿಟ್ಟಿದೆ. ಇದರಿಂದಾಗಿ ಪ್ರೇಕ್ಷಕರು ಈ ಬಾರಿ ಯಾರ್ಯಾರು ಅತಿಥಿಗಳಾಗಿ ಬರಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

ನಾಲ್ಕನೇ ಸೀಸನ್ನಿನ ಮೊದಲನೇ ಅತಿಥಿಯಾಗಿ ಕನ್ನಡದ ಸೊಬಗನ್ನು ವಿಶ್ವದ ಮಟ್ಟಕ್ಕೆ ಪಸರಿಸಿದ ತುಳುನಾಡ ಭಾಗದ ನಂಬಿಕೆಯಾಗಿದ ಭೂತಕೋಲ, ದೈವಾರಧನೆ ಇನ್ನಿತ್ಯಾದಿ ವಿಷಯಗಳ ಬಗ್ಗೆ ಎಲ್ಲೆಡೆ ಭಯಭಕ್ತಿ ಬರುವಂತೆ ಮಾಡಿದ ಈಗಷ್ಟೇ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಮೂಡಿಗೇರಿಸಿಕೊಂಡ ಸಾಧಕರಾಗಿರುವ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರು ಮೊದಲನೇ ವಾರಕ್ಕೆ ಅತಿಥಿಯಾಗಿ ಬರಲಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಹಲವಾರು ಮೂಲಗಳಿಂದ ಇದು ನಿಜ ಕೂಡ ಎನ್ನುವ ಮಾಹಿತಿ ಸಿಕ್ಕಿದ್ದು, ಇವರ ಬದುಕಿನ ಪಯಣದ ಕುರಿತು ತಿಳಿದುಕೊಳ್ಳಲು ಪ್ರೇಕ್ಷಕರು ಅಷ್ಟೇ ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತು ಸ್ಯಾಂಡಲ್ ವುಡ್ನ ಪದ್ಮಾವತಿಯೆಂದು ಹೆಸರಾದ ರಮ್ಯಾ ಅವರಿಗೂ ಕೂಡ ಈ ಬಾರಿ ಆಹ್ವಾನ ಹೋಗಿರುವ ಸಾಧ್ಯತೆ ಇದೆ ಯಾಕೆಂದರೆ ರಮ್ಯಾ ಅವರು ಈವರೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ಇರುವುದರಿಂದ, ಕನ್ನಡ ಕಲಾಪ್ರೇಕ್ಷಕರು ಮೋಹಕತಾರೆ ರಮ್ಯಾ ಅವರನ್ನು ಕರೆಸಿ ಎಂದು ಅಹವಾಲು ಇಡುತ್ತಲೇ ಇದ್ದಾರೆ.

ಹಾಗಾಗಿ ಈ ಬಾರಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಈಗ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಬಡ್ತಿ ಹೊಂದಿರುವ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅತಿಥಿಯಾಗಿ ಬರುವ ಸಾಧ್ಯತೆ ಇದೆ. ಮತ್ತು ಕೆಜಿಎಫ್ ಸರಣಿಗಳ ಮೂಲಕ ಕನ್ನಡದ ರಾಜಮೌಳಿ ಎಂದು ಕರೆಸಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹ ಈ ಸಲ ಸಾಧಕರ ಸೀಟಲ್ಲಿ ಕುಳಿತುಕೊಳ್ಳಬಹುದಾದ ಸಾಧ್ಯತೆ ಇದೆ.

ಯಾಕೆಂದರೆ ಕೆಜಿಎಫ್ ಟು ಸಿನಿಮಾ 2022ರ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ, ಹಾಗಾಗಿ ಅದಕ್ಕೆ ಈ ಬಾರಿ ಇವರು ಬರಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ವಿಜಯ ಕಿರಂಗದೂರು ಎನ್ನುವ ನಿರ್ಮಾಪಕರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇದೆ. ಕನ್ನಡಕ್ಕೆ ದೊಡ್ಡ ದೊಡ್ಡ ಹೈ ಬಜೆಟಿನ ಸಿನಿಮಾ ಕೊಟ್ಟು ತೆರೆ ಹಿಂದಿನ ಶ್ರಮಜೀವಿ ಆಗಿರುವ ಈ ಸಾಧಕರ ಬದುಕಿನ ಕಥೆಯನ್ನು ಕೇಳಲು ಅನೇಕರಿಗೆ ಆಸೆ ಇದೆ. ಹಾಗಾಗಿ ಅವರು ಸಹ ಈ ಬಾರಿಯ ಅತಿಥಿ ಆಗುವ ಸಾಧ್ಯತೆ ಇದೆ. ಜೊತೆಗೆ ನಾದ ಬ್ರಹ್ಮ ಹಂಸಲೇಖ ಅವರು ಜೀ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮವಾದ ಸರಿಗಮಪ ರಿಯಾಲಿಟಿ ಶೋ ಅಲ್ಲಿ ಪ್ರಮುಖ ತೀರ್ಪುಗಾರರಾಗಿದ್ದಾರೆ.

ಈಗಾಗಲೇ ಇವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು, ಆದರೆ ವೈಯಕ್ತಿಕ ಅನೇಕ ಕಾರಣಗಳಿಂದಾಗಿ ಪ್ರತಿಬಾರಿ ಕೂಡ ಮುಂದಕ್ಕೆ ಹಾಕಿದ್ದರು. ಈ ಬಾರಿ ಅಭಿಮಾನಿಗಳ ಆಸೆ ಮೇರೆಗೆ ಅವರು ಸಹ ಸಾಧಕರ ಸೀಟ್ ಅಲ್ಲಿ ಕುಳಿತು ತಮ್ಮ ಬದುಕಿನ ಕಥೆ ಹಂಚಿಕೊಳ್ಳಲಿದ್ದಾರೆ ಎಂದು ಊಹಿಸಲಾಗುತ್ತಿದೆ. ಇದನ್ನು ಓದಿದ ಮೇಲೆ ನಿಮ್ಮ ಪ್ರಕಾರ ಯಾರು ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬರಬೇಕು ಎಂದು ನಿಮ್ಮ ಅಭಿಪ್ರಾಯ ತಿಳಿಸಿ.

Leave a Comment