ಇದುವರೆಗೂ ನಾವು ನಂಬಿಕೊಂಡು ಬಂದಿರುವ ನಂಬಿಕೆಯ ಪ್ರಕಾರವಾಗಿ ಪ್ರತಿಯೊಂದು ಜೀವಿಯ ಸೃಷ್ಟಿಯು ಕೂಡ ಭಗವಂತನ ಇಚ್ಛೆ. ನಾವು ಯಾವ ಕುಟುಂಬದಲ್ಲಿ ಯಾವ ಸಮಯದಲ್ಲಿ ಜನಿಸಬೇಕು ಎನ್ನುವುದು ಪೂರ್ವದಲ್ಲಿಯೇ ನಿರ್ಧಾರವಾಗಿರುತ್ತದೆ.
ಆದರೆ ಈಗಿನ ಕಾಲದಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳು ಒಳ್ಳೆ ಸಮಯದಲ್ಲಿ ಹುಟ್ಟಿ ಜೀವನವನ್ನು ಸಂತೋಷವಾಗಿ ಕಳೆಯಲಿ ಎಂದು ಒಳ್ಳೆಯ ದಿನ, ಘಳಿಗೆ, ನಕ್ಷತ್ರ ನೋಡಿ ಶಸ್ತ್ರಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯುತ್ತಾರೆ ಒಂದು ರೀತಿಯಲ್ಲಿ ಇದನ್ನು ತಪ್ಪು ಎಂದು ಹೇಳಬಹುದು.
ಜನನದ ಸಮಯದಲ್ಲಿ ಚಂದ್ರನ ಸ್ಥಾನವನ್ನು ಪ್ರಮುಖವಾಗಿ ನೋಡಲಾಗುತ್ತದೆ, ಅದರ ಆಧಾರದ ಮೇಲೆ ಬದುಕಿನ ಏಳು ಬೀಳುಗಳನ್ನು ಊಹಿಸಲಾಗುತ್ತದೆ. ಆ ಪ್ರಕಾರವಾಗಿ ಯಾವ ದಿನ ಜನಿಸಿದ ಮಕ್ಕಳು ಯಾವ ಫಲ ಪಡೆಯುತ್ತಾರೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಮಹಿಳೆಯರ ಬಗ್ಗೆ ಎಲ್ಲಾ ಪುರುಷರು ಈ ಮೂರು ಕಹಿ ಸತ್ಯಗಳನ್ನು ತಿಳಿದುಕೊಳ್ಳಿ.!
* ಅಮಾವಾಸ್ಯೆ ದಿನಗಳಲ್ಲಿ ಸೂರ್ಯ ಮತ್ತು ಚಂದ್ರರು ಒಂದೇ ಮನೆಯಲ್ಲಿ ಇರುತ್ತಾರೆ ಹಾಗಾಗಿ ಈ ದಿನ ಮಕ್ಕಳು ಜನಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಅಮವಾಸ್ಯೆ ದಿನ ಸೂರ್ಯ ಮತ್ತು ಚಂದ್ರ ಹತ್ತಿರ ಇರುವುದರಿಂದ ಸೂರ್ಯನ ಪ್ರಕರತೆಯಿಂದ ಚಂದ್ರ ಮಂಕಾಗಿ ಹೋಗುತ್ತಾರೆ.
ಇದು ಈ ದಿನ ಜನಿಸುವ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಮವಾಸ್ಯೆ ದಿನ ಜನಿಸುವ ಮಕ್ಕಳು ಧಿರ್ಘಕಾಲಿಕ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಇವರ ಬುದ್ಧಿಶಕ್ತಿಯು ಅಷ್ಟೊಂದು ಉತ್ತಮವಾಗಿರುವುದಿಲ್ಲ. ಬದುಕಿನ ಉದ್ದಕ್ಕೂ ತುಂಬಾ ತೊಂದರೆ ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಹೆಚ್ಚಿನ ಜನರು ಅಮಾವಾಸ್ಯೆ ದಿನದಂದು ಮಕ್ಕಳು ಜನಿಸದೆ ಇರಲಿ ಎಂದು ಬಯಸುತ್ತಾರೆ
* ಆದರೆ ದೀಪಾವಳಿ ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಮಹಾಲಕ್ಷ್ಮಿಯ ಆಶೀರ್ವಾದ ಇರುವುದರಿಂದ ಒಳ್ಳೆಯದಾಗುತ್ತದೆ ಮತ್ತು ಶಿವರಾತ್ರಿಯ ದಿನ ಶಿವನ ಜಟೆಯ ಮೇಲೆ ಚಂದ್ರನು ಸ್ಥಾನ ಪಡೆದಿರುವುದರಿಂದ ಆ ದಿನ ಜನಿಸುವ ಮಕ್ಕಳಿಗೂ ಕೂಡ ಶಿವನ ಅನುಗ್ರಹ ಇರುತ್ತದೆ ಯಾವುದೇ ಸಮಸ್ಯೆ ಇಲ್ಲ ಇವರು ಬಹಳ ಕೀರ್ತಿವಂತರಾಗುತ್ತಾರೆ ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಮೀನ ರಾಶಿಯ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು ಇವು
* ಗ್ರಹಣಗಳ ದಿನಗಳಂದು ಕೂಡ ಸೂರ್ಯ ಚಂದ್ರರು ರಾಹು ಕೇತುಗಳ ವಶದಲ್ಲಿ ಇರುವುದರಿಂದ ಇಂತಹ ದಿನಗಳಲ್ಲಿ ಜನಿಸುವ ಮಕ್ಕಳು ಕೂಡ ಆರೋಗ್ಯಕ್ಕೆ ಸಂಬಂಧಿಸಿದಂತೆ ಮತ್ತು ಮನಸ್ಸಿಗೆ ಸಂಬಂಧಪಟ್ಟ ಹಾಗೆ ಬಹಳ ತೊಂದರೆಗಳನ್ನು ಅನುಭವಿಸುತ್ತಾರೆ. ಈ ಮಕ್ಕಳಿಗೆ ಬದುಕಿನ ಪೂರ್ತಿ ಮಾನಸಿಕ ಒತ್ತಡ ಹೆಚ್ಚಾಗಿರುತ್ತದೆ ಹಾಗಾಗಿ ಗ್ರಹಣ ಸಮಯದಲ್ಲೂ ಕೂಡ ಮಗುವಿನ ಜನನ ಆಗುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ
* ಶುಕ್ಲ ಪಕ್ಷಗಳಲ್ಲಿ ಚಂದ್ರನು ಬೆಳೆಯುತ್ತಾರೆ ಹಾಗೂ ಕೃಷ್ಣಪಕ್ಷಗಳಲ್ಲಿ ಚಂದ್ರನು ಕರಗುತ್ತಾ ಹೋಗುತ್ತಾರೆ. ಹೀಗಾಗಿ ಕೃಷ್ಣಪಕ್ಷಕ್ಕಿಂತ ಶುಕ್ಲ ಪಕ್ಷಗಳಲ್ಲಿ ಜನಿಸುವ ಮಕ್ಕಳು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಚಂದ್ರ ಬಲವಾಗಿರುವುದರಿಂದ ಅನೇಕ ರಾಜಯೋಗಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ
* ಪಿತೃಪಕ್ಷದಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆ ಇರುವುದರಿಂದ ಈ ಸಮಯದಲ್ಲಿ ಜನಿಸುವ ಮಕ್ಕಳು ಪೂರ್ವಿಕರ ಆಶೀರ್ವಾದ ಪಡೆದು ಹುಟ್ಟಿರುತ್ತಾರೆ ಎಂದು ಹೇಳಲಾಗುತ್ತದೆ. ಪಿತೃ ಪಕ್ಷದಲ್ಲಿ ಯಾವ ಶುಭ ಕಾರ್ಯವನ್ನು ಮಾಡುವುದಿಲ್ಲ ಆದರೆ ಮಕ್ಕಳು ಜನನವಾದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಈ ಸುದ್ದಿ ಓದಿ:- ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!
* ಇದರ ಜೊತೆಗೆ 12 ತಿಂಗಳಲ್ಲಿ ಒಂದೊಂದು ತಿಂಗಳಲ್ಲಿ ಜನಿಸುವ ಮಕ್ಕಳ ವ್ಯಕ್ತಿತ್ವ ಒಂದೊಂದು ರೀತಿಯಾಗಿ ರೂಪುಗೊಳ್ಳುತ್ತದೆ ಎನ್ನುವ ನಂಬಿಕೆಯು ಇದೆ. ಈ 12 ತಿಂಗಳಲ್ಲಿ ಕೆಲವು ತಿಂಗಳಲ್ಲಿ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅದೃಷ್ಟ ಪಡೆದಿರುತ್ತಾರೆ ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವೆಂದರೆ, ಜನವರಿಯಲ್ಲಿ ಜನಿಸಿದ ಮಕ್ಕಳು ಅದೃಷ್ಟವಂತರು ನಾಯಕತ್ವದ ಗುಣ ಹೊಂದಿರುತ್ತಾರೆ.
ಆಗಸ್ಟ್ ತಿಂಗಳಲ್ಲಿ ಹುಟ್ಟಿದ ಮಕ್ಕಳು ತಮ್ಮ ಪರಿಶ್ರಮದಿಂದ ಜೀವನದಲ್ಲಿ ಬಹಳ ಯಶಸ್ವಿಯಾಗಿರುತ್ತಾರೆ ಮತ್ತು ಜೀವನದಲ್ಲಿ ಬಹಳಷ್ಟು ಶ್ರೀಮಂತಿಕೆಯಿಂದ ಬದುಕುವ ಅದೃಷ್ಟ ಹೊಂದಿರುತ್ತಾರೆ, ಬಹುಮುಖ ಪ್ರತಿಭೆ ಹೊಂದಿರುತ್ತಾರೆ, ಒಳ್ಳೆಯ ಕುಟುಂಬವನ್ನು ಹೊಂದುತ್ತಾರೆ ಎಂದು ಹೇಳಲಾಗುತ್ತದೆ ಇದೇ ರೀತಿಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು ಕೂಡ ಇಂತಹ ಶುಭಫಲಗಳು ಹೆಚ್ಚಿಗೆ ಸಿಗುತ್ತವೆ ಎಂದು ಹೇಳಲಾಗಿದೆ.