ನಮ್ಮ ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ನಂಬಿಕೆ ಇಟ್ಟಿದ್ದೇವೆ ಮತ್ತು ಅದನ್ನು ಚಾಚು ತಪ್ಪದೆ ಪಾಲಿಸುತ್ತೇವೆ. ಆಧುನಿಕ ಕಾಲದ ಈ ಇಂಟರ್ನೆಟ್ ಯುಗದಲ್ಲೂ ಕೂಡ ಜ್ಯೋತಿಷ್ಯ ಶಾಸ್ತ್ರ ಇನ್ನು ತನ್ನ ಮಹತ್ವವನ್ನು ಉಳಿಸಿಕೊಂಡಿದೆ, ಇದಕ್ಕೆ ಕಾರಣ ಅದರಲ್ಲಿರುವ ಸತ್ಯಾಂಶಗಳು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನ ಎಲ್ಲಾ ಗೊಂದಲ ಹಾಗೂ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಹಣದ ಆ’ಸೆಗಾಗಿ, ಸು’ಳ್ಳು ವೇಷ ಹಾಕಿ ನಿಜವಾದ ಜ್ಯೋತಿಷ್ಯ ಶಾಸ್ತ್ರದ ಹೆಸರು ಹಾಳು ಮಾಡುತ್ತಿದ್ದಾರೆ. ಆದರೆ ಸರಿಯಾಗಿ ಈ ಬಗ್ಗೆ ಬಾಲ್ಯದಿಂದಲೂ ಅಭ್ಯಾಸ ಮಾಡಿದ ವ್ಯಕ್ತಿಗಳು ಹೇಳಿದ ಪ್ರಕಾರ ಜೋತಿಷ್ಯ ಶಾಸ್ತ್ರದಲ್ಲಿ ಹೇಳಿದ ಹಲವಾರು ಅಂಶಗಳು ಸತ್ಯವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯವನ್ನು ಆತ ಹುಟ್ಟಿದ ದಿನ, ಹುಟ್ಟಿರುವ ವಾರ, ತಿಥಿ ನಕ್ಷತ್ರ ಅವನ ಹೆಸರು ಹಾಗೂ ರಾಶಿ ಮೂಲಕ ಲೆಕ್ಕಾಚಾರ ಹಾಕಿ ಹೇಳಬಹುದು. ವಾರದಲ್ಲಿ ಏಳೇ ದಿನಗಳು ಇದ್ದರೂ, ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಆಗಿರುತ್ತಾರೆ.
ಹಾಗೆ 27 ನಕ್ಷತ್ರಗಳಲ್ಲಿ ಜನಿಸಿದವರ ಗುಣ ಸ್ವಭಾವಗಳು ಪರಸ್ಪರ ಬೇರೆ ಆಗಿರುತ್ತವೆ, ಹೀಗೆ ಇದೆಲ್ಲವೂ ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ನಾವು ಕೂಡ ಈ ಅಂಕಣದಲ್ಲಿ ಇದರಲ್ಲಿ ಕೆಲ ಪ್ರಮುಖ ಅಂಶವಾದ ವಾರದ ಆಧಾರದ ಮೇಲೆ ಪರಿಣಾಮ ಬೀರಬಹುದಾದ ಕೆಲವು ಸಂಗತಿಗಳ ಬಗ್ಗೆ ವಿಷಯವನ್ನು ತಿಳಿಸಿ ಕೊಡುತ್ತಿದ್ದೇವೆ.
ಇದರಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳು ಯಾವ ವಾರ ಹುಟ್ಟಿದರೆ ಏನು ಫಲ ತರುತ್ತಾರೆ ಮತ್ತು ಗಂಡು ಮಕ್ಕಳು ಯಾವ ವಾರ ಹುಟ್ಟಿದರೆ ಹೇಗಿರುತ್ತಾರೆ ಎನ್ನುವುದರ ಬಗ್ಗೆ ಆಯ್ದ ಕೆಲ ಪ್ರಮುಖ ಸಂಗತಿಯನ್ನು ಹೇಳುತ್ತಿದ್ದೇವೆ.
1. ಭಾನುವಾರ:-
* ಭಾನುವಾರ ಗಂಡು ಮಕ್ಕಳು ಜನಿಸಿದರೆ ಅಂತಹ ಮಕ್ಕಳು ಶುಭ ಫಲ ನೀಡುತ್ತಾರೆ, ಶ್ರೇಷ್ಠವಾದ ಗುಣವನ್ನು ಹೊಂದಿರುತ್ತಾರೆ. ಶಿಸ್ತಿನ ಜೀವನ ಪಾಲಿಸಿ ಉನ್ನತ ಸ್ಥಾನಕ್ಕೇರುತ್ತಾರೆ, ಮುಖದಲ್ಲಿ ಸೂರ್ಯನಂತ ತೇಜಸ್ಸು, ಕಳೆ ಎದ್ದು ಕಾಣುತ್ತದೆ.
* ಹೆಣ್ಣುಮಕ್ಕಳು ಭಾನುವಾರ ಜನಿಸಿದರೆ ತಂದೆ ಮನೆಗೆ ಮತ್ತು ಮದುವೆ ಆಗಿ ಹೋಗುವ ಗಂಡನ ಮನೆಗೆ ಅದೃಷ್ಟ ಅಷ್ಟ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ತಂದೆ ಮನೆಗೆ ಕೀರ್ತಿ ತಂದು ಕೊಡುತ್ತಾಳೆ.
2. ಸೋಮವಾರ:-
* ಸೋಮವಾರ ಜನಿಸಿದ ಗಂಡು ಭವಿಷ್ಯದಲ್ಲಿ ಶಿವನ ಆರಾಧಕರು ಆಗುತ್ತಾನೆ, ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತಾನೆ. ಗೌರವದ ಮಾರ್ಗದಲ್ಲಿ ಸಾಧು-ಸಂತರಲ್ಲಿ ನಂಬಿಕೆ ಇಟ್ಟು ಧ್ಯಾನ ಯಾಗ ಇತ್ಯಾದಿಗಳಲ್ಲಿ ಭಾಗವಹಿಸುತ್ತಾರೆ.
* ಸೋಮವಾರ ಹುಟ್ಟಿದ ಹೆಣ್ಣು ಮಕ್ಕಳು ತಂದೆ ಮನೆಗೆ ಹೆಸರು ತರುವಂತೆ ಗಂಡನ ಮನೆಯಲ್ಲಿ ಬದುಕಿ ಬಾಳುತ್ತಾರೆ. ಸಹನಾಮೂರ್ತಿಗಳಾಗಿದ್ದು, ತಾಳ್ಮೆಯಿಂದ ಇವರು ಸಾಧನೆ ಮಾಡುತ್ತಾರೆ. ಕುಟುಂಬಕ್ಕಾಗಿ ಜೀವನವನ್ನು ಮೀಸಲಿಡುತ್ತಾರೆ
3. ಮಂಗಳವಾರ:-
* ಮಂಗಳವಾರ ಹುಟ್ಟಿದ ಗಂಡು ಮಕ್ಕಳು ಬಹಳ ಧೈರ್ಯಶಾಲಿಗಳಾಗಿರುತ್ತಾರೆ. ಸಾಹಸ ಪ್ರವೃತ್ತಿ ಹೊಂದಿರುತ್ತಾರೆ.
* ಮಂಗಳವಾರ ಹುಟ್ಟಿದಂತಹ ಹೆಣ್ಣು ಮಕ್ಕಳು ಮನೆಗೆ ಗಂಡು ಮಗನಂತೆ ನಿಂತು ತವರು ಮನೆಯ ಕ’ಷ್ಟ ಹಾಗೂ ಮೆಟ್ಟಿದ ಮನೆಯ ಕ’ಷ್ಟಗಳಲ್ಲಿ ಕುಟುಂಬಸ್ಥರನ್ನು ಕಾಪಾಡುತ್ತಾರೆ.
4. ಬುಧವಾರ:-
* ಗಂಡು ಮಗು ಬುಧವಾರ ಜನಿಸಿದರೆ ಮುಂದಿನ ದಿನಗಳಲ್ಲಿ ಮಹಾಜ್ಞಾನಿ ಆಗುತ್ತಾನೆ, ಸೌಮ್ಯ ಸ್ವಭಾವದವರಾಗಿರುತ್ತಾನೆ. ವಿದ್ಯಾಭ್ಯಾಸದಲ್ಲಿ ಉನ್ನತೆಯನ್ನು ಸಾದಿಸುತ್ತಾನೆ. ಇವರು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುತ್ತಾರೆ. ಇವರ ಜೀವನ ಶೈಲಿ ಇವರಿಗಿಂತ ವೇಗವಾಗಿ ಬದಲಾಗುತ್ತದೆ.
* ಬುಧವಾರ ಹುಟ್ಟಿದ ಹೆಣ್ಣು ಮಕ್ಕಳು ಕೂಡ ಬಹಳ ಬುದ್ಧಿವಂತರಾಗಿರುತ್ತಾರೆ. ನಗುನಗುತ್ತ ಕುಟುಂಬ ಹಾಗೂ ಕರ್ತವ್ಯ ಎರಡನ್ನು ಪಾಲಿಸುವಷ್ಟು ಚಾಲಾಕಿಗಳಾಗಿರುತ್ತಾರೆ. ಬಹಳ ಆಕರ್ಷಣೀಯ ವ್ಯಕ್ತಿಗಳಾಗಿರುತ್ತಾರೆ.
5.ಗುರುವಾರ:-
* ಗುರುವಾರ ಹುಟ್ಟಿದ ಗಂಡು ಮಕ್ಕಳಲ್ಲಿ ಬೇರೆಯವರ ಕ’ಷ್ಟ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೆಚ್ಚಾಗಿರುತ್ತಾರೆ. ಸಹೋದರರಿಗಾಗಲಿ, ಸ್ನೇಹಿತರಿಗಾಗಲಿ ಸಮಸ್ಯೆ ಬಂದರೆ ಮೊದಲು ಎಲ್ಲರನ್ನು ಸಂಘಟಿಸುತ್ತಾರೆ ಮತ್ತು ತಮ್ಮಿಂದ ಆದಷ್ಟು ಸಹಾಯದ ಜೊತೆಗೆ ಸಲಹೆ ಕೂಡ ನೀಡುತ್ತಾರೆ.
* ಗುರುವಾರ ಹುಟ್ಟಿದ ಹೆಣ್ಣು ಮಕ್ಕಳು ದೈವಭಕ್ತರಾಗಿರುತ್ತಾರೆ. ಇವರಿಗೂ ಸಹ ಕುಟುಂಬದ ಮೇಲೆ ಅಪಾರ ಪ್ರೀತಿ ಇರುತ್ತದೆ, ಎಲ್ಲರ ಜೊತೆ ಚೆನ್ನಾಗಿರಬೇಕು ಎಂದು ಭಾವಿಸುವ ವ್ಯಕ್ತಿತ್ವ.
6. ಶುಕ್ರವಾರ:-
* ಶುಕ್ರವಾರದ ಹುಟ್ಟಿದ ಗಂಡು ಮಕ್ಕಳು ಜೀವನದಲ್ಲಿ ಬಹಳ ಅದ್ದೂರಿಯಾಗಿ ಬದುಕುತ್ತಾರೆ, ಹಣಕಾಸಿನ ಕೊರತೆ ಇವರಿಗೆ ಬರುವುದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಭಾಗ್ಯವನ್ನು ಪಡೆದಿರುತ್ತಾರೆ.
* ಹೆಣ್ಣುಮಕ್ಕಳು ಶುಕ್ರವಾರ ಜನಿಸಿದರೆ ತಂದೆಯ ಮನೆಯಲ್ಲಿ ದ’ರಿ’ದ್ರತನ ಬಂದರೂ ಸಹ ಗಂಡನ ಮನೆಗೆ ಅದೃಷ್ಟ ಲಕ್ಷ್ಮಿಯಾಗಿ ನಿಲ್ಲುತ್ತಾಳೆ. ಗಂಡನ ಮನೆಯಲ್ಲಿ ಎಲ್ಲ ಅಧಿಕಾರಗಳನ್ನು ಅನುಭವಿಸುತ್ತಾಳೆ.
7. ಶನಿವಾರ:-
* ಗಂಡು ಮಕ್ಕಳು ಜನಿಸಿದರೆ ಕಿಲಾಡಿ ಆಗಿರುತ್ತಾರೆ.ಯಾರ ಮಾತಿಗೂ ಕಿಮ್ಮತ್ತು ಕೊಡುವುದಿಲ್ಲ. ಇವರು ತಂದೆ ತಾಯಿಗೆ ಸ್ವಲ್ಪ ವಿರೋಧಿಯಾಗಿಯೇ ಬದುಕುತ್ತಾರೆ, ಜೀವನದಲ್ಲಿ ಅಡೆತಡೆಗಳು ಹೆಚ್ಚಾಗಿ ಬರುತ್ತವೆ. ಜೀವನದಲ್ಲಿ ಪ್ರಗತಿ ಎನ್ನುವುದು ಮಂದಗತಿಯಲ್ಲಿ ಸಾಗುತ್ತದೆ.
* ಶನಿವಾರ ಹುಟ್ಟಿದ ಹೆಣ್ಣು ಮಕ್ಕಳು ನಿಷ್ಠೂರವಾದಿಗಳಾಗಿರುತ್ತಾರೆ, ಸರಿ ತಪ್ಪು ಎನ್ನುವುದನ್ನು ಯಾವುದೇ ಅಳುಕು ಇಲ್ಲದೆ ನೇರವಾಗಿ ಹೇಳಿಬಿಡುತ್ತಾನೆ. ಇದರಿಂದ ಹಲವರ ಮೆಚ್ಚುಗೆಗೆ, ಕೆಲವರ ಕೋ’ಪ’ಕ್ಕೂ ಗುರಿಯಾಗುತ್ತಾರೆ.