ನಾವು ಪುಣ್ಯಕ್ಷೇತ್ರಗಳಿಗೆ ಹೋದಾಗ ದೇವಸ್ಥಾನಗಳಿಗೆ ಹೋದಾಗ ಪೂಜೆ ಮಾಡುವಾಗ ಭಜನೆ ಮಾಡುವಾಗ ನಮ್ಮ ಕಣ್ಣಿನಲ್ಲಿ ನೀರು ಬರು ವಂತದ್ದು ಕೆಲವೊಮ್ಮೆ ನಮ್ಮ ಕೆಲಸಗಳು ಆಗದೆ ಇದ್ದಂತಹ ಸಂದರ್ಭ ದಲ್ಲಿ ಕೋಪ ಬರುವಂತದ್ದು ಹೀಗೆ ಇಂತಹ ಒಂದು ಪರಿಸ್ಥಿತಿಯನ್ನು ಎದುರಿಸುತ್ತಿರುವಂತಹ ಹಲವಾರು ಜನರನ್ನು ನಾವು ನಮ್ಮ ಕಣ್ಣ ಮುಂದೆ ನೋಡಬಹುದು.
ಇದಕ್ಕೆ ಕಾರಣ ಏನು ಎಂದು ಅವರು ಬೇರೆಯವರನ್ನು ಕೇಳುತ್ತಿರುತ್ತಾರೆ. ಆದರೆ ಇದರ ಬಗ್ಗೆ ತಿಳಿದವರು ಇಂತಹ ಒಂದು ಸಮಸ್ಯೆಗೆ ಪರಿಹಾರ ಏನು ಕಾರಣ ಏನು ಎಂದು ಹೇಳುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಕೂಡ ಇದಕ್ಕೆ ಕಾರಣ ಪರಿಹಾರ ಏನು ಎಂದು ತಿಳಿದಿರುವುದಿಲ್ಲ ಅಂತವರಿಗೆ ಈ ದಿನ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾದಂತಹ ಪರಿಸ್ಥಿತಿಗಳು ಉಂಟಾಗುತ್ತಿರುತ್ತದೆ.
ಈ ರೀತಿಯಾದಂತಹ ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ಬರುತ್ತಿರುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ನಾವು ಪೂಜೆ ಮಾಡುವಂತಹ ಸಂದರ್ಭದಲ್ಲಿ ದೇವರ ಮನೆಯನ್ನು ಸ್ವಚ್ಛವಾಗಿ ಶುಚಿ ಮಾಡಿ ಆನಂತರ ಒಳ್ಳೆಯ ಮನಸ್ಸಿನಿಂದ ಬಹಳ ಗೌರವದಿಂದ ದೇವರಲ್ಲಿ ನಂಬಿಕೆಯನ್ನು ಇಟ್ಟು ಒಂದು ಮನಸ್ಸಿನಿಂದ ದೇವರ ಪೂಜೆ ಆರಾಧನೆಯನ್ನು ಮಾಡುವುದರಿಂದ ದೇವರು ನಮಗೆ ಒಂದು ಒಳ್ಳೆಯ ಆತ್ಮವಿಶ್ವಾಸವನ್ನು ಹಾಗೂ ಒಳ್ಳೆಯ ಶಾಂತಿಯನ್ನು ಕೊಡುತ್ತಾನೆ.
ಈ ಸುದ್ದಿ ಓದಿ:- ಬ್ರಹ್ಮ ಮುಹೂರ್ತದಲ್ಲಿ ಕೇವಲ 1 ಬಾರಿ ಹೇಳಿರಿ ಈ 3 ಶಕ್ತಿಶಾಲಿ ಶಬ್ದ ಪರಮಾತ್ಮ ಎಲ್ಲವನ್ನೂ ತಂದು 2 ಗಂಟೆಯಲ್ಲಿ ಕೊಡುವರು.!
ನಾವು ಇದೇ ರೀತಿಯಾಗಿ ದೃಢವಾದ ಮನಸ್ಸಿನಲ್ಲಿ ಪೂಜೆಯನ್ನು ಮಾಡುವುದರಿಂದ ನಮ್ಮ ಪೂಜೆಯನ್ನು ಭಗವಂತ ಮೆಚ್ಚಿಕೊಳ್ಳುತ್ತಾನೆ ಎಂದೇ ಅರ್ಥ. ಕೆಲವೊಮ್ಮೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ನಮಗೆ ಕಣ್ಣಲ್ಲಿ ನೀರು ಬರುತ್ತಿರುತ್ತದೆ ಇಂತಹ ಒಂದು ಸಂದರ್ಭದಲ್ಲಿ ನಾವು ದೇವರಿಗೆ ನೇರವಾಗಿ ಸಂಪರ್ಕವನ್ನು ಹೊಂದಿದ್ದೇವೆ ನಾವು ಆ ಪೂಜೆಯಲ್ಲಿ ತಲ್ಲೀನರಾಗಿದ್ದೇವೆ ಎಂಬುದರ ಅರ್ಥವಾಗಿ ನಮ್ಮ ಕಣ್ಣಿನಲ್ಲಿ ನೀರು ಬರುತ್ತಿರುತ್ತದೆ.
* ಹಾಗೂ ನಮ್ಮ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ಭಗವಂತ ನಮಗೆ ಏನೋ ಒಂದು ಸಂದೇಶವನ್ನು ಕೊಡುತ್ತಿದ್ದಾನೆ ಎನ್ನುವುದರ ಅರ್ಥ ಕೂಡ ಇದಾಗಿರುತ್ತದೆ. ನಮ್ಮ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನಮ್ಮ ಅಂತರ್ಮನ ಅಂದರೆ ನಮ್ಮ ಆತ್ಮ ಶುದ್ಧಿಯಾಗುತ್ತಿದೆ, ನಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕೆಟ್ಟ ಭಾವನೆ ಇದ್ದರೂ ಅದೆಲ್ಲ ದೂರವಾಗುತ್ತಾ ನಮಗೆ ಇನ್ನು ಮುಂದೆ ಒಳ್ಳೆಯ ಮಾರ್ಗವನ್ನು ದೇವರು ತೋರಿಸುತ್ತಿದ್ದಾನೆ ಎನ್ನುವುದರ ಅರ್ಥ ಇದಾಗಿರುತ್ತದೆ.
ಇದರಿಂದಾಗಿ ಕೆಲವೊಂದಷ್ಟು ಜನರ ಕಣ್ಣಲ್ಲಿ ಅವರಿಗೆ ತಿಳಿಯದ ರೀತಿಯಲ್ಲಿ ಕಣ್ಣಲ್ಲಿ ನೀರು ಬರುತ್ತಿರುತ್ತದೆ. ಇನ್ನು ನಮ್ಮ ಮನಸ್ಸಿನಲ್ಲಿ ಯಾರಿಗೂ ಕೂಡ ಹೇಳಿಕೊಳ್ಳಲು ಸಾಧ್ಯವಾಗದೇ ಇರುವಂತಹ ಕೆಲವೊಂದಷ್ಟು ವಿಚಾರಗಳು ನಮ್ಮಲ್ಲಿಯೇ ಇರುತ್ತದೆ.
ಈ ಸುದ್ದಿ ಓದಿ:- ಸಂಬಂಧಿಕರ ಕಷ್ಟದ ಸಮಯದಲ್ಲಿ ಆಗುವವರು ಈ 4 ರಾಶಿಯವರು ಮಾತ್ರ.!
ಈ ಎಲ್ಲಾ ವಿಚಾರಗಳನ್ನು ನಾವು ದೇವರ ಮುಂದೆ ಹೇಳಿ ಕೊಳ್ಳುತ್ತಾ ನಾನು ಮಾಡಿರುವಂತಹ ಪಾಪ ಕರ್ಮಗಳೆಲ್ಲವೂ ಕೂಡ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುವಂತಹ ಸಂದರ್ಭ ದಲ್ಲಿಯೂ ಕೂಡ ನಮ್ಮ ಕಣ್ಣುಗಳಲ್ಲಿ ನೀರು ಬರುತ್ತಿರುತ್ತದೆ. ಹೀಗೆ ಯಾರ ಕಣ್ಣುಗಳಲ್ಲಿ ದೇವರ ಪೂಜೆ ಮಾಡುವಂತಹ ಸಂದರ್ಭದಲ್ಲಿ ನೀರು ಬರುತ್ತಿರುತ್ತದೆಯೋ ಅವರು ದೇವರಿಂದ ನೇರ ಸಂಪರ್ಕವನ್ನು ಹೊಂದುತ್ತಿದ್ದಾರೆ.
ದೇವರಿಂದ ಒಳ್ಳೆಯ ಆಶೀರ್ವಾದ ಒಳ್ಳೆಯ ಮಾರ್ಗ ವನ್ನು ಪಡೆದುಕೊಳ್ಳುತ್ತಿರುತ್ತಾರೆ ಎನ್ನುವುದರ ಅರ್ಥ ಇದಾಗಿರುತ್ತದೆ. ಆದ್ದರಿಂದ ಯಾರೂ ಕೂಡ ಇದನ್ನು ತಪ್ಪಾಗಿ ತಿಳಿದುಕೊಳ್ಳದೆ ಇದು ನಮಗೆ ಮುಂದಿನ ದಿನದಲ್ಲಿ ಒಳ್ಳೆಯದನ್ನೇ ಉಂಟುಮಾಡುತ್ತದೆ ಎನ್ನುವ ಭಾವನೆಯನ್ನು ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.