ರಾಶಿ ಚಕ್ರದ 12ನೇಯ ಮತ್ತು ಕೊನೆಯ ರಾಶಿ ಮೀನಾ ರಾಶಿಯಾಗಿದೆ. ಈ ರಾಶಿಯಲ್ಲಿ ಬುಧ ನೀಚ ಸ್ಥಾನ ಮತ್ತು ಶುಕ್ರನು ಉಚ್ಛಸ್ಥಾನದಲ್ಲಿ ಇರುತ್ತಾರೆ. ಪೂರ್ವ ಭಾದ್ರಪದ, ಉತ್ತರ ಭಾದ್ರಪದ ಮತ್ತು ರೇವತಿ ನಕ್ಷತ್ರಗಳಲ್ಲಿ ಜನಿಸಿದವರು ಮೀನ ರಾಶಿಯವರಾಗಿರುತ್ತಾರೆ. ಬುಧನ ತತ್ವ, ಗುರುವಿನ ತತ್ವ ಹಾಗೂ ಶನಿಯ ತತ್ವ ಈ ರಾಶಿಯವರಲ್ಲಿ ಇರುತ್ತದೆ.
ಮೀನ ರಾಶಿಯ ಸ್ವಭಾವದ ಬಗ್ಗೆ ಹೇಳುವುದಾದರೆ ಬಹಳ ಸೌಮ್ಯ ಸ್ವಭಾವ ಹಾಗೂ ಕುಟುಂಬಕ್ಕಾಗಿ ಏನನ್ನು ಬೇಕಾದರೂ ತ್ಯಾಗ ಮಾಡುವಂತಹವರು ಎನ್ನಬಹುದು. ಇವರು ಎಷ್ಟು ಶಾಂತವಾಗುತ್ತಾರೋ ಬದಲಾದರೆ ಅಷ್ಟೇ ಸುನಾಮಿಯಾಗಿರುತ್ತಾರೆ. ಇವರ ಸ್ವಭಾವ ಹೇಗಿರುತ್ತದೆ ಎಂದರೆ ಮಗುವಿನ ರೀತಿಯ ಮನಸ್ಸು ಮತ್ತು ದಯಾಗುಣ ಹೊಂದಿರುವವರು ಎಂದೇ ಹೇಳಬಹುದು.
ಈ ಸುದ್ದಿ ಓದಿ:- ಈ ಮಂತ್ರ ಹೇಳಿ ಮೂರು ತಿಂಗಳ ಒಳಗೆ ನಿಮಗೆ ಸಂತಾನಭಾಗ್ಯ ಶತಸಿದ್ಧ.!
ಯಾರಿಗಾದರೂ ಏನಾದರೂ ಕೊಟ್ಟ ಮೇಲೆ ಅದನ್ನು ವಾಪಸು ಕೇಳುವುದಕ್ಕೆ ಬಹಳ ಕಷ್ಟ ಪಡುತ್ತಾರೆ ಅಥವಾ ಅದು ಎಷ್ಟೇ ಅವಶ್ಯಕತೆಯ ವಸ್ತು ಆಗಿದ್ದರು ಬಿಟ್ಟುಬಿಡುತ್ತಾರೆ ಇಂತಹ ಮನಸ್ಥಿತಿ ಇವರದ್ದಾಗಿರುತ್ತದೆ. ಈ ರಾಶಿಯವರಿಗೆ ದೇವರ ಮೇಲೆ ಅಪಾರ ನಂಬಿಕೆ. ಬಾಲ್ಯದಿಂದಲೂ ಕೂಡ ಧಾರ್ಮಿಕ ಆಸಕ್ತಿ ಬೆಳೆಸಿಕೊಂಡಿರುತ್ತಾರೆ.
ಇಷ್ಟೇ ಶ್ರದ್ಧೆ, ಭಕ್ತಿ, ನೀತಿಯಿಂದಾಗಿ ತಮ್ಮ ಕೆಲಸ ಕಾರ್ಯಗಳನ್ನು ಕೂಡ ಮಾಡಿಕೊಂಡು ಬದುಕುತ್ತಿರುತ್ತಾರೆ. ಬಹಳ ನಿದ್ರಾ ಪ್ರಿಯರು ಇವರು. ಮೀನಾ ರಾಶಿಯ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಯಾವಾಗಲೂ ಕುಟುಂಬದವರ ಜೊತೆಗೆ ಇರಬೇಕು ಎಂದು ಆಸೆ ಪಡುತ್ತಾರೆ. ಕೂಡು ಕುಟುಂಬದಲ್ಲಿ ಬಾಳುವುದಕ್ಕೆ ಸೂಕ್ತವಾದ ವ್ಯಕ್ತಿಗಳು ಇವರು ಎಂದೇ ವಿಮರ್ಷಿಸಬಹುದು ಹೊಂದಾಣಿಕೆ ಗುಣ ರಕ್ತಗತವಾಗಿ ಬಂದಿರುತ್ತದೆ.
ಸ್ನೇಹಿತರನ್ನು ಅಪಾರವಾಗಿ ಪ್ರೀತಿಸುತ್ತಾರೆ. ಕುಟುಂಬದವಷ್ಟೇ ಸ್ನೇಹಿತರ ಮೇಲೂ ಪ್ರೀತಿ ನಂಬಿಕೆ ಇಟ್ಟಿರುತ್ತಾರೆ. ಮೀನ ರಾಶಿಯವರು ಒಂದು ವೇಳೆ ನಿಮಗೆ ಸ್ನೇಹಿತನಾದರೆ ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿ ದೊರಕಿದಂತೆ ಎಂದುಕೊಳ್ಳಬಹುದು ಅಷ್ಟು ಚೆನ್ನಾಗಿ ಅವರು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಂಡು ಬದುಕುತ್ತಾರೆ.
ಈ ಸುದ್ದಿ ಓದಿ:- ಯಾವ ವಾರ ಜನಿಸಿದ ಮಕ್ಕಳು ಅದೃಷ್ಟವಂತರು ನೋಡಿ.!
ಇವರ ಜೀವನದಲ್ಲಿ ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು ಎಲ್ಲವು ಕೂಡ ಬಹಳ ಸಲೀಸಾಗಿಯೇ ನಡೆಯುತ್ತದೆ. ಆದರೆ ಇದೆಲ್ಲವನ್ನು ಮೀರಿ ಅವರ ಮನಸಿನೊಳಗೆ ಒಂದು ಸಂಘರ್ಷ ನಡೆಯುತ್ತಲೇ ಇರುತ್ತದೆ ಮತ್ತು ಇದನ್ನು ಅವರು ಮುಕ್ತವಾಗಿ ಕುಟುಂಬದ ಜೊತೆಯಾಗಲಿ ಸ್ನೇಹಿತನ ಜೊತೆಯಲಿ ಹೇಳಿಕೊಳ್ಳಲು ಹೋಗುವುದೇ ಇಲ್ಲ.
ಮೇಲೆ ನಗುಮುಖದಿಂದ ಸದಾ ಖುಷಿಯಾಗಿ ತನಗೆ ಏನು ತೊಂದರೆ ಇಲ್ಲ ಎನ್ನುವ ರೀತಿ ಬದುಕುವ ಇವರು ಹೀಗಾಗಬಾರದಿತ್ತು ಇದು ನನಗೆ ಬೇಡವಿತ್ತು ಎಂದು ಅಂದುಕೊಳ್ಳುತ್ತಲೇ ಎಲ್ಲವನ್ನು ಸಹಿಸಿಕೊಂಡು ಅನುಸರಿಸಿಕೊಂಡು ಬದುಕಿ ಬಿಡುತ್ತಾರೆ ಹಣಕಾಸಿನ ವಿಚಾರವಾಗಿ ಇವರಿಗೆ ಬಹಳ ಸಮಸ್ಯೆ ಇರುವುದಿಲ್ಲ. ಸ್ವಲ್ಪ ಇವರು ಏಕಾಗ್ರತೆ ಮೆಲೆ ನಿಗ್ರಹ ಇಟ್ಟುಕೊಂಡರೆ ಬಹಳ ಉತ್ತಮ ಸ್ಥಾನಗಳಿಗೆ ಏರುತ್ತಾರೆ.
ಪರೋಪಕಾರದ ಗುಣ ಹೊಂದಿರುವ ಇವರಿಗೆ ಇವರ ಆತಿಯಾದ ಒಳ್ಳೆತನವು ಕೆಲವೊಮ್ಮೆ ಮುಳುವಾಗಬಹುದು. ಇವರು ಎಲ್ಲರನ್ನೂ ನೋಡುವ ರೀತಿ ಎಲ್ಲರೂ ಇವರನ್ನು ನೋಡುವುದಿಲ್ಲ. ಅವರ ಅವಶ್ಯಕತೆಗೆ ಇವರನ್ನು ಬಳಸಿಕೊಳ್ಳುವವರೇ ಹೆಚ್ಚಿರುತ್ತಾರೆ ಇದು ಇವರಿಗೆ ಅರಿವಾಗುವ ಸಮಯಕ್ಕೆ ಕಾಲ ಮೀರಿರುತ್ತದೆ ಮತ್ತು ತನಗೆ ಗೊತ್ತಾದ ಮೇಲೆ ಕೂಡ ಅದನ್ನು ಪ್ರಶ್ನಿಸಲು ಹೋಗುವ ಗುಣ ಇವರಿಗೆ ಇರುವುದೇ ಇಲ್ಲ.
ಈ ಸುದ್ದಿ ಓದಿ:- ಪ್ರಾಣ ಹೋದರೂ ಸರಿ ಈ 9 ವಿಷಯಗಳನ್ನು ಯಾರಿಗೂ ಹೇಳಬೇಡಿ.!
ಮೀನ ರಾಶಿಯ ಹೆಣ್ಣು ಮಕ್ಕಳು ಬಹಳ ಬುದ್ಧಿವಂತರಾಗಿರುತ್ತಾರೆ ಆದರೆ ಈ ರಾಶಿಯವರು ಬುದ್ಧಿವಂತಿಕೆಗಿಂತ ಜ್ಞಾನವನ್ನು ಸಂಪಾದನೆ ಮಾಡುವುದು ಒಳ್ಳೆಯದು. ಮೀನ ರಾಶಿ ಹೆಣ್ಣು ಮಕ್ಕಳಿಗೆ ವಸ್ತು ವ್ಯಾಮೋಹ ಇರುತ್ತದೆ, ವಿಪರೀತ ಶಾಪಿಂಗ್ ಮಾಡುತ್ತಾರೆ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಸಮಾಧಾನಕರ ಜೀವನವನ್ನು ಇವರು ಪಡೆಯುತ್ತಾರೆ. ವಯಸ್ಸಾದರೂ ಕೂಡ ಲವಲವಿಕೆಯಿಂದ ಇರುವ ಮಕ್ಕಳಂತಹ ಮನಸ್ಸನ್ನು ಹೊಂದಿರುತ್ತಾರೆ.