Home Useful Information ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!

ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!

0
ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!

 

ಈ ದಿನ ನಾವು ಮನೆಗೆ ಒಟ್ಟು ಎಷ್ಟು ಬಾಗಿಲುಗಳು ಇರಬೇಕು, ವಾಸ್ತು ಶಾಸ್ತ್ರದ ಪ್ರಕಾರ ಯಾವುದು ನಿಜವಾಗಿ ಬಾಗಿಲು ಎನ್ನಿಸಿಕೊಳ್ಳುತ್ತದೆ. ಯಾವುದು ಬಾಗಿಲು ಅಲ್ಲ. ಇತ್ಯಾದಿ ವಿಷಯಗಳನ್ನು ತಿಳಿದು ಕೊಳ್ಳೋಣ. ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು. ಅಂದರೆ 2, 4, 6, 8, 12, 14, 16, 18 ಹೀಗೆ ಇರಬೇಕು 10, 20, 30 ಹೀಗೆ ಸೊನ್ನೆಯಿಂದ ಕೂಡಿದ ಸಮ ಸಂಖ್ಯೆಗಳು ಇರಬಾರದು.

ಮನೆಯ ಮುಖ್ಯ ಬಾಗಿಲು ಎಲ್ಲಕ್ಕಿಂತ ದೊಡ್ಡದಾಗಿದ್ದರೆ ಒಳ್ಳೆಯದು. ಬಾಗಿಲ ಪದಕದ ಮೇಲೆ ದೇವರು ಚಿತ್ರಗಳನ್ನು ಕೆತ್ತಿಸುವುದು ಒಳ್ಳೆಯ ದಲ್ಲ. ಮತ್ತು ಕೇವಲ ಚೌಕಟ್ಟು ಕಮಾನು ಇದ್ದರೆ ಅವುಗಳನ್ನು ಬಾಗಿಲು ಎಂದು ಪರಿಗಣಿಸಲಾಗುವುದಿಲ್ಲ. ಕದವನ್ನು ಮುಚ್ಚುವುದು ತೆಗೆಯು ವುದು ಮಾಡಿದಾಗ ಅದು ನಿಜವಾದ ಬಾಗಿಲು ಎನಿಸಿ ಕೊಳ್ಳುವುದು.

ಈ ಸುದ್ದಿ ಓದಿ:- 21 ದಿನ 7 ನಿಮಿಷ ಹೀಗೆ ಮಾಡಿ ಪ್ರೀತಿ, ಜ್ಞಾನ, ಉದ್ಯೋಗ, ಹಣ, ಗೌರವ ನೀವು ಅಂದುಕೊಂಡಂತೆ ನಿಮ್ಮ ಇಷ್ಟದಂತೆ ಸ್ವಂತ ಆಗುತ್ತೆ.!

ಮತ್ತು ಈಗಿನ ಆಧುನಿಕ ಯುಗದಲ್ಲಿನ ಪ್ಲಾಸ್ಟಿಕ್ ಚೌಕಟ್ಟು ಮತ್ತು ಕದದಿಂದ ಕೂಡಿದ ಬಾಗಿಲುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಬಾಗಿಲು ಎಂದು ಪರಿಗಣಿಸಲಾಗುವುದಿಲ್ಲ. ಮನೆಯಲ್ಲಿ ಮುಖ್ಯ ಬಾಗಿಲಿನಿಂದ ನೇರವಾಗಿ ಮೂರು ಬಾಗಿಲು ಇಡಬಾರದು. ಒಂದು ಮನೆಗೆ ಮೂರು ದಿಕ್ಕುಗಳಲ್ಲಿ ಮೂರು ಹೊರಬಾಗಿಲುಗಳನ್ನು ಇಡಬಾರದು.

ಯಾವ ಸಂದರ್ಭದಲ್ಲಿಯೂ ನೈರುತ್ಯ ದಿಕ್ಕಿನ ಕಡೆಗೆ ಮುಂಬಾಗಿಲು ಅಥವಾ ಕಾಂಪೌಂಡ್‌ ಬಾಗಿಲು ಬರಬಾರದು. ಇನ್ನು ವಾಸ್ತುಶಾಸ್ತ್ರದ ಪ್ರಕಾರ ಬೆಸ ಸಂಖ್ಯೆಯಲ್ಲಿ ಬಾಗಿಲುಗಳಿದ್ದರೆ ಈ ಕೆಳಗಿನಂತೆ ಅಶುಭ ಫಲಗಳು ಉಂಟಾಗುತ್ತವೆ ಎಂದು ಹೇಳಲಾಗಿದೆ. ಮನೆಗೆ ಒಂದೇ ಬಾಗಿಲಿದ್ದರೆ ಸದಾ ದುಡಿಮೆ ಬೇಸರ.

ಈ ಸುದ್ದಿ ಓದಿ:- ನಿಮ್ಮ ಮನೆಯಲ್ಲಿ ಹಣ ಯಾವಾಗಲೂ ಇರಬೇಕು ಅಂದರೆ ಈ ನಿಯಮಗಳನ್ನು ಪಾಲಿಸಿ.!

ಮೂರು ಬಾಗಿಲುಗಳಿದ್ದರೆ ಶತ್ರುಭಯ ಅನಿಷ್ಟ ಹಾಗೂ ತೊಂದರೆಗಳು ಉಂಟಾಗುವವು. ಮನೆಗೆ 5 ಬಾಗಿಲುಗಳಿದ್ದರೆ ಚಿಂತೆ ಗಡಿಬಿಡಿಯ ಜೀವನ. ಮನೆಗೆ ಏಳು ಬಾಗಿಲುಗಳಿದ್ದರೆ ಸದಾ ಜಗಳ ಮಾನಸಿಕ ನೆಮ್ಮದಿ ಇಲ್ಲದಿರುವುದು. ಮನೆಗೆ 9 ಬಾಗಿಲುಗಳಿದ್ದರೆ ವ್ಯವಹಾರದಲ್ಲಿ ಹಾನಿ ಅನಾರೋಗ್ಯ.

ಮನೆಗೆ 11 ಬಾಗಿಲುಗಳಿದ್ದರೆ ಆಗಾಗ ವ್ಯಾಜ್ಯ ವ್ಯಾಪಾರದಲ್ಲಿ ನಷ್ಟ ಹಾಗೂ ಕಂಟಕಗಳು. ಮನೆಗೆ 13 ಬಾಗಿಲುಗಳಿದ್ದರ ಸದಾ ಕಿರಿಕಿರಿ ಜಗಳ ಅನಾರೋಗ್ಯ ಅಪಘಾತಗಳಾಗುವ ಸಂಭವ. ಮನೆಗೆ 15 ಬಾಗಿಲು ಗಳಿದ್ದರೆ ವ್ಯವಹಾರದಲ್ಲಿ ಹಾನಿ ಸೋಲು ಬದುಕಿನಲ್ಲಿ ನೆಮ್ಮದಿ ಇಲ್ಲದಿರು ವುದು. ಹೀಗೆ ಒಂದೊಂದು ಸಂಖ್ಯೆಯಲ್ಲಿರುವಂತಹ ಬಾಗಿಲುಗಳು ಕೂಡ ಒಂದೊಂದು ರೀತಿಯ ಶುಭಫಲಗಳನ್ನು ಹಾಗೂ ಕೆಲವೊಮ್ಮೆ ಅಶುಭ ಫಲಗಳನ್ನು ಕೊಡುತ್ತದೆ.

ಈ ಸುದ್ದಿ ಓದಿ:- ಈ ದಿನಾಂಕದಲ್ಲಿ ಮದುವೆಯಾದರೆ ಕಷ್ಟ ತಪ್ಪಿದ್ದಲ್ಲ.

ಆದ್ದರಿಂದ ಮನೆ ಕಟ್ಟುವಂತಹ ಸಂದರ್ಭದಲ್ಲಿ ವಾಸ್ತು ನಿಯಮಕ್ಕೆ ಅನುಗುಣವಾಗಿ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ನಾವು ಜೀವನಪರ್ಯಂತ ಮನೆಯಲ್ಲಿ ಇರುವುದರಿಂದ ನಾವು ಆ ಮನೆಯಲ್ಲಿ ನೆಮ್ಮದಿಯ ಜೀವನವನ್ನು ನಡೆಸುವುದು ಬಹಳ ಮುಖ್ಯವಾಗಿರುತ್ತದೆ.

ಆದ್ದರಿಂದ ಮನೆಯನ್ನು ಕಟ್ಟಿಸುವಂತಹ ಸಂದರ್ಭ ದಲ್ಲಿ ಬಹಳಷ್ಟು ವಾಸ್ತು ಶಾಸ್ತ್ರದ ನಿಯಮಗಳನ್ನು ತಿಳಿದುಕೊಂಡು ಹಾಗೂ ಇದರ ಬಗ್ಗೆ ತಿಳಿದಿರುವವರ ಬಳಿ ಮಾಹಿತಿಗಳನ್ನು ತಿಳಿದು ಅದರಂತೆ ಮನೆಯನ್ನು ನಿರ್ಮಾಣ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಪ್ರತಿಯೊಬ್ಬರ ಮನೆಯು ಅವರ ಅಭಿವೃದ್ಧಿ ಏಳಿಗೆ ಅವರ ಹಣಕಾಸಿನ ವಿಷಯಗಳು ಅವರ ವ್ಯಾಪಾರ ವ್ಯವಹಾರಗಳು ಮನೆ ಯಲ್ಲಿನ ಒಳ್ಳೆಯ ಸಂತೋಷದ ಸಮಯಗಳು ದುಃಖದ ಸಮಯಗಳು ಎಲ್ಲವೂ ಕೂಡ ಅದಕ್ಕೆ ಸಂಬಂಧಿಸಿರುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲುಗಳು ಹಾಗೂ ಮನೆಯಲ್ಲಿ ಎಷ್ಟು ಬಾಗಿಲುಗಳಿರಬೇಕು ಯಾವ ದಿಕ್ಕಿನಲ್ಲಿ ಇರಬೇಕು ಹೀಗೆ ಇವೆಲ್ಲವನ್ನೂ ಸಹ ತಿಳಿದು ಕೊಂಡು ಸರಿಯಾದ ರೀತಿಯಲ್ಲಿ ಮಾಡಿಸುವುದು ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here